Sj*

ಮೈಸೂರು: ಮೈಸೂರಿನ ಪ್ರತಿಭಾವಂತ ಚಿತ್ರತಂಡವೊಂದು ರೂಪಿಸಿರುವ ಕನ್ನಡದ ಜಾನಪದ ಹಾರರ್ ಚಿತ್ರ ‘ರುಧಿರ್ವನ’ ನವೆಂಬರ್ 27, 2026ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವ ಪೋಸ್ಟರ್ ಅನ್ನು ಮೈಸೂರಿನ ಮಹಾರಾಜರಾದ ಶ್ರೀಮಾನ್ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅನಾವರಣಗೊಳಿಸಿದ್ದು, ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಚಿತ್ರತಂಡದ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಚಿತ್ರದ ಬಿಡುಗಡೆ ಪೋಸ್ಟರ್ ಕೂಡ ತನ್ನದೇ ಆದ ವಿಶಿಷ್ಟ ಆಶಯವನ್ನು ಹೊಂದಿದೆ. ಇದರಲ್ಲಿ ದೇವಿ ಚಾಮುಂಡಿಯ ಎರಡು ವಿಭಿನ್ನ ಸ್ವರೂಪಗಳಾದ ರಕ್ಷಕ ಶಕ್ತಿ ಮತ್ತು ಸಂಹಾರಕ ಶಕ್ತಿಗಳನ್ನು ಪ್ರತಿಬಿಂಬಿಸಲಾಗಿದೆ. ಭಕ್ತರನ್ನು ಕಾಪಾಡುವ ತಾಯಿಯೇ ಅಧರ್ಮ ಮತ್ತು ದುಷ್ಟ ಶಕ್ತಿಗಳ ವಿರುದ್ಧ ಸಂಹಾರಕ್ಕೆ ಮುಂದಾಗುವ ಆದಿಶಕ್ತಿ ಎಂಬ ಪುರಾಣದ ಪರಿಕಲ್ಪನೆಯನ್ನು ಪೋಸ್ಟರ್ ಬಿಂಬಿಸುತ್ತದೆ.

“ಸಾಲಹೋಳು ಅವಳೇ… ಸಂಹಾರ ಮಾಡೋಳು ಅವಳೇ!” ಎಂಬ ಆಶಯದ ಮೂಲಕ, ಕರುಣೆ ಮತ್ತು ಉಗ್ರತೆ ಎರಡನ್ನೂ ತನ್ನೊಳಗೆ ಹೊಂದಿರುವ ದೇವಿಯ ಪರಮಶಕ್ತಿಯನ್ನು ಚಿತ್ರತಂಡ ಪರಿಚಯಿಸಿದೆ. ಪ್ರಕೃತಿಯನ್ನು ಕಾಪಾಡುವ ಶಕ್ತಿಯಾಗಿ ದೇವಿಯನ್ನು ಚಿತ್ರಿಸುವುದರ ಜೊತೆಗೆ, ಪ್ರಕೃತಿಯ ಸಮತೋಲನವನ್ನು ನಾಶಮಾಡುವ ದುಷ್ಟ ಶಕ್ತಿಗಳ ವಿರುದ್ಧದ ಸಂಘರ್ಷವನ್ನೂ ಈ ಪೋಸ್ಟರ್ ಸಂಕೇತಿಸುತ್ತದೆ

ಮೈಸೂರಿನ ನೆಲದಲ್ಲಿ ಹುಟ್ಟಿ ಬೆಳೆದ ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥೆಗಳನ್ನು ಹೇಳುವ ಪ್ರಯತ್ನ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದ ಶ್ರೀಮಾನ್ ಯದುವೀರ ಒಡೆಯರ್ ಅವರಿಗೆ ‘ರುಧಿರ್ವನ’ ಚಿತ್ರತಂಡ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದೆ. ಅವರ ಬೆಂಬಲ ಚಿತ್ರತಂಡಕ್ಕೆ ಹೊಸ ಉತ್ಸಾಹ ಮತ್ತು ಸ್ಫೂರ್ತಿಯನ್ನು ನೀಡಿದೆ.

rudhirva1

ಕರ್ನಾಟಕದ ಪುರಾಣ, ಜಾನಪದ ಪರಂಪರೆ ಮತ್ತು ದೈವಿಕ ನಂಬಿಕೆಗಳ ಹಿನ್ನೆಲೆಯನ್ನು ಹೊಂದಿರುವ ‘ರುಧಿರ್ವನ’ ಚಿತ್ರವು ದೇವಿ ಚಾಮುಂಡಿ ಮತ್ತು ರಾಕ್ಷಸ ಶಕ್ತಿಗಳ ನಡುವಿನ ಸಂಘರ್ಷವನ್ನು ತನ್ನ ಕಥೆಯ ಕೇಂದ್ರವಾಗಿರಿಸಿಕೊಂಡಿದೆ. ಪುರಾಣಗಳಲ್ಲಿನ ದೈವಿಕ ಶಕ್ತಿಗಳು, ದುಷ್ಟ ಶಕ್ತಿಗಳು ಹಾಗೂ ಪ್ರಕೃತಿಯೊಂದಿಗಿನ ಮಾನವನ ಸಂಬಂಧವನ್ನು ಚಿತ್ರವು ವಿಶಿಷ್ಟವಾಗಿ ಕಟ್ಟಿಕೊಡುತ್ತದೆ.

ಅರಣ್ಯನಾಶ ಮತ್ತು ಪ್ರಕೃತಿಯ ಮೇಲಿನ ಮಾನವನ ದುರಾಸೆ ಚಿತ್ರದ ಪ್ರಮುಖ ಆಶಯಗಳಾಗಿವೆ. ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳನ್ನು ನಾಶಪಡಿಸುವ ಮಾನವೀಯ ಪ್ರವೃತ್ತಿಯನ್ನು ಪುರಾಣ ಮತ್ತು ಜಾನಪದದ ರೂಪಕಗಳೊಂದಿಗೆ ಬೆಸೆಯುವ ಮೂಲಕ, ‘ರುಧಿರ್ವನ’ ಕೇವಲ ಭಯಾನಕ ಅನುಭವಕ್ಕೆ ಸೀಮಿತವಾಗದೆ, ಪ್ರಕೃತಿ ಮತ್ತು ಮಾನವನ ನಡುವಿನ ಸಂಘರ್ಷದ ಕುರಿತು ಚಿಂತನೆಗೆ ಪ್ರೇರೇಪಿಸುವ ಪ್ರಯತ್ನ ಮಾಡುತ್ತದೆ.

ಚಿತ್ರತಂಡದ ಪ್ರಯಾಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲೆಂದರೆ, ‘ರುಧಿರ್ವನ’ ಚಿತ್ರವು 56ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಭಾರತ (IFFI), ಗೋವಾ – 2025ರ ಗೋಲಾ ಪ್ರೀಮಿಯರ್ ವಿಭಾಗಕ್ಕೆ ಅಧಿಕೃತವಾಗಿ ಆಯ್ಕೆಯಾಗಿತ್ತು. ಈ ವಿಭಾಗದಲ್ಲಿ ಆಯ್ಕೆಯಾದ ಏಕೈಕ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯನ್ನೂ ಚಿತ್ರ ತನ್ನದಾಗಿಸಿಕೊಂಡಿತ್ತು. ಈ ಮನ್ನಣೆ ಚಿತ್ರತಂಡದ ಪ್ರಯತ್ನಕ್ಕೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಗುರುತನ್ನು ತಂದುಕೊಟ್ಟಿದೆ.

ಸ್ಥಳೀಯ ಪ್ರತಿಭೆಗಳ ಪರಿಶ್ರಮ, ಕರ್ನಾಟಕದ ಸಾಂಸ್ಕೃತಿಕ ಬೇರುಗಳು ಮತ್ತು ವಿಭಿನ್ನ ಕಥಾಹಂದರದೊಂದಿಗೆ ‘ರುಧಿರ್ವನ’ ಕನ್ನಡ ಪ್ರೇಕ್ಷಕರಿಗೆ ಹೊಸ ಬಗೆಯ ಹಾರರ್ ಅನುಭವವನ್ನು ನೀಡುವ ನಿರೀಕ್ಷೆಯಿದೆ.

‘ರುಧಿರ್ವನ’ – ನವೆಂಬರ್ 27, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ.ಮೈಸೂರಿನ ಪ್ರತಿಭೆಗಳ ಸಿನಿ ಪ್ರಯತ್ನಕ್ಕೆ ರಾಜವಂಶದ ಪ್ರೋತ್ಸಾಹ; ನವೆಂಬರ್ 27ರಂದು ತೆರೆಗೆ ಬರಲಿದೆ ‘ರುಧಿರ್ವನ’

ಶ್ರೀಮಾನ್ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಚಿತ್ರದ ಬಿಡುಗಡೆ ದಿನಾಂಕದ ಪೋಸ್ಟರ್ ಅನಾವರಣ

ಮೈಸೂರು: ಮೈಸೂರಿನ ಪ್ರತಿಭಾವಂತ ಚಿತ್ರತಂಡವೊಂದು ರೂಪಿಸಿರುವ ಕನ್ನಡದ ಜಾನಪದ ಹಾರರ್ ಚಿತ್ರ ‘ರುಧಿರ್ವನ’ ನವೆಂಬರ್ 27, 2026ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವ ಪೋಸ್ಟರ್ ಅನ್ನು ಮೈಸೂರಿನ ಮಹಾರಾಜರಾದ ಶ್ರೀಮಾನ್ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅನಾವರಣಗೊಳಿಸಿದ್ದು, ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಚಿತ್ರತಂಡದ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಚಿತ್ರದ ಬಿಡುಗಡೆ ಪೋಸ್ಟರ್ ಕೂಡ ತನ್ನದೇ ಆದ ವಿಶಿಷ್ಟ ಆಶಯವನ್ನು ಹೊಂದಿದೆ. ಇದರಲ್ಲಿ ದೇವಿ ಚಾಮುಂಡಿಯ ಎರಡು ವಿಭಿನ್ನ ಸ್ವರೂಪಗಳಾದ ರಕ್ಷಕ ಶಕ್ತಿ ಮತ್ತು ಸಂಹಾರಕ ಶಕ್ತಿಗಳನ್ನು ಪ್ರತಿಬಿಂಬಿಸಲಾಗಿದೆ. ಭಕ್ತರನ್ನು ಕಾಪಾಡುವ ತಾಯಿಯೇ ಅಧರ್ಮ ಮತ್ತು ದುಷ್ಟ ಶಕ್ತಿಗಳ ವಿರುದ್ಧ ಸಂಹಾರಕ್ಕೆ ಮುಂದಾಗುವ ಆದಿಶಕ್ತಿ ಎಂಬ ಪುರಾಣದ ಪರಿಕಲ್ಪನೆಯನ್ನು ಪೋಸ್ಟರ್ ಬಿಂಬಿಸುತ್ತದೆ.

“ಸಾಲಹೋಳು ಅವಳೇ… ಸಂಹಾರ ಮಾಡೋಳು ಅವಳೇ!” ಎಂಬ ಆಶಯದ ಮೂಲಕ, ಕರುಣೆ ಮತ್ತು ಉಗ್ರತೆ ಎರಡನ್ನೂ ತನ್ನೊಳಗೆ ಹೊಂದಿರುವ ದೇವಿಯ ಪರಮಶಕ್ತಿಯನ್ನು ಚಿತ್ರತಂಡ ಪರಿಚಯಿಸಿದೆ. ಪ್ರಕೃತಿಯನ್ನು ಕಾಪಾಡುವ ಶಕ್ತಿಯಾಗಿ ದೇವಿಯನ್ನು ಚಿತ್ರಿಸುವುದರ ಜೊತೆಗೆ, ಪ್ರಕೃತಿಯ ಸಮತೋಲನವನ್ನು ನಾಶಮಾಡುವ ದುಷ್ಟ ಶಕ್ತಿಗಳ ವಿರುದ್ಧದ ಸಂಘರ್ಷವನ್ನೂ ಈ ಪೋಸ್ಟರ್ ಸಂಕೇತಿಸುತ್ತದೆ

ಮೈಸೂರಿನ ನೆಲದಲ್ಲಿ ಹುಟ್ಟಿ ಬೆಳೆದ ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥೆಗಳನ್ನು ಹೇಳುವ ಪ್ರಯತ್ನ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದ ಶ್ರೀಮಾನ್ ಯದುವೀರ ಒಡೆಯರ್ ಅವರಿಗೆ ‘ರುಧಿರ್ವನ’ ಚಿತ್ರತಂಡ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದೆ. ಅವರ ಬೆಂಬಲ ಚಿತ್ರತಂಡಕ್ಕೆ ಹೊಸ ಉತ್ಸಾಹ ಮತ್ತು ಸ್ಫೂರ್ತಿಯನ್ನು ನೀಡಿದೆ.

ಕರ್ನಾಟಕದ ಪುರಾಣ, ಜಾನಪದ ಪರಂಪರೆ ಮತ್ತು ದೈವಿಕ ನಂಬಿಕೆಗಳ ಹಿನ್ನೆಲೆಯನ್ನು ಹೊಂದಿರುವ ‘ರುಧಿರ್ವನ’ ಚಿತ್ರವು ದೇವಿ ಚಾಮುಂಡಿ ಮತ್ತು ರಾಕ್ಷಸ ಶಕ್ತಿಗಳ ನಡುವಿನ ಸಂಘರ್ಷವನ್ನು ತನ್ನ ಕಥೆಯ ಕೇಂದ್ರವಾಗಿರಿಸಿಕೊಂಡಿದೆ. ಪುರಾಣಗಳಲ್ಲಿನ ದೈವಿಕ ಶಕ್ತಿಗಳು, ದುಷ್ಟ ಶಕ್ತಿಗಳು ಹಾಗೂ ಪ್ರಕೃತಿಯೊಂದಿಗಿನ ಮಾನವನ ಸಂಬಂಧವನ್ನು ಚಿತ್ರವು ವಿಶಿಷ್ಟವಾಗಿ ಕಟ್ಟಿಕೊಡುತ್ತದೆ.

ಅರಣ್ಯನಾಶ ಮತ್ತು ಪ್ರಕೃತಿಯ ಮೇಲಿನ ಮಾನವನ ದುರಾಸೆ ಚಿತ್ರದ ಪ್ರಮುಖ ಆಶಯಗಳಾಗಿವೆ. ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳನ್ನು ನಾಶಪಡಿಸುವ ಮಾನವೀಯ ಪ್ರವೃತ್ತಿಯನ್ನು ಪುರಾಣ ಮತ್ತು ಜಾನಪದದ ರೂಪಕಗಳೊಂದಿಗೆ ಬೆಸೆಯುವ ಮೂಲಕ, ‘ರುಧಿರ್ವನ’ ಕೇವಲ ಭಯಾನಕ ಅನುಭವಕ್ಕೆ ಸೀಮಿತವಾಗದೆ, ಪ್ರಕೃತಿ ಮತ್ತು ಮಾನವನ ನಡುವಿನ ಸಂಘರ್ಷದ ಕುರಿತು ಚಿಂತನೆಗೆ ಪ್ರೇರೇಪಿಸುವ ಪ್ರಯತ್ನ ಮಾಡುತ್ತದೆ.

ಚಿತ್ರತಂಡದ ಪ್ರಯಾಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲೆಂದರೆ, ‘ರುಧಿರ್ವನ’ ಚಿತ್ರವು 56ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಭಾರತ (IFFI), ಗೋವಾ – 2025ರ ಗೋಲಾ ಪ್ರೀಮಿಯರ್ ವಿಭಾಗಕ್ಕೆ ಅಧಿಕೃತವಾಗಿ ಆಯ್ಕೆಯಾಗಿತ್ತು. ಈ ವಿಭಾಗದಲ್ಲಿ ಆಯ್ಕೆಯಾದ ಏಕೈಕ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯನ್ನೂ ಚಿತ್ರ ತನ್ನದಾಗಿಸಿಕೊಂಡಿತ್ತು. ಈ ಮನ್ನಣೆ ಚಿತ್ರತಂಡದ ಪ್ರಯತ್ನಕ್ಕೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಗುರುತನ್ನು ತಂದುಕೊಟ್ಟಿದೆ.

ಸ್ಥಳೀಯ ಪ್ರತಿಭೆಗಳ ಪರಿಶ್ರಮ, ಕರ್ನಾಟಕದ ಸಾಂಸ್ಕೃತಿಕ ಬೇರುಗಳು ಮತ್ತು ವಿಭಿನ್ನ ಕಥಾಹಂದರದೊಂದಿಗೆ ‘ರುಧಿರ್ವನ’ ಕನ್ನಡ ಪ್ರೇಕ್ಷಕರಿಗೆ ಹೊಸ ಬಗೆಯ ಹಾರರ್ ಅನುಭವವನ್ನು ನೀಡುವ ನಿರೀಕ್ಷೆಯಿದೆ.

‘ರುಧಿರ್ವನ’ – ನವೆಂಬರ್ 27, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ