Sj*

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ವೃತ್ತಿಜೀವನದ ಅತ್ಯಂತ ಸವಾಲಿನ ಪಾತ್ರಗಳಲ್ಲಿ ಒಂದಕ್ಕೆ ಸಜ್ಜಾಗಿದ್ದಾರೆ. ಚೊಚ್ಚಲ ನಿರ್ದೇಶಕ ರವೀಂದ್ರ ಪುಳ್ಳೆ ನಿರ್ದೇಶನದ ಹಾಗೂ Unformula Films ನಿರ್ಮಾಣದ ಪ್ಯಾನ್ ಇಂಡಿಯಾ ಆ್ಯಕ್ಷನ್ ಡ್ರಾಮಾ ‘ಮೈಸಾ’ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ.

ದೊಡ್ಡ ಮಟ್ಟದ ಆ್ಯಕ್ಷನ್ ದೃಶ್ಯಗಳು ಹಾಗೂ ತಾಂತ್ರಿಕವಾಗಿಯೂತುಂಬಾ ಶ್ರಮ ವಹಿಸಿ ‘ಮೈಸಾ’ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಲಾಗುತ್ತಿದೆ.

ಟೀಸರ್ ಆರಂಭವಾಗುವುದು ಮೈಸಾ ಪಾತ್ರದ ಧ್ವನಿಯೊಂದಿಗೆ. “ನಾನು ಸುಸ್ತಾಗಿದ್ದೇನೆ, ನಾನು ನಿಂತುಬಿಟ್ಟಿದ್ದೇನೆ, ನಾನು ಸೋತಿದ್ದೇನೆ” ಎಂಬ ಮಾತುಗಳ ಮೂಲಕ ಮೈಸಾಳ ತೀವ್ರ ಹೋರಾಟದ ಜಗತ್ತಿನ ಪರಿಚಯವಾಗುತ್ತದೆ.

ರಶ್ಮಿಕಾ ಮೈಸಾ ಚಿತ್ರದಲ್ಲಿ ಒಬ್ಬ ಧೈರ್ಯಶಾಲಿ, ಅಂಜದ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಾರೆ. ತನ್ನ ಮುಂದೆ ಬರುವ ಸವಾಲುಗಳು ಮತ್ತು ಸಮಾಜದ ಅಡೆತಡೆಗಳಿಗೆ ಹೆದರದೆ, ಒಂಟಿ ಹೋರಾಡುವ ಪಾತ್ರ ಇದಾಗಿದೆ. ಪ್ರತಿಯೊಂದು ಅಡೆತಡೆಯನ್ನೂ ಎದುರಿಸಲು ಸಿದ್ಧಳಾಗಿರುವ ಮೈಸಾ, ಕೇವಲ ಯುದ್ಧ ಮಾಡುವವಳಲ್ಲ — ಯುದ್ಧದ ದಿಕ್ಕನ್ನೇ ನಿರ್ಧರಿಸುವ ಅಸ್ತ್ರವಾಗಿದ್ದಾಳೆ.

misa

ಚಿತ್ರದಲ್ಲಿ ರಶ್ಮಿಕಾ ಗೋಂಡ್ ಬುಡಕಟ್ಟು ಮಹಿಳೆಯ ಪಾತ್ರ ನಿರ್ವಹಿಸಿದ್ದಾರೆ. ಈ ಪಾತ್ರಕ್ಕಾಗಿ ಅವರು ಕಠಿಣ ದೈಹಿಕ ತರಬೇತಿ ಪಡೆದಿದ್ದು, ಹಲವು ಸವಾಲಿನ ಆ್ಯಕ್ಷನ್ ದೃಶ್ಯಗಳನ್ನು ಮಾಡಿದ್ದಾರೆ.

ಬೈಕ್ ರೈಡಿಂಗ್‌ನಿಂದ ಹಿಡಿದು ಸಾಹಸಮಯ ಅಂಡರ್‌ವಾಟರ್ ಆ್ಯಕ್ಷನ್ ಸೀಕ್ವೆನ್ಸ್‌ಗಳವರೆಗೆ ರಶ್ಮಿಕಾ ತಮ್ಮನ್ನು ಸಂಪೂರ್ಣವಾಗಿ ಪಾತ್ರಕ್ಕೆ ಸಮರ್ಪಿಸಿಕೊಂಡಿದ್ದಾರೆ. ಅವರ ತೀವ್ರತೆ, ಟೀಸರ್‌ನಲ್ಲಿ ಎದ್ದು ಕಾಣುತ್ತದೆ.

ಈಶ್ವರಿ ರಾವ್, ಗುರು ಸೋಮಸುಂದರಂ, ರಾವ್ ರಮೇಶ್, ರಾಹುಲ್ ರವೀಂದ್ರನ್, ಸಮುದ್ರಕನಿ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ನಿರ್ದೇಶಕ ರವೀಂದ್ರ ಪುಳ್ಳೆ ಅವರ ಕಲ್ಪನೆ ಮತ್ತು ಅದ್ಧೂರಿ ದೃಷ್ಟಿಕೋನ ಟೀಸರ್‌ನಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ವಿಶೇಷವಾಗಿ ನೀರಿನೊಳಗಿನ ದೃಶ್ಯಗಳು ಗಮನ ಸೆಳೆಯುತ್ತವೆ.ಛಾಯಾಗ್ರಾಹಕ ಶ್ರೇಯಾಸ್ ಕೆ. ಕೃಷ್ಣ ನಿರ್ದೇಶಕರ ದೃಷ್ಟಿಕೋನವನ್ನು ಅದ್ಭುತ ದೃಶ್ಯಗಳಾಗಿ ಕಟ್ಟಿಕೊಟ್ಟಿದ್ದಾರೆ. ಜೇಕ್ಸ್ ಬಿಜಾಯ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕ್ಕಿದೆ . ಅಂತರರಾಷ್ಟ್ರೀಯ ಆ್ಯಕ್ಷನ್ ಕೊರಿಯೋಗ್ರಾಫರ್ ಕೆಚಾ ಅವರ ಆ್ಯಕ್ಷನ್ ವಿನ್ಯಾಸವೂ ಗಮನ ಸೆಳೆಯುತ್ತದೆ. ‘ಮೈಸಾ’ ಚಿತ್ರವು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ನವೆಂಬರ್ 27, 2026ರಂದು ಏಕಕಾಲದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ