ತಗ್ಗೆದೆ ಲೇ’, ‘7 ಅವರ್ಸ್ ಟು ಗೋ’ ಮತ್ತು ‘ಗೋಸ್ಟ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಅನನ್ಯಾ ರಾಜ್ (35), ಜುಲೈ 15 ರಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಮೃತಪಟ್ಟ ಒಂದು ತಿಂಗಳ ಬಳಿಕ ಕುಟುಂಬಸ್ಥರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ ಒಂದು ವರ್ಷದಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆಯಿಂದ ಅನನ್ಯಾ ರಾಜ್ ಬಳಲುತ್ತಿದ್ದರು. ಅನನ್ಯಾ ರಾಜ್ ಅವರ ನಿಧನದ ಸುದ್ದಿ ಅಭಿಮಾನಿಗಳು ಹಾಗೂ ಚಿತ್ರರಂಗದವರಲ್ಲಿ ಆಘಾತ ಮೂಡಿಸಿದೆ.
ಅನನ್ಯಾ ರಾಜ್ ಅವರ ಕುಟುಂಬಸ್ಥರು ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಅನನ್ಯಾ ರಾಜ್ ದೈಹಿಕ ಹಾಗೂ ಮಾನಸಿಕ ಡಿಸ್‌ಕಮ್ಫರ್ಟ್‌ನಿಂದ ಬಳಲುತ್ತಿದ್ದರು. ತಮ್ಮ ಸಮಸ್ಯೆಗಳನ್ನು ಎದುರಿಸಲು ಅನನ್ಯಾ ಧೈರ್ಯವಾಗಿ ಹೋರಾಡುತ್ತಿದ್ದರು, ಜೀವನದ ಕಷ್ಟಗಳ ವಿರುದ್ಧ ಯೋಧನಂತೆ ಪಣ ತೊಟ್ಟು ನಿಂತಿದ್ದರು ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಜುಲೈ 15ರ ಮುಂಜಾನೆ ತಮ್ಮ ನಿದ್ರೆಯಲ್ಲೇ ಅನನ್ಯಾ ರಾಜ್ ಶಾಂತಿಯುತವಾಗಿ ಕೊನೆಯುಸಿರೆಳೆದಿದ್ದಾರೆ.
ಅನನ್ಯಾ ಅವರನ್ನು ಕುಟುಂಬಸ್ಥರು ಬಲಿಷ್ಠ ಮನೋಭಾವದ ಹುಡುಗಿ ಎಂದು ಸ್ಮರಿಸಿದ್ದಾರೆ. ರಾಣಿಯಂತೆ ಬದುಕಿದ್ದ ತಮ್ಮ ಮಗಳ ಅನುಪಸ್ಥಿತಿ ಸದಾ ಕಾಡಲಿದೆ ಎಂದು ಕಂಬನಿ ಮಿಡಿದಿದ್ದು, ನಟಿಯ ಕೊನೆಯ ವಿಧಿವಿಧಾನಗಳ ಕೆಲವು ಚಿತ್ರಗಳನ್ನು ಕೂಡ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಭಿಮಾನಿಗಳು ಹಾಗೂ ಮಾಧ್ಯಮಗಳಿಗೆ ಅನನ್ಯಾ ರಾಜ್ ಕುಟುಂಬಸ್ಥರು ವಿಶೇಷ ಮನವಿ ಮಾಡಿದ್ದಾರೆ. ಈ ಕಷ್ಟದ ಸಮಯದಲ್ಲಿ ತಮ್ಮ ಕುಟುಂಬಕ್ಕೆ ಗೌಪ್ಯತೆ ಹಾಗೂ ಶಾಂತಿಯ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಅನನ್ಯಾ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಎಲ್ಲರೂ ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ.
ಅನನ್ಯಾ ರಾಜ್ ಸಿನಿಮಾಗಳ ಜೊತೆಗೆ ಹಲವು ಜನಪ್ರಿಯ ಮ್ಯೂಸಿಕ್ ವಿಡಿಯೋಗಳಲ್ಲೂ ಕಾಣಿಸಿಕೊಂಡಿದ್ದರು. ಟಿ-ಸೀರೀಸ್, ಜೀ ಮ್ಯೂಸಿಕ್ ಮತ್ತು ಟೈಮ್ಸ್ ಮ್ಯೂಸಿಕ್ ಸೇರಿದಂತೆ ಪ್ರಮುಖ ಮ್ಯೂಸಿಕ್ ಲೇಬಲ್‌ಗಳ ಅಡಿ ಬಿಡುಗಡೆಯಾದ ಹಲವು ಮ್ಯೂಸಿಕ್ ವಿಡಿಯೋಗಳಲ್ಲಿ ಅನನ್ಯಾ ರಾಜ್ ಗಮನ ಸೆಳೆದಿದ್ದರು. ‘ದಿ ಫೈನಲ್ ಎಕ್ಸಿಟ್’ ಸೇರಿದಂತೆ ಹಲವು ಸಿನಿಮಾಗಳಲ್ಲೂ ಅಭಿನಯಿಸಿದ್ದ ಅನನ್ಯಾ, ತಮ್ಮದೇ ಆದ ನಟನಾ ಶೈಲಿಯಿಂದ ಪ್ರೇಕ್ಷಕರ ಗಮನ ಸೆಳೆದಿದ್ದರು.





