`ಹೆಂಗೆ ನಾವು' ಎನ್ನುತ್ತಲೇ ಫೇಮಸ್
ಆದ ರಚನಾ`ಲವ್ ಮಾಕ್ ಟೇಲ್' ಸಿನಿಮಾದಲ್ಲಿ `ಹೆಂಗೆ ನಾವು...' ಎನ್ನುತ್ತಲೇ ಸಖತ್ ಫೇಮಸ್ ಆದ ಸ್ಯಾಂಡಲ್ ವುಡ್ ನಟಿ ರಚನಾ ಇಂದರ್ ಸದ್ದಿಲ್ಲದೆ, ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ನಟನೆಯ ಚೊಚ್ಚಲ ಸಿನಿಮಾದಲ್ಲೇ ಗಮನ ಸೆಳೆದಿರುವ ರಚನಾ, ಸಿನಿಮಾ ಆಯ್ಕೆ ವಿಷಯದಲ್ಲಿ ತುಂಬಾ ಚ್ಯೂಸಿ. ಹಸಿಬಿಸಿ ರೊಮ್ಯಾಂಟಿಕ್ ಸೀನ್ ಗಳಲ್ಲಿ ನಟಿಸಲು ನನಗಿಷ್ಟವಿಲ್ಲ. ಅವಶ್ಯಕತೆ ಇದ್ದರೆ ಮಾತ್ರ ಓಕೆ. ಆದರೆ, ನನಗೆ ಬಾರ್ಡರ್ ಕ್ರಾಸ್ ಮಾಡಲು ಇಷ್ಟವಿಲ್ಲ ಎನ್ನುವ ಈ ಬೆಡಗಿ, `ಲವ್ ಮಾಕ್ ಟೇಲ್, ಹರಿಕಥೆ ಅಲ್ಲ ಗಿರಿಕಥೆ, ಲವ್ 360, ತ್ರಿಬಲ್ ರೈಡಿಂಗ್, ನಾಟ್ ಔಟ್, 4 6, ನಾನು ಮತ್ತು ಗುಂಡ 2, ತೀರ್ಥರೂಪು ತಂದೆಯವರಿಗೆ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸದಾ ಹೊಸತನಕ್ಕೆ ತುಡಿಯುವ ಕಾರುಣ್ಯಾ
ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಖ್ಯಾತಿ ಪಡೆದಿರುವ ನಟಿ ಕಾರುಣ್ಯಾ ರಾವ್. `ಜ್ರಕಾಯ' ಮತ್ತು `ಕಿರಗೂರಿನ ಗಯ್ಯಾಳಿಗಳು' ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಪರಿಚಿತರಾದರು. ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ ರ ಸ್ಪರ್ಧಿಯೂ ಆಗಿದ್ದ ಕಾರುಣ್ಯಾ, ಸದಾ ಪ್ರವಾಸಪ್ರಿಯೆ. `ರಣಭೂಮಿ, ಮನೆ ಮಾರಾಟಕ್ಕಿದೆ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಪೆಟ್ರೋಮ್ಯಾಕ್ಸ್' ಸಿನಿಮಾಗಳಲ್ಲೂ ನಟಿಸಿದ್ದಾರೆ. ಸೋಶಿಯ್ ಮೀಡಿಯಾದಲ್ಲೂ ಸದಾ ಆ್ಯಕ್ಟಿವ್ ಆಗಿರುವ ಕಾರುಣ್ಯಾ, ತಮ್ಮ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ.

ರಕ್ಕಸನ ಪತ್ನಿ ಸ್ವಾತಿಷ್ಟ ಕೃಷ್ಣನ್
ಸ್ಯಾಂಡಲ್ ವುಡ್‌ನ `ಒಂದು ಸರಳ ಪ್ರೇಮಕಥೆ' ಸಿನಿಮಾದಲ್ಲಿ ಯಂಗ್ ಬಬ್ಲಿ ಪಾತ್ರದಲ್ಲಿ ನಟಿಸಿದ್ದ ಸ್ವಾತಿಷ್ಟ ಕೃಷ್ಣನ್ `ರಕ್ಕಸ ಪುರದೋಳ್' ಚಿತ್ರದಲ್ಲಿ ನಟರಾಜ್ ಬಿ. ಶೆಟ್ಟಿಯ ಪತ್ನಿಯಾಗಿ ನಟಿಸಿದ್ದಾರೆ. ಈ ಮೊದಲು ಪೊಲೀಸ್ ಅಧಿಕಾರಿಯ ಪತ್ನಿ ಪಾತ್ರದಲ್ಲಿ ಮಿಂಚಿದ್ದ ಅವರು, ನನಗೆ ಇಂಥದ್ದೇ ಪಾತ್ರ ಮಾಡುತ್ತೇನೆ ಎಂಬ ಚೌಕಟ್ಟು ಇಲ್ಲ. ಪಾತ್ರ ಕಂಫರ್ಟ್ ಆಗಿರಬೇಕು. ಚಿತ್ರಮಂದಿರದಿಂದ ಹೊರಬಂದಾಗ ನನ್ನ ಪಾತ್ರ ಜನರ ಮನದಲ್ಲಿ ಉಳಿಯಬೇಕು ಎನ್ನುತ್ತಾರೆ. ತಮಿಳಿನ 1930ರ ಕಾಲಘಟ್ಟದಲ್ಲಿ ನಡೆಯುವ ಪೀರಿಯಾಡಿಕ್ ಡ್ರಾಮಾ ವೆಬ್ ಸೀರೀಸ್ ನಲ್ಲೂ ನಟಿಸುತ್ತಿದ್ದಾರೆ.

`ಡ್ರಾಗನ್' ಮೂಲಕ ಸೆನ್ಸೇಶನ್ ಸೃಷ್ಟಿಸಿದ ಅಸ್ಸಾಮಿ ಚೆಲುವೆ
ಕನ್ನಡದ `ಮುಗಿಲ್ ಪೇಟೆ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅಸ್ಸಾಮಿ ಚೆಲುವೆ ಕಯಾದು ಲೋಹರ್, ಮಲೆಯಾಳಂ ಚಿತ್ರ `ಪಳ್ಳಿ ಚಟ್ಟಂಬಿ'ಯಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ತಮಿಳಿನ ಬ್ಲಾಕ್ ಬಸ್ಟರ್ `ಡ್ರಾಗನ್' ಚಿತ್ರದ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು. `ಡ್ರಾಗನ್' ಚಿತ್ರದ ನಂತರ ತಮಿಳು ಚಿತ್ರರಂಗದಲ್ಲಿ ಸೆನ್ಸೇಷನ್ ಸೃಷ್ಟಿಸಿದ ಅವರಿಗೆ ಆರು ಚಿತ್ರಗಳು ಅವರ ನಟನೆ ಬಯಸಿ ಕ್ಯೂ ನಿಂತಿದ್ದ. ಸೋಶಿಯಲ್ ಮೀಡಿಯಾದಲ್ಲೂ ಫೇಮಸ್ ಆಗಿರುವ ಕಯಾದು ಮಲೆಯಾಳಂ, ತಮಿಳು, ತೆಲುಗು ಹಾಗೂ ಮರಾಠಿ ಭಾಷೆಯ ಸಿನಿಮಾಗಳಲ್ಲಿ ಬಹು ಬೇಡಿಕೆಯ ನಟಿ. ತಮ್ಮ ಬಹುಮುಖ ನಟನಾ ಕೌಶಲ್ಯದಿಂದ ಗುರುತಿಸಿಕೊಂಡಿದ್ದಾರೆ.





