`ಹೆಂಗೆ ನಾವುಎನ್ನುತ್ತಲೇ ಫೇಮಸ್

ಆದ ರಚನಾ`ಲವ್ ಮಾಕ್‌ ಟೇಲ್‌’ ಸಿನಿಮಾದಲ್ಲಿ `ಹೆಂಗೆ ನಾವು…’ ಎನ್ನುತ್ತಲೇ ಸಖತ್‌ ಫೇಮಸ್‌ ಆದ ಸ್ಯಾಂಡಲ್ ವುಡ್‌ ನಟಿ ರಚನಾ ಇಂದರ್‌ ಸದ್ದಿಲ್ಲದೆ, ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ನಟನೆಯ ಚೊಚ್ಚಲ ಸಿನಿಮಾದಲ್ಲೇ ಗಮನ ಸೆಳೆದಿರುವ ರಚನಾ, ಸಿನಿಮಾ ಆಯ್ಕೆ ವಿಷಯದಲ್ಲಿ ತುಂಬಾ ಚ್ಯೂಸಿ. ಹಸಿಬಿಸಿ ರೊಮ್ಯಾಂಟಿಕ್‌ ಸೀನ್‌ ಗಳಲ್ಲಿ ನಟಿಸಲು ನನಗಿಷ್ಟವಿಲ್ಲ. ಅವಶ್ಯಕತೆ ಇದ್ದರೆ ಮಾತ್ರ ಓಕೆ. ಆದರೆ, ನನಗೆ ಬಾರ್ಡರ್‌ ಕ್ರಾಸ್‌ ಮಾಡಲು ಇಷ್ಟವಿಲ್ಲ ಎನ್ನುವ ಈ ಬೆಡಗಿ, `ಲವ್ ಮಾಕ್‌ ಟೇಲ್‌, ಹರಿಕಥೆ ಅಲ್ಲ ಗಿರಿಕಥೆ, ಲವ್ 360, ತ್ರಿಬಲ್ ರೈಡಿಂಗ್‌, ನಾಟ್‌ ಔಟ್‌, 4  6, ನಾನು ಮತ್ತು ಗುಂಡ 2, ತೀರ್ಥರೂಪು ತಂದೆಯವರಿಗೆ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Karunya-ram-(15)

ಸದಾ ಹೊಸತನಕ್ಕೆ ತುಡಿಯುವ ಕಾರುಣ್ಯಾ

ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಖ್ಯಾತಿ ಪಡೆದಿರುವ ನಟಿ ಕಾರುಣ್ಯಾ ರಾವ್‌. `ಜ್ರಕಾಯ’ ಮತ್ತು `ಕಿರಗೂರಿನ ಗಯ್ಯಾಳಿಗಳು’ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಪರಿಚಿತರಾದರು. ಕಿಚ್ಚ ಸುದೀಪ್‌ ನಿರೂಪಣೆಯ ಕನ್ನಡ ಬಿಗ್‌ ಬಾಸ್‌ ಸೀಸನ್‌ ರ ಸ್ಪರ್ಧಿಯೂ ಆಗಿದ್ದ ಕಾರುಣ್ಯಾ, ಸದಾ ಪ್ರವಾಸಪ್ರಿಯೆ. `ರಣಭೂಮಿ, ಮನೆ ಮಾರಾಟಕ್ಕಿದೆ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಪೆಟ್ರೋಮ್ಯಾಕ್ಸ್’ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸೋಶಿಯ್‌ ಮೀಡಿಯಾದಲ್ಲೂ ಸದಾ ಆ್ಯಕ್ಟಿವ್ ‌ಆಗಿರುವ ಕಾರುಣ್ಯಾ, ತಮ್ಮ ಹೊಸ ಹೊಸ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ.

Swathishta-krishnan-14

ರಕ್ಕಸನ ಪತ್ನಿ ಸ್ವಾತಿಷ್ಟ ಕೃಷ್ಣನ್

ಸ್ಯಾಂಡಲ್ ವುಡ್‌ನ `ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿ ಯಂಗ್‌ ಬಬ್ಲಿ ಪಾತ್ರದಲ್ಲಿ ನಟಿಸಿದ್ದ ಸ್ವಾತಿಷ್ಟ ಕೃಷ್ಣನ್‌ `ರಕ್ಕಸ ಪುರದೋಳ್‌’ ಚಿತ್ರದಲ್ಲಿ ನಟರಾಜ್‌ ಬಿ. ಶೆಟ್ಟಿಯ ಪತ್ನಿಯಾಗಿ ನಟಿಸಿದ್ದಾರೆ. ಈ ಮೊದಲು ಪೊಲೀಸ್‌ ಅಧಿಕಾರಿಯ ಪತ್ನಿ ಪಾತ್ರದಲ್ಲಿ ಮಿಂಚಿದ್ದ ಅವರು, ನನಗೆ ಇಂಥದ್ದೇ ಪಾತ್ರ ಮಾಡುತ್ತೇನೆ ಎಂಬ ಚೌಕಟ್ಟು ಇಲ್ಲ. ಪಾತ್ರ ಕಂಫರ್ಟ್‌ ಆಗಿರಬೇಕು. ಚಿತ್ರಮಂದಿರದಿಂದ ಹೊರಬಂದಾಗ ನನ್ನ ಪಾತ್ರ ಜನರ ಮನದಲ್ಲಿ ಉಳಿಯಬೇಕು ಎನ್ನುತ್ತಾರೆ. ತಮಿಳಿನ 1930ರ ಕಾಲಘಟ್ಟದಲ್ಲಿ ನಡೆಯುವ ಪೀರಿಯಾಡಿಕ್‌ ಡ್ರಾಮಾ ವೆಬ್‌ ಸೀರೀಸ್‌ ನಲ್ಲೂ ನಟಿಸುತ್ತಿದ್ದಾರೆ.

Kayadu-lohar-(2)

`ಡ್ರಾಗನ್‌’ ಮೂಲಕ ಸೆನ್ಸೇಶನ್ಸೃಷ್ಟಿಸಿದ ಅಸ್ಸಾಮಿ ಚೆಲುವೆ

ಕನ್ನಡದ `ಮುಗಿಲ್ ‌ಪೇಟೆ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅಸ್ಸಾಮಿ ಚೆಲುವೆ ಕಯಾದು ಲೋಹರ್‌, ಮಲೆಯಾಳಂ ಚಿತ್ರ `ಪಳ್ಳಿ ಚಟ್ಟಂಬಿ’ಯಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ತಮಿಳಿನ ಬ್ಲಾಕ್‌ ಬಸ್ಟರ್‌ `ಡ್ರಾಗನ್‌’ ಚಿತ್ರದ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು. `ಡ್ರಾಗನ್‌’ ಚಿತ್ರದ ನಂತರ ತಮಿಳು ಚಿತ್ರರಂಗದಲ್ಲಿ ಸೆನ್ಸೇಷನ್‌ ಸೃಷ್ಟಿಸಿದ ಅವರಿಗೆ ಆರು ಚಿತ್ರಗಳು ಅವರ ನಟನೆ ಬಯಸಿ ಕ್ಯೂ ನಿಂತಿದ್ದ. ಸೋಶಿಯಲ್ ಮೀಡಿಯಾದಲ್ಲೂ ಫೇಮಸ್‌ ಆಗಿರುವ ಕಯಾದು ಮಲೆಯಾಳಂ, ತಮಿಳು, ತೆಲುಗು ಹಾಗೂ ಮರಾಠಿ ಭಾಷೆಯ ಸಿನಿಮಾಗಳಲ್ಲಿ ಬಹು ಬೇಡಿಕೆಯ ನಟಿ. ತಮ್ಮ ಬಹುಮುಖ ನಟನಾ ಕೌಶಲ್ಯದಿಂದ ಗುರುತಿಸಿಕೊಂಡಿದ್ದಾರೆ.

Nabha-Natesh-(12)

ಕನ್ನಡತಿ ನಭಾ ಡಬಲ್ ಧಮಾಕಾ

ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಟಾಲಿವುಡ್‌ ನ ಜನಪ್ರಿಯ ಹೀರೋಯಿನ್‌ ಆಗಿರುವ ನಭಾ ನಟೇಶ್‌ ಈಗ ಎರಡು ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಟಾಲಿವುಡ್‌ ನ `ಸ್ವಯಂಭು’ ಸಿನಿಮಾದಲ್ಲಿ ಸುಂದರವಲ್ಲಿ ಎಂಬ ರಾಜಕುಮಾರಿ, `ನಾಗಬಂಧಂ’ ಚಿತ್ರದಲ್ಲಿ ಪಾರ್ವತಿ ಎಂಬ ಎರಡು ಪಾತ್ರಗಳಲ್ಲಿ ತೆರೆಗೆ ಬರುತ್ತಿರುವ ನಟಿ ನಭಾ ನಟೇಶ್‌, ವಿಭಿನ್ನ ಆಯ್ಕೆಗಳ ಮೂಲಕ ಗಮನ ಸೆಳೆದಿದ್ದಾರೆ. ವಿಭಿನ್ನವಾಗಿರುವ ಪಾತ್ರಗಳನ್ನು ಮಾಡಬೇಕೆಂದು ಬೆಸ್ಟ್ ಆಯ್ಕೆಗಾಗಿ ಕಾಯುತ್ತಿದ್ದೇನೆ. ನಾನು ಥಿಯೇಟರ್‌ ಹಿನ್ನೆಲೆಯುಳ್ಳವಳಾದ ಕಾರಣ ವಿಭಿನ್ನ ಪಾತ್ರದ ನಿರೀಕ್ಷೆಯಲ್ಲಿದ್ದೇನೆ ಎನ್ನುತ್ತಾರೆ ನಭಾ ನಟೇಶ್‌.

Mouna-guddemane-(8)

ಆಟೋ ರಾಣಿಯಾಗಿ ಮೌನಾ ಮ್ಯಾಜಿಕ್

ಕನ್ನಡ ಕಿರುತೆರೆ ನಟಿ ಮೌನಾ ಗುಡ್ಡೆಮನೆ ಆಟೋ ರಾಣಿಯಾಗಿ ಬೆಂಗಳೂರು ಸುತ್ತುತ್ತಿದ್ದಾರೆ. ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾದ `ರಾಮಾಚಾರಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ಮಂಗಳೂರಿನ ಬೆಡಗಿ ಮೌನಾ, ತಮ್ಮ 17ನೇ ವಯಸ್ಸಿಗೆ ಮಾಡೆಲಿಂಗ್‌ ಗೆ ಕಾಲಿಟ್ಟರು. 2020ರಲ್ಲಿ `ಮಿಸ್‌ ಟೀನ್‌ ತುಳುನಾಡು’ ಸ್ಪರ್ಧೆಯಲ್ಲಿ ಎರಡನೇ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದ್ದರು. ಡಿಗ್ರಿ ಓದುತ್ತಿದ್ದಾಗಲೇ ಅವರಿಗೆ ಧಾರಾವಾಹಿಯಲ್ಲಿ ನಟಿಸಲು ಅವಕಾಶ ದೊರೆತಿತ್ತು. ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿರು ಮೌನಾ ಗುಡ್ಡೆಮನೆ, ಸೋಶಿಯಲ್ ಮೀಡಿಯಾದಲ್ಲೂ ಸದಾ ಆ್ಯಕ್ಟಿವ್ ‌ಆಗಿರುತ್ತಾರೆ.

Khushee-ravi-(9)

ವಿಭಿನ್ನ ಪಾತ್ರಗಳಲ್ಲಿ `ದಿಯಾಖುಷಿ

ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಖುಷಿ ರವಿಗೆ `ದಿಯಾ’ ಸಿನಿಮಾ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು. ಬ್ಯಾಕ್‌ ಟು ಬ್ಯಾಕ್‌ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಖುಷಿ ರವಿ, `ಅಯ್ಯನ ಮನೆ’ ವೆಬ್‌ ಸೀರೀಸ್‌ ನಲ್ಲಿ ಮುಖ್ಯ ಪಾತ್ರ ವಹಿಸಿದ್ದರು. `ದಿ ಗ್ರೇಟ್‌ ಸ್ಟೋರಿ ಆಫ್‌ ಸೋಡಾಬುಡ್ಡಿ’ ಚಿತ್ರದ ಮೂಲಕ ಸಿನಿಮೋದ್ಯಮಕ್ಕೆ ಕಾಲಿಟ್ಟ ಅವರು, `ಸ್ಪೂಕಿ ಕಾಲೇಜು, ಕೇಸ್‌ ಆಫ್‌ ಕೊಂಡವನ, ನೀತಿ, ಪೂರ್ಣ ಊಟಗಳು, ಮುತ್ತಣ್ಣನ ಮಗ’ ಸೇರಿದಂತೆ ಹಲವಾರು ಕಿರುಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

Manasvi-(4)

ಕಿರುತೆರೆಯ ರೌಡಿ ಬೇಬಿ ಮನಸ್ವಿ

ಸ್ಯಾಂಡಲ್ ವುಡ್‌ ನಲ್ಲಿ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾ ಮೂಕ ಸಿನಿಮೋದ್ಯಮಕ್ಕೆ ಕಾಲಿಟ್ಟಿರುವ ನಟಿ ಮನಸ್ವಿ ಈಗ ಕಿರುತೆರೆಯ `ಜೈಲಲಿತಾ’ ಧಾರಾವಾಹಿಯಲ್ಲಿ ಬಬ್ಲಿ ಪಾತ್ರದ ಮೂಲಕ ಮನೆಮಾತಾಗಿದ್ದಾರೆ. `ನಾತಿಚರಾಮಿ’ ಧಾರಾವಾಹಿ ಮೂಲಕ ಕಿರುತೆರೆಗೆ ಅಡಿಯಿಟ್ಟ ಮನಸ್ವಿಗೆ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕೆಂದು ಆಸೆ ಇದೆಯಂತೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿಯಿಂದಲೂ ಸಾಕಷ್ಟು ಅವಕಾಶಗಳು ಬರುತ್ತಿವೆ. `ಚೆಂಕೋಲ್‌’ ಸಿನಿಮಾದಲ್ಲಿ ನಟಿಸುತ್ತಿರುವ ಮನಸ್ವಿಗೆ ಕನ್ನಡದಲ್ಲಿ ಹೆಚ್ಚು ಸಾಧನೆ ಮಾಡಬೇಕೆಂಬ ಹಂಬಲವಿದೆಯಂತೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ