– ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ನಾಡಿನ ಕಲೆ ಸಂಸ್ಕೃತಿ ಸಾಹಿತ್ಯವನ್ನು ಉಳಿಸಲು, ಬೆಳೆಸಲು, ವಿಶ್ವದಾದ್ಯಂತ ಪಸರಿಸುವುದಕ್ಕಾಗಿಯೇ ಸ್ಥಾಪನೆಯಾದ ಸ್ವಾಯತ್ತ ಸಂಸ್ಥೆ. ಈ ಸಂಸ್ಥೆಯಲ್ಲಿ ನಡೆಯುವ ಮತ್ತೊಂದು ಮಹೋನ್ನತ ಕಾರ್ಯವೆಂದರೆ ದತ್ತಿನಿಧಿ ಪ್ರಶಸ್ತಿಗಳು. ತಮ್ಮ ಕಾರ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹೋನ್ನತ ವ್ಯಕ್ತಿಗಳ ಹೆಸರಿನಲ್ಲಿ ದತ್ತಿ ಸ್ಥಾಪಿಸಿ ಆ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅವರಿಗೆ ದತ್ತಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಅನೂಚಾನವಾಗಿ ನಡೆಸಿಕೊಂಡು ಬಂದಿದೆ. ಅಂತೆಯೇ ಚಲನಚಿತ್ರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರ ದತ್ತಿನಿಧಿಯನ್ನು ಸಹ ಪರಿಷತ್ತಿನಲ್ಲಿ ಇಡಲಾಗಿದೆ. ಅವುಗಳಲ್ಲಿ ಒಂದು ಡಾ. ವಿಷ್ಣುವರ್ಧನ್ ಕಲಾದತ್ತಿ.

1001834784

ಈ ದತ್ತಿನಿಧಿಯನ್ನು ಮಾನ್ಯ ಕೇಂದ್ರ ಸಚಿವರಾಗಿದ್ದ ಶ್ರೀ ಅನಂತಕುಮಾರ್ ಹಾಗೂ ಬೆಂಗಳೂರು ಮ‌ಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಶ್ರೀ ಡಿ. ವೆಂಕಟೇಶ್ ಮೂರ್ತಿಯವರು ಕನ್ನಡ ಚಿತ್ರರಂಗದ ಮೇರುನಟ ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಸ್ಥಾಪಿಸಿದ್ದಾರೆ. ಚಿತ್ರರಂಗ, ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಸಾಧನೆಗೈದ ಕಲಾವಿದರಿಗೆ ಈ ದತ್ತಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ನಗದು, ಪ್ರಶಸ್ತಿ ಪತ್ರ, ಫಲಕ ಹಾಗೂ ಫಲತಾಂಬೂಲವನ್ನು ಒಳಗೊಂಡಿರುತ್ತದೆ.

1001834788

ಈ ಬಾರಿಯ ಡಾ. ವಿಷ್ಣುವರ್ಧನ್ ಕಲಾ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆಪ್ಟೆಂಬರ್ ೧೮, ಶುಕ್ರವಾರ ಸಂಜೆ ನಗರದ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಬಾರಿ  ೨೦೨೦ರ ಸಾಲಿನಿಂದ ೨೦೨೬ ರವರೆಗಿನ ಪ್ರಶಸ್ತಿಗಳನ್ನು ಕೊಡಮಾಡಲಾಯಿತು.

1001834787

ಸಮಾರಂಭದ  ಉದ್ಘಾಟನೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹೆಸರಾಂತ ನಿರ್ದೇಶಕ ಶ್ರೀ ಗಿರೀಶ್ ಕಾಸರವಳ್ಳಿಯವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಡಿ. ವೆಂಕಟೇಶ್ ಮೂರ್ತಿಯವರು ಆಗಮಿಸಿದ್ದರು. ಈ ದತ್ತಿ ಪ್ರಶಸ್ತಿ ಕಾರ್ಯಕ್ರಮವು   ವಿಷ್ಣು ಸೇನಾ ಸಮಿತಿಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಸಮಿತಿಯ ಅಧ್ಯಕ್ಷರಾದ ಶ್ರೀ ವೀರಕಪುತ್ರ ಶ್ರೀನಿವಾಸ್ ಅವರು ಉಪಸ್ಥಿತರಿದ್ದು ಅತಿಥಿಗಳಿಗೆ ಸ್ವಾಗತ ಕೋರಿದರು.

1001834785

೨೦೨೦ರ ಪ್ರಶಸ್ತಿಯನ್ನು ಹೆಸರಾಂತ ನಿರ್ದೇಶಕ ಶ್ರೀ ಎಚ್ ಆರ್ ಭಾರ್ಗವ ಅವರಿಗೆ, ೨೦೨೧ರ ಪ್ರಶಸ್ತಿಯನ್ನು ಪ್ರಸಿದ್ಧ ನಟ, ನಿರ್ಮಾಪಕ ಶ್ರೀ ಶ್ರೀನಿವಾಸ ಮೂರ್ತಿ ಅವರಿಗೆ, ೨೦೨೨ರ ಪ್ರಶಸ್ತಿಯನ್ನು ಜನಪ್ರಿಯ ಸಂಗೀತ ನಿರ್ದೇಶಕ, ಸಾಹಿತ್ಯ ರಚನಕಾರರಾದ ಡಾ. ಹಂಸಲೇಖ ಅವರಿಗೆ, ೧೦೨೩ರ ಪ್ರಶಸ್ತಿಯನ್ನು ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಶ್ರೀ ಸುಂದರ್ ರಾಜ್ ಅವರಿಗೆ, ೨೦೨೪ರ ಪ್ರಶಸ್ತಿಯನ್ನು ಹೆಸರಾಂತ ಕಲಾವಿದೆ ಹಾಗೂ ರಾಜಕಾರಣಿ ಡಾ.

1001834786

ಜಯಮಾಲಾ ರಾಮಚಂದ್ರ ಅವರಿಗೆ, ೨೦೨೫ರ ಪ್ರಶಸ್ತಿಯನ್ನು ನಿರ್ಮಾಪಕ ನಿರ್ದೇಶಕ ಬರಹಗಾರರು ನಟರೂ ಆಗಿರುವ ಡಾ. ಎಸ್. ನಾರಾಯಣ್ ಅವರಿಗೆ ಮತ್ತು ೨೦೨೬ರ ಪ್ರಶಸ್ತಿಯನ್ನು ಸುಪ್ರಸಿದ್ಧ ನಟಿ ಶ್ರೀಮತಿ ಶ್ರುತಿ ಅವರಿಗೆ ನೀಡಲಾಯಿತು. ಇವರೆಲ್ಲರಿಗೂ ಶ್ರೀಯುತ ಗಿರೀಶ್ ಕಾಸರವಳ್ಳಿಯವರು ವೇದಿಕೆಯಲ್ಲಿದ್ದ ಇನ್ನಿತರ ಅತಿಥಿಗಳೊಂದೊಡಗೂಡಿ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿಗಳಾದ ಶ್ರೀ ಕೆ ಎ ದಯಾನಂದ ಅವರು ವಹಿಸಿದ್ದರು. ಶ್ರೀಮತಿ ನಾಗಚಂದ್ರಿಕಾ ಭಟ್  ತಂಡದವರು ಭಾವಗೀತೆ, ಚಲನಚಿತ್ರ ಗೀತೆಗಳನ್ನು ಹಾಡಿ ರಂಜಿಸಿದರು. ಕಾಶಿ ಹಾಗೂ ಸಂಧ್ಯಾ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ