ಈ ಮಾನವ ಜಗತ್ತು ನಿಜಕ್ಕೂ ವೈವಿಧ್ಯತೆಗಳ, ವಿಸ್ಮಯ ಲೋಕ! ಇಲ್ಲಿ ವಿಭಿನ್ನ ವ್ಯಕ್ತಿತ್ವಗಳ ಜನ ಒಂದಾಗಿದ್ದಾರೆ. ಅದೆಷ್ಟೋ ಘಟನೆಗಳು ತಂತಾನೇ ಅಥವಾ ಕೆಲವು ತಿಳಿಯುವಂತೆ ಘಟಿಸುತ್ತವೆ. ಎಷ್ಟೋ ಸಲ ಇವೆಲ್ಲ ಘಟನೆಗಳೂ ಎಲ್ಲ ಜನರಿಗೂ ನೇರ ತಲುಪುವುದಿಲ್ಲ. ಈ ಲೇಖನದ ಮೂಲಕ ನಾವು ನಮ್ಮ ಎಲ್ಲಾ ಭಾರತೀಯ ಭಾಷೆಗಳ ವೈವಿಧ್ಯಮಯ ಘಟನೆಗಳನ್ನು ಆಯಾ ಸಿನಿಮಾಗಳ ಮೂಲಕ ನಮ್ಮ ಓದುಗರಿಗೆ ತಲುಪಿಸುವ ಸಣ್ಣದೊಂದು ಪ್ರಯತ್ನ ನಡೆಸಿದ್ದೇವೆ. ಇಡೀ ದೇಶದ ಈ ಎಲ್ಲಾ ಸಿನಿಮಾಗಳ ಕುರಿತ ಮಾಹಿತಿ ಪಡೆಯೋಣವೇ….?

ಕನ್ನಡ : ಲವ್ ಯೂ ಮುದ್ದು

`ಪ್ರೀತಿಯನ್ನು ಪಡೆದುಕೊಳ್ಳುವ ಶಕ್ತಿ ಇಲ್ಲದೇ ಇದ್ರೆ ಪ್ರೀತಿ ಮಾಡಬಾರದು,’ ಎಂಬ ಎಳೆಯೊಂದಿಗೆ ಕನ್ನಡ ಚಿತ್ರರಂಗದಲ್ಲೊಂದು `ಲವ್ ಯೂ ಮುದ್ದು’ ಹೆಸರಿನ ಸಿನಿಮಾ ಮೂಡಿಬಂದಿದ್ದು, ಯಶಸ್ವಿಯಾಗಿ ಇಪ್ಪತ್ತೈದನೇ ದಿನದತ್ತ ಸಾಗಿದೆ. ಟೈಟಲ್ ಹಾಗೂ ತನ್ನ ಕಂಟೆಂಟ್‌ ಮೂಲಕ ಪ್ರೇಕ್ಷಕ ವಲಯದಲ್ಲಿ ಮೂಡಿಸಿದ್ದ ಈ ಚಿತ್ರ ಕುತೂಹಲ ಮೂಡಿಸಿತ್ತು. ಮೊದಲ ದಿನದಂದು ಪ್ರದರ್ಶನ ಮಾತ್ರವಲ್ಲ ಪ್ರೀಮಿಯರ್‌ ಶೋ ನೋಡಿದ ಪ್ರೇಕ್ಷಕರೂ ಸಹ ಚಿತ್ರದ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದರೊಡನೆ ಬಹುಸಂಖ್ಯೆಯ ಚಿತ್ರಗಳ ಬಿಡುಗಡೆಯ ಸಾಲಿನ ನಡುವೆಯೂ ಸಹ `ಲವ್ ಯೂ ಮುದ್ದು’ ಪ್ರೇಕ್ಷಕ ಪ್ರಭುಗಳ ಮನ ಗೆದ್ದು ಚಿತ್ರಮಂದಿರದಲ್ಲಿ ಮುಂದೆ ಸಾಗಿದೆ.

ಸೋಶಿಯಲ್ ಮೀಡಿಯಾ ಮೂಲಕ ಫೇಮ್ಸ್‌ ಆದ ಅಂಜಲಿ ಬಾಯಿ ಶಿಂಧಿ ಹಾಗೂ ಆಕಾಶ್‌ ದಂಪತಿಯ ವಿಡಿಯೋಗಳನ್ನು ಕೋಟ್ಯಂತರ ಮಂದಿ ನೋಡಿರುತ್ತಾರೆ. ಈ ದಂಪತಿಯ ಕಥೆ ಎಲ್ಲ ಪ್ರೇಮಿಗಳಿಗೂ ಸ್ಛೂರ್ತಿ ಆಗುವಂಥದ್ದು. ಯಾವುದೇ ಸಂದರ್ಭ ಬಂದರೂ ಪ್ರೀತಿಸಿದವರನ್ನು ಕೈಬಿಡಬಾರದು ಎಂಬುದನ್ನು ಈ ಜೋಡಿಯನ್ನು ನೋಡಿ ಕಲಿಯಬೇಕು. ಆಕಾಶ್‌ ಹಾಗೂ ಅಂಜಲಿ ಪ್ರೀತಿಯೇ ಸರ್ವಸ್ವ, ಪ್ರೀತಿಯೇ ಸಕಲ ಅನ್ನೋದನ್ನು ಸಾಬೀತುಪಡಿಸಿದ ಜೋಡಿ. ಅವರ ಜೀವನದಲ್ಲಾದ ಏಳಬೀಳಿನ ಕಥೆಯನ್ನು ಕುಮಾರ್‌ ತಮ್ಮ ಸಿನಿಮಾದಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಪ್ರೀತಿಸಿ ಮದುವೆಯಾದ ನವಜೋಡಿ ದೇವರ ದರ್ಶನ  ಪಡೆಯಲು ಹೋದಾಗ ಊಹಿಸಲಾಗದ ಘಟನೆ ನಡೆಯಿತು. ಅದು ಏನು….? ಅವರಿಬ್ಬರ ಬಾಳಲ್ಲಿ ನಡೆದ ಘೋರ ದುರಂತವೇನು….? ಅದರ ನಂತರ ಏನಾಯಿತು ಎನ್ನುವುದೇ ಸಿನಿಮಾದ ಕಥೆ.

ಇದೇ ಮೊದಲ ಬಾರಿಗೆ ನಿರ್ದೇಶಕ ಕುಮಾರ್‌ ಲವ್ ಸ್ಟೋರಿ ನಿರ್ದೇಶಿಸಿದ್ದಾರೆ. ಚಿತ್ರವನ್ನು ಕಿಶನ್‌ ಎಂಟರ್‌ ಟೇನ್‌ ಮೆಂಟ್ ಬ್ಯಾನರ್‌ ನಡಿ ನಿರ್ಮಾಣ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಲಕ್ಷ್ಮಿಕಾಂತ್‌ ಟಿ.ಎಸ್‌. ತಂಡದ ಭಾಗವಾಗಿದ್ದಾರೆ. ಕೃಷ್ಣ ದೀಪಕ್‌ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರೀಯ ಸಂಗೀತ ನಿರ್ದೇಶನ ಹಾಗೂ ಸಿ.ಎನ್‌. ದೀಪು ಸಂಕಲನ ನಿರ್ವಹಿಸಿದ್ದಾರೆ. ನಿಜ ಜೀವನದ ಆಕಾಶ್‌ ಅಂಜಲಿ ದಂಪತಿ ಪಾತ್ರಗಳಿಗೆ ಸಿದ್ದು ಮೂಲಿಮನಿ ಹಾಗೂ ಯುವ ನಟಿ ರೇಷ್ಮಾ ಅಭಿನಯಿಸಿದ್ದಾರೆ. ಉಳಿದಂತೆ ರಾಜೇಶ್‌ ನಟರಂಗ, ತಬಲ ನಾಣಿ, ಗಿರೀಶ್‌ ಶಿವಣ್ಣ, ಶ್ರೀವತ್ಸ ಮತ್ತು ಸ್ವಾತಿ ತಾರಾಬಳಗದಲ್ಲಿದ್ದಾರೆ.

Bengali_Film-Deep-Fridge--Poster-for-National-Movie-Magic-GSB-Dec-25

ಬಂಗಾಳಿ : ಡೀಪ್ಫ್ರಿಜ್

ರಾಷ್ಟ್ರೀಯ ಚಿತ್ರ ಪ್ರಶಸ್ತಿಗಳ ಸರಣಿಯಲ್ಲಿ ಬಂಗಾಳಿಯ `ಡೀಪ್‌ ಫ್ರಿಜ್‌’ ಸಹ ಒಂದು. ವಿಚ್ಛೇದಿತ ದಂಪತಿಗಳ ಕಥೆ ಇದು. ಹೊಸ ಸಂಬಂಧಗಳಿಂದಾಗಿ ಹಳೆಯ ಸಂಬಂಧ ಸಕಾಗುವುದೇ? ಅವರ ನಡುವಿನ ಟೆನ್ಶನ್ಸ್ ಸದಾ ಉಳಿದುಕೊಳ್ಳುತ್ತದೆಯೇ? ಅರ್ಜುನ್‌ದತ್ತರ ನಿರ್ದೇಶನದ ಈ ಚಿತ್ರದಲ್ಲಿ ಆಧುನಿಕ ಕಾಲದಲ್ಲಿ ಸಂಬಂಧಗಳ ಮೌಲ್ಯದ ತುಲನೆ ಆಗಿದೆ. ದೈನಂದಿನ ಆಗುಹೋಗುಗಳಲ್ಲಿ ಅಡಗಿದ ಗಂಭೀರ ಮೌನದ ಚರ್ಚೆ ಇಲ್ಲಿ ಪ್ರಶಂಸನೀಯ.

ಹೃದಯಸ್ಪರ್ಶಿ ಕಥೆ, ಉತ್ತಮ ನಟನೆ ಚಿತ್ರದ ಜೀವಾಳ. ಹೀಗಾಗಿ ಇದು ಪ್ರಸ್ತುತ ಬಂಗಾಳಿ ಚಿತ್ರಗಳಲ್ಲಿ ಪ್ರಮುಖ ಮೈಲಿಗಲ್ಲು. ಮೇಖಾ ದಾಸ್‌ ಗುಪ್ತ, ಪೋರ್ಶಿಯಾ ಸೇನ್‌ ರಂಥ ಹಿನ್ನೆಲೆ ಗಾಯಕರ ಹಾಡುಗಳಿವೆ. ಅಬೀರ್‌ ಚಟ್ಟೋಪಾಧ್ಯಾಯ, ತನುಶ್ರೀ ಚಕ್ರವರ್ತಿ, ದೇವಯಾನಿ ಚಟ್ಟೋಪಾಧ್ಯಾಯ, ಅನುರಾಧಾ ಬಂಡೋಪಾಧ್ಯಾಯ, ಲಕ್ಷ್ಯ ಭಟ್ಟಾಚಾರ್ಯ ಮುಂತಾದವರ ತಾರಾಗಣವಿದೆ.

TELUGU-FILM---TELUSU-KADA-01

ತೆಲುಗು : ತೆಲುಸು ಕದಾ

ಒಂದು ಅತ್ಯುತ್ತಮ ರೊಮ್ಯಾಂಟಿಕ್‌, ಮಾನವೀಯ ಸಂಬಂಧಗಳ ಮಿಡಿತದ ಕಥೆಯಾಗಿ ಮೂಡಿಬಂದಿದೆ `ತೆಲುಸು ಕದಾ.’ ಕಾಸ್ಟ್ಯೂಂ ಡಿಸೈನರ್‌, ಸ್ಟೈಲಿಸ್ಟ್ ನೀರಜಾ ಕೋನಾ ಇಲ್ಲಿ ಡೆಬ್ಯು ಡೈರೆಕ್ಟರ್‌ ಆಗಿ ಉತ್ತಮ ಹೆಸರು ಗಳಿಸಿದ್ದಾರೆ. ತಮನ್‌ ರ ಸಂಗೀತ ನಿರ್ದೇಶನವಿರುವ ಈ ಚಿತ್ರದಲ್ಲಿ ಖ್ಯಾತಿಯ ಸಿದ್ದು ಜೊನ್ನಲಗಡ್ಡ, ಜೊತೆ ತ್ರಿಕೋನ ಪ್ರೇಮದ ಸಂಗಾತಿಗಳಾಗಿ ರಾಶಿ ಖನ್ನಾ, ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ.

ಮಾಮೂಲಿ ಸಾಂಸಾರಿಕ ಚಿತ್ರಗಳಿಗಿಂತ ತುಸು ಭಿನ್ನವಾಗಿ ನಿಲ್ಲುತ್ತದೆ ಈ ಚಿತ್ರ. `ಈಸ್ಟ್ರೋಜೆನ್‌ V/S ಟೆಸ್ಟೊಸ್ಟೆರಾನ್‌’ ಅಟ್ ಮಲ್ಟಿಪ್ಲೆಕ್ಸ್ ಲೆವೆಲ್ ‌ಎಂದಿದ್ದಾರೆ ವಿಮರ್ಶಕರು. ಅನಾಥನಾದ ಒಬ್ಬಂಟಿ ನಾಯಕ ವೈವಾಹಿಕ ಅಂಕಣದ ಮೂಲಕ ನಾಯಕಿ ಅಂಜಲಿಯನ್ನು ಮೆಚ್ಚಿ ಮದುವೆ ಆಗುತ್ತಾನೆ. ಇವರ ಅನ್ಯೋನ್ಯ ಸಂಸಾರದಲ್ಲಿ ನಿಸ್ಸಂತಾನ ಭಾರಿಯಾಗುತ್ತದೆ. ಸರೋಗೆಸಿಗಾಗಿ ಪ್ರಯತ್ನಿಸುವ ನಾಯಕಿಯ ಡಾಕ್ಟರ್‌ರಾಗಾ ಕುಮಾರ್‌ ಸಂದರ್ಭ ವಶಾತ್‌ ತಾನೇ ಅಂಜಲಿಯ ಮಗುವಿಗೆ ಸರೋಗೇಟ್‌ ಮದರ್ ಆಗಬೇಕಾಗುತ್ತದೆ. ಅವಳು ಮುಂದೆ ನಾಯಕನ ಎಕ್ಸ್ ಗರ್ಲ್ ಫ್ರೆಂಡ್‌ ಅಂತಾದಾಗ, ಈ ಮೂವರ ಪಾಡೇನು?

Gujrati_Film--Laloo_N

ಗುಜರಾತಿ : ಲೋಲಾ : ಕೃಷ್ಣ ಸದಾ ಸಹಾಯತೇ!

ಮಾನಸಿ ಪರೇಖ್‌ ನಿರ್ಮಾಣ, ಸ್ಮಿತ್‌ ಜೇ ಸಂಗೀತ, ಅಂಕಿತ್‌ ಸಾಖಿಯಾ ನಿರ್ದೇಶನದ  ರೀಯಾ ರಚ್‌, ಶೃಹದ್‌ ಗೋಸ್ವಾಮಿ, ಕರಣ್‌ ಜೋಶಿ, ಮಿಷ್ಟಿ ಕಡೋಚಾ ನಟಿಸಿರುವ `ಲೋಲಾ : ಕೃಷ್ಣ ಸದಾ ಸಹಾಯತೇ!’ ಅಪ್ಪಟ ಭಕ್ತಿ ಪ್ರಧಾನ ಚಿತ್ರವಾಗಿದೆ. ಒಬ್ಬ ರಿಕ್ಷಾ ಡ್ರೈವರ್‌ ಫಾರ್ಮ್ ಹೌಸ್‌ ನಲ್ಲಿ ಟ್ರಾಪ್‌ ಆಗಿದ್ದು, ತನ್ನ ಗತಕಾಲದ ಕಥೆಯನ್ನು ಅಲ್ಲಿ ಪಶ್ಚಾತ್ತಾಪದ ರೀತಿಯಲ್ಲಿ ಬಿಚ್ಚಿಡುತ್ತಾನೆ. ಚಿತ್ರದುದ್ದಕ್ಕೂ ಭಗವಾನ್‌ ಕೃಷ್ಣ ಸದಾ ಇವನ ಸಹಾಯಕ್ಕಿದ್ದು ರಕ್ಷಿಸುತ್ತಾನೆ. ತನ್ನನ್ನು ತಾನೇ ಅರಿಯುವ ಮಾನವನೊಬ್ಬನ ಆತ್ಮಕಥೆ ಇದು. ನಂಬಿಕೆ, ಮಾನವ ಪ್ರಯತ್ನ, ಆಸ್ತಿಕತೆ, ಆಧ್ಯಾತ್ನದ ಸುಂದರ ಸಮ್ಮಿಲನ ಇಲ್ಲಿದೆ. ಎಲ್ಲೆಲ್ಲೂ ಗುಜರಾತ್‌ ನ ಮಲೆನಾಡು ಪ್ರದೇಶವಾದ ಜುನಾಗಡ್‌, ಭಾನಾಥ್‌, ಗಿರ್ನಾರ್‌ ಗಳು ಇಲ್ಲಿ ರೋಮಾಂಚಕಾರಿಯಾಗಿ ಅನಾವರಣಗೊಂಡಿವೆ.

ಸಂಗೀತ ಚಿತ್ರದ ಹೈಲೈಟ್‌ ಆದರೆ, ಅದರ ಗಾರ್ಜಿಯಸ್‌ ಸ್ಪೇಸ್‌ ವೀಕ್ಷಕರು ಆಯಾ ಪಾತ್ರಗಳಿಗೆ ಕನೆಕ್ಟ್ ಆಗುವಂತೆ ಮಾಡುತ್ತದೆ. ನಿರ್ದೇಶನದ ಪರಿಪಕ್ವತೆ ಗ್ರೌಂಡಿಂಗ್‌ರಿಲೇಟೆಬಲ್ ಸ್ಟೋರಿಗೆ ಪೂರಕವಾಗಿದೆ. ವಿಮರ್ಶಕರ ಪ್ರಕಾರ ಇದೊಂದು ಮಸಲ್ ಟಾಚ್ ಚಿತ್ರ. ಅತ್ಯುತ್ತಮ ಚಿತ್ರವೊಂದಕ್ಕೆ ಮಹಾನ್‌ ಸ್ಟಾರ್‌ ಕಾಸ್ಟ್ ನ ಹಂಗಿಲ್ಲ ಎಂಬುದನ್ನು ಇದು ಮತ್ತೆ ನಿರೂಪಿಸಿದೆ!

Malayalam-Movie_Ithiri-Neram

ಮಲೆಯಾಳಂ : ಇದಿರಿ ನೇರಂ

ಈ ಚಿತ್ರ ಆಧುನಿಕ ಯುವಪೀಳಿಗೆಯ ಪ್ರಸ್ತುತ ಸಂಬಂಧಗಳು, ಅದಕ್ಕೆ ಅವರು ಕೊಡುವ ಬೆಲೆಯ ಕುರಿತಾಗಿದೆ. ಡ್ರಿಂಕ್ಸ್ ಪಾರ್ಟಿ ಜೋಶ್‌ ನ ಫ್ರೆಂಡ್ಸ್ ಗ್ಯಾಂಗ್‌ ಅದೇ ಮತ್ತಿನಲ್ಲಿ ಹೊರ ಹೊರಟಾಗ, ನಾಯಕ ಅನೀಶ್‌ ತನ್ನ ಮಾಜಿ ಪ್ರೇಯಸಿ ಅಂಜನಾಳನ್ನು ಭೇಟಿಯಾಗುತ್ತಾನೆ. ಇವರಿಬ್ಬರ ಈ ಭೇಟಿ, ಇಂದಿನ ತಲೆಮಾರಿನವರ ಲಿವ್ ‌ಇನ್‌ ಗೆ ತಿರುಗಿ ಗೋಜಲು ಸಂಬಂಧಗಳ ಸರಮಾಲೆ ಸೃಷ್ಟಿಸುತ್ತದೆ. ಒಂದು ಸಾಂಪ್ರದಾಯಿಕ ನಗರದಲ್ಲಿ ಇದು ಎಂಥ ಪರಿಣಾಮ ಬೀರಬಲ್ಲದೆಂಬುದೇ ಚಿತ್ರದ ಹೂರಣ.

ಚಿತ್ರದ ನಿರ್ದೇಶನ ಪ್ರಶಾಂತ್‌ ವಿಜಯ್‌, ಮೂಲ ಕಥೆ ವಿಶಾಖ್‌ ಶಕ್ತಿ. ರೋಶನ್‌ ಮ್ಯಾಥ್ಯೂ, ಝರೀನ್‌ ಶಿಹಾಬ್‌ ಪ್ರಧಾನ ಪಾತ್ರದಲ್ಲಿದ್ದಾರೆ. ಆಕಸ್ಮಿಕವಾಗಿ ನಾಯಕನಿದ್ದ ನಗರಕ್ಕೆ ಬರುವ ನಾಯಕಿ, ಪರಸ್ಪರ ಅಪೇಕ್ಷರಹಿತ ಪ್ರೇಮವನ್ನು ಮತ್ತೆ ಮುಂದುವರಿಸುತ್ತಾಳೆ. ಹಳೆಯದನ್ನೆಲ್ಲ ಮತ್ತೆ ಮೆಲುಕುಹಾಕು ಇವರು ಮುಂದೇನು ಮಾಡಿದರೆಂಬುದೇ ಉತ್ತರಾರ್ಧ. ಯಾ ಗ್ರೇಟ್‌ಸ್ಟಾರ್‌ ಗಳಿಲ್ಲದ ಈ ಚಿತ್ರವನ್ನು ಜನ ಧಾರಾಳ ಮೆಚ್ಚಿದರು.

Tamil-Film-Aaromaley

ತಮಿಳು : ಆರೋಮಿ

ಈ ರೊಮ್ಯಾಂಟಿಕ್‌ ಕಾಮಿಡಿ ಚಿತ್ರದ ನಿರ್ದೇಶಕ ಸಾರಂಗ್‌ ತ್ಯಾಗು, ಇದು ಇವರ ಪ್ರಥಮ ಪ್ರಯತ್ನ. ನಿರ್ಮಾಪಕ ವಿನೋದ್ ಕುಮಾರ್‌, ಸಂಗೀತ ಸಿದ್ದು ಕುಮಾರ್‌. ಮುಖ್ಯ ತಾರಾಗಣದಲ್ಲಿ ಕಿಶನ್‌ ದಾಸ್‌, ಶಿಲಾತ್ಮಕ ರಾಜಶೇಖರ್‌, ಹರ್ಷತ್‌ ಖಾನ್‌, ಮೇಘಾ ಆಕಾಶ್‌ ಇದ್ದಾರೆ. ಅಜಿತ್‌ ಗೆ ಪ್ರೀತಿ ಪ್ರೇಮವೆಂದರೆ ದೊಡ್ಡ ಮ್ಯಾಜಿಕ್‌, ಆದರೆ ಜೀವನವಿಡೀ ಅಪಾರ್ಥಗಳ ಕಳೆದುಹೋಗುತ್ತದೆ. ಇವನು ಹೆತ್ತವರ ಅಪೇಕ್ಷೆಯಂತೆ ಒಂದು ವೈವಾಹಿಕ ಕೇಂದ್ರದಲ್ಲಿ ಕೆಲಸಕ್ಕೆ ಸೇರುತ್ತಾನೆ. ಅಲ್ಲಿ ಬಾಸ್‌ ಅಂಜಲಿ ಜೊತೆ ಮತ್ತೆ ಸೆಣಸಾಟ. ಆಕೆಗೆ ಲವ್ ಅಂದ್ರೆ ಮ್ಯಾಜಿಕ್‌ ಅಲ್ಲ ಲಾಜಿಕ್‌!

ಪ್ರೇಮನ್ನು ಸಾಧಿಸಿ ಹೊಂದಬೇಕೇ ಹೊರತು ಅದೃಷ್ಟದಿಂದ ಖುಲಾಯಿಸುವುದಲ್ಲ ಎಂಬುದನ್ನು ಅರಿಯುವಷ್ಟರಲ್ಲಿ ಈ ಪ್ರೇಮ ಅವನ ಕೈ ತಪ್ಪುತ್ತದೆ. ವರ್ಷಗಳ ನಂತರ ಮತ್ತೆ ಅವನಿಗೊಂದು ಅವಕಾಶ ಸಿಕ್ಕಿದಾಗ ಏನಾಯಿತು ಎಂಬುದೇ ಚಿತ್ರದ ಉತ್ತರಾರ್ಧ. ಆಧುನಿಕ ಕಾಲಕ್ಕೆ ತಕ್ಕಂತೆ ಪ್ರೀತಿ, ಪ್ರೇಮ, ಪ್ರಣಯಗಳಿಗೆ ಆಧುನಿಕ ವ್ಯಾಖ್ಯಾನ, ವಿಶ್ಲೇಷಣೆಗಳಿವೆ.

Marathi_Dashavatar

ಮರಾಠಿ : ದಶಾವತಾರ್

ಈ ಪೌರಾಣಿಕ ಹೂರಣದ ಹಿನ್ನೆಲೆಯ ಸಸ್ಪೆನ್ಸ್ ಥ್ರಿಲ್ಲರ್‌ ಚಿತ್ರವನ್ನು ನಿರ್ದೇಶಿಸಿದರು ಸುಬೋಧ್‌ ಕಾಸೋಲ್ಮರ್‌. ಸಂಗೀತ  ಪ್ರಫುಲ್ಲಚಂದ್ರ. ಪ್ರಮುಖ ತಾರಾಗಣದಲ್ಲಿ ದಿಲೀಪ್‌ ಪ್ರಭಾನಲ್ಕರ್‌, ಭರತ್‌ ಜಾದ್‌, ಪ್ರಿಯದರ್ಶಿನಿ ಇಂಡಾಲ್ಕರ್‌, ಸಿದ್ದಾರ್ಥ್‌ ಮೆನನ್‌ ಮುಂತಾದವರು. ಉತ್ತಮ ವಿಮರ್ಶೆ ಪಡೆದ ಈ ಚಿತ್ರ 2025ರ ಮರಾಠಿ ಚಿತ್ರಗಳಲ್ಲಿ ಅತಿ ಹೆಚ್ಚಿನ 29 ಕೋಟಿ ಗಳಿಕೆಯ ಹಿರಿಮೆ ಹೊಂದಿದೆ!

ಮಹಾರಾಷ್ಟ್ರದ ಕೊಂಕಣ ಕ್ಷೇತ್ರದಲ್ಲಿ ಪೌರಾಣಿಕ ನಾಟಕಗಳಲ್ಲಿ ದಶಾವತಾರಿಯಾಗಿ ವಿಜೃಂಭಿಸುತ್ತಾ, ಬಾಬುಲಿ ಮಿಸ್ತ್ರಿ, ಇಡೀ ಜೀವನವನ್ನು ಮುಡಿಪಾಗಿಟ್ಟಿರುವ ವ್ಯಕ್ತಿ. ವಯೋಸಹಜದ ಸಮಸ್ಯೆ ಎದುರಿಸುತ್ತಾ ಮಂಜಾದ ದೃಷ್ಟಿಯಿಂದಲೇ ಹೇಗೋ ಪಾತ್ರ ನಿಭಾಯಿಸುವ ಈತನನ್ನು ಎಲ್ಲರೂ `ಹುಚ್ಚಪ್ಪ’ನೆಂದೇ ವ್ಯಂಗ್ಯವಾಡುತ್ತಾರೆ. ಮಗನಿಗೆ ಕೆಲಸ ದೊರೆತರೆ, ತಾನಿದನ್ನು ನಿಲ್ಲಿಸುವುದಾಗಿ ಆತ ಹೇಳುತ್ತಾನೆ. ಅಂತೂ ಮಗನಿಗೆ ಕೆಲಸ ಸಿಕ್ಕಾಗ, ಮಹಾಶಿವರಾತ್ರಿಯಂದು ಕೊನೆಯ ಪ್ರದರ್ಶನ ನೀಡಲು ಈತ ಸಿದ್ಧನಾಗುತ್ತಾನೆ. ಮುಂದೆ ತಮ್ಮ ಪೀಳಿಗೆಯ ಪರಂಪರೆ ಉಳಿಸಿಕೊಳ್ಳುವ ಭರದಲ್ಲಿ ಈತ, `ರುದ್ರಾವತಾರ’ದ ಭಾವಾವೇಶದಲ್ಲಿ ಮಹಾತ್ಯಾಗಕ್ಕೆ ಮುಂದಾಗುತ್ತಾನೆ. ಪೂರ್ವ ಭಾಗದೊಂದಿಗೆ ಶುರುವಾಗಿ ಉತ್ತರ ಭಾಗದೊಂದಿಗೆ ಮುಂದುವರಿಯುವ ಈ ಚಿತ್ರ ಪ್ರೀತಿ ಪ್ರೇಮ, ವಿಶ್ವಾಸ, ತ್ಯಾಗ, ಸೇಡು, ಪರಿಸರ ಸಂರಕ್ಷಣೆ ಇತ್ಯಾದಿ ಎಲ್ಲದರ ಮಿಶ್ರಣವಾಗಿ ಆಧ್ಯಾತ್ಮಿಕ ದೃಷ್ಟಿಕೋನ ಇಂದಿನ ಆಧುನಿಕ ಸಮಾಜದಲ್ಲಿ ಎಲ್ಲಿ ನಿಲ್ಲುತ್ತದೆ ಎಂಬ ವಾಸ್ತತೆ ತಿಳಿಸುತ್ತದೆ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ