– ರಾಘವೇಂದ್ರ ಅಡಿಗ ಎಚ್ಚೆನ್.

ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ *’ಸನ್ ಉದಯ’ದಲ್ಲಿ* ಹೊಸ ಧಾರವಾಹಿ *’ಗೆಳತಿ ಗಾಯಿತ್ರಿ’* ಆಗಸ್ಟ್ 17ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.00ಕ್ಕೆ ಪ್ರಸಾರವಾಗಲಿದೆ. ಎಂದಿನಂತೆ ಈ ಬಾರಿಯೂ ಕೂಡ ವಿಭಿನ್ನ ಪ್ರಯತ್ನ ಎನ್ನುವಂತೆ ಪ್ರಸಾರದ ಒಂದು ವಾರದ ಹಿಂದೆ ಅಂದರೆ ಭಾನುವಾರದಂದು ಯಡಿಯೂರು ಲೇಕ್ ಬಳಿ ಇರುವ ಡಾ.ಪುನೀತ್ ರಾಜ್‌ಕುಮಾರ್ ಸಭಾಂಗಣದಲ್ಲಿ ಕೆಲವು ಕಂತುಗಳ ಪ್ರೀಮಿಯರ್ ಷೋ ಏರ್ಪಾಟು ಮಾಡಲಾಗಿತ್ತು. ತುಂಬಿದ ಸಭಾಂಗಣದಲ್ಲಿ ಸೀರಿಯಲ್ ವೀಕ್ಷಿಸಿದ ಅಭಿಮಾನಿಗಳ ಒಂದಷ್ಟು ಪ್ರಶ್ನೆಗಳಿಗೆ ತಂಡವು ಉತ್ತರ ನೀಡಿತು.

ಜಯಮಾತಾ ಕಂಬೈನ್ಸ್ ಸಾರಥಿ ಮಿಲನ ಪ್ರಕಾಶ್ ಮಾತನಾಡಿ, ನಿರ್ದೇಶಕರು ಎಲ್ಲವನ್ನು ಚೆನ್ನಾಗಿ ವಿವರಣೆ ಕೊಟ್ಟಿದ್ದಾರೆ. ಪಾತ್ರಧಾರಿಗಳಾದ ಗಾಯಿತ್ರಿ-ಪಾರ್ವತಿ-ಸೂರ್ಯ ಇವರಿಂದ ನಟನೆಯನ್ನು ತೆಗೆಸಿದ್ದಾರೆ. ಅಮ್ಮನ ಆಸೆಯಂತೆ ಸಿನಿಮಾ ಜತೆಗೆ ಧಾರವಾಹಿ ಮಾಡಿದ್ದೇ. ಈ ಧಾರವಾಹಿ ಮೂಲಕ ಸಿನಿಮಾಕ್ಕಿಂತ ಧಾರವಾಹಿ ಹೆಚ್ಚು ತೃಪ್ತಿ ಕೊಟ್ಟಿದ್ದೆ ಎಂದು ಹೇಳಿದರು.

IMG-20260812-WA0006

ನಿರ್ಮಾಪಕಿ ತಶ್ವೀನಿ ಪ್ರಕಾಶ್ ಮಾತನಾಡಿ, ನಾನು ಸಹ ಎಲ್ಲರಂತೆ ಕೆಲಸ ಮಾಡಿದ್ದೇನೆ. ಕಲಾವಿದರು ಮತ್ತು ತಂತ್ರಜ್ಞರು ಬೆಂಬಲ ನೀಡಿದರು. ಇದಕ್ಕೂ ಮುಖ್ಯವಾಗಿ ಸನ್ ಉದಯ ಪೂರ್ತಿ ಸಹಕಾರ ನೀಡಿದ್ದರಿಂದಲೇ ಔಟ್‌ಪುಟ್ ಚೆನ್ನಾಗಿ ಬಂದಿದೆ ಎಂದರು.

ನಿರ್ದೇಶಕ ಯಶವಂತ ಪಾಂಡು ಮಾತನಾಡಿ, ಬಹಳ ದಿನಗಳಿಂದ ಹಿಂದೆ  ನಿರ್ಮಾಪಕರಿಗೆ ಕಥೆ ಹೇಳಿದ್ದೆ. ಅದು ಈಗ ಕಾರ್ಯರೂಪಕ್ಕೆ ಬಂದಿರುವುದು ಸಂತಸ ಕೊಟ್ಟಿದೆ. ಮನೆಯಲ್ಲಿ ಎಲ್ಲರೂ ನೋಡುವಂತ, ಯಾರಿಗೂ ಮುಜಗರ ಆಗದೆ ಖುಷಿಯಾಗಿ ಧಾರವಾಹಿ ಸಾಗುತ್ತದೆ. ನಾವುಗಳು ಅಂದುಕೊಂಡಂತೆ ಸೀರಿಯಲ್ ಬಂದಿದೆ. ಅದೇ ಅಭಿಪ್ರಾಯ ನಿಮಗೂ ಬರುತ್ತದೆ ಅಂತ ನಂಬಿದ್ದೇನೆ ಎಂದರು.

ನಾಯಕಿ ವೈಷ್ಣವಿಗೌಡ ಮಾತನಾಡಿ, ಇಂತಹ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿದ್ದು ಖುಷಿ ನೀಡಿದೆ. ನಾವುಗಳು ಸನ್ನಿವೇಶವನ್ನು ಅಂತರಾಳದಲ್ಲಿ ತೆಗೆದುಕೊಂಡಾಗ ಮಾತ್ರ ನಟಿಸಲು ಸುಲಭವಾಗುತ್ತದೆ. ಇಂದು ಕಂತುಗಳನ್ನು ನೋಡಿದಾಗ ನಿರ್ದೇಶಕರ ಶಿಸ್ತುಬದ್ದತೆಗೆ ಪ್ರಾಮಖ್ಯತೆ ಸಿಕ್ಕಿದೆ. ಮುಂದಿನವಾರ ನಿಮ್ಮ ಮನೆಗೆ ಬರ‍್ತಾ ಇದ್ದೇನೆ. ನಿಮ್ಮಗಳ ಪ್ರೋತ್ಸಾಹ ಇರಲಿ. ಜತೆಗೆ ಪತಿಯ ಸಹಕಾರ ಧೈರ್ಯ ತಂದಿದೆ ಎಂದರು.

IMG-20260812-WA0004

ನಾಯಕಿ ಕೃತಿಕಾ ಮಾತನಾಡಿ, ಯಾವುದೇ ಪಾತ್ರವನ್ನು ಪ್ರೀತಿಸಲಿಲ್ಲ ಅಂದರೆ ನಟಿಸಲಿಕ್ಕೆ ಕಷ್ಟವಾಗುತ್ತದೆ. ಅದೇ ರೀತಿ ಗಾಯಿತ್ರಿ ಪಾತ್ರ ಸರಿಯಾಗಿ ನಿಭಾಯಿಸಿದ್ದೇನೆ ಅಂತ ಅನಿಸಿದೆ. ನನ್ನ ಮತ್ತು ವೈಷ್ಣವಿ ಬಾಂಡಿಂಗ್ ಚೆನ್ನಾಗಿದೆ. ಸೆಟ್‌ಲ್ಲಿ ಹರಟೆ ಹೊಡೆಯುತ್ತಿರುತ್ತೇವೆ. ಕರೆ ಬಂದ ತಕ್ಷಣ ಕ್ಯಾಮಾರ ಮುಂದೆ ಎಲ್ಲರೂ ಪಾತ್ರಧಾರಿಗಳಾಗಿ ಬಿಡುತ್ತೇವೆ ಎಂದು ಮನದಾಳವನ್ನು ಹಂಚಿಕೊಂಡರು.

ಇದು ನನಗೆ ಛಾಲೆಂಜಿಂಗ್ ರೋಲ್. ನಿಮ್ಮ ಈ ಪ್ರೋತ್ಸಾಹ ನೋಡಿದರೆ ನನ್ನ ಪಾತ್ರ ಸರಿಯಾಗಿ ನಿಭಾಯಿಸಿದ್ದೇನೆ ಎಂಬ ನಂಬಿಕೆ ಬಂದಿದೆ ಎಂದು ನಾಯಕ ನಾಗಾರ್ಜುನ ಹೇಳಿದರು. ಉಳಿದಂತೆ ಹಿರಿಯ ನಟ ಜಗದೀಶ್ ಮಲ್ನಾಡ್, ಪದ್ಮಿನಿ, ರಾಘು, ಮುಂತಾದವರು ಹಾಗೂ ತಂತ್ರಜ್ಞರು ಇದೇ ಸಂದರ್ಭದಲ್ಲಿ ತಮ್ಮ ಅನುಭವಗಳನ್ನು ನೆನಪು ಮಾಡಿಕೊಂಡರು.

ಛಾಯಾಗ್ರಹಣ ಅನಂತಗೌಡ, ಚಿತ್ರಕಥೆ ವಿಕಾಸ್ ಲೇಗಿನೋಣಿ, ಸಂಭಾಷಣೆ ಅಭಿಜ್ಞ ಅವರದಾಗಿದೆ. ಯಶಸ್ವಿ ಪ್ರೀಮಿಯರ್ ಷೋ ಕಂಡ *’ಗೆಳತಿ ಗಾಯಿತ್ರಿ’* ಆಗಸ್ಟ್ 17, ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.00ಕ್ಕೆ ಸನ್ ಉದಯವಾಹಿನಿಯಲ್ಲಿ ಪ್ರಸಾರವಾಗಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ