ವಿಂಟರ್ನಲ್ಲಿ ನಿಮ್ಮ ಕೇಶ ಸೌಂದರ್ಯ ಹಾಗೂ ಆರೋಗ್ಯ ಹೇಗಿರಬೇಕು ಎಂದು ತಜ್ಞರಿಂದ ತಿಳಿಯೋಣವೇ....?

ಚಳಿಗಾಲದ ಇಡೀ ಸೀಸನ್‌  ಪೂರ್ತಿ ಥಂಡಿ ಹವೆ ಹಾಗೂ ಕನಿಷ್ಠ ಆರ್ದ್ರತೆಯ ಕಾಟ ತಪ್ಪದು. ಇದು ನಮ್ಮ ಚರ್ಮವನ್ನು ಮಾತ್ರ ಹಿಂಸಿಸುವುದಲ್ಲ, ಕೂದಲಿನ ಮೇಲೂ ಗಾಢ ದುಷ್ಪ್ರಭಾವ ಬೀರುತ್ತದೆ. ಈ ಸೀಸನ್‌ ನಲ್ಲಿ ಕೂದಲು ಅತಿ ಶುಷ್ಕ, ನಿರ್ಜೀವ ಹಾಗೂ ದುರ್ಬಲ ಆಗುತ್ತದೆ. ಇದರ ಸಮರ್ಪಕ ಆರೈಕೆ ಮಾಡದಿದ್ದಲ್ಲಿ ಕೂದಲು ಬೇಗ ಬೇಗ ತುಂಡಾಗುವಿಕೆ, ಮುರಿಯುವಿಕೆ, ಉದುರುವಿಕೆಯ ಸಮಸ್ಯೆಗೆ ತುತ್ತಾಗುತ್ತದೆ. ಜೊತೆಗೆ ಸೀಳುತುದಿ ಹಾಗೂ ಡ್ಯಾಂಡ್ರಫ್‌ ಸಮಸ್ಯೆ ತಪ್ಪಿದ್ದಲ್ಲ.

ಈ ಸೀಸನ್‌ ನಲ್ಲಿ ಕೂದಲು ದುರ್ಬಲ ಆಗುವುದೇಕೆ ಹಾಗೂ ಇದಕ್ಕೆ ಪರಿಹಾರವೇನು ಎಂದು ತಜ್ಞರಿಂದ ಕೇಳಿ ತಿಳಿಯೋಣವೇ?

ಆರ್ದ್ರತೆಯ ಕೊರತೆ : ಚಳಿಗಾಲದ ಹವೆಯಲ್ಲಿ ಸಹಜವಾಗಿಯೇ ಆರ್ದ್ರತೆ (ಹ್ಯುಮಿಡಿಟಿ)ಯ ಕೊರತೆ ಕಾಡುವುದರಿಂದ, ಕೂದಲು ಬಲು ಡ್ರೈ ದುರ್ಬಲ ಆಗುತ್ತದೆ.

ಅತಿಯಾದ ಬಿಸಿ ನೀರಿನ ಬಳಕೆ : ಥಂಡಿ ಹಿಂಸೆ ತಡೆಯಲಾರದೆ, ಹೆಂಗಸರು ತಲೆಗೆ ಸ್ನಾನ ಮಾಡುವಾಗ ಅತಿಯಾದ ಬಿಸಿ ನೀರನ್ನು ಬಳಸುತ್ತಾರೆ. ಅದು ಸ್ಕಾಲ್ಪ್ ನ ನೈಸರ್ಗಿಕ ತೈಲಾಂಶಗಳನ್ನು ತೊಲಗಿಸಿ, ಅದನ್ನು ಮತ್ತಷ್ಟು ಅಧಿಕ ಡ್ರೈಗೊಳಿಸುತ್ತದೆ.

ಥಂಡಿ ಹವೆ  ಹಾಗೂ ಪರಿಸರ ಮಾಲಿನ್ಯ : ಥಂಡಿ ಹವೆ ಕೂದಲಿನ ಆರ್ದ್ರತೆ ನಾಶಪಡಿಸಿ, ಪರಿಸರ ಮಾಲಿನ್ಯದಿಂದ ಅದು ಮತ್ತಷ್ಟು ಮಗದಷ್ಟು ನಿರ್ಜೀವಗೊಳ್ಳುವಂತೆ ಮಾಡುತ್ತದೆ.

ಡ್ಯಾಂಡ್ರಫ್ ಸಮಸ್ಯೆ : ಸ್ಕಾಲ್ಪ್ ನ ಡ್ರೈನೆಸ್‌ ಹೆಚ್ಚುವುದರಿಂದ ತಲೆಹೊಟ್ಟಿನ ಸಮಸ್ಯೆ ತಂತಾನೇ ಹೆಚ್ಚುತ್ತದೆ. ಇದರಿಂದ ಕೂದಲು ಉದುರುವಿಕೆ, ತಲೆಯಲ್ಲಿ ತುರಿಕೆ, ಕಡಿತ ಸಹ ಹೆಚ್ಚುತ್ತದೆ. ಚಳಿಗಾಲದಲ್ಲಿ ಕೂದಲಿನ ಆರೈಕೆಗಾಗಿ, ಹೆಚ್ಚಿನ ಪೋಷಣೆ ಒದಗಿಸಲು, ನಿಯಮಿತವಾಗಿ ಕೊಬ್ಬರಿ ಎಣ್ಣೆ ಅಥವಾ ಇತರ ತೈಲಗಳಿಂದ ಮಸಾಜ್‌ ಮಾಡಬೇಕು.

ಜೋಜೋಬಾ ಆಯಿಲ್‌ : ಇದು ಕೂದಲಿನಲ್ಲಿ ಆಳವಾಗಿ ಇಳಿದು, ಅದರ ಆರ್ದ್ರತೆ ಕಾಪಾಡುತ್ತದೆ.

ಕೊಬ್ಬರಿ ಎಣ್ಣೆ : ಇದು ಕೂದಲಿಗೆ ನೈಸರ್ಗಿಕವಾಗಿ ಆರ್ದ್ರತೆ ಒದಗಿಸುತ್ತದೆ ಹಾಗೂ ಶೀತಗಾಳಿಯಿಂದ ಕೂದಲನ್ನು ರಕ್ಷಿಸುತ್ತದೆ.

ಲ್ಯಾವೆಂಡರ್ಎಸೆನ್ಶಿಯಲ್ ಆಯಿಲ್ಸ್ : ಇದು ತಲೆಗೂದಲಿನ ಡ್ರೈನೆಸ್‌ ತೊಲಗಿಸಿ, ಅದನ್ನು ಹೆಚ್ಚು ಮೃದುವಾಗಿಡುತ್ತದೆ.

ಸೂಕ್ತ ಶ್ಯಾಂಪೂ ಕಂಡೀಶನರ್ ಬಳಕೆ : ಸಲ್ಫೇಟ್ ಪ್ಯಾರಾಬೀನ್‌ ಮುಕ್ತ ಶ್ಯಾಂಪೂವನ್ನೇ ಬಳಸಬೇಕು. ರೋಸ್‌ ಮೆರಿ ಎಸೆನ್ಶಿಯಲ್ ಆಯಿಲ್ ವುಳ್ಳ ಕಂಡೀಶನರ್‌ ನ್ನೇ, ಕೂದಲಿನ ಆಳಕ್ಕೆ ತಿಕ್ಕಿ ಚೆನ್ನಾಗಿ ಮಸಾಜ್‌ಮಾಡಿ. ಇದರಿಂದ ಉತ್ತಮ ಪೋಷಣೆ ಸಿಗುತ್ತದೆ. ತಲೆ ಸ್ನಾನದ ನಂತರ ಕಂಡೀಶನರ್‌ ಬಳಸಲು ಮರೆಯದಿರಿ. ಆಗಾಗ ಹೇರ್‌ ಮಾಸ್ಕ್ ಬಳಸುತ್ತಿರಬೇಕು. ವಾರದಲ್ಲಿ ಕನಿಷ್ಠ 1-2 ಸಲ ಬಳಸಲೇಬೇಕು ಎಂಬುದನ್ನು ಮರೆಯದಿರಿ.

Blossom-kochar (1)

ಡ್ರೈ ಸ್ಕಾಲ್ಪ್ ಗಾಗಿ : ಆ್ಯಲೋವೇರಾ, ಜೇನುತುಪ್ಪ, ಟೀಟ್ರೀ ಆಯಿಲ್‌ ಬೆರೆಸಿ ಮಿಶ್ರಣ ರೆಡಿ ಮಾಡಿ.

ಡ್ಯಾಮೇಜ್ಡ್  ಕೂದಲಿಗಾಗಿ : ಆರ್ಗನ್‌ ಆಯಿಲ್,‌ಅವಕಾಡೋ ಆಯಿಲ್ ಬೆರೆಸಿ ಮಾಸ್ಕ್ ರೆಡಿ ಮಾಡಿ, ನೀಟಾಗಿ ಮಸಾಜ್ ಮಾಡಿಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ