ಚಳಿಗಾಲದಲ್ಲಿ ವ್ಯಾಕ್ಸಿಂಗ್ಒಂದು ಅತ್ಯಗತ್ಯ ಸೌಂದರ್ಯ ಚಿಕಿತ್ಸೆ. ಇದು ಆಧುನಿಕ ತರುಣಿಯರ ಸೌಂದರ್ಯ, ಆರೋಗ್ಯಕ್ಕೆ ಏಕೆ ಅಗತ್ಯ ಎಂದು ತಿಳಿಯೋಣವೇ.....?

ಹೊಸ ವರ್ಷದ ಪಾರ್ಟಿಗಾಗಿ ಲಾಂಗ್‌ ಯಾ ಶಾರ್ಟ್‌ ಸ್ಲಿಟೆಡ್‌ ಸ್ಕರ್ಟ್‌ ನ ಜೊತೆ ಸ್ಟೈಲಿಶ್‌ ಲುಕ್ಸ್ ಹೊಂದಬೇಕೇ? ಆಗ ವ್ಯಾಕ್ಸಿಂಗ್ ಅತ್ಯಗತ್ಯ! ಇದು ಚರ್ಮದ ಆರೋಗ್ಯ, ಹೈಜೀನ್‌, ಕಾಂತಿಯುತವಾಗಿ ಹೊಳೆಯಲಿಕ್ಕೆ ಪೂರಕ. ಚಳಿಗಾಲದಲ್ಲಿ ವ್ಯಾಕ್ಸಿಂಗ್‌ ಎಂದರೆ ಹೆಣ್ಣುಮಕ್ಕಳು ತುಸು ಹಿಂಜರಿಯುತ್ತಾರೆ. ಬಹುತೇಕ ತರುಣಿಯರು, ಚಳಿಗಾಲದಲ್ಲಿ ಕೈಕಾಲುಗಳು ಸ್ವೆಟರ್‌ ಇತ್ಯಾದಿಗಳಿಂದ ಕವರ್ ಆಗಿರುತ್ತವೆ, ಹಾಗಿರುವಾಗ ವ್ಯಾಕ್ಸಿಂಗ್‌ ಏಕೆ? ಎನ್ನುತ್ತಾರೆ. ಇಷ್ಟು ಮಾತ್ರವಲ್ಲದೆ, ವ್ಯಾಕ್ಸಿಂಗ್‌ ಮಾಡಿಸುವಾಗ ಚಳಿ ಆಗಬಹುದು ಎಂಬ ಕಾರಣಕ್ಕೂ ಇದನ್ನು ಮಾಡಿಸುವುದಿಲ್ಲ. ಇದರಿಂದ ಕೈಕಾಲುಗಳ ಮೇಲೆ ಅನಗತ್ಯ ಕೂದಲು ಹೆಚ್ಚುತ್ತಾ ಹೋಗುತ್ತದೆ. ಈ ಕಾರಣ, ದೇಹದ ಮೇಲೆ ಹೆಚ್ಚಾಗಿ ಡಸ್ಟ್ ಜಮೆಗೊಳ್ಳುತ್ತದೆ. ಹೀಗಾಗಿ ಸಹಜವಾಗಿಯೇ ಚರ್ಮದ ಮೇಲೆ ಟ್ಯಾನಿಂಗ್‌ ಪದರ ಎದ್ದು ಕಾಣುವಂತಾಗುತ್ತದೆ.

ಹೀಗಾಗಿ ಈ ಚಳಿಗಾಲದಲ್ಲೂ ಸಹ ನಿಮ್ಮ  ಚರ್ಮಕ್ಕೆ ಉತ್ತಮ ಸೌಂದರ್ಯ ಸಂವರ್ಧನೆ ನೀಡಲು ವ್ಯಾಕ್ಸಿಂಗ್ ಮಾಡಿಸಬೇಕಾದುದು ಅನಿವಾರ್ಯ.

ಚಳಿಗಾಲದಲ್ಲಿ ವ್ಯಾಕ್ಸಿಂಗ್ಮಾಡಿಸದಿರಲು ಕ್ಷುಲ್ಲಕ ಕಾರಣಗಳು : ಚಳಿಗಾಲದ ಸಮಯದಲ್ಲಿ ತರುಣಿಯರು ಸಾಮಾನ್ಯವಾಗಿ ತಮ್ಮ ಮೇಲ್ದುಟಿ ಹಾಗೂ ಹಣೆಯ ಭಾಗದ ಅನಗತ್ಯ ಕೂದಲನ್ನು ನಿವಾರಿಸಲು ವ್ಯಾಕ್ಸಿಂಗ್‌ ಮಾಡಿಸುತ್ತಾರೆ. ಆದರೆ ಕೈಕಾಲುಗಳ ವಿಷಯಕ್ಕೆ ಬಂದಾಗ, ಚಳಿಗಾಲದ 2-3 ತಿಂಗಳು ತಮ್ಮ ಕೈಕಾಲುಗಳ ಭಾಗದ ಅನಗತ್ಯ ಕೂದಲನ್ನು ಬೆಳೆಯಲು ಬಿಟ್ಟು ನಿರ್ಲಕ್ಷಿಸುತ್ತಾರೆ. ಈ ಸಂದರ್ಭದಲ್ಲಿ ವ್ಯಾಕ್ಸಿಂಗ್‌ ಬೇಡ ಎಂದುಕೊಳ್ಳುತ್ತಾರೆ. ದೇಹದ ಯಾವ ಭಾಗ ಉಣ್ಣೆಯಿಂದ ಸಂಪೂರ್ಣ ಕವರ್ಡ್‌ ಆಗಿರುತ್ತದೋ, ಅದಕ್ಕೆ ವ್ಯಾಕ್ಸಿಂಗ್‌ ನ ಖರ್ಚು ಏಕೆ? ಎನ್ನುತ್ತಾರೆ. ಇದರಿಂದ ದೇಹಕ್ಕೆ ಹೆಚ್ಚು ಧೂಳಿನ ಜಮೆ ಆಗುತ್ತದೆ ಎಂಬುದರತ್ತ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ.

ಚಳಿಗಾಲದಲ್ಲಿ ವ್ಯಾಕ್ಸಿಂಗ್ನಿಂದ ಆಗುವ ಲಾಭಗಳು?: ಚಳಿಗಾಲದ ಸಂದರ್ಭದಲ್ಲಿ ಎಲ್ಲಕ್ಕಿಂತಲೂ ಉತ್ತಮ ವಿಚಾರ ಎಂದರೆ, ಇದರಲ್ಲಿ ಬೇಸಿಗೆ ತರಹ ವ್ಯಾಕ್ಸ್ ಮಾಡಿಸುವಾಗ ಬೆವರುವಿಕೆಯ ಗೋಜಿಲ್ಲ. ಈ ಕಾರಣ, ವ್ಯಾಕ್ಸಿಂಗ್‌ ಮಾಡಿಸುವಾಗ ಚರ್ಮ ಅಂಟಂಟಾಗಿ ಆಗುವುದಿಲ್ಲ, ಆ ರೀತಿ ವ್ಯಾಕ್ಸಿಂಗ್‌ ಸುಲಲಿತವಾಗಿ, ಶೀಘ್ರ ನಡೆಯುತ್ತದೆ.

ರೆಗ್ಯುಲರ್ಆಗಿ ವ್ಯಾಕ್ಸಿಂಗ್ಮಾಡಿಸಿ : ರೆಗ್ಯುಲರ್‌ ಆಗಿ ವ್ಯಾಕ್ಸಿಂಗ್‌ ಮಾಡಿಸಬೇಕಾದುದು ಅತ್ಯಗತ್ಯ. ಇದರಿಂದ ನಿಮ್ಮ ಸ್ಕಿನ್‌ ಲೆಸ್‌ ಸೆನ್ಸಿಟಿವ್ ಆಗುತ್ತದೆ. ಹೀಗೆ ನಿಯಮಿತವಾಗಿ ವ್ಯಾಕ್ಸಿಂಗ್‌ ಮಾಡಿಸುವುದರಿಂದ, ಎಳೆಯಲ್ಪಡುವ ಕೂದಲಿನ ಭಾಗದಲ್ಲಿ, ಹೇರ್‌ ಫಾಲಿಕ್‌ ನ ಹಿಡಿತ, ಕಾಲ ಸರಿದಂತೆ ಲೂಸ್‌ ಆಗುತ್ತದೆ. ಇದರಿಂದಾಗಿ ಆ ಭಾಗದ ಕೂದಲ ನಿವಾರಣೆ ಅತಿ ಸುಲಭವಾಗುತ್ತದೆ.

ಮುಖ್ಯವಾಗಿ ಗಮನಹರಿಸಬೇಕಾದ ಸಂಗತಿಗಳು : ಚಳಿಗಾಲದಲ್ಲಿ ಮದುವೆ ಪಾರ್ಟಿ, ನ್ಯೂ ಇಯರ್‌ ಪಾರ್ಟಿ ಇತ್ಯಾದಿ ವಿಶೇಷ ಔತಣಗಳಿಗೆ ವ್ಯಾಕ್ಸಿಂಗ್‌ ಮಾಡಿಸದೆ ಕರಡಿಗಳಂತೆ ಹೋದರೆ ಏನು ಚೆನ್ನ? ಹೀಗಾಗಿ ಇಂಥ ಪಾರ್ಟಿಗಳಿಗೆ ಹೋಗುವ 2-3 ದಿನಗಳ ಹಿಂದೆಯೇ ವ್ಯಾಕ್ಸಿಂಗ್‌ ಮಾಡಿಸಿ. ಏಕೆಂದರೆ ಸೆನ್ಸಿಟಿವ್ ‌ಸ್ಕಿನ್‌ ನವರಿಗೆ ವ್ಯಾಕ್ಸ್ ಮಾಡಿಸಿದ ನಂತರ, ಅವರ ಚರ್ಮದ ಮೇಲೆ ರೆಡ್‌ ರಾಶೆಸ್‌ ಆಗುತ್ತದೆ. ಇದು ನೋಡಲು ಅತಿ ಕೆಟ್ಟದಾಗಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ