–  ರಾಘವೇಂದ್ರ ಅಡಿಗ ಎಚ್ಚೆನ್.

ಯಶ್ವಂತ್ ಕುಮಾರ್ ಮತ್ತು ಮಂದಾರ ಬತ್ತಲಹಳ್ಳಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ, ಸಚಿನ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ `ಸಮುದ್ರ ಮಂಥನ’ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಸ್ಕಂದ ಅಶೋಕ್ ನಟಿಸುತ್ತಿದ್ದಾರೆ. `ಯೂ ಟರ್ನ್’, `ಚಾರುಲತಾ’ ಚಿತ್ರಗಳಲ್ಲಿ ನಟಿಸಿದ್ದ ಸ್ಕಂದ ಅಶೋಕ್, ಇಲ್ಲಿ ಪೆÇಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

1001900815

“ಸಮುದ್ರ ಮಂಥನ ಚಿತ್ರದ ಕಥೆ ಮತ್ತು ಈ ಪಾತ್ರಕ್ಕಿರುವ ಮಹತ್ವ ನೋಡಿ ಬಹಳ ಇಷ್ಟಪಟ್ಟು ಒಪ್ಪಿಕೊಂಡೆ. ನಿಜ ಜೀವನದಲ್ಲಿ ನಾನು ಕಾನೂನಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮಾತ್ರವಲ್ಲದೆ, ಸಂಚಾರ ನಿಯಮಗಳನ್ನು ಉಲ್ಲಂಘಿಸಬಾರದೆಂಬ ಜನಜಾಗೃತಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದೆ. ಅಂಥ ನಾನು `ಯೂ ಟರ್ನ್’ ಚಿತ್ರದಲ್ಲಿ ಅದಕ್ಕೆ ತದ್ವಿರುದ್ಧವಾದ ಪಾತ್ರ ಮಾಡಿದ್ದೆ! ಆದರೆ ಈ ಚಿತ್ರದಲ್ಲಿ ಕಾನೂನಿನ ಮೇಲೆ ಅಪಾರ ಗೌರವವಿಟ್ಟುಕೊಂಡು ಕರ್ತವ್ಯ ನಿರ್ವಹಿಸುವ ನಿಷ್ಠಾವಂತ ಪೆÇಲೀಸ್ ಅಧಿಕಾರಿಯ ಪಾತ್ರ ನನ್ನ ನಿಜ ಜೀವನಕ್ಕೆ ಬಹಳ ಹತ್ತಿರವೆನಿಸಿತು. `ಸಮುದ್ರ ಮಂಥನ’ದಲ್ಲಿನ `ಶಿವು’ ಪಾತ್ರ ಯೋಚಿಸುವ ಮತ್ತು ಬದುಕನ್ನು ನೋಡುವ ರೀತಿಗೂ, ನನ್ನ ಯೋಚನಾಲಹರಿಗೂ ಹೆಚ್ಚಿನ ವ್ಯತ್ಯಾಸವಿಲ್ಲ.

1001900817

ಇದು ಪಾತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿಭಾಯಿಸಲು ಪೂರಕವಾಯಿತು. ಜೊತೆಗೆ ಈ ಚಿತ್ರತಂಡದ ಬದ್ಧತೆ ಹಾಗೂ ಪರಿಶ್ರಮ ನನಗೆ ಇಷ್ಟವಾಯಿತು. ಈ ಎಲ್ಲ ಕಾರಣಗಳಿಂದ ನಾನು ಈ ಚಿತ್ರತಂಡದ ಭಾಗವಾದೆ” ಎನ್ನುತ್ತಾರೆ ಸ್ಕಂದ ಅಶೋಕ್.

1001900816

ಇನ್ನು `ಸು ಫ್ರಮ್ ಸೋ’ ಖ್ಯಾತಿಯ ಶಿವಪ್ರಕಾಶ್ ಪೂಂಜಾ, ತುಳು ಚಿತ್ರರಂಗದ ಹೆಸರಾಂತ ಕಲಾವಿದ ರಮೇಶ್ ರೈ ಸೇರಿದಂತೆ ಗುರುರಾಜ್ ಶೆಟ್ಟಿ, ಶ್ರೀಕಾಂತ್, ನವೀನ್ ಶೆಟ್ಟಿ ಮುಂತಾದವರು `ಸಮುದ್ರ ಮಂಥನ’ದ ತಾರಾಗಣದಲ್ಲಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ