“ಇಂಡಸ್ಟ್ರಿಯಲ್ಲಿ ಲೈಂಗಿಕ ನ್ಯಾಯ ಹಾಗೂ ಇನ್ನಿತರ ಇಂಥ ಸಮಸ್ಯೆಗಳಿಗೆ ಮಹತ್ವ ನೀಡಿ, ಅದನ್ನು ಸಂಬೋಧಿಸುತ್ತಾ, ವುಮನ್ ಇನ್‌ ಸಿನಿಮಾ ಕಿಕ್ಟಿವ್ ‌ನ ಸಹಸ್ಥಾಪನೆ ಮಾಡಿದರು.”

ಎಂಪರ್‌ ಮೆಂಟ್‌ ಥ್ರೂ ಎಂಟರ್‌ ಟೇನ್ಮೆಂಟ್‌ ಅವಾರ್ಡ್‌ (ಆನ್‌ ಸ್ಕ್ರೀನ್‌) ಪಾರ್ವತಿ ತಿರುವೋತ್ತು ಎಂಥ ಕಬ್ಬಿಣದಂಥ  ದೃಢಮನಸ್ಕರು ಎಂಬುದನ್ನು ಇಂದು ಇಡೀ ಮಲೆಯಾಳಂ ಚಿತ್ರರಂಗವೇ ಒಪ್ಪಿಕೊಂಡಿದೆ. ಆಕೆ ಕಿರಣ್‌ ಟಿವಿಯಿಂದ ಆ್ಯಂಕರಿಂಗ್ ಮೂಲಕ ತಮ್ಮ ವೃತ್ತಿ ಆರಂಭಿಸಿದರು. ಅನೇಕ ಪ್ರಸಂಗ ಕಥೆಗಳನ್ನು ಹೇಳುವ, ಕೇಳುವ ಕಲೆಯಲ್ಲಿ ಎಷ್ಟು ಪ್ರಭಾವಿತರಾದವರೆಂದರೆ, ಆಕೆಯ ಒಳಗಿನ ಕಲಾವಿದೆ, ಇಡೀ ದ. ಭಾರತದ ಅಚ್ಚುಮೆಚ್ಚಿನ ನಟಿಯಾಗಿ ಎಲ್ಲರನ್ನೂ ಒಪ್ಪಿಸಿದರು.

ಪಾರ್ವತಿಯ ತಂದೆ ವಿನೋದ್‌ ಕುಮಾರ್‌ ಹಾಗೂ ತಾಯಿ ಉಷಾ ಕುಮಾರಿ ಇಬ್ಬರೂ ವಕೀಲರು. ಆದರೆ ಪಾರ್ವತಿಗೆ ಮೊದಲಿನಿಂದಲೂ ಕಲೆ ಸಾಹಿತ್ಯದಲ್ಲಿ ಹೆಚ್ಚಿನ ಅಭಿರುಚಿ ಇತ್ತು. ಹೀಗಾಗಿ ಆಕೆ ತಿರುವನಂತಪುರದ ಆಲ್ ಸೇಂಟ್ಸ್ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದಲ್ಲಿ ಪದವಿ ಪಡೆದು, ಆ್ಯಂಕರ್‌ ಆಗಿ ಮೀಡಿಯಾದಲ್ಲಿ ಕಾಣಿಸಿಕೊಂಡರು. ಭರತನಾಟ್ಯದಲ್ಲಿನ ಅಪಾರ ಶ್ರದ್ಧೆ ಈಕೆಯ ಕಲಾ ಸಮರ್ಪಣಾಭಾವಕ್ಕೆ ಮತ್ತಷ್ಟು ಪೂರಕವಾಯಿತು.

ಈಕೆ ತಮ್ಮ ನಟನೆಯ ಕೆರಿಯರ್‌ ಆರಂಭಿಸಿದ್ದು ಮಲೆಯಾಳಂ `ಔಟ್‌ ಆಫ್‌ ಸಿಲೆಬಸ್‌’ (2006) ಚಿತ್ರದಿಂದ. ಮುಂದೆ `ನೋಟ್ ಬುಕ್‌, ವಿನೋದ ಯಾತ್ರಾ, ಮಲಾನಾ’ ಚಿತ್ರಗಳಲ್ಲಿ ಕಾಣಿಸಿಕೊಂಡರು. ಈಕೆಯ ಭಾವನಾತ್ಮಕ ನಟನೆ ಎಲ್ಲರಿಗೂ ಪ್ರಿಯವಾಯಿತು. ತಮಿಳಿನ `ಪೂ’ (2008) ಚಿತ್ರದಿಂದ ಆ ಪಾತ್ರದ ಉತ್ತಮಿಕೆಗಾಗಿ, ಸ್ವತಃ ತಮಿಳು ಭಾಷೆ ಕಲಿತರು. ಶರೀರ, ಶಾರೀರಗಳೆರಡೂ ಈ ಚಿತ್ರಕ್ಕಾಗಿ ಬದವಾದ್ದರಿಂದ, ಮುಂದೆ ಹೆಚ್ಚಿನ ಅವಕಾಶಗಳು ಅರಸಿ ಬಂದವು. ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ಈ ಚಿತ್ರ, ಮುಂದೆ ಉತ್ತಮ ಚಿತ್ರಗಳಿಗೆ ನಾಂದಿಯಾಯಿತು. `ಬೆಂಗಳೂರು ಡೇಸ್‌, ಎನ್ನುವ ನಿಂಟೆ ಮೊಯಿದೀನ್‌, ಚಾರ್ಲಿ’ ಚಿತ್ರಗಳಲ್ಲಿನ ತಮ್ಮ ಉತ್ಕೃಷ್ಟ ಪಾತ್ರಗಳಿಂದಾಗಿ ಎಲ್ಲರ ಮನೆಮಾತಾದವರು. `ಟೇಕ್‌ ಆಫ್‌’ (2017) ಚಿತ್ರದ ಸಮೀರಾ ಪಾತ್ರಕ್ಕಾಗಿ ಈಕೆಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿತು. `ಉಯಿರೆ, ವೈರಸ್‌, ಪುಳು, ಕರೀಬ್‌ ಕರೀಬ್‌ ಸಿಂಗ್‌’ ಮುಂತಾದ ಚಿತ್ರಗಳಲ್ಲಿ, ಈಕೆಯ ಪ್ರೌಢ ನಟನೆ ಎದ್ದು ಕಾಣುತ್ತದೆ.

ರಿಮಾರ್ಕೆಬಲ್ ವರ್ಕ್

ಪೂ (2008)  ತಮಿಳಿನ ಡೆಬ್ಯು ಚಿತ್ರದಲ್ಲೇ ಅತ್ಯುತ್ತಮ ನಟನೆಗಾಗಿ ಫಿಲ್ಮ್ ಫೇರ್‌ ಪ್ರಶಸ್ತಿ.

`ಬೆಂಗಳೂರು ಡೇಸ್‌’ (2014)

ಸಾರಾ, ಪಹ್ನಾ ಪಂಥ್‌ ಕ್ಲಾಸಿಕ್‌ ಅವಾರ್ಡ್‌.

`ಎನ್ನುವ ನಿಂಟೆ ಮೋಯಿದೀನ್‌’ (2015) ಕಾಂಚನಮಾಲಾ, ಕೇರಳ ರಾಜ್ಯ ಪ್ರಶಸ್ತಿ.

`ಚಾರ್ಲಿ’ (2015) ಟೇಸಾ, ಅತ್ಯುತ್ತಮ ನಟಿ, ಫಿಲ್ಮ್ ಫೇರ್‌ ಪ್ರಶಸ್ತಿ.

`ಟೇಕ್‌ ಆಫ್‌’ (2017) ಸಮೀರಾ, ರಾಷ್ಟ್ರೀಯ ಪ್ರಶಸ್ತಿಯ ವಿಶೇಷ ಉಲ್ಲೇಖ.

`ಕರೀಬ್‌ ಕರೀಬ್‌ ಸಿಂಗ್‌’ (2017) ಇರ್ಫಾನ್‌ ಖಾನ್‌ ಜೊತೆ ಹಿಂದಿ ಡೆಬ್ಯು.

`ಉಯಿರೆ’ (2019) ಆ್ಯಸಿಡ್‌ ಅಟ್ಯಾಕ್‌ ಸರ್ ವೈರ್‌ ರೂಪದಲ್ಲಿ ವಿಮರ್ಶಕರಿಂದ ಅಪಾರ ಮೆಚ್ಚುಗೆ ಗಳಿಸಿದ ಚಿತ್ರ.

`ವೈರಸ್‌’ (2019), `ಪುಳು’ (2022), `ಥಾಂಗ್ಲಾನ್‌’ (2024) ಬಹುಮುಖ ಪ್ರತಿಭೆ, ಆಳವಾದ ಕೌಶಲ ಪರಿಚಯಿಸುವ ಚಿತ್ರಗಳು.

ಪ್ರಶಸ್ತಿ  ಪುರಸ್ಕಾರಗಳು

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ  ವಿಶೇಷ ಉಲ್ಲೇಖ (ಟೇಕ್‌ ಆಫ್‌)

ಶ್ರೇಷ್ಠ ನಟಿ ಎಂಬ ಹೆಗ್ಗಳಿಕೆಗಾಗಿ ಕೇರಳ ರಾಜ್ಯ ಪ್ರಶಸ್ತಿ (ಎನ್ನುವ ನಿಂಟೆ ಮೊಯಿದ್ದೀನ್‌, ಚಾರ್ಲಿ)

ದಕ್ಷಿಣದ ಇಂಡಸ್ಟ್ರಿಯಲ್ಲಿ 5 ಸಲ ಫಿಲ್ಮ್ ಫೇರ್‌ ಪ್ರಶಸ್ತಿ ಲಭ್ಯ.

ಭಾರತೀಯ ಅಂತಾರಾಷ್ಟ್ರೀಯ ಫಿಲ್ಮ್ ಮಹೋತ್ಸವದಲ್ಲಿ ಅತ್ಯುತ್ತಮ ನಟಿಯಾಗಿ ಪ್ರದರ್ಶನ.

ಅತ್ಯುತ್ತಮ ವೇದಿತ ಅಭಿನೇತ್ರಿಯಾಗಿ ವಿಜಯ ಪ್ರಶಸ್ತಿ. (ಪೂ)

ಒಟ್ಟಾಗಿ ಏಷ್ಯಾ ನೆಟ್‌ ಫಿಲ್ಮ್ ಪ್ರಶಸ್ತಿ.

ವುಮನ್‌ ಇನ್‌ ಸಿನಿಮಾ ಕಿಕ್ಟಿವ್ಸ್ ಮಾನನೀಯ ಸಂಸ್ಥಾಪಕ ರೂಪದಲ್ಲಿ, ಲೈಂಗಿಕ ಸಮಾನತೆಯ ಕುರಿತು ವಿಶೇಷ ಅಭಿವ್ಯಕ್ತಿ.

ಕಲಾಭಿವ್ಯಕ್ತಿಯೊಂದಿಗೆ ಐರನ್‌ ಲೇಡಿ ಸಹ ಪಾರ್ವತಿ ತಿರುವೋತ್ತು ಕೇವಲ ಒಬ್ಬ ನಟಿ ಮಾತ್ರವಲ್ಲ, ಒಬ್ಬ ಐರನ್‌ ಲೇಡಿಯಾಗಿ ಹೆಸರು ಗಳಿಸಿದ್ದಾರೆ. ಈಕೆ ಮಲೆಯಾಳಂ, ತಮಿಳು, ಕನ್ನಡ, ಹಿಂದಿ ಸಿನಿಮಾಗಳಲ್ಲಿ ಪ್ರಗತಿಶೀಲ ಬದಲಾವಣೆಗಾಗಿ ಖ್ಯಾತರು. ಇದಕ್ಕೆ ಕಾರಣ ಈಕೆ ಫಿಲ್ಮ್ ಇಂಡಸ್ಟ್ರಿಯಲ್ಲಿ ಲೈಂಗಿಕ ನ್ಯಾಯ ಹಾಗೂ ಸಂರಚನಾತ್ಮಕ ಸುಧಾರಣೆಗಳಿಗಾಗಿ ಧ್ವನಿ ಎತ್ತಿದರು. ಇದಕ್ಕಾಗಿ ಈಕೆ ಇಂಡಸ್ಟ್ರಿಯಲ್ಲಿ ಲೈಂಗಿಕ ನ್ಯಾಯ ಹಾಗೂ ಇತರ ವಿಷಯಗಳಿಗೆ ಮಹತ್ವ ನೀಡಿ ಸಂಬೋಧಿಸುತ್ತಾ, ವುಮನ್‌ ಇನ್ ಸಿನಿಮಾ ಕಿಕ್ಟಿವ್ಸ್ ಸಹಸ್ಥಾಪನೆ ಮಾಡಿದರು. ತನ್ನ ಪಾತ್ರಗಳಿಗೆ ಹೆಚ್ಚಿನ ನ್ಯಾಯ ಒದಗಿಸುತ್ತಾ, ಸಮಾಜದ ಸಾಲುಭರಿತ ಮಾನದಂಡಗಳನ್ನು ಪಾರು ಮಾಡುತ್ತಾ, ಪಾರ್ವತಿ ಇಂದು ಹಲವು ಮಹತ್ವಾಕಾಂಕ್ಷಿ ಕಲಾವಿದರಿಗೆ ಹಾಗೂ ಮೀಡಿಯಾದಲ್ಲಿ ಪ್ರತಿನಿಧಿಯಾಗಿ ನಿಂತಿದ್ದಾರೆ. ಆಸರೆ ಬೇಡುವ ಹೆಣ್ಣುಮಕ್ಕಳಿಗೆ ಆದರ್ಶವಾಗಿದ್ದಾರೆ. ಆಕೆ ಭಾರತೀಯ ಸಿನಿಮಾಗಳ ಗಂಭೀರ ಪ್ರಕರಣಗಳಲ್ಲಿ, ಅದು ಆನ್‌ ಸ್ಕ್ರೀನ್‌ ಯಾ ಆಫ್‌ ಸ್ಕ್ರೀನ್‌ ಆಗಿರಬಹುದು, ಎರಡೂ ರೂಪಗಳಲ್ಲಿ ಸಾಂಸ್ಕೃತಿಕ ವಿಷಯಗಳ ಮಹತ್ವ ಎತ್ತಿಹಿಡಿದಿದ್ದಾರೆ.

ರಜನೀ ಪ್ರಸಾದ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ