ನೀವು ಯಾರನ್ನಾದರೂ ಡೇಟ್ಮಾಡುತ್ತಿದ್ದರೆ ಯಾವ ಹೊಸ ಪಾರ್ಟ್ನರ್ ಹುಡುಕಾಟದಲ್ಲಿದ್ದರೆ, ನಿಮಗೆ ಟ್ರೆಂಡ್ಸ್ ಆಳವಾದ ಮಾಹಿತಿ ತಿಳಿದಿರಲಿ……!

ಡೇಟಿಂಗ್‌ ನ ಆಧುನಿಕ ಲೋಕದಲ್ಲಿ ಇದೀಗ ಕೇವಲ ಪ್ರೀತಿಪ್ರೇಮ, ಆಸೆ, ನಕಾರ ಇಷ್ಟು ಮಾತ್ರವಲ್ಲ, ಸಮಯ ಕಳೆದಂತೆಲ್ಲ ಎಷ್ಟೋ ಹಲವಾರು ಹೊಸ ಹೊಸ ಟ್ರೆಂಡ್ಸ್ ಸೇರಿಕೊಂಡಿವೆ. ಇಂದಿನ ಆಧುನಿಕ ಡೇಟಿಂಗ್‌ ಪ್ರಕಾರ, ಹುಡುಗ ಹುಡುಗಿ ನಿಜವಾಗಿಯೂ ಪರಸ್ಪರ ಆಳವಾದ ಪ್ರೀತಿಪ್ರೇಮ ಹೊಂದಿದ್ದಾರೆ ಎಂಬುದಷ್ಟೇ ಇಲ್ಲ, ಇಂದಿನ ಡೇಟಿಂಗ್‌ ಗೆ ತನ್ನದೇ ಆದ ಉದ್ದೇಶ ಇರುತ್ತದೆ, ಅದಕ್ಕೆ ಒಂದು ಗಡುವು ಸಹ ಇರುತ್ತದೆ. ಕೇಳಲು ಇದು ತುಸು ವಿಚಿತ್ರ ಅನಿಸಿದರೂ, ಇದೇ ಇಂದಿನ ವಾಸ್ತವತೆ.

ಥ್ರೋನಿಂಗ್‌ : ಇತ್ತೀಚೆಗೆ ಈ ಥ್ರೋನಿಂಗ್‌ ಡೇಟಿಂಗ್‌ ಭೀ ಫೇಮಸ್‌. ಇದರಲ್ಲಿ ಸಂಗಾತಿಯೊಂದಿಗಿನ ಸಂಬಂಧ ಪ್ರೀತಿಪ್ರೇಮ ಅಲ್ಲವೇ ಅಲ್ಲ! ಹಣ ಐಶ್ವರ್ಯ, ಪ್ರತಿಷ್ಠೆಗಳಿಗಾಗಿಯೇ ಮುಡಿಪು. ಇದರಲ್ಲಿ ಶಾಮೀಲಾದವರ ಉದ್ದೇಶ, ತನ್ನ ಸಂಗಾತಿಯ ಯೋಗ್ಯತೆ, ಸ್ಟೇಟಸ್‌ ಗಳನ್ನು ಸ್ವಂತ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದಾಗಿದೆ. ಇಲ್ಲಿ ಮಾನವೀಯತೆ, ಭಾವನೆಗಳ ಬದಲಾಗಿ ಹಣ, ಅಧಿಕಾರಕ್ಕೇ ಅಧಿಕ ಪ್ರಾಧಾನ್ಯತೆ. ಈ ರಿಲೇಶನ್‌ ಶಿಪ್‌ ಬಹು ದಿನ ನಡೆಯುವಂಥದ್ದಲ್ಲ ಎಂಬುದು ಇಬ್ಬರಿಗೂ ಗೊತ್ತು. ಸಿಂಪಲ್ ಆಗಿ ಹೇಳುವುದಾದರೆ, ಅಗತ್ಯಕ್ಕೆ ತಕ್ಕಂತೆ ಸಂಗಾತಿ ಹೆಸರಲ್ಲಿ ಉಳ್ಳವರನ್ನು ಬಳಸಿಕೊಂಡು, ಬೇಡವಾದಾಗ ಬಿಟ್ಟು ಹೋಗುವುದು ಎಂದು ನೇರವಾಗಿ ಹೇಳಬಹುದು. ವಿಡಂಬನೆ ಎಂದರೆ, ಈ ಬ್ರೇಕಪ್‌ ನಿಂದ ಇಬ್ಬರಿಗೂ ನೋವಿಲ್ಲ ಎಂಬುದು. ಏಕೆಂದರೆ ಇಂಥವರು ಇಂಥ ಪ್ರಸ್ತಾಪವಿತ್ತಾಗ, ಉಳ್ಳವರಿಗೂ ಅದು ಸ್ಪಷ್ಟ ಅರ್ಥ ಆಗಿರುತ್ತದೆ, ಗಂಡು/ಹೆಣ್ಣು ಇಬ್ಬರಿಗೂ ಇದು ಅನ್ವಯ. ಕಾರ್ಪೋರೇಟ್‌ ಕಲ್ಚರ್‌ ನಲ್ಲಿ ಈ ಥ್ರೋನಿಂಗ್‌ ಡೇಟಿಂಗ್‌ ಬಲು ಜನಪ್ರಿಯ.

ಸಿಚುಯೇಶನ್ಶಿಪ್ಡೇಟಿಂಗ್‌ : ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿಗಳಂಥ ಮೆಟ್ರೋ ಮಹಾನಗರಗಳಲ್ಲಿ ಇದು ಮಾಮೂಲು. ಇದರಲ್ಲಿ ಗಂಡುಹೆಣ್ಣು ಇಬ್ಬರೂ ಪರಸ್ಪರ ರೊಮ್ಯಾಂಟಿಕ್‌, ದೈಹಿಕ ಸಂಬಂಧ ಹೊಂದಿರುತ್ತಾರೆ, ಆದರೆ ಈ ಸಂಬಂಧಕ್ಕೆ ಯಾವುದೇ ಹೆಸರಿಲ್ಲ. ಈ ಜೋಡಿಗೆ ಭವಿಷ್ಯದ ಚಿಂತೆ ಎಳ್ಳಷ್ಟೂ ಇಲ್ಲ. ಪರಸ್ಪರರಿಂದ ದೂರ ಸರಿಯುವುದಿಲ್ಲ, ಗೊತ್ತಿದ್ದೂ ಹಳ್ಳಕ್ಕೆ ಬೀಳುವುದು ಅನ್ನುವುದು ಇಂಥದ್ದನ್ನೇ! ಪರಿಸ್ಥಿತಿ ಬದಲಾದಂತೆ ಅವರ್‌ ಬಿಟ್‌ ಇವರ್‌ ಬಿಟ್‌ ಇನ್ನೊಬ್ಬರ ಪ್ರವೇಶ ಗ್ಯಾರಂಟಿ!

ಕ್ಯಾಟ್ಫಿಶಿಂಗ್‌ : ಸೋಶಿಯಲ್ ಮೀಡಿಯಾ ಆನ್‌ ಲೈನ್‌ ಡೇಟಿಂಗ್‌ ನ ಲೋಕದಲ್ಲಿ ಇದು ಬಲು ಮಾಮೂಲಿ ಸಮಸ್ಯೆಯಾಗಿ ಹೊರಹೊಮ್ಮುತ್ತದೆ. ಇದು ಭಾವನಾತ್ಮಕ ಹಾಗೂ ಆರ್ಥಿಕ ಮೋಸದ ರೂಪ. ಅಸಲಿಗೆ ಇದರಲ್ಲಿ ಯಾರೋ ವ್ಯಕ್ತಿ ಇಂಟರ್‌ ನೆಟ್ ಮೂಲಕ ನಕಲಿ ಪ್ರೊಫೈಲ್‌, ಫೋಟೋ, ವಿಡಿಯೋ, ಸುಳ್ಳು ಸುಳ್ಳೇ ಮಾಹಿತಿಗಳೊಂದಿಗೆ ತನ್ನದೊಂದು ಪಾಪ್ಯುಲರ್‌ ಪ್ರೊಫೈಲ್ ಮಾಡಿಕೊಂಡಿರುತ್ತಾರೆ. ನಂತರ ಈ ನಕಲಿ ಆನ್‌ ಲೈನ್‌ ಐಡೆಂಟಿಟಿಯಿಂದ ಬೇರೆಯವರಿಗೆ ಮೋಸ ಮಾಡುವುದೇ ಗುರಿ. ಡೇಟಿಂಗ್‌ ಲೋಕದಲ್ಲಿ ಇತ್ತೀಚೆಗೆ ಇದು ಬಲು ವೇಗವಾಗಿ ಹೆಚ್ಚುತ್ತಿದೆ, ಹೀಗಾಗಿ ಆನ್‌ ಲೈನ್‌ ಡೇಟಿಂಗ್‌ ಗೆ ಬೇಗ ಮರುಳಾಗದಿರಿ.

ಬ್ರೆಡ್ಕ್ರಂಬಿಂಗ್‌?: ಇದನ್ನು ಪ್ರೀತಿಪ್ರೇಮದ ಹೆಸರಲ್ಲಿ ಚಿಮ್ಮುವ ಹಲಗೆ ಎನ್ನಬಹುದು. ಇದರಲ್ಲಿ ಒಬ್ಬ ಸಂಗಾತಿ ಬೇರೊಬ್ಬರ ಭಾವನೆಗಳೊಂದಿಗೆ ಸದಾ ಆಡುತ್ತಿರುತ್ತಾರೆ. ಎದುರಿಗಿನ ಸಂಗಾತಿಯೊಂದಿಗೆ ರೊಮ್ಯಾಂಟಿಕ್‌ ಆಗಿರುವುದಂತೂ ನಿಜ, ಆದರೆ ತನ್ನ ಅಗತ್ಯಕ್ಕೆ ತಕ್ಕಷ್ಟು ಮಾತ್ರ. ಅಂಥವರಿಗೆ ಹೆಚ್ಚಿನ ಸಮಯ, ಮಹತ್ವ ನೀಡವರು. ಆದರೆ ಇದನ್ನರಿತ ಸಂಗಾತಿ ದೂರವಾಗಲು ಪ್ರಯತ್ನಿಸಿದರೆ, ಬಿಟ್ಟುಕೊಡುವುದೂ ಇಲ್ಲ. ಸಂಗಾತಿಯನ್ನು ಬಿಟ್ಟಿರಲಾರೆ ಎಂಬ ಸೋಗಲಾಡಿತನ ಮಾತ್ರ ಕಂಡುಬರುತ್ತದೆ. ಇಂಥ ಸಂಬಂಧದ ವಾಸ್ತವತೆ ಅರಿವಾಗಲು ಬಹಳ ತಡವಾಗುತ್ತದೆ.

ಟೆಕ್ಸ್ ಟೇಶನ್ಶಿಪ್‌ : ಇಂಟರ್‌ ನೆಟ್‌ ನ ಇಂದಿನ ದಿನಗಳಲ್ಲಿ ಇದು ಬಲು ಕಾಮನ್‌ ಡೇಟಿಂಗ್‌ ಅನಿಸಿದೆ. ಇದರಲ್ಲಿ ಗಂಡುಹೆಣ್ಣುಗಳಿಬ್ಬರೂ ಕೇವಲ ಟೆಕ್ಸ್ಟ್ ಮೆಸೇಜ್‌ ಕಳಿಸುತ್ತಲೇ ಸಂಪರ್ಕದಲ್ಲಿರುತ್ತಾರೆ. ಅವರು ಎಂದೂ ಆಫ್‌ ಲೈನ್‌ ಭೇಟಿ ಆಗೋದಿಲ್ಲ ಯಾ ವಾಸ್ತವಿಕ ಜೀವನದ ಆಗುಹೋಗು ಹಂಚಿಕೊಳ್ಳುವುದಿಲ್ಲ. ಇದನ್ನು ಒಂದು ವಿಧದಲ್ಲಿ ಟೈಂಪಾಸಿಗಾಗಿ ಯಾ ವರ್ಚುಯೆಲ್ ‌ರಿಲೇಶನ್ ಶಿಪ್‌ ಡೇಟಿಂಗ್‌ ಎನ್ನಬಹುದು. ನಿಮ್ಮ ಆಯ್ಕೆಯ ಪ್ರಕಾರ ಯಾವುದು ವರ್ಕ್‌ ಔಟ್‌ ಆಗುತ್ತದೋ ಅಂಥದ್ದನ್ನೇ ಎಚ್ಚರಿಕೆಯಿಂದ ಆರಿಸಿಕೊಳ್ಳಿ.

ಪ್ರತಿನಿಧಿ

ಡೇಟಿಂಗ್ಆ್ಯಪ್ಸ್

ಟಿಂಡರ್‌, ಬಂಬ್‌, ಕ್ವಾಕ್‌ ಕ್ವಾಕ್‌ ನಂಥ ಅನೇಕ ಆ್ಯಪ್ಸ್ ಉಂಟು. ಇದರಿಂದ ಹೊಸ ಪೀಳಿಗೆ ಮನಸ್ಸಿಗೆ ಹಿಡಿಸಿದ ಸಂಗಾತಿ ಆರಿಸಲು ಬಲು ನೆರವಾಗುತ್ತವೆ. ಭಾರತದಲ್ಲಿ ಈ ಆ್ಯಪ್ಸ್ ಬಲು ಜನಪ್ರಿಯ. ಇದರ ಜೊತೆಯಲ್ಲೇ ಜೀವನ್‌ ಸಾಥಿ, ಶಾದಿ ಅಂಥ ಆ್ಯಪ್ಸ್ ಸಂಬಂಧ ಕುದುರಿಸಿಕೊಳ್ಳಲೆಂದೇ ಇದೆ. ಇವು ಸಹ ಡೇಟಿಂಗ್‌ ನ ಸುಲಭ ವಿಧಾನಗಳಾಗಿವೆ.

ಯಾರಿಗೆ ಹೇಗೆ ಇಷ್ಟವೋ ಹಾಗೆ ಮನ ಬಂದಂತೆ ಸಂಗಾತಿ ಜೊತೆ ಸುತ್ತಾಡುವುದೇ ಇದರ ಮೂಲ ಗುರಿ. ಪ್ರಾಮಾಣಿಕ ಪ್ರೀತಿಪ್ರೇಮ, ಮದುವೆ, ಭದ್ರ ಭವಿಷ್ಯ, ಸಂಸಾರದ ಕನಸು ಕಾಣುವ ಗಂಡು/ಹೆಣ್ಣು ಇಂಥ ಕಪಟಜಾಲಕ್ಕೆ ಬಲಿಯಾಗದಂತೆ ಎಷ್ಟು ಎಚ್ಚರವಿದ್ದರೂ ಸಾಲದು.

ಇವೆಲ್ಲದರಲ್ಲೂ ಬೇಕಾದಷ್ಟು ಫ್ರಾಡ್‌ ಗಿರಿ ನಡೆಯುತ್ತದೆ. ತಮ್ಮ ನಕಲಿ ವೆಬ್‌ ಸೈಟ್‌, ನಕಲಿ FB ‌ಅಕೌಂಟ್‌, ನಕಲಿ ಇನ್‌ ಸ್ಟಾ ಐಡಿ ಇತ್ಯಾದಿಗಳು ತುಂಬಿ ತುಳುಕಾಡುತ್ತಿರುತ್ತವೆ. ಇಂಥವಕ್ಕೆ ಬಲಿಯಾಗುವ ಅಮಾಯಕರು ತಮ್ಮ ನೈಜ ಮಾಹಿತಿ, ಬ್ಯಾಂಕ್ ವಿವರಗಳು ಇತ್ಯಾದಿ ನೀಡಿ ನಂತರ ಮೋಸಹೋಗುತ್ತಾರೆ. ಹೀಗಾಗಿ ಇಂಥವನ್ನು ಬಳಸಲೇಬೇಕಾದರೆ ಬಲು ಸಾವಧಾನ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ