ಚಳಿಗಾಲದಲ್ಲೂ ಮಾಡರ್ನ್, ಸ್ಟೈಲಿಶ್‌ಗ್ಲಾಮರಸ್ ಲುಕ್ಸ್ ಪಡೆಯ ಬಯಸುತ್ತೀರಾ? ಹಾಗಿದ್ದರೆ ಮರೆಯದೆ ಈ ಸಲಹೆ ಅನುಸರಿಸಿ....
ಸೀಸನ್ ಯಾವುದಾದರೇನು? ನಾವು ಟ್ರಾವೆಲ್ ಮಾಡುತ್ತಲೇ ಇರುತ್ತೇವೆ. ಜೊತೆಗೆ ಮದುವೆ ಫಂಕ್ಷನ್, ಪಾರ್ಟಿ ಇತ್ಯಾದಿಗಳನ್ನೂ ಅಟೆಂಡ್ ಮಾಡುತ್ತಿರುತ್ತೇವೆ. ಚಳಿಗಾಲದ ಈ ಸಂದರ್ಭದಲ್ಲಿ, ಚಳಿಯಿಂದ ರಕ್ಷಣೆ ಪಡೆಯಲು ನಾವೇನೋ ವುಲ್ಲನ್ ಡ್ರೆಸ್ ಧರಿಸುತ್ತೇವೆ. ಅದೇ ಸಮಯದಲ್ಲಿ ಸ್ಟೈಲಿಶ್ ಗ್ಲಾಮರಸ್ ಲುಕ್ಸ್ ಗಾಗಿಯೂ ಪ್ರಯತ್ನ ಪಡಬೇಕಾಗುತ್ತದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಈ ನಿಟ್ಟಿನಲ್ಲಿ ಅನೇಕ ಬಗೆಯ ವುಲ್ಲನ್ ಆಪ್ಶನ್ಸ್ ಇವೆ. ಇನ್ನು ನಿಮ್ಮ ವಾರ್ಡ್ ರೋಬ್ ನಲ್ಲಿ ಶಾಮೀಲುಗೊಳಿಸಿಕೊಂಡು, ನೀವು ಯಾವುದೇ ಫಂಕ್ಷನ್ಸ್ ಗೆ ಹೀಗೆ ಬೊಂಬಾಟ್ ಆಗಿ ರೆಡಿಯಾಗಿ ಹೋಗಬಹುದು.
ಈ ಕುರಿತಾಗಿ ಹೆಚ್ಚಿನ ಆಪ್ಶನ್ಸ್ ಯಾವುದೆಂದು ತಿಳಿಯೋಣವೇ? ಇವನ್ನು ಅನುಸರಿಸುತ್ತಾ ನೀವು ಚಳಿಗಾಲದಲ್ಲೂ ಹೆಚ್ಚು ಸ್ಟೈಲಿಶ್‌ಗ್ಲಾಮರಸ್ ಆಗಿ ಮಿಂಚಬಹುದು.
ನಿಟೆಡ್ ಮಿಡೀ ಸ್ಕರ್ಟ್ : ನಿಟೆಡ್ ಯಾ ವುಲ್ಲನ್ ಫ್ಯಾಬ್ರಿಕ್ಸ್ ನ ಈ ಮಿಡೀ ಸ್ಕರ್ಟ್ ಮಂಡಿಗಿಂತ ತುಸು ಕೆಳಗೆ ಹಾಗೂ ಆ್ಯಂಕಲ್ ಗೆ ತುಸು ಮೇಲ್ಭಾಗಕ್ಕೆ ಬರುವಂಥ ಸ್ಕರ್ಟ್ ಆಗುತ್ತದೆ. ಇದನ್ನು ನೀವು ಟಾಪ್, ಟರ್ಟಲ್ ನೆಕ್ ಸ್ವೆಟರ್ ಹಾಗೂ ಮಂಡಿವರೆಗಿನ ಉದ್ದದ ಬೂಟ್ಸ್ ಜೊತೆ ಧರಿಸಿ ಆನಂದಿಸಿ. ವಾಸ್ತದಲ್ಲಿ ಮಿಡೀ ಸ್ಕರ್ಟ್ ಎಂದೂ ಔಟ್ ಆಫ್ ಫ್ಯಾಷನ್ ಆಗುವುದಿಲ್ಲ. ಹ್ಞಾಂ, ಕಾಲ ಬದಲಾದಂತೆ, ಫ್ಯಾಷನ್ನಿಗೆ ತಕ್ಕಂತೆ, ಇದರ ಫ್ಯಾಬ್ರಿಕ್ಸ್ ಪ್ಯಾಟರ್ನ್ ಗಳಲ್ಲಿ ಖಂಡಿತಾ ಬದಲಾವಣೆ ಕಂಡುಬರುತ್ತದೆ. ಚಳಿಗಾಲದಲ್ಲಿ ಕಾಶ್ಮೀರ್ ಮಿಡೀ ಸ್ಕರ್ಟ್, ಫ್ಯಾಷನ್ ಸ್ಟೇಟ್ ಮೆಂಟ್ ಆಗಿದೆ. ಇದನ್ನು ಅಗತ್ಯವಾಗಿ ನಿಮ್ಮ ವಾರ್ಡ್ ರೋಬ್ ಗೆ ಸೇರಿಸಿಕೊಳ್ಳಿ.
ಸ್ವೆಟ್ ಪ್ಯಾಂಟ್ಸ್ : ಚಳಿಗಾಲದಲ್ಲಿ ಸ್ವೆಟ್ ಪ್ಯಾಂಟ್ಸ್ ಅಂದ್ರೆ..... ಸಾಕಷ್ಟು ಆರಾಮದಾಯಕ ಎನಿಸುವಂಥ ವುಲ್ಲನ್ ಪ್ಯಾಂಟ್ ಆಗಿದೆ. ನೀವು ಪ್ರಯಾಣದ ಸಂದರ್ಭದಲ್ಲಿ ಕಂಫರ್ಟ್ ಬಯಸುವಿರಾದರೆ, ಇಂಥ ಸ್ವೆಟ್ ಪ್ಯಾಂಟ್ಸ್ ನಿಮಗೆ ಬಲು ಹಿತಕಾರಿ. ಇತ್ತೀಚೆಗೆ ಸ್ಟೈಲ್, ಕಂಫರ್ಟ್ ಗ್ಲಾಮರಸ್ ಎಫೆಕ್ಟ್ ಬೇಕೆಂದರೆ ಇದರಲ್ಲಿ ಅವುಗಳೆಲ್ಲದರ ಪರ್ಫೆಕ್ಟ್ ಬ್ಲೆಂಡ್ ಇದೆ. ಇದು ನಿಮ್ಮ ಕ್ಯಾಶ್ಯುಯೆಲ್ ಸ್ವೆಟ್ಸ್ ಯಾ ವಿಂಟರ್ ಸ್ವೆಟ್ ಎಂದು ಗೊತ್ತೇ ಆಗುವುದಿಲ್ಲ. ಇದನ್ನು ನಿಮ್ಮ ನೆಚ್ಚಿನ ಆಯ್ಕೆ ಪ್ರಕಾರ ಆರಿಸಬಹುದು. ನ್ಯೂಟ್ರಲ್ ಕಲರ್ಸ್ ಇಲ್ಲಿ ನಿಮಗೆ ಹೆಚ್ಚು ನೆರವಾಗುತ್ತವೆ. ಇದನ್ನು ನೀವು ಯಾವುದೇ ಶರ್ಟ್ ಯಾ ಫುಲ್ ಓವರ್ ಜೊತೆ ಧರಿಸಬಹುದು.
ಶರ್ಪಾ ಜ್ಯಾಕೆಟ್ : ಇಂಥ ಜ್ಯಾಕೆಟ್ ಗಳಲ್ಲಿ ಬಳಸಲ್ಪಡುವ ಉಣ್ಣೆ, ಸಾಮಾನ್ಯದಕ್ಕಿಂತಲೂ ಹೆಚ್ಚು ಲೈಟ್‌ವಾರ್ಮ್ ಆಗಿರುತ್ತದೆ. ಹೀಗಾಗಿ ಇವು ಸಹಜವಾಗಿಯೇ ಭಾರ ಆಗಿರದೆ ಹಗುರವಾಗಿದ್ದು, ಹೆಚ್ಚು ಬೆಚ್ಚಗಿಡುತ್ತವೆ. ಶರ್ಪಾ ಜ್ಯಾಕೆಟ್, ಮೊದಲಿನಿಂದಲೂ ಫ್ಯಾಷನ್ನಿನ ಭಾಗವೇ ಆಗಿದೆ. ಆದರೆ ಇತ್ತೀಚೆಗೆ ಇದರಲ್ಲಿ ವೈವಿಧ್ಯಮಯ ಬಣ್ಣ, ಪ್ಯಾಟರ್ನ್ ಹಾಗೂ ವೆರೈಟಿಗಳಿವೆ. ಇವು ಸದಾ ನಿಮ್ಮ ಲುಕ್ಸ್ ನ್ನು ಆಕರ್ಷಕ ಗೊಳಿಸುವಲ್ಲಿ ನೆರವಾಗುತ್ತವೆ. ಏಕೆಂದರೆ ಈ ಟ್ರೆಂಡಿ ಟು ಟೋನ್ ಡಿಸೈನ್, ವಾರ್ಮ್ ವೆರಿ ಕಂಫರ್ಟೆಬಲ್ ಆಗಿರುತ್ತವೆ. ಇವು ನಿಮ್ಮ ಪರ್ಸನಾಲಿಟಿಗೆ ಸದಾ ಏಕ್ ದಮ್ ಹೊಚ್ಚ ಹೊಸ ಲುಕ್ಸ್ ನೀಡುತ್ತವೆ. ಏಕೆಂದರೆ ಇದರಲ್ಲಿ ಶೇಡ್ಸ್ ವೈವಿಧ್ಯಮಯವಾಗಿವೆ, ಹೀಗಾಗಿ ಈ ಔಟ್ ಫಿಟ್ ಬೆಸ್ಟ್ ಔಟರ್ ಆಪ್ಶನ್ ಆಗಿದೆ.





