Sj*

ಹಿರಿಯ ನಟ ಅನಂತ್‍ ನಾಗ್‍ ಅವರು ಚಿತ್ರರಂಗಕ್ಕೆ ನೀಡಿದ ಅನುಪಮ ಕೊಡುಗೆಗಾಗಿ ಕೇಂದ್ರ ಸರ್ಕಾರವು ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್‍ ಫಾಲ್ಕೆ ಪ್ರಶಸ್ತಿಯನ್ನು ಬುಧವಾರ ಸಂಜೆ ಘೋಷಿಸಿದೆ. ಈ ಪ್ರಶಸ್ತಿಯನ್ನು ಪಡೆದಿರುವ ಅನಂತ್‍ ನಾಗ್ ‍ಅವರನ್ನು ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ಹೃತ್ಫೂರ್ವಕವಾಗಿ ಅಭಿನಂದಿಸುತ್ತದೆ.

ಶ್ರೀ ರಾಘವೇಂದ್ರ ಚಿತ್ರವಾಣಿ ಮತ್ತು ಅನಂತ್ ನಾಗ್ ಅವರದ್ದು ಹಲವು ವರ್ಷಗಳ ನಂಟು. ಅನಂತ್‍ ನಾಗ್‍ ಅವರ ಹಲವು ಚಿತ್ರಗಳ ಪ್ರಚಾರ ಕಾರ್ಯವನ್ನು ನಮ್ಮ ಚಿಕ್ಕಪ್ಪನವರಾದ ಡಿ.ವಿ. ಸುಧೀಂದ್ರ ನಿರ್ವಹಿಸಿದ್ದರು. ಅವರ ನಂತರ ಅದನ್ನು ನಾವು ಮುಂದುವರೆಸಿದೆವು. ಪ್ರಚಾರದ ಜೊತೆಗೆ, ಅನಂತ್‍ ನಾಗ್‍ ಅಭಿನಯದ ಜನಪ್ರಿಯ ಚಿತ್ರವಾದ ‘ಗಣೇಶನ ಮದುವೆ’ ಸಹ ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿತ್ತು. ಚಿತ್ರರಂಗಕ್ಕೆ ಬಂದು 50 ವರ್ಷಗಳಾದ ಹಿನ್ನೆಲೆಯಲ್ಲಿ ಅನಂತ್ ನಾಗ್‍ ಅವರನ್ನು ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ಕೆಲವು ವರ್ಷಗಳ ಹಿಂದೆ ಆತ್ಮೀಯವಾಗಿ ಅಭಿನಂದಿಸುವುದರ ಜೊತೆಗೆ, ‘ಸುವರ್ಣ ಅನಂತ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಅನಂತ್ ನಾಗ್ ಅವರನ್ನು ನಟ-ನಿರ್ದೇಶಕ ರಮೇಶ್ ಅರವಿಂದ್ ಸಂದರ್ಶನ ನಡೆಸಿದರು. ಈ ಸಂದರ್ಭದಲ್ಲಿ ಅನಂತ್ ನಾಗ್‍ ಅವರು ಶ್ರೀ ರಾಘವೇಂದ್ರ ಚಿತ್ರವಾಣಿಯ ಜೊತೆಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದ್ದರು.

phalke

ಕಳೆದ ಐದು ದಶಕಗಳಿಂದ ನಿರಂತರವಾಗಿ ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ತಮ್ಮ ಅದ್ಭುತ ನಟನೆಯಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಅನಂತ್ ನಾಗ್‍ ಅವರಿಗೆ ದಾದಾ ಸಾಹೇಬ್‍ ಫಾಲ್ಕೆ ಪ್ರಶಸ್ತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ಅವರಿಗೆ ಅಭಿನಂದಿಸುವುದರ ಜೊತೆಗೆ ಅವರಿಗೆ ಆಯುಷ್ಯ, ಆರೋಗ್ಯ ಕೋರುತ್ತದೆ.

ಸುಧೀಂದ್ರ ವೆಂಕಟೇಶ್

ಶ್ರೀ ರಾಘವೇಂದ್ರ ಚಿತ್ರವಾಣಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ