Sj*
ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಲೂಸ್ ಮಾದ ಯೋಗಿ ಅಭಿನಯದ 51 ನೇ ಚಿತ್ರ “ಫಾರೆವರ್”. ಸುಪ್ರೀಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಎಂ.ವೆಂಕಟನಾರಾಯಣ್(ಠಾಗೋರ್ ಕೃಷ್ಣ) ನಿರ್ಮಿಸುತ್ತಿರುವ ಹಾಗೂ “ಚಂದ್ರಿಕ” ಚಿತ್ರದ ಖ್ಯಾತಿಯ ಯೋಗೇಶ್ ಎಂ ನಿರ್ದೇಶಿಸುತ್ತಿರುವ “ಫಾರೆವರ್” ಚಿತ್ರದ ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರನಲ್ಲೇ ಚಿತ್ರೀಕರಣ ನಡೆದಿದೆ. ಹೆಸರಾಂತ ನಿರ್ದೇಶಕ ರವಿವರ್ಮ ಅವರ ಸಾಹಸ ಸಂಯೋಜನೆಯಲ್ಲಿ ಮೈನವಿರೇಳಿಸುವ ಸಾಹಸ ಸನ್ನಿವೇಶ ಹಾಗೂ ಖ್ಯಾತ ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಅವರ ನೃತ್ಯ ಸಂಯೋಜನೆಯಲ್ಲಿ ಹಾಡೊಂದರ ಚಿತ್ರೀಕರಣ ಸೇರಿದಂತೆ ಮಾತಿನ ಭಾಗದ ಚಿತ್ರೀಕರಣ ಸಹ ಎರಡನೇ ಹಂತದಲ್ಲಿ ನಡೆದಿದೆ. ನಾಯಕ ಲೂಸ್ ಮಾದ ಯೋಗಿ, ನಾಯಕಿ ಆಕಾಂಕ್ಷ ರಾವ್, ಪ್ರಮೋದ್ ಶೆಟ್ಟಿ, ವಿಜಯ್ ಚೆಂಡೂರ್, ಗೌರವ್ ಶೆಟ್ಟಿ, ಅಶ್ವಿನ್ ಪಲ್ಲಕ್ಕಿ, ಮಾಲಾ, ಕಡ್ಡಿಪುಡಿ ಚಂದ್ರು, ಅನಂತ್ ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸದ್ಯದಲ್ಲೇ ಮೂರನೇ ಹಂತದ ಚಿತ್ರೀಕರಣ ಸಹ ಆರಂಭವಾಗಲಿದೆ.

ಈ ಚಿತ್ರದಲ್ಲಿ ಲವ್, ಸೆಂಟಿಮೆಂಟ್, ಆಕ್ಷನ್ ಸೇರಿದಂತೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆ ರಘು ನಿಡುವಳ್ಳಿ ಅವರದು. ಪ್ರದ್ಯೂತನ್ ಸಂಗೀತ ನಿರ್ದೇಶನ ಹಾಗೂ ಸಂಕೇತ್ ಛಾಯಾಗ್ರಹಣ “ಫಾರೆವರ್” ಚಿತ್ರಕ್ಕಿದೆ.
ಈಗಾಗಲೇ ಈ ಚಿತ್ರದ ಫಸ್ಟ್ ಲುಕ್ ಎಲ್ಲರ ಗಮನ ಸೆಳೆದಿದ್ದು, ಯೋಗಿ ಅವರು ಬೈಕ್ ಲವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.





