ತಂಡದ ಜೊತೆ ಬೆರೆತು ಹಲವು ಗಾಡಿಗಳ ಬೆಸ್ಟ್ ಡಿಸೈನಿಂಗ್
ಚೇಂಜ್ ಮೇಕರ್ ಆಟೋಮೋಟಿವ್ ಇಂಡಸ್ಟ್ರಿ ಅವಾರ್ಡ್
ನೀವು ಯಾವುದಾದರೂ ಐಕಾನಿಕ್ ಇಂಡಿಯನ್ ವಾಹನದ ಕುರಿತಾಗಿ ಯೋಚಿಸಿದರೆ, ಎಲ್ಲಕ್ಕಿಂತ ನಿಮಗೆ ಮೊದಲು ಹೊಳೆಯುವ ಹೆಸರು ಎಂದರೆ, ಮಹೀಂದ್ರಾ ಥಾರ್ ಹಾಗೂ ಸ್ಕಾರ್ಪಿಯೋ. ಈ ಎರಡೂ ಗಾಡಿಗಳ ಸಮಾನತೆಯ ಕುರಿತಾಗಿ ನಾವು ಯೋಚಿಸಿದರೆ, ತಕ್ಷಣ ರಾಮಕೃಪಾ ಅನಂತನ್ ರ ಹೆಸರು ಹೊಳೆಯುತ್ತದೆ. ಈಕೆ ಒಬ್ಬ ಪ್ರಸಿದ್ಧ, ಯಶಸ್ವೀ ಆಟೋಮೊಬೈಲ್ ಡಿಸೈನಿಂಗ್ ಎಂಜಿನಿಯರ್. ಜನ ಬಯಸಿ ಬಂದು ಆರಿಸಿಕೊಳ್ಳುವಂಥ ಗಾಡಿಗಳನ್ನೇ ಈಕೆ ತಂಡದೊಡನೆ ಬೆರೆತು ಡಿಸೈನ್ ಮಾಡಿದ್ದಾರೆ.
ಈಕೆ ಸ್ಕಾರ್ಪಿಯೋಗಳು ಮಾತ್ರವಲ್ಲದೆ, ಮಹೀಂದ್ರಾ ಥಾರ್ ಮಾಡೆಲ್ ನ್ನು ಸಹ ಡಿಸೈನ್ ಮಾಡಿದ್ದಾರೆ. ಮಹೀಂದ್ರಾ ಕಂಪನಿಯ ಈ ಎಲ್ಲಾ ಗಾಡಿಗಳೂ, ನಮ್ಮ ದೇಶದ ಗಾಡಿಪ್ರಿಯರಿಗೆ ಬಹಳ ಅಚ್ಚುಮೆಚ್ಚು. ಅವರು ಈಗ ಓಲಾ ಎಲೆಕ್ಟ್ರಿಕ್ ನಲ್ಲಿದ್ದಾರೆ ಹಾಗೂ ಈ ಕಂಪನಿಯ ಯಶಸ್ವೀ ಡಿಸೈನಿಂಗ್ ಹೆಡ್ ಆಗಿದ್ದಾರೆ. ಆಕೆ 1997ರಿಂದ ತಮ್ಮ ಕೆರಿಯರ್ ಆರಂಭಿಸಿದರು, ಈ 28 ವರ್ಷಗಳಲ್ಲಿ ಅವರು ವಿಶ್ವದೆಲ್ಲೆಡೆ ಭಾರತದ ಕೀರ್ತಿಪತಾಕೆ ಹಾರಿಸಿದ್ದಾರೆ.
ಸವಾಲುಗಳೊಂದಿಗೆ ಸಂಘರ್ಷ
ಗಾಡಿ ಡಿಸೈನಿಂಗ್ ನಂಥ ಪುರುಷಪ್ರಧಾನ ಇಂಡಸ್ಟ್ರಿಯಲ್ಲಿ ರಾಮಕೃಪಾರಿಗೆ ನೆಲೆ ಕಂಡುಕೊಳ್ಳುವುದು ಸುಲಭ ಆಗಿರಲಿಲ್ಲ. ಆಕೆ ತಮ್ಮ ಶ್ರದ್ಧೆ, ಪರಿಶ್ರಮ, ಧೈರ್ಯದ ಆಧಾರದಿಂದ ಆಟೋಮೊಬೈಲ್ ಕ್ಷೇತ್ರದಲ್ಲಿ, ಇಂದಿನ ಎಲ್ಲಾ ಯುವತಿಯರಿಗೂ ರೋಲ್ಮಾಡೆಲ್ ಆಗಿದ್ದಾರೆ. ನಮ್ಮ ದೇಶ ಮಾತ್ರವಲ್ಲದೆ, ವಿಶ್ವಾದ್ಯಂತ ಹೆಸರು ಗಳಿಸಿದ್ದಾರೆ.
ರಾಮಕೃಪಾ ಮೂಲತಃ ಬಿಟ್ಸ್ ಪಿಲಾನಿಯಲ್ಲಿ ಮೆಕ್ಯಾನಿಕ್ ಎಂಜಿನಿಯರಿಂಗ್ ಕಲಿತರು. ಈಕೆ ಬಾಂಬೆಯಿಂದ ಡಿಸೈನ್ ಪ್ರೋಗ್ರಾಮಿನಲ್ಲಿ ಮಾಸ್ಟರ್ಸ್ ಸಹ ಪಡೆದಿದ್ದಾರೆ. ಕಲಿಕೆ ಮುಗಿಸಿದ ನಂತರ ಈಕೆ ಮಹೀಂದ್ರಾ ಮಹೀಂದ್ರಾ ಕಂಪನಿಯಿಂದಲೇ ತಮ್ಮ ಕೆರಿಯರ್ ಆರಂಭಿಸಿದರು. 1997ರಲ್ಲಿ ಇಂಟೀರಿಯರ್ ಡಿಸೈನರ್ ಆಗಿ ಪೋಸ್ಟ್ ಸ್ವೀಕರಿಸಿದರು.
8 ವರ್ಷಗಳ ಅನಂತರ ಅಂದರೆ 2005ರಲ್ಲಿ, ಅದೇ ಕಂಪನಿಯಲ್ಲಿ ಈಕೆಯನ್ನು ಡಿಸೈನಿಂಗ್ ಡಿಪಾರ್ಟ್ ಮೆಂಟಿನ ಹೆಡ ಮಾಡಲಾಯಿತು. ಈ ಹುದ್ದೆಗೇರಿದ ನಂತರ ಇವರು ತಮ್ಮ ತಂಡದ ಜೊತೆ ಬೆರೆತು ಹಲವಾರು ಗಾಡಿಗಳನ್ನು ಡಿಸೈನ್ ಮಾಡಿದ್ದಾರೆ. ಇದರಲ್ಲಿ ಥಾರ್, ಸ್ಕಾರ್ಪಿಯೋಗಳಂಥ 3 ಐಕಾನಿಕ್ ಡಿಸೈನ್ ಗಳನ್ನು ಜನ ಬಹಳ ಮೆಚ್ಚಿಕೊಂಡಿದ್ದಾರೆ.

ಜನಪ್ರಿಯ ಗಾಡಿಗಳ ಡಿಸೈನರ್
ಈಕೆ ತಮ್ಮ ತಂಡದ ಜೊತೆ ಡಿಸೈನ್ ಗೊಳಿಸಲಾದ ಕಾರುಗಳ ಪಟ್ಟಿಯಲ್ಲಿ ಬೊಲೆರೋ, ಜೈಲೋ, ಮಹೀಂದ್ರ ಸ್ಕಾರ್ಪಿಯೋ, ಮಹೀಂದ್ರ ಥಾರ್ ಬಲು ಮುಖ್ಯವಾದವು. ಈಕೆ ಆಟೋ ಇಂಡಸ್ಟ್ರಿ ಲೋಕದಲ್ಲಿ ದೊಡ್ಡ ಹೆಸರು ಗಳಿಸಿದ್ದಾರೆ.
ಪ್ರೇರಣೆಗೆ ಮೂಲ
ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಸಾಧನೆಗಾಗಿ ಇನ್ನೊಬ್ಬರಿಂದ ಪ್ರೇರಣೆ ಪಡೆದಿರುತ್ತಾರೆ. ಈ ನಿಟ್ಟಿನಲ್ಲಿ ರಾಮಕೃಪಾರಿಗೆ ಪ್ರೇರಣೆ ನೀಡಿದವರು ಅವರ ತಾಯಿ. ಈಕೆ FB ನಲ್ಲಿ ಇದನ್ನು ಹಂಚಿಕೊಳ್ಳುತ್ತಾ, ತಾನು ಹುಟ್ಟಿದ ನಂತರ ಅಮ್ಮ ಪದವಿ ಪಡೆದವರು ಎಂದು ಹೆಮ್ಮೆ ಪಡುತ್ತಾರೆ. ಮೂವರು ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸುತ್ತಾ, ಆಕೆಯ ತಾಯಿ PUC, BA, MA, B.Ed. ಶಿಕ್ಷಣ ಪೂರೈಸಿದರು, ಆದರ್ಶ ಶಿಕ್ಷಕಿ ಎನಿಸಿದವರು. 70ರ ಆಸುಪಾಸಿನಲ್ಲಿ ಆಕೆ ನಿವೃತ್ತಿ ಹೊಂದಿದರು. ಆ ನಂತರ ಸಂಸ್ಕೃತದಲ್ಲಿ ಮತ್ತೊಂದು ಡಿಗ್ರಿ ಪಡೆದರಂತೆ! ತಾಯಿಯ ಈ ಅನವರತ ಸಾಧನೆ, ತಮ್ಮ ಎಲ್ಲಾ ಸಾಧನೆಗಳಿಗೂ ಮೂಲ ಎನ್ನುತ್ತಾರೆ ರಾಮಕೃಪಾ.
ಈ ತರಹ ಈಕೆ ಕೇವಲ ಒಬ್ಬ ಆಟೋಮೊಬೈಲ್ ಡಿಸೈನಿಂಗ್ ಎಂಜಿನಿಯರ್ ಮಾತ್ರವಲ್ಲದೆ, ಒಬ್ಬ ವಿಲಕ್ಷಣ ಪ್ರತಿಭಾ ಗಣಿ! ಈಕೆ ಇಂಡಿಯನ್ ಆಟೋಮೊಬೈಲ್ ಕ್ಷೇತ್ರದಲ್ಲಿ ಒಂದು ಶಾಶ್ವತ ಸ್ಥಾನ ಗಳಿಸಿದ್ದಾರೆ. ಒಬ್ಬ ಯಶಸ್ವಿ ಮಹಿಳಾ ಎಂಜಿನಿಯರ್ಡಿಸೈನರ್ ಆಗಿರುವುದರಿಂದ, ಇಂದಿನ ಆಧುನಿಕ ತರುಣಿಯರಿಗೆ ಅತಿ ಹೆಚ್ಚು ಪ್ರೇರಣಾದಾಯಕರಾಗಬಲ್ಲರು! ಇವರ ಸಾಧನೆ ಗುರುತಿಸಿ, ಇಂದಿನ ಆಧುನಿಕ ಹುಡುಗಿಯರು ಹೆಚ್ಚಿನ ಉತ್ಸಾಹ ಪಡೆಯಬೇಕಿದೆ!
– ಸೋಮಾ ಘೋಷ್





