ಪದವಿ ಪಡೆದುಕೊಂಡ ಮಾತ್ರಕ್ಕೆ ಉತ್ತಮ ನೌಕರಿ ಸಿಗುವುದೆಂಬ ಪದ್ಧತಿ ಹಲವು ದಶಕಗಳ ಹಿಂದೆಯೇ ಹೋಯಿತು. ಇಂದಿನ ಕಾಲದಲ್ಲಿ ಕೆರಿಯರ್‌ ರೂಪಿಸಿಕೊಳ್ಳಲು ಏನು ಮಾಡಬೇಕೆಂದು ವಿವರವಾಗಿ ತಿಳಿಯೋಣವೇ…..?

ಹಿಂದೊಂದು ಕಾಲವಿತ್ತು, ಪದವಿ ಪಡೆದವರಿಗೆ ಸಮಾಜದಲ್ಲಿ ದೊಡ್ಡ ಗೌರವಾದರ, ಸ್ಥಿರತೆ, ಸುರಕ್ಷಿತ ಭವಿಷ್ಯದ ಗ್ಯಾರಂಟಿ ಇತ್ತು. ಯುವಜನತೆ ಬಲು ಹೆಮ್ಮೆಯಿಂದ ತಾವು ಕನ್ನಡ, ಅರ್ಥಶಾಸ್ತ್ರ, ಫಿಲಾಸಫಿಗಳಲ್ಲಿ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದರು. ಈ ಮಾತು ಬಲು ಪ್ರತಿಷ್ಠೆಯ ದ್ಯೋತಕವಾಗಿತ್ತು. ಆದರೆ ಇಂದು ಇದೇ ಮಾತಿನೊಂದಿಗೆ ಮತ್ತೊಂದು ಸೇರುತ್ತದೆ, ಮುಂದೆ ಇವರ ಭವಿಷ್ಯ….?

ಈ ಪ್ರಶ್ನೆ ಕೇವಲ ಒಂದಿಬ್ಬರದಲ್ಲ…. ಬದಲಿಗೆ ಇಡೀ ದೇಶದ ಯುವಜನತೆಯ ಗೊಂದಲದ ಪ್ರತೀಕವಾಗಿದೆ. ಪ್ರತಿ ವರ್ಷ ಲಕ್ಷಾಂತರ ಮಂದಿ ರೆಗ್ಯುಲರ್‌‌,  ಡಿಗ್ರಿ ಪಡೆದು ವಿ.ವಿ.ಗಳಿಂದ ಹೊರಬೀಳುತ್ತಾರೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಇವರುಗಳಿಗೆ ಯಾವ ನೌಕರಿಯ ಗ್ಯಾರಂಟಿಯೂ ಇಲ್ಲ, ಇವರ ಡಿಗ್ರಿ ಹೆಸರು ಕೇಳಿ ಬಿಸ್‌ ನೆಸ್‌ ಗೆ ಸಪೋರ್ಟ್‌ ಮಾಡುವವರೂ ಇಲ್ಲ.

ಪರಿಣಾಮ…..? ಡಿಗ್ರಿ ಕೈಯಲ್ಲಿದೆ, ಪ್ರತಿಭಾನ್ವಿತ ಪದವೀಧರರ ಸಂಖ್ಯೆ ಹೆಚ್ಚಾಗುತ್ತಾ ನಿರುದ್ಯೋಗ ಸಮಸ್ಯೆ ಗಂಭೀರ ಆಗತೊಡಗಿದೆ. ಪ್ರತಿ ಸಲ ಮುಗಿಸಿ ಯುವಜನತೆ ಝೊಮೆಟೋದಂಥ ಕಂಪನಿಗಳಲ್ಲಿ ಡೆಲಿವರಿ ಬಾಯ್ಸ್ ಆಗುತ್ತಿದ್ದಾರೆ. ಯಾವುದೋ ಕೊರಿಯರ್‌ ಕಂಪನಿಗಳಲ್ಲಿ ಪಾರ್ಸೆಲ್ ವಿಂಗಡಿಸುವ ಕೆಲಸದಲ್ಲಿದ್ದಾರೆ.

ರಾಜೇಶ್‌ ವರ್ಮ ಎಕನಾಮಿಕ್ಸ್ ಡಿಗ್ರಿ ಪಡೆದು, ಲಖ್ನೌನ ಮಾಲ್ ‌ಒಂದರಲ್ಲಿ ಸೇಲ್ಸ್ ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಇದು ಆತನ 7ನೇ ಕೆಲಸ. ಇದಕ್ಕೆ ಮೊದಲು ಆತ ಒಂದು ದೊಡ್ಡ ಅಂಗಡಿಯಲ್ಲಿ ಕ್ಯಾಶ್‌ ಕೌಂಟರ್‌ ಗಮನಿಸುತ್ತಿದ್ದ, ಆಟೋ ಓಡಿಸಿದ, ಕೆಲವು ದಿನಗಳ ಮಟ್ಟಿಗೆ ಪ್ರೈವೇಟ್‌ ಕಾಂಟ್ರಾಕ್ಟರ್‌ ನ ಅಸಿಸ್ಟೆಂಟ್‌ ಸಹ ಆಗಿದ್ದ. ಆದರೆ 15 ಸಾವಿರಕ್ಕೂ ಹೆಚ್ಚು ಸಂಬಳ ಮಾತ್ರ ಸಿಗುತ್ತಿಲ್ಲ!

ಕೇವಲ ಕಾಗದದ ಲಭ್ಯತೆ : ಪದವಿ ಪ್ರಮಾಣ ಪತ್ರಗಳು ಕೇವಲ ಕಾಗದದ ಹುಲಿಗಳಾಗಿವೆ. ಸರ್ಕಾರಿ ನೌಕರಿಯಲ್ಲಿ ಸೀಮಿತ ಉದ್ಯೋಗಾವಕಾಶ, ಜನರಲ್ ಮೆರಿಟ್‌ ಮಂದಿಯನ್ನು ಮೂಸುವವರಿಲ್ಲ, ಪೈಪೋಟಿ ಸ್ಪರ್ಧಾತ್ಮಕ ಪರೀಕ್ಷೆಗಳು ಲಾಟರಿ ಜೂಜಿನಂತಾಗಿವೆ. ಖಾಸಗಿ ಕ್ಷೇತ್ರದವರಂತೂ ಡಿಗ್ರಿಗಿಂತ ಟೆಕ್ನಿಕ್‌ ಸ್ಕಿಲ್ಸ್ ಗೆ ಮಹತ್ವ ನೀಡುತ್ತಿವೆ. ಹೀಗಿರುವಾಗ ಎಂದಿನ ಈ ಡಿಗ್ರಿ ಪಡೆದವರು ಬದುಕಬೇಕು ಹೇಗೆ? ಇವೆಲ್ಲ ಕಾಗದದ ಹುಲಿಗಳಲ್ಲದೇ ಮತ್ತೇನು?

ಏಷ್ಯಾ ವರ್ಲ್ಡ್ ಎಜುಕೇಶನ್‌ ಎಂಬ ಶೈಕ್ಷಣಿಕ ಸಂಸ್ಥೆಯ ನಿರ್ದೇಶಕರಾದ ರೇಖಾ ಬನ್ಸ್‌ಲಾ ಕಳೆದ 24 ವರ್ಷಗಳಿಂದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೆಲಸದಲ್ಲಿದ್ದು ಹೇಳುತ್ತಾರೆ, “ಪ್ರಸ್ತುತ ಫುಲ್ ಡಿಗ್ರಿ ಪಡೆದರೂ ಸಹ ನಿರುದ್ಯೋಗಿಗಳಾಗಿ ಸೇಲ್ಸ್ ಮೆನ್ ಆಗಿದ್ದಾರೆ. ನಾನು ಈ ಫುಲ್ ಡಿಗ್ರಿಯನ್ನು `ಮಹಾ‌’ ಎಂದೇ ಭಾವಿಸುತ್ತೇನೆ, ಏಕೆಂದರೆ ಇಂದು ಭಾರತದ ಪ್ರತಿ ಮಹಾನಗರದಲ್ಲೂ ಕಾಸಿಗೊಂದು ಕೊಸರಿಗೆರಡು ಎಂಬಂತೆ ಫುಲ್ ಪದವೀಧರರಿದ್ದಾರೆ. ಇದರ ಕಾಲೇಜುಗಳು ನಾಯಿಕೊಡೆಗಳಂತೆ ಎಲ್ಲೆಡೆ ತಲೆ ಎತ್ತುತ್ತಿವೆ. ಇವು ಹೆಚ್ಚು ಯುವಜನತೆಯನ್ನು ಈ ಡಿಗ್ರಿ ಪಡೆಯುವಂತೆ ಓಲೈಸುತ್ತಿವೆ, ಕೆಲಸದ ಗ್ಯಾರಂಟಿ ಯಾರೂ ಕೊಡೋದಿಲ್ಲ.

“ಯಾರು ಹೀಗೆ ಯರ್ರಾಬಿರ್ರಿಯಾಗಿ ಫುಲ್ ಶಿಕ್ಷಣ ಕೊಡಿಸುತ್ತಿದ್ದಾರೋ, ಅವರೆಲ್ಲ ನಿಜಕ್ಕೂ `ಮಾಸ್ಟರ್‌ ಆಫ್‌ ಬಿಸ್‌ ನೆಸ್‌ಅಡ್ಮಿನಿಸ್ಟ್ರೇಷನ್‌’ ಪದವಿಯಲ್ಲಿ ನುರಿತರೇ? ಪದವಿ ಪಡೆಯುವ ಹುನ್ನಾರದಲ್ಲಿ ಇದೊಂದು ರ್ಯಾಟ್‌ ರೇಸ್‌ ಆಗಿದೆ, ಅಷ್ಟೆ. ನಮ್ಮ ದೇಶದ ಮಹಾನಗರಗಳ ಬೆರಳೆಣಿಕೆಯಷ್ಟು ಕೆಲವೇ ಮಹಾನ್‌ ಶೈಕ್ಷಣಿಕ ಸಂಸ್ಥೆಗಳನ್ನು ಬಿಟ್ಟರೆ, ಉಳಿದೆಲ್ಲ ಸಂಸ್ಥೆಗಳೂ ಶಿಕ್ಷಣದ ಹೆಸರಿನಲ್ಲಿ ಫ್ಯಾಕ್ಟ್ರಿ ತೆರೆದು ಪ್ರಾಡಕ್ಟ್ಸ್ ತಯಾರಿಸುತ್ತಿವೆಯಷ್ಟೆ! ಅಂತೂ ಇಂತೂ ಈ ಪೈಪೋಟಿಯಲ್ಲಿ ಇವರುಗಳಿಗೆ ಕೆಲಸ ಸಿಕ್ಕಿದರೂ 15-20 ಸಾವಿರ ಸಂಬಳ ಸಿಗುವುದೂ ದುಸ್ತರವಾಗುತ್ತಿದೆ!”

ದಶಕಗಳಷ್ಟು ಪ್ರಾಚೀನ ಸಿಲೆಬಸ್‌ : ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರೆ, ಬಹುತೇಕ ಭಾರತೀಯ ವಿ.ವಿ.ಗಳಲ್ಲಿ ಕಲಿಸಲಾಗುತ್ತಿರುವ ಸಿಲೆಬಸ್‌ ಎಷ್ಟೋ ದಶಕಗಳ ಪ್ರಾಚೀನ ಕಾಲದ್ದು. ಇತ್ತ ನೋಡಿದರೆ, ಇಡೀ ಆಧುನಿಕ ವಿಶ್ವ ಇಂದು  ನೇತೃತ್ವದಲ್ಲಿ ನಾಗಾಲೋಟದಲ್ಲಿ ಮುಂದುವರಿದಿದೆ. ಡೇಟಾ, ಡಿಜಿಟಲ್ ಮೀಡಿಯಾ, ಪಾಲಿಸಿ ಅನಾಲಿಸಿಸ್‌, ಕ್ರಿಯೇಲಿವ್‌ಎಕಾನಮಿ ಇತ್ಯಾದಿಗಳತ್ತ ದೌಡಾಯಿಸುತ್ತಿದೆ. ಈ ಪದವಿ ಸಿಲೆಬಸ್‌ ನಲ್ಲಿ ಈಗಲೂ ಅದೇ ಗೊಡ್ಡು ಸಿದ್ಧಾಂತಗಳು, ಅದೇ ಬಾಯಿಪಾಠದ ವ್ಯಾಖ್ಯಾನಗಳು, ಅದೇ ಪರೀಕ್ಷಾ ಕೇಂದ್ರಿತ ಶಿಕ್ಷಣ ಮುಂದುವರಿದಿದೆ. ಇದರಲ್ಲಿ ಅತ್ತ ಪ್ರಾಕ್ಟಿಕಲ್ ಎಕ್ಸ್ ಪೋಶರ್ ಇಲ್ಲ, ಇಂಡಸ್ಟ್ರಿ ಕನೆಕ್ಷನ್‌ ಇಲ್ಲ, ಇತ್ತ ಫೀಲ್ಡ್ ಟ್ರೇನಿಂಗ್‌ ಸಹ ಇಲ್ಲ. ಇಲ್ಲಿ ವಿದ್ಯಾರ್ಥಿಗಳು ಕೇವಲ ಓದುತ್ತಾರೆ, ಕಲಿಯಲಿಕ್ಕೇನೂ ಇಲ್ಲ.

ಇದಕ್ಕೆ ರೇಖಾ ಸೂಚಿಸುವ ಪರಿಹಾರ ಎಂದರೆ, ಇಂದು ಅತಿ ಅಗತ್ಯವಾದುದು ಎಂದರೆ ವಿದ್ಯಾರ್ಥಿಗಳು ಕೇವಲ ಕ್ಲಾಸ್‌ ರೂಂ ಸ್ಟಡಿ ಬಿಟ್ಟು, ತನ್ನನ್ನು ತಾನು ಒಂದು ವಿಶಿಷ್ಟ ಕ್ಷೇತ್ರಕ್ಕಾಗಿ ಕುಶಲಪೂರ್ವಕ ತರಬೇತಿ ಪಡೆದುಕೊಳ್ಳಬೇಕಿದೆ. ಇದಕ್ಕಾಗಿ ಅವರು ಆನ್ ಲೈನ್‌ ಪ್ರೊಫೆಶನ್‌ ಕೋರ್ಸ್‌ ಮಾಡಬೇಕಾದೀತು. ವಿಶ್ವದ ಅನೇಕ ವಿ.ವಿ.ಗಳು ಅಂದ್ರೆ ಹಾರ್ವರ್ಡ್, ಸ್ಟೌನ್‌ ಪೇರ್ಡ್‌ ಇತ್ಯಾದಿ ಉಚಿತ ಆನ್‌ ಲೈನ್‌ ಕೋರ್ಸ್‌ ಕೊಡುತ್ತಿವೆ. ನೀವು ನಿಮ್ಮ ಅಭಿರುಚಿಗೆ ತಕ್ಕಂತೆ ಕಮರ್ಷಿಯಲ್ ಕೋರ್ಸ್‌ ಆರಿಸಿಕೊಳ್ಳಿ, ಇದರಲ್ಲಿ ಅಡ್ಮಿಶನ್‌ ಪಡೆದುಕೊಳ್ಳಿ. ಉದಾ: ನೀವು ಹಾರ್ವರ್ಡ್ + ಫ್ರೀ ಆನ್‌ ಲೈನ್‌ ಕೋರ್ಸ್‌ ಗೂಗಲ್ ನಲ್ಲಿ ಮಾಡಿದಿರಿ ಅಂದ್ರೆ ನಿಮಗೆ ಹಾರ್ವರ್ಡ್ ವಿ.ವಿ.ಯಿಂದ ಉಚಿತ ಕೋರ್ಸೆಸ್‌ ನ ಪರಿವಿಡಿ ಸಿಗುತ್ತದೆ.

“ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ 3 ಸಂಗತಿ ಮುಖ್ಯಸ್ಕಿಲ್‌, ಅನುಭವ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ! ರೆಗ್ಯುಲರ್ಸ್,  ಇವುಗಳಲ್ಲಿ ಯಾವುದರ ಗ್ಯಾರಂಟಿಯನ್ನೂ ಕೊಡುವುದಿಲ್ಲ. ಪರಿಣಾಮ, ವಿದ್ಯಾರ್ಥಿ 22-24ರ ಹರೆಯದಲ್ಲಿ ಡಿಗ್ರಿ ಏನೋ ಪಡೆದಿರುತ್ತಾರೆ, ನಂತರ ಕೋಚಿಂಗ್‌, ಸ್ಪರ್ಧಾತ್ಮಕ ಪರೀಕ್ಷೆಗಳು, ನಿರುದ್ಯೋಗದ ಚಕ್ರವ್ಯೂಹಕ್ಕೆ ಸಿಲುಕುತ್ತಾರೆ. ಅದೇ ಇತರ ದೇಶಗಳ ಯುವಜನತೆಯನ್ನು ಗಮನಿಸಿದರೆ, ಈ ವಯಸ್ಸಿನಲ್ಲಿ ಅವರು ಸ್ಟಾರ್ಟ್‌ ಅಪ್‌ ನಡೆಸುತ್ತಿರುತ್ತಾರೆ, ರಿಸರ್ಚ್ ನಡೆಸುತ್ತಿರುತ್ತಾರೆ ಯಾ ಇಂಡಸ್ಟ್ರಿಯಲ್ಲಿ ಸೆಟಲ್ಡ್ ಆಗಿರುತ್ತಾರೆ!”

ಸವಾಲು ಎದುರಿಸಬೇಕಾದುದು ಸ್ವಾಭಾವಿಕ : ಇಂದಿನ ರೆಗ್ಯುಲರ್ಸ್,  ಪದವಿಗಳು ಎಷ್ಟೋ ಸಂದರ್ಭಗಳಲ್ಲಿ ನಿರುಪಯೋಗ ಎಂದೇ ಸಾಬೀತಾಗಿದೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದರು, ಕೌಟುಂಬಿಕ ನೆರವು ಇಲ್ಲದವರು ಬಹಳ ಕಷ್ಟಪಡುತ್ತಾರೆ. 35 ವರ್ಷಗಳ ಶಿಕ್ಷಣದ ನಂತರ ವಿದ್ಯಾರ್ಥಿ ಸ್ವಾವಲಂಬಿ ಆಗಾರ ಎಂದರೆ ಅಂಥ ಶೈಕ್ಷಣಿಕ ವ್ಯವಸ್ಥೆಯ ಕುರಿತು ಸವಾಲು ಮೂಡುವುದು ಸ್ವಾಭಾವಿಕ.

ಇದರ ಅರ್ಥ ಯಾರೂ ರೆಗ್ಯುಲರ್‌ ಡಿಗ್ರಿ ಕೋರ್ಸೆಸ್‌ ಗೆ ಸೇರಲೇಬಾರದು ಎಂದೇನಲ್ಲ. ಜ್ಞಾನ ಸಂಪಾದನೆ ಅತ್ಯಗತ್ಯ ನಿಜ. ಆದರೆ ಸುದೀರ್ಘ ಕಾಲಾವಧಿಯ ಶಿಕ್ಷಣ ಹೊಟ್ಟೆ ಹೊರೆಯಲಿಕ್ಕೂ ಆಧಾರ ಆಗಬೇಕು. ಕೇವಲ ಡಿಗ್ರಿಗಳ ಮೇಲೆ ಅವಲಂಬಿತರಾಗದೆ ರೆಗ್ಯುಲರ್‌ ಆಗಿ ಕಾಲಕ್ಕೆ ತಕ್ಕಂತೆ ಮಲ್ಟಿ ಡಿಸಿಪ್ಲಿನರಿ ಕೋರ್ಸೆಸ್‌ ಸಹ ಕಲಿಯಬೇಕಾದುದು ಅತ್ಯಗತ್ಯ. ಇಂಟರ್ನ್‌ ಶಿಪ್‌, ಫೀಲ್ಡ್ ವರ್ಕ್‌, ಸ್ಕಿಲ್ ‌ಬೇಸ್ಡ್ ಕೋರ್ಸೆಸ್‌, ರಿಸರ್ಚ್‌, ಕ್ರಿಯೇಟಿವಿಟಿ, ಆಲೋಚನಾತ್ಮಕ ಚಿಂತನೆಗೆ ದಾರಿ ಆಗಬೇಕು. ಇವುಗಳ ರಹಿತ ಡಿಗ್ರಿ ಕೇವಲ ಕಾಗದದ ಹುಲಿಯೇ!

ಹೀಗಾಗಿ ಇಂದಿನ ಯುವಜನತೆ ಆನ್‌ ಲೈನ್‌ ಕೋರ್ಸೆಸ್‌ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಸ್ಟಾರ್ಟ್‌ ಅಪ್‌ ಹೊಂದಲು ಬಯಸುತ್ತಿದ್ದಾರೆ. ಫ್ರೀಲ್ಯಾನ್ಸಿಂಗ್‌, ಕಂಟೆಂಟ್‌, ಡಿಸೈನ್‌, ಡೇಟಾ, ಟೆಕ್‌ ಸಿಲ್ಕ್ ಕಲಿಯುತ್ತಿದ್ದಾರೆ. ಪಾರಂಪರಿಕ ಹಳೆಯ ಡಿಗ್ರಿಗಳಿಗಿಂತ ಹೆಚ್ಚಾಗಿ ಪ್ರಾಕ್ಟಿಕಲ್ ಆಗಿ ಕಲಿಯಬೇಕಾದ ಇಂಥವುಗಳ ಕಡೆ ವಿದ್ಯಾರ್ಥಿಗಳ ಆಸಕ್ತಿ ಬೆಳೆಯುತ್ತಿದೆ. ಇದು ಎಂದಿನ ಶಿಕ್ಷಣದ ವಿರುದ್ಧ ವಿದ್ರೋಹವಲ್ಲ, ಬದಲಿಗೆ ನಿಷ್ಪ್ರಯೋಜಕ ಶಿಕ್ಷಣದ ವಿರುದ್ಧ ಒಂದು ಮೌನಕ್ರಾಂತಿ ಆಗಿದೆ.

ಇಂದು ರೆಗ್ಯುಲರ್ಸ್, ಪದವಿಗಳನ್ನು ಪ್ರಾಸಂಗಿಕವಾಗಿ ಇರಿಸಿಕೊಳ್ಳ ಬೇಕಾಗಿದೆ. ಇದರಿಂದ ನೌಕರಿ ಸಿಗುತ್ತದೆ ಅಂತಲ್ಲ, ಜೀವನ್ಮುಖಿ ಜ್ಞಾನಾರ್ಜನೆಗಾಗಿ ಬಳಸಿಕೊಳ್ಳಬೇಕಿದೆ. ವಿದ್ಯಾರ್ಥಿಗಳು ಈ ಪುಸ್ತಕೀಯ ಲೋಕದಿಂದ ಹೊರಬಂದು, ಸಮಾಜ ಇಂದಿನ ಮಾರುಕಟ್ಟೆಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕಿದೆ. ಇಲ್ಲದಿದ್ದರೆ ಭವಿಷ್ಯತ್ತಿನಲ್ಲಿ ಈ ಡಿಗ್ರಿಗಳಿಂದ ಗೌರವಾದರ ಇಲ್ಲ, ಉದ್ಯೋಗಾವಕಾಶ ಯಾವ ಆತ್ಮವಿಶ್ವಾಸ ಸಿಗುವುದಿಲ್ಲ. ಮುಂದೆ ಭವಿಷ್ಯತ್ತಿನ ಇತಿಹಾಸಕಾರರು ಈ ಕುರಿತಾಗಿ, ಡಿಗ್ರಿಗಳಿದ್ದವು…..

ಭವಿಷ್ಯವೇ ಇರಲಿಲ್ಲ ಎಂದು ಬರೆದವರಾರು.

ಅತಿ ಅಗತ್ಯವಾದುದು ಎಂದರೆ : ಈ ತರಹದ ನಿರ್ಧಾರ ಮುಂದೆ ಡಿಗ್ರಿ ಪಡೆಯಬೇಕೇ ಬೇಡವೇ, 10ನೇ ತರಗತಿ ನಂತರ ಮುಂದೇನು ಎಂಬ ದೊಡ್ಡ ಸವಾಲನ್ನು ಒಡ್ಡುತ್ತದೆ. ಮುಗಿಸಿ, ಟೀಚಿಂಗ್‌, ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ಸದವಕಾಶ ಇದ್ದರೂ, ಅಲ್ಲೂ ಸೈನ್ಸ್/ಕಾಮರ್ಸ್‌ ಪದವಿ ಪಡೆದವರೇ ವಿಜೃಂಭಿಸುವುದು ಹೆಚ್ಚು.

10ನೇ ತರಗತಿಯಲ್ಲಿ ಕಲಿಯುವಾಗಲೇ ಮಾಡಲೇಬೇಕೆಂದು ನಿರ್ಧರಿಸಿದ್ದರೆ ಸರಿ, ಇಲ್ಲದಿದ್ದರೆ ಇತರ ಕೋರ್ಸುಗಳಿಗೆ ಹೋಲಿಸಿದಾಗ, ಬದಲಿಗೆ ಡಿಪ್ಲೊಮಾ, ಇನ್ನಿತರ ಟೆಕ್ನಿಕಲ್ ಕೋರ್ಸ್‌ ಗೆ ಅವಕಾಶವಿದೆಯೇ ನೋಡಿ. ಮುಗಿಸಿದ ನಂತರ, ಆಯ್ದ ವಿಷಯದಲ್ಲೇ ಮುಂದುವರಿಯಬೇಕೇ ವಿನಾ, ಬೇರೆ ಅವಕಾಶ ಇರುವುದಿಲ್ಲ. 2011-22ರ ಡೇಟಾ ಪ್ರಕಾರ, ಆ ವರ್ಷದಲ್ಲಿ ಸೋಶಿಯಲ್ ಸೈನ್ಸ್ ಕಲಿತರು 10.8 ಲಕ್ಷ ಮಂದಿ. ಇರಲ್ಲಿ 56% ಹೆಣ್ಣುಮಕ್ಕಳಿದ್ದರು. ಇವರಿಗೆ ಸೂಕ್ತವಾಗುವ ಕೆಲಸ ಸಿಗುವುದು ಸುಲಭವಲ್ಲ ಎಂಬುದಂತೂ ನಿಶ್ಚಿತ. ಹೀಗಾಗಿ ಜೊತೆ ಇತರ ಟೆಕ್ನಿಕಲ್ ಸ್ಕಿಲ್ ಇರುವಂಥ ಕೋರ್ಸ್‌ ಸಹ ಕಲಿಯಿರಿ, ಆಗ ಮಾತ್ರ ಉದ್ಯೋಗ ಮಾರುಕಟ್ಟೆಯಲ್ಲಿ ನೆಲೆಯೂರಲು ಸಾಧ್ಯ.

ಈ ಕೋರ್ಸ್‌ ಜೊತೆ ಡೇಟಾ ಅನಾಲಿಸಿಸ್‌, ಕಮ್ಯುನಿಕೇಶನ್‌, ಪಿ, ಆ್ಯಕ್ಟಿಂಗ್‌, ಫೈನ್‌ ಆರ್ಟ್ಸ್, ಆರ್ಕಿಯಾಲಜಿಸ್ಟ್, ಆರ್ಟ್‌ ಕ್ರಿಯೇಟಿವ್‌, ಸಿನಿಮಾ ಸ್ಕ್ರಿಪ್ಟ್ ರೈಟಿಂಗ್‌, ಸೋಶಿಯಲ್ ವರ್ಕ್‌, ಮ್ಯಾರೇಜ್‌ ಕೌನ್ಸಿಲಿಂಗ್‌ ಇತ್ಯಾದಿ ಕೋರ್ಸ್‌ ಸೇರಬಹುದು, ಆಗ ಮಾತ್ರ ನೀವು ಹೊಸ ನೌಕರಿಗೆ ಸೇರುವಾಗ ಸಲ್ಲಿಸುವ ಆಕರ್ಷಕ ಎನಿಸುವುದು. ಒಂದು ಮಾತಂತೂ ನಿಜ, ಕೋರ್ಸ್‌ ಗಳಿಗಾಗಿ ಕಳೆದ ವರ್ಷಗಳು ವಾಪಸ್ಸು ಬರಲಾರ. ಸೂಕ್ತ ಮಾಹಿತಿ, ಪ್ರಾಕ್ಟಿಕಲ್ ನಾಲೆಜ್‌ ಅತ್ಯಗತ್ಯ.

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ