ಮೊದಲೆಲ್ಲ ಬಿಜಾಪುರ, ಬಾಗಲಕೋಟೆ ಕಡೆಯಿಂದ ಕರಾವಳಿ ಕಡೆಗೆ ಕೂಲಿ ಕೆಲಸಕ್ಕೆ ಬಂದೋರು 3 ತಿಂಗಳಿಗೊಮ್ಮೆ- 6 ತಿಂಗಳಿಗೊಮ್ಮೆ ಊರಿಗೆ ಹೋಗ್ತಿದಿದ್ದೆ ಹೆಚ್ಚು,

ಈಗ 3 ದಿನಕ್ಕೊಮ್ಮೆ ವಾರಕ್ಕೊಮ್ಮೆ ಬಸ್ ಹತ್ತು ನಡಿ,
ಏನಮ್ಮ ವಾರದಲ್ಲಿ 2-3 ದಿನ ಕೆಲಸಕ್ಕೆ ಬರಲ್ಲ ನೀನು ಯಾಕೆ ಅಂತ ಕೇಳಿದ್ರೆ,

ರೊಟ್ಟಿ ತಿನ್ನಾಕ ಚಟ್ನಿ ಪುಡಿ ಖಾಲಿ ಆಗಿತ್ತರಿ ಅದಕ್ಕ ಊರಿಗೆ ಹೋಗಿ ತಗೊಂಡ್ ಬಂದ್ನಿ,

ಒಂದು ಕೇಜಿ ಚಟ್ನಿಪುಡಿ ತರಕ್ಕೆ ಉಡುಪಿಯಿಂದ ಬಾಗಲಕೋಟೆಗೆ ಹೋಗಿ ಬರೋದು,
ಹೋಗಕ್ಕೆ 450 ಕಿಮೀ
ವಾಪಾಸ್ ಬರಕ್ಕೆ 450 ಕಿಮೀ ರಿ

ಅಣ್ಣಾರ ನಮ್ಮವ್ವ ಫೋನ್ ಮಾಡಿ, ನಿನ್ ನೋಡಿ ಬಾಳ್ ದಿನ ಆದ್ವು ಅಂತ ನೆನಸ್ಕೊತಿದ್ಲುರಿ, ಅದಕ್ಕ ಹೋಗಿ ಬಂದ್ನಿ.

ಕೆಲಸ ಬಿಟ್ಟು ಪದೇ ಪದೇ ಹೋಗ್ತಿಯಲ್ಲ ಅಂದ್ರೆ, ಫ್ರೀ ಬಸ್ ಬಿಟ್ಟಾರರ್ಲಿ ಅಂತಾಳಲ್ಲ.

ಎರಡು ವರ್ಷದಲ್ಲಿ ಅಪಾರ್ಟಮೆಂಟ್ ಕಟ್ಟಿ ಮುಗಿಸಿಕೊಡ್ತೀವಿ ಅಂತ ಇಂಜಿನಿಯರ್, ಕಂಟ್ರಾಕ್ಟರ್ ಒಪ್ಕೊಂಡಿರ್ತಾರೆ, ಮೇಸ್ತ್ರಿಗೆ ಫೌಂಡೇಶನ್ ಕಟ್ಟಿ ಗಟ್ಟಿ ಮಾಡಕ್ಕೆ ಎರಡು ವರ್ಷ ಆಗೋಗಿರತ್ತೆ ಬಿಜಾಪುರ-ಬಾಗಲಕೋಟೆ ಸುತ್ತಾಟದೊಳಗೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ