ನೀವು ಸಹ ನಿಮ್ಮ ಕೂದಲಿಗೆ ಹೆಲ್ದಿ ಶೈನ್ ಟಚ್ ನೀಡಬಯಸಿದರೆ, ಈ ಸಲಹೆಗಳನ್ನು ಅನುಸರಿಸಿ…..
ಹೊಸ ವರ್ಷ ಬರುತ್ತಿದೆ ಅಂದಾಗಲೇ ನಾವೆಲ್ಲ ಏನಾದರೊಂದು ಬದಲಾವಣೆ ತಂದುಕೊಳ್ಳುವ ಕುರಿತು ಯೋಚಿಸುತ್ತೇವೆ. ಹೀಗಿರುವಾಗ ಫ್ಯಾಷನ್ನಿನ ದೃಷ್ಟಿಯಿಂದ ನೋಡಿದಾಗ, ಸೌಂದರ್ಯ ಸಂವರ್ಧನೆಗಾಗಿ ನಾವು ಖಂಡಿತಾ ಏನಾದರೊಂದು ಮಾಡಿಯೇ ತೀರುತ್ತೇವೆ. ಅದು ಸ್ಕಿನ್ ಟ್ರೀಟ್ ಮೆಂಟ್ ಯಾ ಹೇರ್ ಟ್ರೀಟ್ ಮೆಂಟ್ ಆಗಿರಬಹುದು. ಹೀಗಾಗಿ ನಿಮ್ಮ ಕೇಶ ಸೌಂದರ್ಯ ಸುಧಾರಿಸುವ ನಿಟ್ಟಿನಲ್ಲಿ, ನೀವು ದಿನನಿತ್ಯ ನೂರಾರು ಬಗೆಯ ಹೇರ್ ಕೆಮಿಕಲ್ ಟ್ರೀಟ್ ಮೆಂಟ್ ಗಳ ಕುರಿತಾಗಿ ಗಮನಿಸುತ್ತೀರಿ. ಇದನ್ನು ಮಾಡಿಸಿದ ನಂತರ ಹೇರ್ ಹಿಂದಿಗಿಂತ ಹೆಚ್ಚು ಡ್ರೈ ಡ್ಯಾಮೇಜ್ಡ್ ಆಗಿ ಕಂಡುಬಂದರೆ ಆಶ್ಚರ್ಯವಿಲ್ಲ. ಇಂಥ ಹಾಳಾಗಿರುವ ಹೇರ್ ನ್ನು ಹೆಲ್ದಿ ಶೈನ್ ಆಗಿಸಲು, ನೀವು ಈ ಸಲದ ನ್ಯೂ ಇಯರ್ ಪಾರ್ಟಿಗಾಗಿ ಹೇರ್ ಗ್ಲಾಸ್ ಟ್ರೀಟ್ ಮೆಂಟ್‌ಮಾಡಿಸಬಹುದು. ಇದೆಂಥ ಚಿಕಿತ್ಸೆ? ಇದನ್ನು ಯಾವಾಗ ಮಾಡಿಸಬೇಕು? ಇತ್ಯಾದಿ ವಿವರ ಗಮನಿಸೋಣ.
ಹೇರ್ ಗ್ಲಾಸ್ ಟ್ರೀಟ್ ಮೆಂಟ್ : ಇದೊಂದು ಟೆಂಪರರಿ ಗ್ಲಾಸಿ ಟ್ರೀಟ್ ಮೆಂಟ್. ಇದು ಕಲರ್ಡ್ ಆದ ಹೇರ್ ನ ಕ್ಯುಟಿಕಲ್ಸ್ ಗೆ ಗ್ಲಾಸಿ ಲುಕ್ ಒದಗಿಸುತ್ತದೆ. ಇದರಿಂದ ಹೇರ್ ಡ್ರೈನೆಸ್ ಎಷ್ಟೋ ಕಡಿಮೆ ಆಗುತ್ತದೆ. ಇದರಲ್ಲಿ ಪ್ಯಾರಾ ಆಕ್ಸೈಡ್ ಯಾ ಅಮೋನಿಯಾದ ಬಳಕೆ ಆಗುತ್ತದೆ. ಈ ಕೆಮಿಕಲ್ಸ್ ನಿಮ್ಮ ಹೇರ್ ಕ್ಯುಟಿಕಲ್ಸ್ ನಲ್ಲಿ ನೀಟಾಗಿ ವಿಲೀನಗೊಳ್ಳುತ್ತದೆ. ಯಾವ ಹೆಂಗಸರು ತಮ್ಮ ಕೂದಲಿಗೆ ಹೆಚ್ಚಿನ ಶೈನ್ ನೀಡಬಯಸುತ್ತಾರೋ, ಅಂಥವರಿಗಾಗಿ ಹೇರ್ ಗ್ಲಾಸ್ ಒಂದು ಅತ್ಯುತ್ತಮ ಆಯ್ಕೆಯಾಗಿದೆ.
ಇದರಿಂದ ಸಿಗಲಿದೆ ಸಾಫ್ಟ್ ಶೈನಿ ಹೇರ್ : ಆಧುನಿಕ ಹೇರ್ ಎಕ್ಸ್ ಪರ್ಟ್ಸ್ ಪ್ರಕಾರ, ಸಾಮಾನ್ಯವಾಗಿ ಗಮನಿಸಿದಾಗ, ತರುಣಿಯರು ಇಂದಿನ ಫ್ಯಾಷನ್ ಗೆ ತಕ್ಕಂತೆ ತಂತಮ್ಮ ಕೂದಲಿನ ಡಿಫರೆಂಟ್ ಸ್ಟೈಲಿಂಗ್ ಗಾಗಿ, ಹೀಟ್ ಸ್ಟೈಲಿಂಗ್ ಟೂಲ್ಸ್ ನ್ನು ಹೆಚ್ಚು ಹೆಚ್ಚಾಗಿ ಬಳಸುತ್ತಾರೆ. ಆದರೆ ಇಂಥ ಹೇರ್ ಟ್ರೀಟ್ ಮೆಂಟ್ಸ್ ನ ನಂತರ, ವಹಿಸಬೇಕಾದ ಎಚ್ಚರಿಕೆಗಳನ್ನು ನಿರ್ಲಕ್ಷಿಸುತ್ತಾರೆ. ಇದರಿಂದಾಗಿ ಹೇರ್ ನ ಶೈನಿಂಗ್ ಕೊನೆಗೊಳ್ಳುತ್ತದೆ. ಆಗ ಅದು ಡ್ರೈ ಡ್ಯಾಮೇಜ್ಡ್ ಆಗಿ ಕಂಡುಬರುತ್ತದೆ. ಇಂಥ ಸ್ಥಿತಿಯಲ್ಲಿ ನೀವು ಹೇರ್ ಗ್ಲಾಸ್ ಟ್ರೀಟ್ ಮೆಂಟ್ ಮಾಡಿಸಬಹುದು. ಇದರಿಂದ ಹೇರ್ ಗೆ ಸಾಫ್ಟ್ ನ್ಯಾಚುರಲ್ ಶೈನಿ ಲುಕ್ಸ್ ಸಿಗುವುದಲ್ಲದೆ, ಹೇರ್ ಕಳೆದುಕೊಂಡಿದ್ದಂಥ ದಟ್ಟ ಸೌಮ್ಯ, ಒತ್ತಾದ ಗುಣಗಳೂ ಕೂಡುತ್ತವೆ.
ಇಷ್ಟು ಮಾತ್ರವಲ್ಲದೆ, ಡೈಗೊಳಿಸಲಾದ ಹೇರ್ ನಲ್ಲಿ ಎಕ್ಸ್ ಟ್ರಾ ಶೈನ್ ನ್ನು ಬ್ಯಾಲೆನ್ಸ್ ಗೊಳಿಸಲು ಸಹ ಈ ಚಿಕಿತ್ಸೆಯ ನೆರವು ಪಡೆಯಬಹುದಾಗಿದೆ. ಇದರ ನೆರವಿನಿಂದ ಕೂದಲಿನ ಸೀಳುತುದಿ ಸಮಸ್ಯೆ, ಫ್ರೀಝಿ ಹೇರ್ ಇತ್ಯಾದಿಗಳನ್ನು ಸ್ಮೂತ್ ಗೊಳಿಸುವುದು ಸಹ ಸುಲಭ ಸಾಧ್ಯ.
ಹೇರ್ ಗ್ಲಾಸ್ ನಲ್ಲಿ ವೈವಿಧ್ಯತೆ : ಹೇರ್ ಗ್ಲಾಸ್ ಮುಖ್ಯವಾಗಿ 2 ಬಗೆಯಲ್ಲಿವೆ. ಒಂದು ಟಿಂಟೆಡ್, ಇನ್ನೊಂದು ಕ್ಲಿಯರ್. ಟಿಂಟೆಡ್ ಹೇರ್ ಗ್ಲಾಸ್ ಟ್ರೀಟ್ ಮೆಂಟ್ ನಿಂದ ಹೇರ್ ಗೆ ನಾವು ಬಯಸಿದ ಕಲರ್ ಪಿಗ್ಮೆಂಟ್ ನೀಡಬಹುದಾಗಿದೆ, ಅದೇ ಬೇರೊಂದು ವಿಧಾನದಲ್ಲಿ ಕೂದಲಿಗೆ ನ್ಯಾಚುರಲ್ ಗ್ಲಾಸಿ ಲುಕ್ಸ್ ನೀಡಲು ಹೆಲ್ದಿ ಘಟಕಗಳಿಂದ ತುಂಬಿರುವ ಕ್ಲಿಯರ್ ಗ್ಲಾಸ್ ಫಾಲೋ ಮಾಡಿ. ಬೆಹಿನ್ ಟ್ರೀಮೋನಿಯಂ ಕ್ಲೋರೈಡ್‌ಅಮೋಡಿಮೆಥಿಕಾನ್, ಹೇರ್ ಗ್ಲಾಸ್ ಚಿಕಿತ್ಸೆಯ 2 ಮುಖ್ಯ ಘಟಕಗಳಾಗಿದ್ದು, ಹೇರ್ ನಲ್ಲಿ ಶೈನ್ ಮೇಂಟೇನ್ ಮಾಡಲು ನೆರವಾಗುತ್ತವೆ.
ಬೆನಿಫಿಟ್ಸ್ ಏನುಂಟು ? : ಇದರಿಂದ ಕೂದಲು ಸಾಫ್ಟ್ ಆಗಿ, ಅದರ ಟೋನ್ ಗೆ ನ್ಯಾಚುರಲ್ ಲುಕ್ಸ್ ಸಿಗುತ್ತದೆ. ಜೊತೆಗೆ ಇದು ಕಲರ್ ಹೇರ್ ನ ಹೈ ಕಾಪರ್ ಟೋನ್ ಯಾ ಎಕ್ಸ್ ಟ್ರಾ ಶೈನ್ ನ್ನು ಬ್ಯಾಲೆನ್ಸ್ ಸಹ ಮಾಡಬಲ್ಲದು. ಇದು ಹೈ ಶೈನ್ ಫಿನಿಶ್ ಗಾಗಿ ಸೀಳುತುದಿ, ಫೈವೇಜ್, ಫ್ರಿಂಝಿ ಹೇರ್ ಸಮಸ್ಯೆಗಳನ್ನು ಸ್ಮೂದ್ ಗೊಳಿಸುತ್ತದೆ. ಹೇರ್ ಗ್ಲಾಸ್ ಟ್ರೀಟ್ ಮೆಂಟ್ ಡ್ರೈ ಡ್ಯಾಮೇಜ್ ಹೇರ್ ಗೆ ದಿ ಬೆಸ್ಟ್ ಆಗಿದೆ. ಇದು ಹೇರ್ ನ್ನು ರಿಪೇರ್ ಮಾಡಿ, ಅದರ ವಾಲ್ಯೂಂ ಹೆಚ್ಚಿಸಬಲ್ಲದು, ಜೊತೆಗೆ ಶೈನ್ ಹೆಚ್ಚಿಸುವಲ್ಲಿಯೂ ನೆರವಾಗುತ್ತದೆ. ಜೊತೆಗೆ UV ಕಿರಣಗಳಿಂದ ಹೇರ್ ನ್ನು ರಕ್ಷಿಸಲಿಕ್ಕೂ ಸಹ ಕೂದಲಿನ ಮೇಲೆ ರಕ್ಷಾಕವಚವಾಗಿ ನಿಲ್ಲುತ್ತದೆ.
ಹೇರ್ ಪ್ರೊಟೆಕ್ಷನ್ : ಹೇರ್ ಗ್ಲಾಸ್ ಹೇರ್ ನಲ್ಲಿ ಕೋಟಿಂಗ್ ಕೆಲಸ ಮಾಡುತ್ತದೆ ಹಾಗೂ ಕೂದಲಿಗೆ ಸ್ಮೂತ್‌ಶೈನ್ ಟೆಕ್ಸ್ ಚರ್ ನೀಡುತ್ತದೆ. ಯಾರ ಕೂದಲಲ್ಲಿ ಡ್ರೈನೆಸ್ ಸಮಸ್ಯೆ ಹೆಚ್ಚಿದೆಯೋ, ಅಂಥವರಿಗೆ ಈ ಚಿಕಿತ್ಸೆ ಬಲು ಸೂಕ್ತ. ಇದರ ಹೊರತಾಗಿ ಎಷ್ಟೋ ಸಲ ಕಲರ್ ಹೇರ್ ವಾಶ್ ನ ನಂತರ, ಹೇರ್ ನ ಕಲರ್ ಡಲ್ ಆಗತೊಡಗುತ್ತದೆ. ಇದು ಆ ಸಮಸ್ಯೆಯನ್ನು ತಗ್ಗಿಸುತ್ತದೆ.
ಹೇರ್ ಕಲರ್ ಟೆಕ್ಸ್ ಚರ್ ನಲ್ಲಿ ಶೈನಿ ಲುಕ್ಸ್ : ಇದು ಕೂದಲಿನ ಡಲ್ ಕಲರ್ ಗೆ ಜೀವ ತುಂಬುತ್ತದೆ. ಇದೊಂದು ಉತ್ತಮ ಮನೆಮದ್ದಿನ ಹೇರ್ ಪ್ರಾಡಕ್ಟ್. ಇದು ಕೂದಲಿಗೆ ಒಂದಿಷ್ಟೂ ಹಾನಿ ತಲುಪಿಸದೆ, ಅದರ ಕಲರ್ ಟೆಕ್ಸ್ ಚರ್ ನಲ್ಲಿ ಸುಧಾರಣೆ ತಂದು, ಶೈನಿ ಲುಕ್ಸ್ ನೀಡುತ್ತದೆ. ಈ ಗ್ಲಾಸ್ ಟ್ರೀಟ್ ಮೆಂಟ್ ಸುಮಾರು 10-15 ಸಲದ ಹೇರ್ ವಾಶ್ ಗೆ ಪೂರಕವಾಗಿದೆ.
ಹೇರ್ ವಾಲ್ಯೂಂ ಸ್ಟ್ರಾಂಗ್ ಟೆಕ್ಸ್ ಚರ್ : ಹೇರ್ ಗ್ಲಾಸ್ ಟ್ರೀಟ್ ಮೆಂಟ್ ಯಾ ಬಗೆಯದ್ದೇ ಆಗಿರಲಿ, ಹೇರ್ ನ ಪ್ರತಿ ಸ್ಟ್ರಾಂಡ್ ನ್ನೂ ಕೋಟ್ ಮಾಡುತ್ತದೆ. ಇದು ಹೇರ್ ನ ಕ್ಯುಟಿಕಲ್ಸ್ ನ್ನು ಲಿಫ್ಟ್ ಮಾಡುತ್ತದೆ, ಇದರಿಂದ ಹೇರ್ ನಲ್ಲಿ ವಾಲ್ಯೂಂ ಹೆಚ್ಚಾಗುತ್ತದೆ ಹಾಗೂ ಹೇರ್ ಗೆ ಸ್ಟ್ರಾಂಗ್ ಟೆಕ್ಸ್ ಚರ್ ಸಹ ನೀಡುತ್ತದೆ.
ಇದನ್ನು ಮಾಡಿಕೊಳ್ಳುವುದು ಹೇಗೆ? : ಹೇರ್ ಗ್ಲಾಸ್ ಹಚ್ಚಿಕೊಳ್ಳುವ ಮುನ್ನ, ಉತ್ತಮ ಹರ್ಬಲ್ ಹೇರ್ ಶ್ಯಾಂಪೂನಿಂದ ಕೂದಲನ್ನು ತೊಳೆದು ಒಣಗಿಸಿ. ನಂತರ ಇದನ್ನು ಕೂದಲಿನ ಬುಡದಿಂದ ಮೇಲ್ಭಾಗದವರೆಗೂ ಹಚ್ಚಬೇಕು. ಇದನ್ನು ಹಚ್ಚಿಕೊಂಡ ನಂತರ, ನಿಧಾನವಾಗಿ ಒಂದೇ ದಿಕ್ಕಿನಲ್ಲಿ ಕೂದಲನ್ನು ಬಾಚಬೇಕು. ಆಗ ಮಾತ್ರವೇ ಈ ಪ್ರಾಡಕ್ಟ್ ಇಡೀ ತಲೆಗೂದಲಿಗೆ ಉತ್ತಮ ರೀತಿಯಲ್ಲಿ ಹರಡಿಕೊಳ್ಳಲು ಸಾಧ್ಯ. ಇದನ್ನು ಹಚ್ಚಿಕೊಂಡ ನಂತರ ಅರ್ಧ ಗಂಟೆ ಕಾಲ ಹಾಗೇ ನೆನೆಯಲು ಬಿಡಿ. ನಂತರ ಮತ್ತೆ ಶ್ಯಾಂಪೂನಿಂದ ತೊಳೆದು, ಕಂಡೀಶನರ್ ಹಚ್ಚಿರಿ. ಇದಾದ ನಂತರ ಕೂದಲಿಗೆ ಬ್ಲೋ ಡ್ರೈಯರ್ ನಿಂದ ಹೇರ್ ಸೆಟ್ಟಿಂಗ್ ಮಾಡಿಸಿ. ಕೂದಲಿಗೆ ಈ ಹೇರ್ ಗ್ಲಾಸ್ ನ ಪರಿಣಾಮ ಸುಮಾರು 2 ತಿಂಗಳವರೆಗೂ ಇರುತ್ತದೆ.
– ಪ್ರಭಾ ಮಾಧವ





