ಅಮೆರಿಕಕ್ಕೆ ಸಿಟ್ಟು, ಚೀನಾಕ್ಕೆ ನಡುಕ: ಜಾಗತಿಕ ಶಕ್ತಿಗಳ ನಿದ್ದೆಗೆಡಿಸಿದ ಭಾರತ ಎಂಬ ಹೊಸ ಸಾರಥಿ!ಜಗತ್ತಿನ ಕಣ್ಣು ಕುಕ್ಕುತ್ತಿದೆಯಾ?

ಇತ್ತೀಚಿನ ದಿನಗಳಲ್ಲಿ ಇಡೀ ಜಗತ್ತಿಗೆ ಭಾರತದ ಮೇಲೆಯೇ ಒಂದು ರೀತಿಯ ಅಸಮಾಧಾನ,ಆತಂಕ ಮತ್ತು ಅತೀವ ಆಸಕ್ತಿ ಮೂಡಿದೆ. ಇದು ಕೇವಲ ಕಾಕತಾಳೀಯವಲ್ಲ ಬದಲಾಗಿ ಜಾಗತಿಕ ಶಕ್ತಿಯ ಕೇಂದ್ರಬಿಂದು ಸ್ಥಳಾಂತರವಾಗುತ್ತಿರುವುದರ ಸ್ಪಷ್ಟ ಸಂಕೇತ. ಒಮ್ಮೆ ಸೂಕ್ಷ್ಮವಾಗಿ ಗಮನಿಸಿ ಅಮೆರಿಕಕ್ಕೆ ಭಾರತದ ಮೇಲೆ ಸಿಟ್ಟು ಬಂದಿದೆ,ಚೀನಾಕ್ಕೆ ಭಾರತದ ಬೆಳವಣಿಗೆ ಕಂಡು ನಡುಕ ಶುರುವಾಗಿದೆ, ಇನ್ನು ಪಾಕಿಸ್ತಾನಕ್ಕೋ ಎಲ್ಲಿಲ್ಲದ ಚಡಪಡಿಕೆ.

ಹಿತಾಸಕ್ತಿಗಳ ಸಂಘರ್ಷ

ವಿಶ್ವದ ಅತೀ ದೊಡ್ಡ ಟ್ರಿಲಿಯನೇರ್ ಒಬ್ಬ ತನ್ನ ಇಂಟರ್ನೆಟ್ ಸೇವೆಯನ್ನು ಭಾರತೀಯರಿಗೆ ಮಾರಾಟ ಮಾಡಲು ಸಾಮಾಜಿಕ ಜಾಲತಾಣಗಳಲ್ಲಿ ಹಪಾಹಪಿಸುತ್ತಿದ್ದಾನೆ.ಅಮೆರಿಕದ ತೈಲ ದಿಗ್ಗಜ ಕಂಪನಿಗಳಿಗೆ ಭಾರತವು ರಷ್ಯಾದ ತೈಲವನ್ನು ಬಿಟ್ಟು ತಮ್ಮ ತೈಲವನ್ನೇ ಕೊಳ್ಳಬೇಕೆಂಬ ಹಠ. ಅತ್ತ ಅಮೆರಿಕದ ಅಧ್ಯಕ್ಷರಿಗೆ ಭಾರತದ ಬೃಹತ್ ಮಾರುಕಟ್ಟೆಯಲ್ಲಿ ಗರಿಷ್ಠ ಪಾಲು ಬೇಕು, ಅಲ್ಲಿನ ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಭಾರತೀಯರಿಗೆ ಉಣಬಡಿಸುವ ತರಾತುರಿ.

ಇನ್ನೊಂದೆಡೆ,ಚೀನಾಕ್ಕೆ ತನ್ನ ದಶಕಗಳ ಕಾಲದ ಮ್ಯಾನುಫ್ಯಾಕ್ಚರಿಂಗ್ ಸಾಮ್ರಾಜ್ಯ ಎಲ್ಲಿ ಭಾರತದ ಪಾಲಾಗುತ್ತದೆಯೋ ಎಂಬ ಭೀತಿ ಕಾಡುತ್ತಿದೆ. ಪಾಕಿಸ್ತಾನಕ್ಕೋ ಒಂದು ಸುಂದರ ಮುಂಜಾನೆ ಎಚ್ಚರವಾಗುವಷ್ಟರಲ್ಲಿ ಪಾಕ್ ಆಕ್ರಮಿತ ಕಾಶ್ಮೀರ (PoK) ತನ್ನ ಕೈತಪ್ಪಿ ಹೋಗಿರುತ್ತದೆ ಎಂಬ ನಡುಕ. ಭಾರತದ ಒಳಗಿರುವ ಕೆಲವು ರಾಜಕೀಯ ಮನೆತನಗಳಿಗೆ ಕಳೆದುಹೋದ ತಮ್ಮ ಹಳೆಯ ಸಿಂಹಾಸನವನ್ನು ಮರಳಿ ಪಡೆಯುವ ಹಂಬಲ.

images (2) (1)

ಹೊಸ ಸಂಚುಗಳು ಮತ್ತು ಸವಾಲುಗಳು

ಜಗತ್ತಿನ ಬಂಡವಾಳಶಾಹಿ ಬ್ಯಾಂಕರ್‌ಗಳು ಭಾರತದ ಆರ್ಥಿಕತೆಯನ್ನು ಯಾವುದೋ ನೆಪದಲ್ಲಿ ಕುಸಿಯುವಂತೆ ಮಾಡಿ, ಇಲ್ಲಿನ ಅಮೂಲ್ಯ ಆಸ್ತಿಗಳನ್ನು ಅಗ್ಗದ ದರದಲ್ಲಿ ಕಬಳಿಸುವ ಕನಸು ಕಾಣುತ್ತಿದ್ದಾರೆ. ಕೆಲವು ಅವಕಾಶವಾದಿ ನಟ-ನಟಿಯರು ಕ್ಷುಲ್ಲಕ ಪ್ರತಿಭಟನೆಗಳನ್ನೇ ಕ್ರಾಂತಿ ಎಂದು ಬಿಂಬಿಸಲು ಹೊಂಚು ಹಾಕುತ್ತಿದ್ದರೆ, ಅಂತಾರಾಷ್ಟ್ರೀಯ ಮಾಧ್ಯಮಗಳು ಭಾರತವನ್ನು ಒಬ್ಬ ಖಳನಾಯಕ ನಂತೆ ಚಿತ್ರಿಸುತ್ತಾ, ನಕಲಿ ರಕ್ಷಕರನ್ನು ಸೃಷ್ಟಿಸುವ ಕಾರಖಾನೆಯಂತಾಗಿವೆ.

ಭಾರತವೆಂಬ ಮಹಾ ಬಹುಮಾನ

ಈ ಎಲ್ಲ ಚಿತ್ರಣಗಳನ್ನು ಒಗ್ಗೂಡಿಸಿ ನೋಡಿದರೆ ಒಂದು ಸತ್ಯ ನಿಚ್ಚಳವಾಗಿ ಗೋಚರಿಸುತ್ತದೆ.ಜಗತ್ತಿನ ಪ್ರತಿಯೊಬ್ಬರಿಗೂ ಭಾರತದಿಂದ ಏನೋ ಒಂದು ಬೇಕಿದೆ.ಕೆಲವರಿಗೆ ಇಲ್ಲಿನ ಬೃಹತ್ ಮಾರುಕಟ್ಟೆ ಬೇಕು, ಕೆಲವರಿಗೆ ಹಣ,ಇನ್ನು ಕೆಲವರಿಗೆ ಇಲ್ಲಿನ ಸಂಪನ್ಮೂಲ ಮತ್ತು ಪ್ರಭಾವ. 140 ಕೋಟಿ ಜನರ ಈ ದೇಶ ಇಂದು ವಿಶ್ವದ ಅತಿದೊಡ್ಡ ಮಾರುಕಟ್ಟೆ ಮಾತ್ರವಲ್ಲ, ಅದೊಂದು ಜಾಗತಿಕ ಶಕ್ತಿ ಕೇಂದ್ರ.

ಯಾರೂ ಕೂಡ ಬೆಲೆ ಇಲ್ಲದ ವಸ್ತುವಿಗಾಗಿ ಇಷ್ಟೊಂದು ಹೋರಾಡುವುದಿಲ್ಲ. ಅಪ್ರಸ್ತುತವಾಗಿರುವ ದೇಶದ ಮೇಲೆ ಯಾರೂ ಇಷ್ಟೊಂದು ಶಕ್ತಿಯನ್ನು ವ್ಯಯಿಸುವುದಿಲ್ಲ.ಭಾರತದ ಮೇಲೆ ಇಂದು ನಡೆಯುತ್ತಿರುವ ಈ ಎಲ್ಲಾ ದಾಳಿಗಳು, ಒತ್ತಡಗಳು ಮತ್ತು ಆಮಿಷಗಳೇ ಭಾರತ ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ ದೊಡ್ಡ ಸಾಕ್ಷಿ.

ಬದಲಾದ ಆಟದ ನಿಯಮಗಳು

ಹಳೆಯ ಕಾಲದ ಜಾಗತಿಕ ಶಕ್ತಿಗಳಿಗೆ ಒಂದು ಚಾಳಿ ಇತ್ತು. ಯಾರು ಕೊಳ್ಳಬೇಕು,ಯಾರು ಮಾರಬೇಕು, ಯಾರು ಆಳಬೇಕು ಮತ್ತು ಯಾರು ಆಜ್ಞೆಯನ್ನು ಪಾಲಿಸಬೇಕು ಎಂಬುದನ್ನು ಅವರೇ ನಿಯಮದ ಪುಸ್ತಕ ಬರೆದು ನಿರ್ಧರಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಜಗತ್ತಿನ ಹಳೆಯ ಆಟಗಾರರು ಇಂದಿಗೂ ತಾವೇ ಈ ಆಟದ ಮಾಲೀಕರು ಎಂದು ಭಾವಿಸಿದ್ದಾರೆ. ಆದರೆ ಅವರಿಗೆ ಒಂದು ಸತ್ಯದ ಅರಿವಾಗುತ್ತಿಲ್ಲ; ಈ ಆಟದ ಅತಿದೊಡ್ಡ ಬಹುಮಾನ The Prize ಈಗ ಅವರ ನಿಯಮಗಳ ಪ್ರಕಾರ ಆಡಲು ಸಿದ್ಧವಿಲ್ಲ!

005c1ed855f47f3743fe2b08d7167b30

ಕೆಲವರು ಬೆದರಿಕೆಯೊಂದಿಗೆ ಬರುತ್ತಾರೆ, ಕೆಲವರು ತೆರಿಗೆಗಳ ಅಸ್ತ್ರ ಹಿಡಿದು ಬರುತ್ತಾರೆ, ಇನ್ನು ಕೆಲವರು ವ್ಯಾಪಾರ ಮತ್ತು ರಾಜಕೀಯ ಮಹತ್ವಾಕಾಂಕ್ಷೆಯ ಮುಖವಾಡ ಧರಿಸಿ ಬರುತ್ತಾರೆ. ಆದರೆ ಭಾರತ ಇಂದು ತನ್ನ ಹಾದಿಯನ್ನು ತಾನೇ ನಿರ್ಧರಿಸುವ ಹಂತಕ್ಕೆ ತಲುಪಿದೆ. ಜಗತ್ತು ಇಂದು ಭಾರತದ ಮೇಜಿನ ಬಳಿ ಬಂದು ಕುಳಿತುಕೊಳ್ಳಲು ಹಾತೊರೆಯುತ್ತಿದೆ. ಯಾಕೆಂದರೆ,ಆ ಮೇಜಿನ ಮೇಲೆ ಇರುವ ಅದ್ಭುತ ಶಕ್ತಿಯ ಹೆಸರೇ ಭಾರತ.ಇದು ಕೇವಲ ಒಂದು ರಾಷ್ಟ್ರದ ಉದಯವಲ್ಲ, ಇದು ಶತಮಾನಗಳ ಗುಲಾಮಗಿರಿಯ ಸಂಕೋಲೆ ಕಳಚಿದ ಸಾರ್ವಭೌಮ ಶಕ್ತಿ.

-ಮಹಾಂತೇಶ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ