ಐವಿಎಫ್ಕ್ಷೇತ್ರದಲ್ಲಿ ದಿಟ್ಟ ಕ್ರಾಂತಿಕಾರಿ ಹೆಜ್ಜೆಗಳ ಹೆಗ್ಗುರುತು!”

ಎಡಿಟರ್ಚಾಯ್ಸ್ ಅವಾರ್ಡ್

ಡಾ. ಕಾಮಿನಿ ರಾವ್ ಭಾರತದ ಪ್ರತಿಭಾನ್ವಿತ ಮತ್ತು ವಿಶೇಷ ವೈದ್ಯಕೀಯ ತಜ್ಞರಲ್ಲಿ ಒಬ್ಬರು. ತಮ್ಮ ಶ್ರೇಷ್ಠ ಪರಿಣತಿಯಿಂದಾಗಿ ಅವರಿಗೆ ಸಂತಾನೋತ್ಪತ್ತಿ ವೈದ್ಯಕೀಯ ಕ್ಷೇತ್ರದಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಗೌರವ ಸಂದಿದೆ.

ಡಾ. ಕಾಮಿನಿ ನಾಯಕತ್ವದಲ್ಲಿ ಒಂದೆಡೆ ಅನೇಕ ವೈದ್ಯಕೀಯ ತಜ್ಞರು ಶಿಕ್ಷಣ ಮತ್ತು ತರಬೇತಿ ಪಡೆಯುತ್ತಿದ್ದಾರೆ ಹಾಗೂ ಐವಿಎಫ್ ಮತ್ತು ಸಂತಾನೋತ್ಪತ್ತಿ ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇನ್ನೊಂದು ಕಡೆ ಅನೇಕ ಸಂತಾನಹೀನ ಮಹಿಳೆಯರು ಮಾತೃತ್ವದ ವರವನ್ನು ಪಡೆಯುತ್ತಿದ್ದಾರೆ.

ಡಾ. ಕಾಮಿನಿಯವರ ಮಾತೃ ಕಲ್ಯಾಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಪ್ರಯತ್ನಗಳನ್ನು ಶ್ಲಾಘಿಸಿ, ಗೃಹಶೋಭಾ ಅವರಿಗೆ ಗೃಹಶೋಭಾ ಇನ್ಸ್ ಫೈರ್‌ ಪ್ರಶಸ್ತಿಗಳಲ್ಲಿ ಎಡಿಟರ್ಸ್‌ ಚಾಯ್ಸ್ ಅವಾರ್ಡ್‌ (ಆರೋಗ್ಯ ರಕ್ಷಣೆ ನಾಯಕತ್ವ) ಪ್ರದಾನ ಮಾಡಿದೆ.

ಐವಿಎಫ್‌ ಕೇಂದ್ರಗಳಿಗೆ ಒಂದು ಬಲವಾದ ಚೌಕಟ್ಟು ಮಿಲನ್‌ ಡಾ. ಕಾಮಿನಿ ರಾವ್ ‌ಭಾರತದಲ್ಲಿ ಸಂತಾನೋತ್ಪತ್ತಿ ಔಷಧ, ವೈದ್ಯಕೀಯ ವಿಜ್ಞಾನ ಮತ್ತು ಶಿಕ್ಷಣದಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಮಹಿಳೆಯರಿಗೆ ಮಗುವಿಗೆ ಜನ್ಮ ನೀಡುವ ಮೂಲಭೂತ ಹಕ್ಕನ್ನು ಪೂರೈಸಲು ಅವರು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ, ಇದಕ್ಕೆ `ಮಿಲನ್‌’ ಒಂದು ಉದಾಹರಣೆ.

ಮಿಲನ್‌ ಎನ್ನುವುದು ಇವರು ಸ್ಥಾಪಿಸಿದ ಸಂತಾನೋತ್ಪತ್ತಿ ಚಿಕಿತ್ಸೆಯ ಕೇಂದ್ರಗಳ ಸರಪಳಿಯಾಗಿದೆ. ಮಿಲನ್‌ ನ್ನು ಮೊದಲು ಬಿಎಸಿಸಿ ಹೆಲ್ತ್ ಕೇರ್‌ ಎಂದು ಕರೆಯಲಾಗುತ್ತಿತ್ತು. ಇಂದು, ಅದು ಒಂದು ಬ್ರಾಂಡ್‌ ಆಗಿ ಬೆಳೆದಿದೆ. ಇದು ತನ್ನ ಗುಣಮಟ್ಟ, ವೈದ್ಯಕೀಯ ಪರಿಣತಿ, ರೋಗಿಗಳ ಅತ್ಯುತ್ತಮ ಆರೈಕೆ, ವಿಶ್ವದಲ್ಲೇ ಅತ್ಯುತ್ತಮ ಯಶಸ್ಸಿನ ದರದ ಉನ್ನತ ಮಾನದಂಡಗಳಿಗೆ ಹೆಸರುವಾಸಿಯಾಗಿದೆ.

ಬಿಎಸಿಸಿ ಹೆಲ್ತ್ ಕೇರ್‌ ಅನೇಕ ವೈದ್ಯಕೀಯ ವೃತ್ತಿಪರರು ಮತ್ತು ಭ್ರೂಣಶಾಸ್ತ್ರಜ್ಞರು ಇಬ್ಬರಿಗೂ ಶಿಕ್ಷಣ ಮತ್ತು ತರಬೇತಿ ಪಡೆಯಲು ಪ್ರಮುಖ ಸ್ಥಳವಾಗಿದೆ. ಅಲ್ಲದೆ, ಇದೇ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ದೇಶದ ಹಲವು ಪ್ರಮುಖ ಐವಿಎಫ್‌ ಕೇಂದ್ರಗಳಿಗೆ ಆಧಾರವಾಗಿದ್ದಾರೆ.

ಕಾಮಿನಿ ಕೇರ್ಸ್‌ ಫೌಂಡೇಶನ್‌ ಇದಲ್ಲದೆ, ಅವರು ಕಾಮಿನಿ ಕೇರ್ಸ್‌ ಫೌಂಡೇಶನ್‌ ನ್ನು ಸಹ ಸ್ಥಾಪಿಸಿದ್ದಾರೆ. ಈ ಸಂಸ್ಥೆ ದೇಶಾದ್ಯಂತ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಜೀವನವನ್ನು ಸುಧಾರಿಸಲು, ಉನ್ನತೀಕರಿಸಲು ಮತ್ತು ಜ್ಞಾನ ನೀಡುವ ಕೆಲಸ ಮಾಡುವಲ್ಲಿ ಗಮನಹರಿಸಿದೆ. ಇದರ ಪ್ರಾಥಮಿಕ ಉದ್ದೇಶವೆಂದರೆ ಮಹಿಳೆಯರ ಸಾಮರ್ಥ್ಯಗಳನ್ನು ಗುರುತಿಸುವುದು ಮತ್ತು ಅವರ ಕನಸುಗಳನ್ನು ಸಾಕಾರಗೊಳಿಸಲು ಹಾಗೂ ಅನ್ವೇಷಿಸಲು ಸಹಾಯ ಮಾಡುತ್ತದೆ. ಎಲ್ಲಾ ಮಹಿಳೆಯರು ತಮ್ಮ ಜೀವನ ಮತ್ತು ಭವಿಷ್ಯವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದ್ದಾರೆ. ಸಾಕಷ್ಟು ಆಹಾರ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಪಡೆಯುವುದನ್ನು ಖಚಿತಪಡಿಸುವುದು ಈ ಸಂಸ್ಥೆಯ ಉದ್ದೇಶವಾಗಿದೆ.

ಪ್ರಸ್ತುತ ಡಾ. ಕಾಮಿನಿ ಒಂದು ಪ್ರಯೋಗಾಲಯವನ್ನು ಸ್ಥಾಪಿಸುವಲ್ಲಿ ತೊಡಗಿದ್ದಾರೆ. ಅಲ್ಲಿ ಹಿಮೋಫಿಲಿಯಾ, ಡೌನ್ಸ್ ಸಿಂಡ್ರೋಮ್, ಥಲಸ್ಸೆಮಿಯಾ ಮುಂತಾದ ಆನುವಂಶಿಕ ಕಾಯಿಲೆಗಳ ಪ್ರಸವ ಪೂರ್ವ ಪರೀಕ್ಷೆ ನಡಿಸಬಹುದು. ಅಲ್ಲಿ ಪಡೆದ ಡೇಟಾ ಬೇಸ್‌ ಆಧಾರದ ಮೇಲೆ ಹೆಚ್ಚಿನ ಸಂಶೋಧನೆ ನಡೆಸಿ, ಉತ್ತಮ ಚಿಕಿತ್ಸೆ ಸುಲಭವಾಗಿ ಸಿಗುವಂತೆ ಮಾಡುವುದು ಅವರ ಗುರಿ. ಇದರಿಂದ ಜನರ ಜೀವನ ಸುಧಾರಿಸುತ್ತದೆ.

ಹುದ್ದೆ ಮತ್ತು ಸ್ಥಾನ

ವೈದ್ಯಕೀಯ ನಿರ್ದೇಶಕರು ಮಿಲನ್‌ ಫರ್ಟಿಲಿಟಿ ಸೆಂಟರ್‌ (ಬಿಎಸಿಸಿ ಹೆಲ್ತ್ ಕೇರ್‌) (1990-2022).

ಸಿಂಡಿಕೇಟ್‌ ಸದಸ್ಯರು ರಾಜೀವ್ ‌ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾಲಯ (2015-2018).

ಸೆನೆಟ್‌ ಸದಸ್ಯರು ರಾಜೀವ್ ‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (2009-2012).

ಅಧ್ಯಕ್ಷರು ಫೆಡರೇಷನ್‌ ಆಫ್‌ ಆ್ಯಬ್ಸ್ ಟೆಟ್ರಿಕ್‌ಗೈನಕಾಲಾಜಿಕಲ್ ಸೊಸೈಟೀಸ್‌ ಆಫ್‌ ಇಂಡಿಯಾ (2000-2001).

ಅಧ್ಯಕ್ಷರು ಇಂಡಿಯನ್‌ ಸೊಸೈಟಿ ಫಾರ್‌ ಅಸಿಸ್ಟೆಡ್‌ ರಿಪ್ರೊಡಕ್ಷನ್‌(2006-2008).

ಮುಖ್ಯ ಸಂಪಾದಕರು ಜರ್ನಲ್ ಆಫ್‌ ಹ್ಯೂಮನ್‌ ರಿಪ್ರೊಡಕ್ಟಿವ್ ‌ಸೈನ್ಸಸ್‌ (2009-2014).

ಸ್ಥಾಪಕ ಸಂಪಾದಕರು ಇಂಟರ್‌ ನ್ಯಾಶನಲ್ ಜರ್ನಲ್ ಆಫ್‌ ಇನ್‌ ಫರ್ಟಿಲಿಟಿ ಮೆಟ್‌ ಮೆಡಿಸಿನ್‌ (2010 ರಿಂದ ಪ್ರಸ್ತುತ).

ಸದಸ್ಯರು ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ಎಆರ್‌ಟಿ ಮಸೂದೆ) ಕುರಿತ ಮಾರ್ಗಸೂಚಿಗಳ ರಾಷ್ಟ್ರೀಯ ಸಲಹಾ ಸಮಿತಿ.

ಸದಸ್ಯರು ಸ್ಟೆಮ್ ಸೆಲ್ ‌ಸಂಶೋಧನೆ ಮತ್ತು ಚಿಕಿತ್ಸೆಗಾಗಿ ರಾಷ್ಟ್ರೀಯ ಸರ್ವೋಚ್ಚ ಸಮಿತಿ (2010 ಇಂದಿನವರೆಗೆ).

ಅಧ್ಯಕ್ಷರು ಮಹಿಳಾ ಲೈಂಗಿಕ ಮತ್ತು ಸಂತಾನೋತ್ಪತ್ತಿ ಹಕ್ಕುಗಳ ಸಮಿತಿ, ಇಂಟರ್‌ ನ್ಯಾಶನಲ್ ಓಬ್‌ ಗೈನ್‌ ಫೆಡರೇಶನ್‌  (2006-2009).

ಇಂಟರ್‌ ನ್ಯಾಶನಲ್ ಫೆಡರೇಶನ್‌ ಆಫ್‌ ಆ್ಯಬ್ಸ್ ಟೆಟ್ರಿಕ್ಸ್ ಗೈನಕಾಲಜಿಯಲ್ಲಿ ಭಾರತದ ಪ್ರತಿನಿಧಿ (2003-2006).

ಏಷ್ಯಾ ಓಷಿಯಾನಿಯಾ ಫೆಡರೇಶನ್‌ ಆಫ್‌ ಆ್ಯಬ್ಸ್ಟೆಟ್ರಿಕ್ಸ್ ಗೈನಕಾಲಜಿಯಲ್ಲಿ ಭಾರತದ ಪ್ರತಿನಿಧಿ (2001-2003).

ಅಧ್ಯಕ್ಷರು ವೆಬ್‌ ಸೈಟ್‌ : ಅಧ್ಯಕ್ಷರು ಅಂತಾರಾಷ್ಟ್ರೀಯ ಸಂತಾನೋತ್ಪತ್ತಿ ಆರೋಗ್ಯ ತರಬೇತಿ ಮತ್ತು ಸಂಶೋಧನಾ ಸಂಸ್ಥೆ ಅಧ್ಯಕ್ಷರು ಬೆಂಗಳೂರು ಸೊಸೈಟಿ ಆಫ್‌ ಆ್ಯಬ್ಸ ಟೆಟ್ರಿಕ್ಸ್ ಗೈನಕಾಲಜಿ (1998).

ಸಲಹೆಗಾರ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಮಲ್ಯ ಆಸ್ಪತ್ರೆ, ಬೆಂಗಳೂರು.

ಪ್ರಶಸ್ತಿ ಮತ್ತು ಸಾಧನೆಗಳು

ಸಂತಾನೋತ್ಪತ್ತಿ ವೈದ್ಯಕೀಯ (ರಿಪ್ರೊಡೆಕ್ಟಿವ್ ‌ಮೆಡಿಸಿನ್‌) ಕ್ಷೇತ್ರದಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ 2014.

ವೈದ್ಯಕೀಯ ಕ್ಷೇತ್ರದಲ್ಲಿನ ಅಮೂಲ್ಯ ಸೇವೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ (ರಾಜ್ಯೋತ್ಸ ಪ್ರಶಸ್ತಿ) 1997.

ಲೈಫ್‌ ಟೈಮ್ ಲೆಗಸಿ ಪ್ರಶಸ್ತಿ, ರಿಪ್ರೊಡೆಕ್ಟಿವ್ ‌ಮೆಡಿಸಿನ್‌ 2025.

ಲೈಫ್‌ ಟೈಮ್ ಪವರ್‌ ವುಮೆನ್‌ 2025.

ಮಹಿಳಾ ಮಾಣಿಕ್ಯ ಪ್ರಶಸ್ತಿ 2025.

ಲೈಫ್‌ ಟೈಮ್ ಅಚೀವ್‌ ಮೆಂಟ್‌ ಪ್ರಶಸ್ತಿ, ರಿಪ್ರೊಡಕ್ಟಿವ್ ‌ಮೆಡಿಸಿನ್‌ 2025.

ಇಂಡಿಯನ್‌ ಮೆಡಿಕಲ್ ಅಸೋಸಿಯೇಶನ್‌ ನಿಂದ ನ್ಯಾಶನಲ್ ಬೆಸ್ಟ್ ಟೀಚರ್‌ ಪ್ರಶಸ್ತಿ 2024.

ವೈದ್ಯಕೀಯ ಕ್ಷೇತ್ರದಲ್ಲಿ ಕರ್ನಾಟಕ ವಿದ್ಯಾ ರತ್ನ ಪ್ರಶಸ್ತಿ 2024.

ಲೈಫ್‌ ಸ್ಟೈಲ್ ಅಚೀವ್ ‌ಮೆಂಟ್‌ ಪ್ರಶಸ್ತಿ, ವಿಜಯ ಕರ್ನಾಟಕ ಮತ್ತು ಬೆಂಗಳೂರು ಮಿರರ್‌ತಿಯಿಂದ 2025.

ಸ್ಪೀಕರ್‌ ಪ್ರಶಸ್ತಿ 2023.

ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ ವೈದ್ಯಕೀಯ ಕ್ಷೇತ್ರದಲ್ಲಿನ ಶ್ರೇಷ್ಠತೆಗಾಗಿ ಆರ್ಯಭಟ ಪ್ರಶಸ್ತಿ.

ಇಂಡಿಯನ್‌ ಮೆಡಿಕಲ್ ಅಸೋಸಿಯೇಷನ್‌ ನ ಶಿವಮೊಗ್ಗ ಘಟಕದಿಂದ ಜಿಲ್ಲಾ ಬಿ.ಸಿ. ರಾಯ್‌ ಜಿಲ್ಲಾ ಪ್ರಶಸ್ತಿ.

ಬೆಂಗಳೂರು ಸೊಸೈಟಿ ಆಫ್‌ ಆ್ಯಬ್ಸ್ ಟೆಟ್ರಿಕ್ಸ್ ಗೈನಕಾಲಜಿಯಿಂದ ಲೈಫ್‌ ಟೈಮ್ ಅಚೀವ್ ‌ಮೆಂಟ್‌ಪ್ರಶಸ್ತಿ.

ಫೆಡರೇಶನ್‌ ಆಫ್‌ ಆ್ಯಬ್ಸ್ ಟೆಟ್ರಿಕ್‌ಗೈನಕಾಲಜಿಕ್‌ ಸೊಸೈಟೀಸ್‌ ಆಫ್‌ ಇಂಡಿಯಾದಿಂದ ಜೀವಮಾನ ಸಾಧನೆ ಪ್ರಶಸ್ತಿ.

ನ್ಯಾಷನಲ್ ಅಕಾಡೆಮಿ ಆಫ್‌ ಮೆಡಿಕಲ್ ಸೈನ್ಸಸ್‌ನಿಂದ ಆಯ್ಕೆಯಾದ ಫೆಲೋಶಿಪ್‌. ಡಾ. ಕಾಮಿನಿ ಇಂತಹ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ತಮ್ಮ ಸೇವೆ ಸಲ್ಲಿಸುವುದರ ಜೊತೆಗೆ, ಡಾ. ಕಾಮಿನಿ ರಾವ್ ‌ಸುಮಾರು 50 ವೈದ್ಯಕೀಯ ಪಠ್ಯ ಪುಸ್ತಕಗಳು ಮತ್ತು ಹೆಚ್ಚಿನ ಸಂಖ್ಯೆಯ ಜರ್ನಲ್ ಹಾಗೂ ಅಧ್ಯಾಯ ಪ್ರಕಟಣೆಗಳನ್ನು ಸಹ ಬರೆದಿದ್ದಾರೆ.

ರಜನಿ ಪ್ರಸಾದ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ