ಶೈಕ್ಷಣಿಕ ವರ್ಷದ ದಸರಾ ರಜೆಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ರಾಜ್ಯದ ಶಾಲೆಗಳಿಗೆ ಅಕ್ಟೋಬರ್ 3 ರಿಂದ 21 ರವರೆಗೆ 19 ದಿನಗಳ ಕಾಲ ದಸರಾ ರಜೆ ಘೋಷಿಸಲಾಗಿದೆ.
ಅ. 2ರ ಗಾಂಧಿ ಜಯಂತಿಯ ಬಳಿಕ ರಜೆ ಆರಂಭವಾಗಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಒಟ್ಟು 119 ರಜೆ ಹಾಗೂ 245 ಕರ್ತವ್ಯ ದಿನಗಳಿರಲಿವೆ. ಇನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಈ ರಜೆ ಅನ್ವಯವಾಗುತ್ತದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ, ಅಕ್ಟೋಬರ್ 3, 2026 ಶನಿವಾರ ರಜೆ ಆರಂಭವಾಗುತ್ತದೆ. ಇನ್ನು ಅಕ್ಟೋಬರ್ 21ರ ಬುಧವಾರದ ವಿಜಯದಶಮಿಯಂದು ರಜೆ ಮುಕ್ತಾಯವಾಗುವುದರೊಂದಿಗೆ, ಅಕ್ಟೋಬರ್ 22ರ ಗುರುವಾರದಂದು ಶಾಲೆಗಳು ಪುನರಾರಂಭಗೊಳ್ಳುತ್ತದೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ಸಾರ್ವತ್ರಿಕ ರಜೆ ಇರಲಿದ್ದು, ಅದರ ಮರುದಿನದಿಂದಲೇ (ಅಕ್ಟೋಬರ್ 3) ಅಧಿಕೃತವಾಗಿ ದಸರಾ ರಜೆಗಳು ಆರಂಭವಾಗಲಿದೆ.
ಶಿಕ್ಷಣ ಇಲಾಖೆಯ ಘೋಷಣೆ ಮಾಡಿರುವ ದಸರಾ ರಜೆಯೂ ಕೇವಲ ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಿಗೆ ಮಾತ್ರ ಅನ್ವಯವಾಗಲಿದೆ. ಉಳಿದಂತೆ ಖಾಸಗಿ ಶಾಲೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ರಜೆಯನ್ನು ಈಗಾಗಲೇ ಘೋಷಣೆ ಮಾಡಿವೆ. ಕೆಲ ಶಾಲೆಗಳು ಒಂದು ವಾರ, ಇನ್ನು ಕೆಲವು 10 ದಿನ ರಜೆ ನೀಡಿವೆ.
ದಸರಾ ರಜೆಗೂ ಮುನ್ನವೇ ಕೆಲ ಖಾಸಗಿ ಶಾಲೆಗಳಲ್ಲಿ ಈಗಾಗಲೇ ಅರ್ಧವಾರ್ಷಿಕ ಪರೀಕ್ಷೆಗಳು ಆರಂಭವಾಗಿದ್ದರೆ, ಇನ್ನು ಕೆಲ ಶಾಲೆಗಳಲ್ಲಿ ಪರೀಕ್ಷೆಗಳು ಮುಕ್ತಾಯದ ಹಂತದಲ್ಲಿವೆ.





