Sj*

ಬೆಂಗಳೂರು: ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡುತ್ತಿರುವ ‘ಪ್ರೇಮದ ಊರಲಿ’ ಚಿತ್ರದ ಡಿಜಿಟಲ್ (OTT) ಹಾಗೂ ಸ್ಯಾಟಲೈಟ್ (ಟಿವಿ) ಪ್ರಸಾರದ ಹಕ್ಕುಗಳ ಕುರಿತು ಚಿತ್ರತಂಡ ಮಹತ್ವದ ಸ್ಪಷ್ಟನೆ ನೀಡಿದೆ. ಸದ್ಯಕ್ಕೆ ಚಿತ್ರ ಯಾವುದೇ ಒಟಿಟಿ ಅಥವಾ ಟಿವಿ ವಾಹಿನಿಗಳಿಗೆ ಮಾರಾಟವಾಗಿಲ್ಲ ಎಂದು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ.

ದೊಡ್ಡ ಪರದೆಯ ಅನುಭವಕ್ಕೆ ಮೊದಲ ಆದ್ಯತೆ

ಚಿತ್ರವು ರಾಜ್ಯಾದ್ಯಂತ ಪ್ರೇಕ್ಷಕರ ಅಪಾರ ಪ್ರೀತಿ, ಮೆಚ್ಚುಗೆ ಹಾಗೂ ಬೆಂಬಲದೊಂದಿಗೆ ಮುನ್ನುಗ್ಗುತ್ತಿರುವ ಬೆನ್ನಲ್ಲೇ, ಚಿತ್ರತಂಡ ಪ್ರೇಕ್ಷಕರೊಂದಿಗೆ ಈ ವಿಷಯವನ್ನು ಹಂಚಿಕೊಂಡಿದೆ. "ನಮ್ಮ ಮೊದಲ ಆದ್ಯತೆ ಯಾವತ್ತಿದ್ದರೂ ಚಿತ್ರಮಂದಿರಗಳೇ. ಪ್ರೇಕ್ಷಕರು 'ಪ್ರೇಮದ ಊರಲಿ' ಚಿತ್ರವನ್ನು ದೊಡ್ಡ ಪರದೆಯ ಮೇಲೆಯೇ ನೋಡಿ ಆಸ್ವಾದಿಸಬೇಕು. ಚಿತ್ರದ ಭಾವನೆ, ಪ್ರೀತಿ ಮತ್ತು ಕಥೆಯ ಸಾರವನ್ನು ಚಿತ್ರಮಂದಿರದ ವಾತಾವರಣದಲ್ಲೇ ಪೂರ್ಣವಾಗಿ ಅನುಭವಿಸಬೇಕು ಎಂಬುದು ನಮ್ಮ ಮುಖ್ಯ ಉದ್ದೇಶ" ಎಂದು ತಂಡ ತಿಳಿಸಿದೆ.

oorali.

ಯಾವುದೇ ಸಂಸ್ಥೆಯೊಂದಿಗೂ ಒಪ್ಪಂದವಾಗಿಲ್ಲ

ಇತ್ತೀಚೆಗೆ ಸಿನಿಮಾ ಹಿಟ್ ಆಗುತ್ತಿದ್ದಂತೆ ಡಿಜಿಟಲ್ ಹಾಗೂ ಟಿವಿ ಪ್ರಸಾರದ ಕುರಿತು ಹರಿದಾಡುತ್ತಿದ್ದ ಮಾತುಗಳಿಗೆ ತೆರೆ ಎಳೆದಿರುವ ಚಿತ್ರತಂಡ, "OTT ಅಥವಾ ಟಿವಿ ಪ್ರಸಾರ ಹಕ್ಕುಗಳಿಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಸಂಸ್ಥೆ ಅಥವಾ ವೇದಿಕೆಯೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ. ಯಾವುದೇ ರೀತಿಯ ಅಧಿಕೃತ ಬದ್ಧತೆಯನ್ನೂ ನೀಡಿಲ್ಲ. ಸದ್ಯಕ್ಕೆ ಈ ಕುರಿತು ಯಾವುದೇ ತೀರ್ಮಾನವನ್ನೂ ಕೈಗೊಂಡಿಲ್ಲ" ಎಂದು ಸ್ಪಷ್ಟಪಡಿಸಿದೆ.

ಮುಂದಿನ ದಿನಗಳಲ್ಲಿ OTT ಅಥವಾ ಸ್ಯಾಟಲೈಟ್ ಹಕ್ಕುಗಳ ಕುರಿತು ಯಾವುದೇ ಬೆಳವಣಿಗೆಗಳು ನಡೆದರೆ, ಆ ಅಧಿಕೃತ ಮಾಹಿತಿಯನ್ನು ಚಿತ್ರತಂಡವೇ ನೇರವಾಗಿ ಪ್ರಕಟಿಸಲಿದೆ ಎಂದು ಹೇಳಿದೆ. ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಹರಸುತ್ತಿರುವ ಪ್ರತಿಯೊಬ್ಬ ಸಿನಿಪ್ರಿಯರಿಗೂ ಧನ್ಯವಾದ ತಿಳಿಸಿರುವ ತಂಡ, "ಪ್ರೇಕ್ಷಕರ ಪ್ರೀತಿಯೇ ನಮ್ಮ ಸಿನಿಮಾದ ನಿಜವಾದ ಗೆಲುವು" ಎಂದು ಕೃತಜ್ಞತೆ ವ್ಯಕ್ತಪಡಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ