ಸೀರಮ್ ಯಾವ ರೀತಿ ನಮ್ಮ ಚರ್ಮಕ್ಕೆ ಲಾಭಕರ ಎಂದು ವಿವರವಾಗಿ ತಿಳಿಯೋಣವೇ....?

ಸೀರಮ್ ಇತ್ತೀಚೆಗೆ ಬ್ಯೂಟಿ ಸ್ಕಿನ್‌ ಕೇರ್‌ ರೊಟೀನಿನ ಪ್ರಮುಖ ಭಾಗವಾಗಿ ಹೋಗಿದೆ. ಇದು ಅತಿ ಬೇಗ ಚರ್ಮದಲ್ಲಿ ವಿಲೀನ ಆಗುವುದರಿಂದ ಈ ಪ್ರಾಡಕ್ಟ್ಸ್ ನಿಮ್ಮ ಚರ್ಮದ ಅಗತ್ಯಗಳನ್ನು ಚೆನ್ನಾಗಿ ಪೂರೈಸುತ್ತದೆ. ನಿಮ್ಮ ಚರ್ಮಕ್ಕೆ ಹೈಡ್ರೇಶನ್‌ ಯಾ ಮಾಯಿಶ್ಚರ್‌ ನ ಅಗತ್ಯವಿರಲಿ, ಆ್ಯಂಟಿ ಏಜಿಂಗ್‌ ಬೇಕಿರಲಿ, ಪಿಗ್ಮೆಂಟೇಶನ್‌ ಸಮಸ್ಯೆಯ ನಿವಾರಣೆ ಮಾಡಬೇಕಿರಲಿ....

ಸೀರಮ್ ಈ ಎಲ್ಲಾ ಸಮಸ್ಯೆಗಳಿಗೂ ರಾಮಬಾಣವಾಗಿದೆ!

ವಿಶಿಷ್ಟ ಸಮಸ್ಯೆಗಳಿಗೆ ಪರಿಹಾರ : ಹೈಡ್ರೇಟಿಂಗ್‌ ಸೀರಮ್ ಚರ್ಮಕ್ಕೆ ಆರ್ದ್ರತೆ ಒದಗಿಸಿ, ಅದು ಒಣಗದಂತೆ ರಕ್ಷಿಸುತ್ತದೆ. ವಿಟಮಿನ್‌ಸಿ ಸೀರಮ್ ಚರ್ಮಕ್ಕೆ ಹೆಚ್ಚಿನ ಹೊಳಪು ಒದಗಿಸುತ್ತದೆ, ಕಲೆ ಸುಕ್ಕುಗಳ ನಿವಾರಣೆಗೆ ನೆರವಾಗುತ್ತದೆ. ಹ್ಯಾಲುರೋನಿಕ್‌ ಆ್ಯಸಿಡ್‌ ಸೀರಮ್ ಚರ್ಮವನ್ನು ಪ್ಲಂಪ್‌ ಮಾಡಿ, ಮೃದುಗೊಳಿಸುತ್ತದೆ. ನಿಮ್ಮ ಚರ್ಮದ ಸಮಸ್ಯೆ ಯಾವ ಪ್ರಕಾರದ್ದೇ ಆಗಿರಲಿ, ಅದಕ್ಕೆ ಸೀರಮ್ ಒಂದು ಪ್ರಭಾವೀ ಮದ್ದಾಗಿದೆ.

ಸೀರಮ್ ನಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಆ್ಯಕ್ಟಿವ್ ‌ಇನ್‌ ಗ್ರಿಡಿಯೆಂಟ್ಸ್ ಹೇರಳವಾಗಿದ್ದು, ಚರ್ಮದ ಕಾಂತಿಯನ್ನು ಹೆಚ್ಚಿಸುವಲ್ಲಿ ಸಹಕಾರಿ. ಇದು ಚರ್ಮದ ಡೆಡ್‌ ಸೆಲ್ಸ್ ತೊಲಗಿಸಿ, ಅದನ್ನು ಹೆಚ್ಚು ತಾಜಾ ಲವಲವಿಕೆ ತುಂಬಿಕೊಳ್ಳುವಂತೆ ಮಾಡುತ್ತದೆ. ದಣಿದು ಆಯಾಸಗೊಂಡ ಚರ್ಮವನ್ನು ಇದು ತಕ್ಷಣ ರೀಫ್ರೆಶ್‌ ಗೊಳಿಸಬಲ್ಲದು, ಗ್ಲೋಯಿಂಗ್‌ ಹೆಚ್ಚಿಸುವುದು.

ಆ್ಯಂಟಿ ಏಜಿಂಗ್ನಲ್ಲಿ ಸಹಕಾರಿ : ಈ ಸೀರಮ್ 40+ನವರ ಚರ್ಮವನ್ನು 20+ನವರಂತೆ ಯಂಗ್‌ ಆಗಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇದರಲ್ಲಿ ರೆಟಿನಾಲ್‌, ಪೆಪ್‌ ಟೈಡ್ಸ್, ಕೊಲೋಜೆನ್‌ ಬೂಸ್ಟಿಂಗ್‌ ನಂಥ ಉತ್ತಮ ಪೋಷಕಾಂಶಗಳಿದ್ದು, ಚರ್ಮಕ್ಕೆ ವಯಸ್ಸು ಹೆಚ್ಚದಂತೆ ಆ ಪ್ರಕ್ರಿಯೆಯನ್ನು ತಡೆಯುತ್ತದೆ. ಇದರಿಂದ ಸುಕ್ಕು, ನೆರಿಗೆ, ಫೈನ್‌ ಲೈನ್ಸ್, ಚರ್ಮದ ಜೋತು ಬೀಳುವಿಕೆ ಇತ್ಯಾದಿ ಸಮಸ್ಯೆಗಳೆಲ್ಲ ದೂರವಾಗುತ್ತವೆ.

ಚರ್ಮದ ಹೈಡ್ರೇಶನ್ಉಳಿಸಿಕೊಳ್ಳಲು ನೆರವು : ಇತ್ತೀಚಿನ ಲೈಫ್‌ ಸ್ಟೈಲ್ ಹಾಗೂ ಮಾಲಿನ್ಯಗಳ ಭರಾಟೆ ನಡುವೆ ಚರ್ಮ ತನ್ನ ಆರ್ದ್ರತೆ ಕಳೆದುಕೊಳ್ಳುವುದು ಸಹಜ. ಹ್ಯಾಲುರೋನಿಕ್‌ ಆ್ಯಸಿಡ್‌ ಸೀರಮ್ ಹಾಗೂ ಹೈಡ್ರೇಟಿಂಗ್‌ ಸೀರಮ್ ಚರ್ಮದ ಆರ್ದ್ರತೆ ಕಾಪಾಡಿಕೊಳ್ಳುತ್ತದೆ, ಅದನ್ನು ನಿರ್ಜಲತೆಯಿಂದ ರಕ್ಷಿಸುತ್ತದೆ. ಇದು ಚರ್ಮವನ್ನು ಅತಿ ಮೃದು, ಹೈಡ್ರೇಟೆಡ್‌ ಹೆಲ್ದಿ ಆಗಿರಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.

ಚರ್ಮದ ಬಳುಕುವಿಕೆ ಹೆಚ್ಚಿಸಲು : ಸೀರಮ್ ನಲ್ಲಿನ ಪೋಷಕಾಂಶಗಳು, ಕೊಲ್ಯಾಜೆನ್‌ ಎಲಾಸ್ಟಿಸ್‌ ನ ಉತ್ಪಾದನೆ ಹೆಚ್ಚಿಸುತ್ತವೆ. ಇದರಿಂದ ಚರ್ಮಕ್ಕೆ ಹೆಚ್ಚಿನ ಬಳುಕುವಿಕೆಯ ಗುಣ ಪ್ರಾಪ್ತವಾಗುತ್ತದೆ. ಇದರಿಂದ ಚರ್ಮ ಜೋತುಬೀಳದೆ, ಕಸುವು ತುಂಬಿಕೊಂಡು ಟೈಟಾಗಿ, ಆಕರ್ಷಕ ಎನಿಸುತ್ತದೆ.

ಚರ್ಮದ ಬಣ್ಣ ತೇಲಿಸುತ್ತದೆ : ಫಿಗ್ಮೆಂಟೇಶನ್‌ ಹಾಗೂ ಚರ್ಮದ ಅಸಮಾನ ಬಣ್ಣದ ನಿವಾರಣೆಗಾಗಿ ಸೀರಮ್ ಒಂದು ಆದರ್ಶ ಮಾನದಂಡ. ವಿಟಮಿನ್‌ ಸಿ ಹಾಗೂ ನಿಯಾಸಿನ್‌ ಮೈಲ್ಡ್ ನಂಥ ಪೋಷಕಾಂಶಗಳು, ಚರ್ಮದ ಮೇಲಿನ ಕಲೆಗುರುತನ್ನು ಎಷ್ಟೋ ತಗ್ಗಿಸುತ್ತವೆ. ಆ ರೀತಿ ಮಾಡಿ ಚರ್ಮಕ್ಕೆ ಸಮಾನ ಟೋನ್‌ ಒದಗಿಸುತ್ತದೆ. ಇದು ಮುಖವನ್ನು ಕಲೆರಹಿತ ಹಾಗೂ ಸುಂದರ ಮಾಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ