– ರಾಘವೇಂದ್ರ ಅಡಿಗ ಎಚ್ಚೆನ್.
ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆ ಸಾಮಾನ್ಯ ಜನರಿಗಷ್ಟೇ ಅಲ್ಲ, ಸೆಲೆಬ್ರಿಟಿಗಳನ್ನೂ ಬಿಡುವುದಿಲ್ಲ! ಇದೀಗ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕೂಡ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಲುಕಿದ್ದು, ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ನ ಕೆಟಿಪಿಒದಲ್ಲಿ ‘ದಿ ವಂಡರ್‌ಮೆಂಟ್ ಟೂರ್’ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಮುಗಿಸಿಕೊಂಡು ತೆರಳುತ್ತಿದ್ದ ವೇಳೆ ರೆಹಮಾನ್ ಅವರ ಕಾರು ವೈಟ್‌ಫೀಲ್ಡ್‌ನ ಟ್ರಾಫಿಕ್‌ನಲ್ಲಿ ಸಿಲುಕಿದೆ.
ಕಾರಿನ ಕಿಟಕಿಯಿಂದ ಕೈಬೀಸಿದ ರೆಹಮಾನ್
ಟ್ರಾಫಿಕ್‌ನಲ್ಲಿ ನಿಂತಿದ್ದ ಕಾರಿನೊಳಗೆ ಎ.ಆರ್. ರೆಹಮಾನ್ ಇರುವುದನ್ನು ಗಮನಿಸಿದ ಸಾರ್ವಜನಿಕರು ಅಚ್ಚರಿಗೊಂಡಿದ್ದಾರೆ. ಹಲವರು ತಮ್ಮ ಮೊಬೈಲ್ ತೆಗೆದು ರೆಹಮಾನ್ ಅವರ ವಿಡಿಯೋ ಸೆರೆಹಿಡಿದಿದ್ದಾರೆ. ತಮ್ಮನ್ನು ಗುರುತಿಸಿದ ಅಭಿಮಾನಿಗಳನ್ನು ಕಂಡ ರೆಹಮಾನ್ ಕೂಡ ನಗುತ್ತಾ ಕಾರಿನ ಕಿಟಕಿಯಿಂದ ಕೈಬೀಸಿದ್ದಾರೆ. ಸಂಗೀತ ಮಾಂತ್ರಿಕನನ್ನು ಇಷ್ಟು ಹತ್ತಿರದಿಂದ ಕಂಡ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಬೆಂಗಳೂರು ಟ್ರಾಫಿಕ್‌ನಲ್ಲಿ ರೆಹಮಾನ್ ಸಿಲುಕಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲೂ ಅಭಿಮಾನಿಗಳನ್ನು ಕಂಡು ನಗುತ್ತಾ ಕೈಬೀಸಿರುವ ರೆಹಮಾನ್ ಅವರ ಸರಳ ನಡೆ ನೆಟ್ಟಿಗರ ಗಮನ ಸೆಳೆದಿದೆ.
ಒಟ್ಟಿನಲ್ಲಿ ಸಂಗೀತ ಕಾರ್ಯಕ್ರಮದ ಮೂಲಕ ಬೆಂಗಳೂರಿಗರನ್ನು ರಂಜಿಸಿದ್ದ ಎ.ಆರ್. ರೆಹಮಾನ್, ಕಾರ್ಯಕ್ರಮ ಮುಗಿಸಿ ಹೊರಡುವಾಗ ಬೆಂಗಳೂರಿನ ಟ್ರಾಫಿಕ್
ಅನುಭವವನ್ನೂ ಪಡೆದುಕೊಂಡಿದ್ದಾರೆ.





