ಪರವಶಗೊಳಿಸುವ ಮಾದಕತೆ : ಮಿಯಾ ಬ್ಲಾಂಡ್‌ ಳ ಹೊಸ ಆಲ್ಬಂ, ಈ ಚಿತ್ರದಲ್ಲಿ ಅವಳು ಕಾಣುತ್ತಿರುವಷ್ಟೇ ಸೆಕ್ಸೀ  ಪರವಶಗೊಳಿಸುವ ಮಾದಕತೆ ಹೊಂದಿದೆ. ಗ್ರಾಮೀ ಅವಾರ್ಡ್‌ ಗೆದ್ದಂಥ ಮಿಯಾ ಇಂದಿನ ಕಾಲದ ಸುಪ್ರಸಿದ್ಧ ಪಾಪ್‌ ಗಾಯಕಿ. ತನಗೆ ಬರುವ ಕೋಟ್ಯಂತರ ಡಾಲರ್‌ ಗಳಿಕೆಯಿಂದ ಅವಳು ಇಂಥ ಗ್ಲಾಮರಸ್‌ಲೈಫ್‌ ಸ್ಟೈಲ್ ‌ನ್ನು ತನ್ನದಾಗಿಸಿಕೊಂಡಿದ್ದಾಳೆ. `ಇಟ್‌ ಈಸ್‌ ಆಲ್ ಅಬೌಟ್‌ ಮೀ…. ಮೈ ಫಸ್ಟ್ ನೈಟ್‌ ವಿತ್‌ ಯೂ…’ ಇತ್ಯಾದಿ ಹಾಡುಗಳಿಂದ ಅಂತಾರಾಷ್ಟ್ರೀಯ ಮಟ್ಟದ ಪಡ್ಡೆಹೈಕಳ ನಿದ್ದೆಗೆಡಿಸಿದ್ದಾಳೆ! ಕೆಲವನ್ನು ನೋಡಿ, ಕೆಲವನ್ನು ಕೇಳಿ…

dr-radwa-saad-founder-of-dent

ಪರವಶರಾಗಿರಿ! ಗಾಬರಿಗೊಳ್ಳಬೇಡಿ! : ಡೆಂಟಿಸ್ಟ್ರಿಯಲ್ಲಿ ಬ್ಯಾಲೆ ‌ಡ್ಯಾನ್ಸ್ ಗೆ ಸ್ಕೋಪ್‌ ಇಲ್ಲ ಎಂಬುದು ಗೊತ್ತಿರುವ ವಿಷಯ. ಆದರೆ ಪ್ರಾಕ್ಟೀಸ್‌ ಉನ್ನತ ಮಟ್ಟದ್ದಾಗಿದ್ದರೆ ಡೆಂಟಲ್ ಬ್ಲಾಂಚೆ ಡೆಂಟಲ್ ವೈದ್ಯರು ಸಹ ತಮ್ಮ ಪಾರ್ಟ್‌ ನರ್ಸ್‌ ಹಾಗೂ ಉತ್ತಮ ರೋಗಿಗಳನ್ನು ಗುರುತಿಸಿ, ಖುಷಿಪಡಿಸಲು ದೊಡ್ಡ ಹಾಲ್ ನಲ್ಲಿ ಇಂಥವನ್ನು ಆಯೋಜಿತಗೊಳಿಸಿದ್ದಾರೆ. ಡೆಂಟಲ್ ಪ್ರೊಸೀಜರ್ ಇದೀಗ ಕೇವಲ ಹಲ್ಲು ಕೀಳುವ ಕಾಯಕ ಮಾತ್ರವಲ್ಲ…. ಬ್ಯೂಟಿ ಇಂಡಸ್ಟ್ರಿಗೂ ದಾಂಗುಡಿ ಇಟ್ಟಿದೆ. ಯಾರ ಹಲ್ಲು ವಕ್ರವಕ್ರವಾಗಿವೆಯೋ ಇಂಥವರ ಬಳಿ ಬಂದು ಅದನ್ನು ನೇರ್ಪಾಗಿಸಿಕೊಳ್ಳುತ್ತಾರೆ. ನೀವು ಸಹ ಇದೀಗ ಡೆಂಟಲ್ ಕ್ಲಿನಿಕ್ಸ್ ಅಂದ್ರೆ ಗಾಬರಿಗೊಳ್ಳುವ ಅಗತ್ಯವಿಲ್ಲ, ಇದೀಗ ಆಲ್ ಮೋಸ್ಟ್ ಪೆಯ್ನ್ ಲೆಸ್‌ ಆಗಿದೆ.

hillstone-law-team-conference-r

ಇಷ್ಟೊಂದು ಬ್ಲ್ಯಾಕ್ಕೋಟ್ಗೌನಿನವರು : ಅಬ್ಬಬ್ಬಾ… ಇಲ್ಲೇನು ನಡೆಯುತ್ತಿದೆ? ಇದು ಹಿಲ್ ‌ಸ್ಟೋನ್‌ ಫಾರ್ಮಿನ ಲಾಯರ್ಸ್‌ ಗಳ ಸಭೆ. ಇವರು ಕೇವಲ ಊಬರ್‌ಓಲಾಗಳಂಥ ಲಿಫ್ಟ್ ರೈಡ್‌ ಒದಗಿಸುವವರ ಕೇಸ್‌ ಅಷ್ಟೇ ನಡೆಸುತ್ತಾರೆ. ರೈಡ್‌ ಒದಗಿಸಿದವರು ಕಾಟ ಕೊಟ್ಟಾಗ, ಗ್ರಾಹಕರು ಅವರ ವಿರುದ್ಧ ಭಾರಿ ಕೇಸ್‌ ಹೂಡುತ್ತಾರೆ. ಈ ಕ್ಯಾಶ್‌ ರಿಚ್‌ ರೈಡ್‌ ಕಂಪನಿಗಳು ಕೊನೆಯವರೆಗೂ ಪ್ರತಿ ಕೇಸನ್ನೂ ಬಿಡದೆ ಹೋರಾಡುತ್ತವೆ. ಏಕೆಂದರೆ ಇವು ಸರ್ವೀಸ್‌ ನೀಡುವುದು ಕಡಿಮೆ, ಹಣ ಗಳಿಸುವುದೊಂದೇ ಗುರಿ. ಅಸಲಿಗೆ ರೈಡ್‌ ಶೇರ್‌ ಕಂಪನಿಗಳ ಸಾಫ್ಟ್ ವೇರ್‌ ಬಲು ದುಬಾರಿ ಹಾಗೂ ಕಾಂಪ್ಲಿಕೇಟೆಡ್‌. ಉತ್ತಮ ಗಳಿಕೆ ಇಲ್ಲದಿದ್ದಾಗ, ಸರ್ವೈವಲ್ ‌ಆಗಲು ಸಾಧ್ಯವಿಲ್ಲ. ಇವು ವಿಶ್ವದೆಲ್ಲೆಡೆ ಹಳದಿ ಯಾ ಹಳದಿಕಪ್ಪಿನ ಟ್ಯಾಕ್ಸಿಗಳನ್ನು ಮಾಯವಾಗಿಸಿವೆ. ಹೀಗಾಗಿ ಗ್ರಾಹಕರು ಒಂದು ವಿಧದಲ್ಲಿ ಇವುಗಳ ಗುಲಾಮರಾಗಿದ್ದಾರೆ.

kendra

ನೀವೇನೂ ಬೆರಗಾಗದಿರಿ : `ಜೇಮ್ಸ್ ಬಾಂಡ್‌’ನ `ಲೈಸೆನ್ಸ್ ಟು ಕಿಲ್‌’ ಚಿತ್ರವನ್ನು ಜನ ಇನ್ನೂ ಮರೆತಿರಲಿಕ್ಕಿಲ್ಲ. 2 ಪೀಳಿಗೆಗಳವರೆಗೂ ಆ್ಯಕ್ಷನ್‌, ಗರ್ಲ್ಸ್, ಗ್ಲಾಮರ್‌ಗನ್ಸ್ ಚಿತ್ರಗಳನ್ನು ಕೋಟ್ಯಂತರ ವೀಕ್ಷಕರು ಗಮನಿಸಿದ್ದಾರೆ, ಇಂದಿಗೂ ಇದರ ಅಭಿಮಾನಿಗಳಾಗಿ ಉಳಿದಿದ್ದಾರೆ. ಇದೇ ತರಹವೇ ಕೇಂಡ್ರಾ ಎರಿಕಾ ಮ್ಯೂಸಿಕ್‌ ಆಲ್ಪಂ ರೆಡಿ ಮಾಡಿಸಿದ್ದಾಳೆ. `ಲೈಸೆಲ್ಸ್ ಟು ಥ್ರಿಲ್.’ ಇದರ ಮ್ಯೂಸಿಕ್‌ ಈಕೆಯದೆಂಬುದು ಖರೆ, ಇದರ ವಿಡಿಯೋಗಳಲ್ಲಿ ಗರ್ಲ್ಸ್, ಗ್ಲಾಮರ್‌ಸೆಕ್ಸ್ ಬೆರಕೆಗೇನೂ ಕಡಿಮೆ ಇಲ್ಲ. ಈಕೆ ಇದೀಗ ಮಿಸ್‌ ಜೇಮ್ಸ್ ಬಾಂಡ್‌ ಆಗಿ ಹೀಗೆ ಮಿರಿಮಿರಿ ಮಿಂಚುತ್ತಿದ್ದಾಳ! ಇಷ್ಟರಲ್ಲಿ ಬೆಳ್ಳಿಪರದೆಗೂ ಬರಲಿದ್ದಾಳೆ! ಈಕೆಯ ಲೈವ್ ‌ಶೋ ಟಿಕೆಟ್‌ ಅಂತೂ ಬಲು ದುಬಾರಿ. ಗ್ಲಾಮರ್‌ ಬಯಸುವವರು ಅದಕ್ಕೆ ತಲೆ ಕೆಡಿಸಿಕೊಳ್ಳುವವರೇ….?

1773028460219

ಲುಕ್ಸಹ ಸ್ಟೈಲ್ ಸಹ : ಇದೀಗ ಮುಂದಿನ ಹಬ್ಬಗಳಲ್ಲಿ ಯಾ ಡ್ರೆಸ್‌ ರೆಡಿ ಮಾಡಿಸುವುದೆಂದು ಚಿಂತಿಸದಿರಿ. ಅಂಥ ಹೊಸ ಲುಕ್ಸ್ ಗಾಗಿ ಇದೀಗ ಹೊಸತು ಬಂದಿದೆ! ಮಿಡ್‌ ಈಸ್ಟ್ ನ ಮುಸ್ಲಿಂ ದೇಶಗಳಲ್ಲಿ ಹೆಂಗಸರನ್ನು ಕಪ್ಪು ಬುರ್ಖಾದಲ್ಲಿ ಮುಳುಗಿಸಿಟ್ಟಿದ್ದರೂ, ಕೇವಲ ಹೆಂಗಸರ ಗುಂಪು ಉಳಿದಾಗ ಈ ಬುರ್ಖಾ ಮಾಯವಾಗುತ್ತದೆ. ಆ ಸಂದರ್ಭದಲ್ಲಿ ಡ್ರೆಸ್‌ ಗ್ಲಾಮರಸ್‌ ಆಗಿರದಿದ್ದರೆ, ಎಲ್ಲರ ಮುಂದೆ ಹಳ್ಳಿಗುಗ್ಗು ಆಗಬೇಕಾದೀತು. ಹೀಗಾಗಿ ಪ್ರತಿ ಹಬ್ಬಕ್ಕೂ ಮೊದಲೇ ಇಂಥ ಮಾಡ್‌ ಡ್ರೆಸೆಸ್‌ ಗಾಗಿ ಭಾರೀ ಶಾಪಿಂಗ್ ನಡೆಯುತ್ತದೆ. ಇದರಿಂದ ಈ ಹುಡುಗಿಯರಿಗೆ ಸಿಗುವ ಲುಕ್ಸ್ ಪಾಶ್ಚಿಮಾತ್ಯರನ್ನೂ ನಾಚಿಸುವಂತಿದೆ. ಇಲ್ಲಿನ ಡ್ರೆಸ್‌ ನೋಡಿ ಇವೆಷ್ಟು ದುಬಾರಿ ಇರಬಹುದು ಎಂದು ನೀವೇ ಊಹಿಸಿ.

kimtop50

ಹಣ, ಹೆಸರು, ಕೀರ್ತಿ…. ಇನ್ನೇನು ಬೇಕು? : ಕಿಮ್ ಬೋಲ್ ಛಿ ಎಂಬ ಈ ಮಾಡಲ್ ‌ಹಾಂಕಾಂಗಿನವಳು. ಈಕೆ ಅಲ್ಲಿಂದ ಟ್ರಂಪಣ್ಣನ ಊರಿಗೆ ಹಾರಿ ಭಾರಿ ಹಣ, ಹೆಸರು, ಕೀರ್ತಿ ಗಳಿಸಿದ್ದಾಳೆ. 30 ವರ್ಷಗಳಿಂದ ಈಕೆ ನ್ಯೂಯಾರ್ಕ್‌ ನ ಫ್ಯಾಷನ್ ಇಂಡಸ್ಟ್ರಿಯಲ್ಲಿ ಹೊಸ ಹೊಸ ಡಿಸೈನ್ಸ್ ರೂಪಿಸುತ್ತಿದ್ದಾಳೆ. ಹೀಗಾಗಿ ಈಕೆಗೆ `ಇಂಟರ್‌ ನ್ಯಾಶನಲ್ ಅಸೋಸಿಯೇಶನ್‌ ಆಫ್ ಟಾಪ್‌ ಪ್ರೊಫೆಶನ್‌’ ಕಡೆಯಿಂದ 50 ಫಿಯರ್‌ ಲೆಸ್‌ ಪ್ರೊಫೆಶನ್ಸ್‌ ನಲ್ಲಿ ಒಬ್ಬಳೆಂದು ಆರಿಸಲ್ಪಟ್ಟಿದ್ದಾಳೆ! ಈ ನಡು ವಯಸ್ಸಿನಲ್ಲೂ ಈಕೆ ಸ್ಮಾರ್ಟ್‌ಸೆಕ್ಸಿಯಾಗಿ ಮಿಂಚುತ್ತಿದ್ದಾಳೆ, ಎನರ್ಜಿ ಬಗ್ಗೆ ಕೇಳುವುದೇ ಬೇಡ. ಇದು ಇಂದಿನ ನಿರಾಶಾವಾದ ಮಂಡಿಸುವ ತರುಣಿಯರಿಗೆ ಉತ್ತಮ ಮೆಸೇಜ್‌ ಆಗಿದೆ. ಏನೇ ಆಗಲಿ, ನಿಮ್ಮ  ಪ್ಯಾಶನ್‌ವರ್ಕ್‌ ಬಿಟ್ಟುಕೊಡಬೇಡಿ ಅಂತಾಳೆ. ಗಂಡ ಮನೆ ಮಕ್ಕಳು ಅನ್ನುನ ಕಾಲ ಹಿಂದಕ್ಕಾಯಿತು, ಯಶಸ್ಸು ಅಂಬುದೇನಿದ್ದರೂ ಹೊರ ಪ್ರಪಂಚದಿಂದಲೇ ಸಿಗಬೇಕು. ಇಂದಿನ ಜೆನ್‌ Z  ಹುಡುಗಿಯರಿಗೆ ಇದನ್ನು ಪರೋಕ್ಷವಾಗಿ ಹೇಳಬೇಕೇ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ