``ಐವಿಎಫ್ಕ್ಷೇತ್ರದಲ್ಲಿ ದಿಟ್ಟ ಕ್ರಾಂತಿಕಾರಿ ಹೆಜ್ಜೆಗಳ ಹೆಗ್ಗುರುತು!''

ಎಡಿಟರ್ಚಾಯ್ಸ್ ಅವಾರ್ಡ್

ಡಾ. ಕಾಮಿನಿ ರಾವ್ ಭಾರತದ ಪ್ರತಿಭಾನ್ವಿತ ಮತ್ತು ವಿಶೇಷ ವೈದ್ಯಕೀಯ ತಜ್ಞರಲ್ಲಿ ಒಬ್ಬರು. ತಮ್ಮ ಶ್ರೇಷ್ಠ ಪರಿಣತಿಯಿಂದಾಗಿ ಅವರಿಗೆ ಸಂತಾನೋತ್ಪತ್ತಿ ವೈದ್ಯಕೀಯ ಕ್ಷೇತ್ರದಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಗೌರವ ಸಂದಿದೆ.

ಡಾ. ಕಾಮಿನಿ ನಾಯಕತ್ವದಲ್ಲಿ ಒಂದೆಡೆ ಅನೇಕ ವೈದ್ಯಕೀಯ ತಜ್ಞರು ಶಿಕ್ಷಣ ಮತ್ತು ತರಬೇತಿ ಪಡೆಯುತ್ತಿದ್ದಾರೆ ಹಾಗೂ ಐವಿಎಫ್ ಮತ್ತು ಸಂತಾನೋತ್ಪತ್ತಿ ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇನ್ನೊಂದು ಕಡೆ ಅನೇಕ ಸಂತಾನಹೀನ ಮಹಿಳೆಯರು ಮಾತೃತ್ವದ ವರವನ್ನು ಪಡೆಯುತ್ತಿದ್ದಾರೆ.

ಡಾ. ಕಾಮಿನಿಯವರ ಮಾತೃ ಕಲ್ಯಾಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಪ್ರಯತ್ನಗಳನ್ನು ಶ್ಲಾಘಿಸಿ, ಗೃಹಶೋಭಾ ಅವರಿಗೆ ಗೃಹಶೋಭಾ ಇನ್ಸ್ ಫೈರ್‌ ಪ್ರಶಸ್ತಿಗಳಲ್ಲಿ ಎಡಿಟರ್ಸ್‌ ಚಾಯ್ಸ್ ಅವಾರ್ಡ್‌ (ಆರೋಗ್ಯ ರಕ್ಷಣೆ ನಾಯಕತ್ವ) ಪ್ರದಾನ ಮಾಡಿದೆ.

ಐವಿಎಫ್‌ ಕೇಂದ್ರಗಳಿಗೆ ಒಂದು ಬಲವಾದ ಚೌಕಟ್ಟು ಮಿಲನ್‌ ಡಾ. ಕಾಮಿನಿ ರಾವ್ ‌ಭಾರತದಲ್ಲಿ ಸಂತಾನೋತ್ಪತ್ತಿ ಔಷಧ, ವೈದ್ಯಕೀಯ ವಿಜ್ಞಾನ ಮತ್ತು ಶಿಕ್ಷಣದಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಮಹಿಳೆಯರಿಗೆ ಮಗುವಿಗೆ ಜನ್ಮ ನೀಡುವ ಮೂಲಭೂತ ಹಕ್ಕನ್ನು ಪೂರೈಸಲು ಅವರು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ, ಇದಕ್ಕೆ `ಮಿಲನ್‌' ಒಂದು ಉದಾಹರಣೆ.

ಮಿಲನ್‌ ಎನ್ನುವುದು ಇವರು ಸ್ಥಾಪಿಸಿದ ಸಂತಾನೋತ್ಪತ್ತಿ ಚಿಕಿತ್ಸೆಯ ಕೇಂದ್ರಗಳ ಸರಪಳಿಯಾಗಿದೆ. ಮಿಲನ್‌ ನ್ನು ಮೊದಲು ಬಿಎಸಿಸಿ ಹೆಲ್ತ್ ಕೇರ್‌ ಎಂದು ಕರೆಯಲಾಗುತ್ತಿತ್ತು. ಇಂದು, ಅದು ಒಂದು ಬ್ರಾಂಡ್‌ ಆಗಿ ಬೆಳೆದಿದೆ. ಇದು ತನ್ನ ಗುಣಮಟ್ಟ, ವೈದ್ಯಕೀಯ ಪರಿಣತಿ, ರೋಗಿಗಳ ಅತ್ಯುತ್ತಮ ಆರೈಕೆ, ವಿಶ್ವದಲ್ಲೇ ಅತ್ಯುತ್ತಮ ಯಶಸ್ಸಿನ ದರದ ಉನ್ನತ ಮಾನದಂಡಗಳಿಗೆ ಹೆಸರುವಾಸಿಯಾಗಿದೆ.

ಬಿಎಸಿಸಿ ಹೆಲ್ತ್ ಕೇರ್‌ ಅನೇಕ ವೈದ್ಯಕೀಯ ವೃತ್ತಿಪರರು ಮತ್ತು ಭ್ರೂಣಶಾಸ್ತ್ರಜ್ಞರು ಇಬ್ಬರಿಗೂ ಶಿಕ್ಷಣ ಮತ್ತು ತರಬೇತಿ ಪಡೆಯಲು ಪ್ರಮುಖ ಸ್ಥಳವಾಗಿದೆ. ಅಲ್ಲದೆ, ಇದೇ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ದೇಶದ ಹಲವು ಪ್ರಮುಖ ಐವಿಎಫ್‌ ಕೇಂದ್ರಗಳಿಗೆ ಆಧಾರವಾಗಿದ್ದಾರೆ.

ಕಾಮಿನಿ ಕೇರ್ಸ್‌ ಫೌಂಡೇಶನ್‌ ಇದಲ್ಲದೆ, ಅವರು ಕಾಮಿನಿ ಕೇರ್ಸ್‌ ಫೌಂಡೇಶನ್‌ ನ್ನು ಸಹ ಸ್ಥಾಪಿಸಿದ್ದಾರೆ. ಈ ಸಂಸ್ಥೆ ದೇಶಾದ್ಯಂತ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಜೀವನವನ್ನು ಸುಧಾರಿಸಲು, ಉನ್ನತೀಕರಿಸಲು ಮತ್ತು ಜ್ಞಾನ ನೀಡುವ ಕೆಲಸ ಮಾಡುವಲ್ಲಿ ಗಮನಹರಿಸಿದೆ. ಇದರ ಪ್ರಾಥಮಿಕ ಉದ್ದೇಶವೆಂದರೆ ಮಹಿಳೆಯರ ಸಾಮರ್ಥ್ಯಗಳನ್ನು ಗುರುತಿಸುವುದು ಮತ್ತು ಅವರ ಕನಸುಗಳನ್ನು ಸಾಕಾರಗೊಳಿಸಲು ಹಾಗೂ ಅನ್ವೇಷಿಸಲು ಸಹಾಯ ಮಾಡುತ್ತದೆ. ಎಲ್ಲಾ ಮಹಿಳೆಯರು ತಮ್ಮ ಜೀವನ ಮತ್ತು ಭವಿಷ್ಯವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದ್ದಾರೆ. ಸಾಕಷ್ಟು ಆಹಾರ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಪಡೆಯುವುದನ್ನು ಖಚಿತಪಡಿಸುವುದು ಈ ಸಂಸ್ಥೆಯ ಉದ್ದೇಶವಾಗಿದೆ.

ಪ್ರಸ್ತುತ ಡಾ. ಕಾಮಿನಿ ಒಂದು ಪ್ರಯೋಗಾಲಯವನ್ನು ಸ್ಥಾಪಿಸುವಲ್ಲಿ ತೊಡಗಿದ್ದಾರೆ. ಅಲ್ಲಿ ಹಿಮೋಫಿಲಿಯಾ, ಡೌನ್ಸ್ ಸಿಂಡ್ರೋಮ್, ಥಲಸ್ಸೆಮಿಯಾ ಮುಂತಾದ ಆನುವಂಶಿಕ ಕಾಯಿಲೆಗಳ ಪ್ರಸವ ಪೂರ್ವ ಪರೀಕ್ಷೆ ನಡಿಸಬಹುದು. ಅಲ್ಲಿ ಪಡೆದ ಡೇಟಾ ಬೇಸ್‌ ಆಧಾರದ ಮೇಲೆ ಹೆಚ್ಚಿನ ಸಂಶೋಧನೆ ನಡೆಸಿ, ಉತ್ತಮ ಚಿಕಿತ್ಸೆ ಸುಲಭವಾಗಿ ಸಿಗುವಂತೆ ಮಾಡುವುದು ಅವರ ಗುರಿ. ಇದರಿಂದ ಜನರ ಜೀವನ ಸುಧಾರಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ