ಪದವಿ ಪಡೆದುಕೊಂಡ ಮಾತ್ರಕ್ಕೆ ಉತ್ತಮ ನೌಕರಿ ಸಿಗುವುದೆಂಬ ಪದ್ಧತಿ ಹಲವು ದಶಕಗಳ ಹಿಂದೆಯೇ ಹೋಯಿತು. ಇಂದಿನ ಕಾಲದಲ್ಲಿ ಕೆರಿಯರ್‌ ರೂಪಿಸಿಕೊಳ್ಳಲು ಏನು ಮಾಡಬೇಕೆಂದು ವಿವರವಾಗಿ ತಿಳಿಯೋಣವೇ.....?

ಹಿಂದೊಂದು ಕಾಲವಿತ್ತು, ಪದವಿ ಪಡೆದವರಿಗೆ ಸಮಾಜದಲ್ಲಿ ದೊಡ್ಡ ಗೌರವಾದರ, ಸ್ಥಿರತೆ, ಸುರಕ್ಷಿತ ಭವಿಷ್ಯದ ಗ್ಯಾರಂಟಿ ಇತ್ತು. ಯುವಜನತೆ ಬಲು ಹೆಮ್ಮೆಯಿಂದ ತಾವು ಕನ್ನಡ, ಅರ್ಥಶಾಸ್ತ್ರ, ಫಿಲಾಸಫಿಗಳಲ್ಲಿ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದರು. ಈ ಮಾತು ಬಲು ಪ್ರತಿಷ್ಠೆಯ ದ್ಯೋತಕವಾಗಿತ್ತು. ಆದರೆ ಇಂದು ಇದೇ ಮಾತಿನೊಂದಿಗೆ ಮತ್ತೊಂದು ಸೇರುತ್ತದೆ, ಮುಂದೆ ಇವರ ಭವಿಷ್ಯ....?

ಈ ಪ್ರಶ್ನೆ ಕೇವಲ ಒಂದಿಬ್ಬರದಲ್ಲ.... ಬದಲಿಗೆ ಇಡೀ ದೇಶದ ಯುವಜನತೆಯ ಗೊಂದಲದ ಪ್ರತೀಕವಾಗಿದೆ. ಪ್ರತಿ ವರ್ಷ ಲಕ್ಷಾಂತರ ಮಂದಿ ರೆಗ್ಯುಲರ್‌‌,  ಡಿಗ್ರಿ ಪಡೆದು ವಿ.ವಿ.ಗಳಿಂದ ಹೊರಬೀಳುತ್ತಾರೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಇವರುಗಳಿಗೆ ಯಾವ ನೌಕರಿಯ ಗ್ಯಾರಂಟಿಯೂ ಇಲ್ಲ, ಇವರ ಡಿಗ್ರಿ ಹೆಸರು ಕೇಳಿ ಬಿಸ್‌ ನೆಸ್‌ ಗೆ ಸಪೋರ್ಟ್‌ ಮಾಡುವವರೂ ಇಲ್ಲ.

ಪರಿಣಾಮ.....? ಡಿಗ್ರಿ ಕೈಯಲ್ಲಿದೆ, ಪ್ರತಿಭಾನ್ವಿತ ಪದವೀಧರರ ಸಂಖ್ಯೆ ಹೆಚ್ಚಾಗುತ್ತಾ ನಿರುದ್ಯೋಗ ಸಮಸ್ಯೆ ಗಂಭೀರ ಆಗತೊಡಗಿದೆ. ಪ್ರತಿ ಸಲ ಮುಗಿಸಿ ಯುವಜನತೆ ಝೊಮೆಟೋದಂಥ ಕಂಪನಿಗಳಲ್ಲಿ ಡೆಲಿವರಿ ಬಾಯ್ಸ್ ಆಗುತ್ತಿದ್ದಾರೆ. ಯಾವುದೋ ಕೊರಿಯರ್‌ ಕಂಪನಿಗಳಲ್ಲಿ ಪಾರ್ಸೆಲ್ ವಿಂಗಡಿಸುವ ಕೆಲಸದಲ್ಲಿದ್ದಾರೆ.

ರಾಜೇಶ್‌ ವರ್ಮ ಎಕನಾಮಿಕ್ಸ್ ಡಿಗ್ರಿ ಪಡೆದು, ಲಖ್ನೌನ ಮಾಲ್ ‌ಒಂದರಲ್ಲಿ ಸೇಲ್ಸ್ ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಇದು ಆತನ 7ನೇ ಕೆಲಸ. ಇದಕ್ಕೆ ಮೊದಲು ಆತ ಒಂದು ದೊಡ್ಡ ಅಂಗಡಿಯಲ್ಲಿ ಕ್ಯಾಶ್‌ ಕೌಂಟರ್‌ ಗಮನಿಸುತ್ತಿದ್ದ, ಆಟೋ ಓಡಿಸಿದ, ಕೆಲವು ದಿನಗಳ ಮಟ್ಟಿಗೆ ಪ್ರೈವೇಟ್‌ ಕಾಂಟ್ರಾಕ್ಟರ್‌ ನ ಅಸಿಸ್ಟೆಂಟ್‌ ಸಹ ಆಗಿದ್ದ. ಆದರೆ 15 ಸಾವಿರಕ್ಕೂ ಹೆಚ್ಚು ಸಂಬಳ ಮಾತ್ರ ಸಿಗುತ್ತಿಲ್ಲ!

ಕೇವಲ ಕಾಗದದ ಲಭ್ಯತೆ : ಪದವಿ ಪ್ರಮಾಣ ಪತ್ರಗಳು ಕೇವಲ ಕಾಗದದ ಹುಲಿಗಳಾಗಿವೆ. ಸರ್ಕಾರಿ ನೌಕರಿಯಲ್ಲಿ ಸೀಮಿತ ಉದ್ಯೋಗಾವಕಾಶ, ಜನರಲ್ ಮೆರಿಟ್‌ ಮಂದಿಯನ್ನು ಮೂಸುವವರಿಲ್ಲ, ಪೈಪೋಟಿ ಸ್ಪರ್ಧಾತ್ಮಕ ಪರೀಕ್ಷೆಗಳು ಲಾಟರಿ ಜೂಜಿನಂತಾಗಿವೆ. ಖಾಸಗಿ ಕ್ಷೇತ್ರದವರಂತೂ ಡಿಗ್ರಿಗಿಂತ ಟೆಕ್ನಿಕ್‌ ಸ್ಕಿಲ್ಸ್ ಗೆ ಮಹತ್ವ ನೀಡುತ್ತಿವೆ. ಹೀಗಿರುವಾಗ ಎಂದಿನ ಈ ಡಿಗ್ರಿ ಪಡೆದವರು ಬದುಕಬೇಕು ಹೇಗೆ? ಇವೆಲ್ಲ ಕಾಗದದ ಹುಲಿಗಳಲ್ಲದೇ ಮತ್ತೇನು?

ಏಷ್ಯಾ ವರ್ಲ್ಡ್ ಎಜುಕೇಶನ್‌ ಎಂಬ ಶೈಕ್ಷಣಿಕ ಸಂಸ್ಥೆಯ ನಿರ್ದೇಶಕರಾದ ರೇಖಾ ಬನ್ಸ್‌ಲಾ ಕಳೆದ 24 ವರ್ಷಗಳಿಂದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೆಲಸದಲ್ಲಿದ್ದು ಹೇಳುತ್ತಾರೆ, ``ಪ್ರಸ್ತುತ ಫುಲ್ ಡಿಗ್ರಿ ಪಡೆದರೂ ಸಹ ನಿರುದ್ಯೋಗಿಗಳಾಗಿ ಸೇಲ್ಸ್ ಮೆನ್ ಆಗಿದ್ದಾರೆ. ನಾನು ಈ ಫುಲ್ ಡಿಗ್ರಿಯನ್ನು `ಮಹಾ‌' ಎಂದೇ ಭಾವಿಸುತ್ತೇನೆ, ಏಕೆಂದರೆ ಇಂದು ಭಾರತದ ಪ್ರತಿ ಮಹಾನಗರದಲ್ಲೂ ಕಾಸಿಗೊಂದು ಕೊಸರಿಗೆರಡು ಎಂಬಂತೆ ಫುಲ್ ಪದವೀಧರರಿದ್ದಾರೆ. ಇದರ ಕಾಲೇಜುಗಳು ನಾಯಿಕೊಡೆಗಳಂತೆ ಎಲ್ಲೆಡೆ ತಲೆ ಎತ್ತುತ್ತಿವೆ. ಇವು ಹೆಚ್ಚು ಯುವಜನತೆಯನ್ನು ಈ ಡಿಗ್ರಿ ಪಡೆಯುವಂತೆ ಓಲೈಸುತ್ತಿವೆ, ಕೆಲಸದ ಗ್ಯಾರಂಟಿ ಯಾರೂ ಕೊಡೋದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ