ಹಿಂಸಕ ಮಕ್ಕಳು ಅಸಹಾಯಕ ಪೇರೆಂಟ್ಸ್

ಬಿಬಿಸಿಯ ಒಂದು ವರದಿಯ ಪ್ರಕಾರ, ಇದೀಗ ಅಲ್ಲಿನ ಪೇರೆಂಟ್ಸ್ ದೊಡ್ಡ ಸಂಖ್ಯೆಯಲ್ಲಿ ಸೆಲ್ಫ್ ಡಿಫೆನ್ಸ್ ಕ್ಲಾಸೆಸ್‌ ಸೇರುತ್ತಿದ್ದಾರೆ. ಈ ಪೇರೆಂಟ್ಸ್ ತಮ್ಮ ಮಕ್ಕಳನ್ನು ಗೂಂಡಾ, ಕಳ್ಳಕಾಕರು, ಲಫಂಗರಿಂದ ರಕ್ಷಿಸಲಿಕ್ಕಲ್ಲ…… ತಮ್ಮನ್ನು ತಾವು, ತಾವೇ ಹೆತ್ತ ಮಕ್ಕಳಿಂದ ರಕ್ಷಿಸಿಕೊಳ್ಳಲು ಇದಕ್ಕೆ ಮೊರೆಹೋಗುತ್ತಿದ್ದಾರೆ. ಯೂರೋಪ್‌, ಅಮೆರಿಕಾ ಇತರ ದೇಶಗಳ ತರಹ, ಮಕ್ಕಳು ಹೆತ್ತವರ ವಿರುದ್ಧ ಗೂಂಡಾಗಿರಿ ಮಾಡುವುದು ಬಹಳ ಹೆಚ್ಚುತ್ತಿದೆ. ಪಾಪ, ಈ ಪೇರೆಂಟ್ಸ್ ಇದಕ್ಕಾಗಿ ಪೊಲೀಸರ ಸಹಾಯ ಪಡೆಯುವ ಹಾಗೂ ಇಲ್ಲ, ಕಣ್ಣೆದುರೇ ಮಕ್ಕಳು ಕಂಬಿ ಎಣಿಸುವಂತಾದರೇ ಆ ಸಂಕಟವನ್ನೂ ಕಣ್ಣಾರೆ ಕಾಣಬೇಕಲ್ಲ….? ಹಾಗೆಂದು ನಮ್ಮಲ್ಲಿ ಮಾತ್ರ ಪೇರೆಂಟ್ಸ್ ಮಕ್ಕಳ ವಿಷಯದಲ್ಲಿ ಬಲು ಸುರಕ್ಷಿತರು ಅಂತೇನಲ್ಲ. ಆದರೆ ನಮ್ಮಲ್ಲಿ ಇಂಥ ಪ್ರಕರಣಗಳು ಹೆಚ್ಚಾಗಿ ಹೊರಬರುವುದೇ ಇಲ್ಲ. ಇಂಗ್ಲೆಂಡ್‌ ನಲ್ಲಿ ಒಬ್ಬಾಕೆ ತನ್ನ ಬಹುಮಹಡಿ ಕಟ್ಟಡದ ಸೆಲ್ಫ್ ಡಿಫೆನ್ಸ್ ಎಕ್ಸ್ ಪರ್ಟ್‌ ಡೋರ್‌ ಮ್ಯಾನ್‌ ನಿಂದ (ಕಾಲುಗಾರ) ಸಹಾಯ ಕೇಳಿದಾಗ ಈ ವಿಷಯ ಬಯಲಾಯಿತು. ನಿಧಾನವಾಗಿ ಆತನ ಬಳಿ ಇನ್ನಷ್ಟು ಮತ್ತಷ್ಟು ಗ್ರಾಹಕರು ಬರತೊಡಗಿದರು.

ಲಂಡನ್ನಿನ ಪೇರೆಂಟಲ್ ‌ಎಜುಕೇಶನ್‌ ಗ್ರೋಥ್‌ ಒಂದು ಸಣ್ಣ ಸಂಸ್ಥೆಯಾಗಿದ್ದು, ಹೀಗೆ ಮಕ್ಕಳಿಂದ ಸಂತ್ರಸ್ತ ಪೇರೆಂಟ್ಸ್ ಗೆ ನೀಡುವ ಸಲಹೆ ಎಂದರೆ, ಸೆಲ್ಫ್ ಡಿಫೆನ್ಸ್ ಕಲಿಯಿರಿ. ಹೀಗಾಗಿ 3 ವರ್ಷಗಳಲ್ಲಿ ಇದರ ಗ್ರಾಹಕರು 3 ಪಟ್ಟು ಹೆಚ್ಚಿದ್ದಾರೆ. ನಮ್ಮಲ್ಲಿ ಇಂಥ ಪ್ರಕರಣ ಎಲ್ಲೊ ಅಲ್ಲೊಂದು ಇಲ್ಲೊಂದು ಮಾತ್ರ ಹೊರಬರುತ್ತವೆ. ಕುಡುಕ, ನಶಾಕೋರ ಮಕ್ಕಳು ಬೇಕೆಂದೇ ಹೆತ್ತವರನ್ನು ಗೋಳಾಡಿಸುತ್ತಾರೆ, ಹಣ ಕೀಳುತ್ತಾರೆ, ಆಸ್ತಿ ಮಾರಬೇಕೆಂದು ಬಲವಂತದ ರುಜು ಮಾಡಿಸುತ್ತಾರೆ. ಅಪರೂಪಕ್ಕೆ 1-2 ಕಡೆ ಚೈಲ್ಡ್ ಮರ್ಡರ್ಸ್‌ ಸಹ ನಡೆದಿವೆ.

ಇಂಥ ಹಿಂಸಕ ಮಕ್ಕಳಿಂದ ಪಾರಾಗುವುದು ಒಂದು ಪವಾಡವೇ ಸರಿ. ಇಂದಿನ ಕಿಶೋರರು ಇಂಥ ದುರಭ್ಯಾಸ ರೂಢಿಸಿಕೊಂಡರೆ ಸ್ವಾತಂತ್ರ್ಯ ಸ್ವೈರತೆಯಾಗಿ, ಕಷ್ಟಪಟ್ಟು ಗಳಿಸಿದ ಹಣವನ್ನು ಅನ್ಯಾಯವಾಗಿ ಉಡಾಯಿಸುತ್ತಾರೆ. ತಂದೆಯ ದುಷ್ಕೃತ್ಯಗಳಿಂದ ತಾಯಿಯನ್ನು ಕಾಪಾಡಿಕೊಳ್ಳಲೆಂದು ಕಿಶೋರರು ತಂದೆಯ ಕೊಲೆ ಮಾಡುವುದು ಮಾಮೂಲಿ. ಆದರೆ ಕಾರಣವಿಲ್ಲದೆ ಮುಗ್ಧ ಪೋಷಕರು ಇಂಥ ಪಾಪಿ ಮಕ್ಕಳಿಂದ ಶೋಷಣೆಗೆ ಗುರಿಯಾದರೆ ಕಾಪಾಡುವವರು ಯಾರು?

ಜನರನ್ನು ಸಮಾಜ ಒಂದೇ ಎಂದು ಭಾವಿಸುತ್ತದೆ. ಹೊರಗಿನ ಜನ ಮನೆಯ ಒಬ್ಬರನ್ನು ಆಕ್ರಮಿಸಿದರೂ, ಇಡೀ ಮನೆ ಒಂದಾಗಿ ಅಂಥವರ ವಿರುದ್ಧ ಹೋರಾಡುತ್ತದೆ. ಅಂದರೆ ಮನೆಯ ಅಂತಃಕಲಹ ಮನೆಗಷ್ಟೇ ಸೀಮಿತವಾಗಿರುತ್ತದೆ. ಆದರೆ ತಪ್ಪು ಬೆಳೆಸುವಿಕೆ, ಹಠಮಾರಿ ಮಕ್ಕಳು, ಸೋಲೊಪ್ಪದ ಪೇರೆಂಟ್ಸ್ ಮಧ್ಯೆ ಸಂಘರ್ಷ ಎಂದೂ ತಪ್ಪದು, ಅನೇಕ ಸಮಸ್ಯೆಗಳಿಗೆ ದಾರಿ ಮಾಡುತ್ತದೆ.

ಇಂದಿನ ಕಿಶೋರರು ಹಿಂದಿನವರಿಗಿಂತ ಸರ್ವಂತ್ರ ಸ್ವತಂತ್ರರು. ತಮ್ಮ ಪ್ರತಿಷ್ಠೆಗಾಗಿ ಪೇರೆಂಟ್ಸ್ ಅವರಿಗೆ ಧಾರಾಳ ಪಾಕೆಟ್‌ ಮನಿ ನೀಡಿ ನೀಡಿ ಅವರಿಗೆ ಕೊಂಬು ಮೂಡಿಸುತ್ತಾರೆ. ತಮ್ಮ ಬಿಝಿ ಶೆಡ್ಯೂಲ್ ನಡಿ ಮಕ್ಕಳ ಕಡೆ ಗಮನ ಹರಿಸಲಾಗದು, ಅವರು ಬೇಕಾದ್ದು ತಿಂದುಂಡು ನೆಮ್ಮದಿಯಾಗಿರಲಿ ಎಂಬುದು ಇವರ ಗುರಿ. ಈ ಮಕ್ಕಳ ಕೈಗೆ ದುಬಾರಿ ಐಫೋನ್‌ ಬಂದಿರುತ್ತದೆ. ಅದರಲ್ಲಿ ಹಿಂಸೆಯ ವೈಭವೀಕರಣ ಕಂಡು ಅವರು ಪ್ರಭಾವಿತರಾಗದೆ ಇರುತ್ತಾರೆಯೇ? ಹಿಂಸಾಚಾರದ ಮತ್ತೊಂದು ಪ್ರತಿರೂಪವೇ ವಿಡಿಯೋ ಗೇಮ್ಸ್. ಕೊಂದವನೇ ವಿಜೇತ ಎಂಬ ಸಲಹೆ ನೀಡುತ್ತದೆ. ಮಕ್ಕಳ ಸೈಕಾಲಜಿಗೆ ಮೊದಲಿನಿಂದ ಹಿಂಸೆ ಕಲಿಸಲಾಗುತ್ತದೆ. ಪುರಾಣ ಪುಣ್ಯಕಥೆಗಳಲ್ಲಿನ ಯುದ್ಧದ ಪ್ರಭಾವದಿಂದ ಇವರು ಹೀಗಾಗುತ್ತಾರೆ.

ನಮ್ಮ ಎಲ್ಲೆಡೆ ಕಂಡುಬರುವ ಆದರ್ಶ ಪಾತ್ರಗಳ, ಅರ್ಧಕ್ಕೂ ಹೆಚ್ಚಿನ ಕೈಲಿ ಖಡ್ಗ ಬಂದೂಕುಗಳೇ ತುಂಬಿವೆ. ಗಾಂಧಿ, ಅಂಬೇಡ್ಕರ್‌ಇತ್ಯಾದಿ ಕೆಲವರು ಮಾತ್ರವೇ ಇದಕ್ಕೆ ಅಪವಾದ. ಇವರ ಕೈಲಿ ಊರುಗೋಲಿನ ಸ್ಟಿಕ್‌, ಜ್ಞಾನ ತುಂಬಿದ ಪುಸ್ತಕಗಳಿವೆ. ರಾಮಮಂದಿರದ ರಾಮ ಧನುರ್ಧಾರಿ, ಕೃಷ್ಣ ಚಕ್ರಧಾರಿ, ದುರ್ಗಾ, ಪಾರ್ವತಿಯವರು ಆಯುಧಧಾರಿಗಳು.

ತಮ್ಮ ತಾಯಿತಂದೆ ತಮ್ಮಾಸೆ ನೆರವೇರಿಸುತ್ತಿಲ್ಲ ಎಂದೇ ಈ ಆಧುನಿಕ ಮಕ್ಕಳು ಹೀಗೆ ಹಿಂಸೆಯ ಅಪರಾವತಾರ ಆಗುತ್ತಿದ್ದಾರೆ. ಅವರು ಹೊರಗೆಲ್ಲ ಹಿಂಸೆಯನ್ನು ಎದುರಿಸಿಯೇ ಮನೆಗೆ ಬಂದಿರುತ್ತಾರೆ, ಮನೆಯಲ್ಲೂ ಅದನ್ನೇ ಮುಂದುವರಿಸುತ್ತಾರೆ. ಯಾವುದೇ ನಗರದ ಅದರ ಯಾವ ಮೂಲೆಯನ್ನಾದರೂ ನೋಡಿ, ಅಲ್ಲಿ ಗುಂಪಾಗಿ ನಿಂತ 4-5 ಮಂದಿ ಯುವಜನ ಹಿಂಸೆ ಬಗ್ಗೆ ಚರ್ಚಿಸುತ್ತಿರುತ್ತಾರೆ. ಇಂಥ ಮಂದಿ ಅಪರಾಧಿಗಳಿಂದ ದೂರಾಗುವರು, ಹಿರಿಯರನ್ನು ಕಾಪಾಡವರು, ತಾವೇ ಅಪರಾಧಿಗಳಾಗಿ ಬಿಡುತ್ತಾರೆ. ಬೀದಿರಂಪಕ್ಕೆ ಸೀಮಿತವಾಗಿದ್ದ ಈ ರೌಡಿಸಂ ಇದೀಗ ಮನೆಯೊಳಗೆ ದಾಂಗುಡಿ ಇಟ್ಟಿದೆ. ಇಂಟರ್‌ ನೆಟ್‌ ನೋಡುತ್ತಾ ಮಕ್ಕಳು ತೆಪ್ಪಗಿರಲಿ ಎಂದು ಬಯಸಿದ ಪೇರೆಂಟ್ಸ್ ಗೆ, ತಾವೇ ಮಕ್ಕಳಿಗೆ ಹಿಂಸೆ ಕಲಿಸುತ್ತಿದ್ದೇವೆ ಎಂಬುದು ನೆನಪಾಗದು. ತಾವು ಮಾಡಿದ ತಪ್ಪಿಗೆ ನಂತರ ಶಿಕ್ಷೆ ಅನುಭವಿಸುತ್ತಾರೆ. ಲೈಫ್‌ ಫಾಸ್ಟ್ ಆಗಿರಬೇಕು ಎಂದು ಬಯಸುವವರಿಗೆ ಈ ಕಷ್ಟಕೋಟಲೆ ಎಂದೂ ತಪ್ಪದು.

ನೀವು ಸಹ ಚಹಾ ಪ್ರಿಯರೇ?

ಕಾಫಿ/ಟೀ ಕುಡಿಯುವುದು ಒಂದು ಮಾಮೂಲಿ ಅಭ್ಯಾಸ. ನಮ್ಮಲ್ಲಿ ಮೊದಲಿನಿಂದಲೂ ಚೀನಾದಿಂದ ಆಮದು ಮಾಡಿದ ಚಹಾ ಜನಪ್ರಿಯ. ಆದರೆ ಇದು ಬ್ರಿಟಿಷರ ಆಡಳಿತ ಕಾಲದಲ್ಲಿ ಹೆಚ್ಚಾಯಿತು. ಅಸ್ಸಾಂ, ದ.ಭಾರತದಲ್ಲಿ ಈ ವಾಣಿಜ್ಯ ಬೆಳೆಗೆ ಪ್ರೋತ್ಸಾಹ ನೀಡಿದರು. ಪ್ರತಿ ಭಾರತೀಯರಿಗೂ ಚಹಾ ಅತಿ ಪ್ರಿಯವಾದರೂ, ವಿದೇಶೀ ಬ್ರಾಂಡ್‌ ಹೆಚ್ಚು ಮಾರಾಟವಾಗುತ್ತದೆ ಎಂಬುದೇ ವಾಸ್ತವ. ದೇಶೀ ಬ್ರಾಂಡ್‌ ಈ ನೆಪದಲ್ಲಿ ಹಿಂದುಳಿಯುತ್ತದೆ.

ಚೀನಾದ ನಂತರ ಚಹಾ ಬೆಳೆಯಲ್ಲಿ ಭಾರತವೇ ಮುಂದು. ಕೃತಕ ಸಾಧನಗಳ ಉತ್ಪಾದನೆಯಲ್ಲಿ ಎಷ್ಟೋ ಮುಂದಿರುವ ಚೀನಾ, ಈಗಲೂ ಭಾರತಕ್ಕಿಂತ 3 ಪಟ್ಟು ಹೆಚ್ಚು ಚಹಾ ಬೆಳೆಯುತ್ತದೆ ಎಂಬುದು ನಿಜಕ್ಕೂ ಆಶ್ಚರ್ಯದ ವಿಚಾರ. ಭಾರತ, ಚೀನಾದವರು ಬೆಳೆದ ಚಹಾವನ್ನು ತಂತಲ್ಲೇ ಹೆಚ್ಚಾಗಿ ಬಳಸುತ್ತಾರೆ. ಆದರೆ ಕೀನ್ಯಾ, ಶ್ರೀಲಂಕಾದಂಥ ದೇಶಗಳು ಬೆಳೆದದ್ದರಲ್ಲಿ ಅರ್ಧದಷ್ಟು ರಫ್ತು ಮಾಡುತ್ತವೆ. ಅವರ ರಫ್ತು ಭಾರತ ಚೀನಾದ ರಫ್ತಿಗೆ ಹೆಚ್ಚುಕಡಿಮೆ ಸರಿಸಮ.

ಚಹಾದ ವ್ಯಾಪಾರದಲ್ಲಿ ಇಂದೂ ಸಹ ಅದರ ಬೆಳೆಗಾರರು ಬೇಕಾದಷ್ಟು ಲಾಸ್‌ ಎದುರಿಸುತ್ತಾರೆ. ಏಕೆಂದರೆ ನಡುವಿನ ದಲ್ಲಾಳಿಗಳು ಎಲ್ಲಾ ಲಾಭ ತಾವೇ ಹೊಡೆಯುತ್ತಾರೆ. ಇಂಥ ಬೆಳೆಗಾರರು ಮಾವು, ಭತ್ತ, ಗೋಧಿ, ರಾಗಿ ಬೆಳೆಯುವ ಬೆಳೆಗಾರರಂತೆ ಬಡವರಲ್ಲ ನಿಜ, ಆದರೆ ಸಾವಿರಾರು ಮೈಲಿ ಹರಡಿರುವ ಚಹಾ ಬೆಳೆಯನ್ನು ಸಂಭಾಳಿಸುವುದು ಸುಲಭದ ಮಾತಲ್ಲ. ಅತ್ತ ಅವರಿಗೆ ಸರಿಯಾದ ಪ್ರಮಾಣದಲ್ಲಿ ಬೆಳೆ ಕೈಗೆ ಹತ್ತುವುದಿಲ್ಲ, ಅವನ್ನು ಮಾರುಕಟ್ಟೆಯಲ್ಲಿ ಲಾಭದ ಬೆಲೆಗೆ ಮಾರಲಿಕ್ಕೂ ಆಗದು. ಮಾಮೂಲಿ ಬೆಳೆಗಾರರಂತೆ ಮೂಢನಂಬಿಕೆ, ಕಂದಾಚಾರಕ್ಕೆ ಬಲಿಯಾದ ಇಂಥ ಚಹಾ ಬೆಳೆಗಾರರು ಎಷ್ಟೋ ಬೇಗ ದಿವಾಳಿ ಆಗಿಬಿಡುತ್ತಾರೆ. ಇವರ ಬಳಿ ಅದರಿಂದ ಸಂಪಾದನೆಗಿಂತ, ಕೊಡಬೇಕಾದ ತೆರಿಗೆಯ ಭಾರೀ ಹೆಚ್ಚು. 300 ವರ್ಷಗಳ ಹಿಂದೆ ಬ್ರಿಟಿಷರು ಕಾಡು ಕಡಿಸಿ ಚಹಾದ ಎಸ್ಟೇಟ್‌ ಅಭಿವೃದ್ಧಿ ಪಡಿಸಿದ್ದನ್ನು ಉಳಿಸಿಕೊಳ್ಳುವುದರಲ್ಲಿ ಇಂದಿನವರು ಹೆಣಗಾಡುತ್ತಿದ್ದಾರೆ. ಈ ಎಸ್ಟೇಟ್‌ ನಿಭಾಯಿಸುವಿಕೆ ಸುಲಭದ ಮಾತಲ್ಲ, ಬ್ರಿಟಿಷರು ಆ ಕಾಲದಲ್ಲೇ ಕುದುರೆ ಏರಿ ಎಲ್ಲವನ್ನೂ ನಿಭಾಯಿಸುತ್ತಿದ್ದರು.

ಚಹಾ ಎಸ್ಟೇಟ್‌ ಗಳ ವಿಲೇವಾರಿ ಇದೀಗ ಕೋಟ್ಯಂತರನ್ನೂ ಮೀರಿದೆ. ಆದರೆ ಅಲ್ಲಿ ದುಡಿಯುವ ಮಂದಿಗೆ, ಹೋಟೆಲ್ ‌ನಲ್ಲಿ ಕಾಫಿ/ಟೀ ಕುಡಿಯುವವರು ಕೊಡುವ ಹಣದಲ್ಲಿ 1% ಸಹ ದಕ್ಕುವುದಿಲ್ಲ. ಇತರ ವ್ಯಾಪಾರಗಳಂತೆಯೇ ಇದರ ದಲ್ಲಾಳಿಗಳೂ ಸಹ ಹೆಚ್ಚುತ್ತಾ, ದುರಾಸೆಯ ಪಿಪಾಸುಗಳಾಗಿದ್ದಾರೆ. ಇದೀಗ ಅಸ್ಸಾಂ, ಡಾರ್ಜಿಲಿಂಗ್‌, ಕೂರ್ಗ್‌, ಕುನ್ನೂರು ಚಹಾ ಆಯಾ ಹೆಸರಿನಿಂದ ಮಾರಾಟವಾಗುತ್ತಿಲ್ಲ. ಏಕೆಂದರೆ ಮಾರ್ಕೆಟಿಂಗ್‌ ಮಾಡುವವರು, ಶ್ರೀಲಂಕಾ ಕೀನ್ಯಾದ ಚಹಾವನ್ನೂ ಇದಕ್ಕೆ ಬೆರೆಸಿಬಿಡುತ್ತಾರೆ, ತಮ್ಮದೇ ಹೊಸ ಬ್ರಾಂಡ್‌ ಹೆಸರಲ್ಲಿ ಮಾರುತ್ತಾರೆ. ಇದು ಪೈಪೋಟಿ ಎದುರಿಸುವ ಹೊಸ ಕ್ರಮವಾಗಿದೆ.

ಚಹಾದಲ್ಲಿನ ಕೆಫೀನ್‌ ಅಂಶ, ಅದರ ಸ್ವಾದ ಹೆಚ್ಚಿಸುತ್ತದೆ, ಅದರಿಂದಲೇ ಇದು ಫೇಮಸ್‌. ಇದರ ಅಂಶದಿಂದ ಜನ ಹೆಚ್ಚು ಹೊತ್ತು ಎಚ್ಚರವಾಗಿರುತ್ತಾರೆ, ಹೆಚ್ಚು ಕೆಲಸ ಮಾಡುತ್ತಾರೆ. ಇದರಲ್ಲಿನ ಥಿಯೋಬ್ರೊಮೈನ್‌ ಹಾಗೂ ಥಿಯೋಲಿಫಿಪೈನ್‌ ಸಹ, ಮೆದುಳಿಗೆ ಪರಿಣಾಮ ಬೀರುತ್ತವೆ. ಇದರಿಂದ ಎಷ್ಟೋ ಜನ ತಾಜಾ ಆಗಿ ಲವಲವಿಕೆ ಗಳಿಸುತ್ತಾರೆ, ಕೆಲವರು ಇದರ ದಾಸರಾಗುತ್ತಾರೆ. ಇದರ ಕೆಫೀನ್‌ ಮೆದುಳಿನ ನ್ಯೂರೋಟ್ರಾನ್ಸ್ ಮೀಟರ್‌ ನ್ನು ಬ್ಲಾಕ್‌ ಮಾಡುತ್ತದೆ, ಸುಸ್ತುಸಂಕಟ ನಿವಾರಿಸುತ್ತದೆ.

ಅಂದ ಮಾತ್ರಕ್ಕೆ ಕಾಫಿ/ಟೀ ಹೆಂಡದ ಸಮ ಅಂತಲ್ಲ. ಆದರೆ ಎಲ್ಲೆಲ್ಲೂ ಡ್ರಗ್ಲ್, ಡ್ರಿಂಕ್ಸ್ ರಾರಾಜಿಸುತ್ತಿರುವಾಗ, ಪಾಪ, ಚಹಾ ಜನಪ್ರಿಯತೆಯಲ್ಲಿ ಹಿಂದುಳಿಯುತ್ತದೆ, ಕಾಫಿಗಿಂತಲೂ ಹಿಂದೆ!

ಮೊದಲು ನಿಲ್ಲಿಸಿ ನೋವಿಗೊಂದು ರಾಜಕೀಯ

ಆಪರೇಶನ್‌ ಸಿಂಧೂರ್‌ ಕುರಿತಾಗಿ ಸರ್ಕಾರ ಮತ್ತೆ ಮತ್ತೆ ಅನೇಕ ಪೇರಮ್ ಗಳಲ್ಲಿ ಹೇಳುತ್ತಲಿದೆ, ಪಹಲ್ಗಾಂಮ್ ನಲ್ಲಿ ಸತ್ತಂಥ 26 ಯುವಕರ ಮನೆಯವರ ನೋವು, ಸರ್ಕಾರದ ಕೊಂಬು ಕಹಳೆಗಳ ಮಧ್ಯೆ ಎಲ್ಲೋ ಮುಚ್ಚಿಹೋಗಿದೆ. ಬಿಜೆಪಿ ಸರ್ಕಾರ ಪಹಲ್ಗಾಮ್ ನಲ್ಲಿ ಸೆಕ್ಯುರಿಟಿ ಫೇಲ್ ‌ಆದ ತಪ್ಪನ್ನು ಒಪ್ಪದೆ, ಬೇಕೆಂದೇ ತುತ್ತೂರಿ ಊದುತ್ತಿದೆ, ಆಪರೇಶನ್‌ ಸಿಂಧೂರಿಯಿಂದ ಅದು ಭಯೋತ್ಪಾದಕರನ್ನು ಹತ್ತಿಕ್ಕಿದೆ ಎಂದು ಸಾರುತ್ತಿದೆ, ಆದರೆ ಇದಕ್ಕೆ ಬೇಕಾದ ಪುರಾವೆ ಇದುವರೆಗೂ ಸಿಕ್ಕಿಲ್ಲ. ದೇಶದ ಒಳಗೂ ಹೊರಗೂ ಎಲ್ಲೂ ಭಯೋತ್ಪಾದಕರು ತಮ್ಮ ಶಸ್ತ್ರಾಸ್ತ್ರ ತ್ಯಜಿಸಿಲ್ಲ.

ಇಂದಿನ ಭಯೋತ್ಪಾದಕರು ಸುಲಭವಾಗಿ ಸೋಲೊಪ್ಪುವವರಲ್ಲ. ಒಂದಲ್ಲ ಒಂದು ಹೊಸ ತಂಡ, ಹೊಸ ತಂತ್ರ ಹೊರಹೊಮ್ಮುತ್ತಲೇ ಇರುತ್ತದೆ, ಇವರು ಆಯಾ ಘಟನಾ ಸ್ಥಳದಲ್ಲೇ ಸಾಯುತ್ತಾರೆ ಇಲ್ಲ ರಿಟೈರ್‌ಆಗುತ್ತಾರೆ. ಪ್ರತಿ ಭಾಗದಲ್ಲೂ ಕೋಪೋದ್ರಿಕ್ತ ಯುವಜನತೆ ರೋಷಕಾರುತ್ತಾ ಇರುತ್ತದೆ. ಇವರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಣ್ಣಪುಟ್ಟ ಕಾರಣಕ್ಕೆ ತಂತಮ್ಮ ಮನೆಮಠ ತೊರೆದು ಬಂದಿರುತ್ತಾರೆ. ಕಾಡುಮೇಡು, ಮರುಭೂಮಿಗಳಲ್ಲಿ, ಗಿರಿಕಂದರಗಳಲ್ಲಿ ವಾಸಿಸಲು ತಯಾರಾಗಿರುತ್ತಾರೆ. ಕೈಗಳಲ್ಲಿ ಎಕೆ 47 ಇದ್ದೇ ಇರುತ್ತದೆ. ಪೇರೆಂಟ್ಸ್ ಕೇರ್‌, ಪ್ರೇಯಸಿಯ ಪ್ಯಾರ್‌ ಇವರಿಗೆ ಲೆಕ್ಕಕ್ಕಿಲ್ಲ.

ಹೀಗಾಗಿಯೇ ಅಮೆರಿಕಾ ಸಂಪೂರ್ಣ ಸಕ್ಷಮಗೊಂಡ ನಂತರ ಆಫ್ಘಾನಿಸ್ತಾನ್‌, ಇರಾಕ್‌, ಸೂಡಾನ್‌, ಸಿರಿಯಾಗಳಲ್ಲಿ ಭಾರಿ ಭಾರಿ ಮಿಲಿಟರಿ ಕಳುಹಿಸಿಯೂ ಭಯೋತ್ಪಾದನೆಯ ಸಂಪೂರ್ಣ ಹುಟ್ಟಡಗಿಸಲು ಸಾಧ್ಯವಾಗಿಲ್ಲ. 46 ದಿನಗಳ ಯುದ್ಧದಿಂದ ನಮಗೆ ಸಿಕ್ಕಿದ ವಿಜಯ, ಅದು ಭಯೋತ್ಪಾದಕತೆಯನ್ನು ಸಂಪೂರ್ಣ ನಾಶ ಮಾಡಿದೆ ಎಂದು ಹೇಗೆ ಹೇಳುವುದು? ಗೊತ್ತಾಗುವುದು ಎಂದರೆ ಪಹಲ್ಗಾಮ್ ನಲ್ಲಿ ಸತ್ತ ಆ 26 ಮಂದಿ ಯುವಕರ ಮನೆಯವರ ಗೋಳು ಮಾತ್ರ. ಪಾಕಿಸ್ತಾನದ ಮೇಲೆ ಆಕ್ರಮಣ ನಡೆಸಿದ ಮಾತ್ರಕ್ಕೆ ಅಂಥವರ ಗೋಳಿಗೆ ಮದ್ದು ನೀಡಿದಂತಾಯ್ತೆ? ನಿಮಗಾದ ಹಾನಿಗಾಗಿ ದೇಶ ಎಂಥ ತ್ಯಾಗಕ್ಕೆ ರೆಡಿಯಾಗಿದೆ ನೋಡಿ ಎಂದು ದೇಶ ಅವರುಗಳ ಕಣ್ಣೀರು ಒರೆಸಲು ಸಾಧ್ಯವೇ?

ಯಾವ ರೀತಿ ಆಪರೇಶನ್‌ ಸಿಂಧೂರ್‌ ಕುರಿತಾಗಿ ಪ್ರತಿ ವೇದಿಕೆಯಲ್ಲೂ ಕಹಳೆ ಉದಲಾಗುತ್ತಿದೆಯೋ, ಅದರಿಂದ ತಿಳಿಯುವುದೆಂದರೆ ಪಹಲ್ಗಾಮ್ ನಲ್ಲಿ ನಡೆದಂಥ ಹಲ್ಲೆ, ಆಯಾ ಪರಿವಾರಗಳನ್ನು ತಟ್ಟಿಲ್ಲ, ಆಯಾ ಪತ್ನಿಯರ ಗೋಳು ಗುರುತಿಸಿಲ್ಲ, ತಾಯಿ ತಂದೆಗೆ ನೋವಾಗಿಲ್ಲ, ಕೇವಲ ಬಿಜೆಪಿಯ ರಾಜಕೀಯಕ್ಕಷ್ಟೇ ಬಳಕೆಯಾಗುತ್ತಿದೆ! ಅವರುಗಳ ಮೇಲಿನ ಸೇಡನ್ನು ಈ ಪಕ್ಷ ತನ್ನ ಸರ್ಕಾರ, ಸೇನೆಯ ನೆರವಿನಿಂದ ಈ ಮೂಲಕ ತೀರಿಸಿಕೊಂಡಿದೆ.

ಆ 26 ಕುಟುಂಬಗಳ ನೋವು ಮರೆತು ರಾಜಕೀಯದ ಓಟುಗಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಾಗಿದೆ. ಪ್ರತಿ ದಿನ 100-200 ಸಲ ಆಪರೇಶನ್‌ ಸಿಂಧೂರ್‌ ಹೆಸರು ಹೇಳುತ್ತಾ ಪ್ರಧಾನಮಂತ್ರಿ, ಇತರ ಮಂತ್ರಿಗಳು, ಸೈನಿಕರು, ಅಧಿಕಾರಿಗಳು, ಪಾರ್ಟಿ ವರ್ಕರ್ಸ್‌ ಇದನ್ನೇ ಸಾರುತ್ತಾ ಸುತ್ತುತ್ತಿದ್ದಾರೆ, ನಾವು ಅವರ ಮೇಲೆ ಸೇಡು ತೀರಿಸಿಕೊಂಡದ್ದು ಆಯ್ತು, ಅಂತ. ಏಕೆಂದರೆ ಪೆಹಲ್ಗಾಮ್ ನ ದಾಳಿ ಇವರ ಮೇಲೆ ಆಗಿತ್ತೇ ಹೊರತು, ಆ 26 ಸೈನಿಕರ ಮೇಲಲ್ಲ. ಆ 26 ಮಂದಿಯ ಮನೆಗಳಲ್ಲಿ ಇಂದು ಏನು ನಡೆಯುತ್ತಿದೆ, ಹೇಗೆ ಅವರ ದುಃಖ ನಿವಾರಿಸಲಾಗುತ್ತಿದೆ, ಅಲ್ಲೆಲ್ಲ ಯಾರಿಗೂ ಗೊತ್ತಿಲ್ಲ. ಬದಲಿಗೆ, ಕೇಸರಿ ದುಪಟ್ಟಾವನ್ನು ಕುತ್ತಿಗೆಗೆ ಸುತ್ತಿಕೊಂಡು ಈ ಪಕ್ಷದ ಜನ ವೇದಿಕೆಯ ಮೇಲೆ ಇದರ ಕುರಿತಾದ ಭಾಷಣವನ್ನು ಮತ್ತೆ ಮತ್ತೆ, ಮತ್ತೆ ಮತ್ತೆ ಹೇಳುತ್ತಲೇ ಇದ್ದಾರೆ. ಇನ್ನೊಬ್ಬರ ಚಿತೆ ಉರಿಯುತ್ತಿರುವಾಗ ಅದರಲ್ಲಿ ರೊಟ್ಟಿ ಸುಡುವ ಇವರ ಈ ದುರ್ಬುದ್ಧಿಗೆ ಏನು ಹೇಳುವುದು? ಹೀಗೆ ಇವರು ಪ್ರತ್ಯಕ್ಷವಾಗಿ ಮಾಡುತ್ತಿರುವುದಂತೂ ನಿಜ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ