ನೀವು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರೋಗಗಳಿಂದ ರಕ್ಷಿಸಿಕೊಳ್ಳಲು ಬಯಸಿದರೆ, ಈ ಮಾಹಿತಿ ನಿಮಗಾಗಿ……

ನಮ್ಮ ಮನೆಯಲ್ಲಿ ಅಡುಗೆಮನೆ ಒಂದು ಪ್ರಮುಖ ಭಾಗ. ಅಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆಯ ನಿಯಮಗಳನ್ನು ನಿರ್ಲಕ್ಷಿಸಿದರೆ, ಅದು ಅನಾರೋಗ್ಯಕ್ಕೆ ಕಾರಣವಾಗಬಹುದು. ಆದ್ದರಿಂದ, ನೀವು ನಿಮ್ಮ ಅಡುಗೆಮನೆಯನ್ನು ಸ್ವಚ್ಛ ಮತ್ತು ವ್ಯವಸ್ಥಿತವಾಗಿ ಇಟ್ಟುಕೊಂಡಷ್ಟೂ ಅದು ಹೆಚ್ಚು ಪ್ರಯೋಜನಕಾರಿಯಾಗಲಿದೆ. ಇಲ್ಲಿ ಗ್ಯಾಸ್‌ ಇರುತ್ತದೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಮನೆಯ ವಿಶೇಷ ಸ್ಥಳವಾದ ಅಡುಗೆಮನೆಯನ್ನು ಸ್ವಚ್ಛ ಮತ್ತು ವ್ಯವಸ್ಥಿತವಾಗಿ ಇಡುವುದು ಎಷ್ಟು ಮುಖ್ಯವೋ, ಅದನ್ನು ಸುರಕ್ಷಿತವಾಗಿ ಇಡುವುದೂ ಅಷ್ಟೇ ಮುಖ್ಯ. ವಾಸ್ತವವಾಗಿ, ಅಡುಗೆಮನೆಯಲ್ಲಿ ಬೆಂಕಿ ಮತ್ತು ವಿದ್ಯುತ್‌ ನಿಂದ ಬಳಸುವ ಅನೇಕ ಉಪಕರಣಗಳು ಇರುತ್ತವೆ. ಇವುಗಳ ಜೊತೆ ಕತ್ತಿಗಳು, ಮಿಕ್ಸರ್‌ ಬ್ಲೇಡ್‌ ಗಳು ಸೇರಿದಂತೆ ಅನೇಕ ಚೂಪಾದ ವಸ್ತುಗಳು ಸಹ ಇಲ್ಲಿರುತ್ತವೆ.

ಈ ಉಪಕರಣಗಳು ಕೆಲಸವನ್ನು ಸುಲಭಗೊಳಿಸುತ್ತವೆ. ಆದರೆ ಅದೇ ಸಮಯದಲ್ಲಿ ಅವು ಅಪಾಯಕಾರಿಯಾಗಿಯೂ ಪರಿಣಮಿಸುತ್ತವೆ. ಮಕ್ಕಳಿಗೆ ಮತ್ತು ವಯೋವೃದ್ಧರಿಗೆ ಇವು ಅಪಾಯಕಾರಿ ಆಗಿರುತ್ತವೆ. ಹಾಗಾಗಿ ಅಡುಗೆಮನೆಯನ್ನು ಸುರಕ್ಷಿತವಾಗಿಡಲು ಪ್ರಯತ್ನಿಸಿ.

ಅಡುಗೆಮನೆಯಲ್ಲಿ ಆಹಾರ ತಯಾರಿಸಲಾಗುತ್ತದೆ. ಆದ್ದರಿಂದ ಇಲ್ಲಿ ಸಾಕಷ್ಟು ಬೆಳಕು ಇರುವುದು ಬಹಳ ಮುಖ್ಯ. ವಿಶೇಷವಾಗಿ ಸ್ಟವ್ ಇಡುವ ಸ್ಥಳದಲ್ಲಿ ಮಾಡುವ ಅಡುಗೆ ಸ್ಪಷ್ಟವಾಗಿ ಕಾಣುವಂತೆ ಬೆಳಕು ಇರಬೇಕು. ಯಾವುದೇ ಭಾಗದ ಮೇಲೆ ನೆರಳು ಬೀಳದ ರೀತಿಯಲ್ಲಿ ದೀಪಗಳನ್ನು ಅಳವಡಿಸಬೇಕು ಎಂಬುದು ನೆನಪಿನಲ್ಲಿರಲಿ. ಹೀಗೆ ಮಾಡುವುದರಿಂದ ಅಪಘಾತಗಳ ಸಾಧ್ಯತೆ ಕಡಿಮೆಯಾಗುತ್ತದೆ.

ಅಡುಗೆಮನೆ ನೆಲ ಜಾರದಿರಲಿ

ಅಡುಗೆಮನೆಯ ನೆಲ ಸುಗಮವಾಗಿದೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ. ಏಕೆಂದರೆ ಅಲ್ಲಿ ಜಾರುವ ಅಪಾಯ ಹೆಚ್ಚಾಗಿರುತ್ತದೆ. ಅಲ್ಲಿ ನೆಲ ಜಾರದಂತೆ ನೋಡಿಕೊಳ್ಳುವ ಉಪಾಯಗಳನ್ನು ಕಂಡುಕೊಳ್ಳಿ. ಅಡುಗೆಮನೆಯ ಟೈಲ್ಸ್ ನಯವಾಗಿರಬಾರದು. ಜಾರಿ ಬೀಳದಂತೆ ರಕ್ಷಿಸುವ ವಿನ್ಯಾಸ ಹೊಂದಿರಬೇಕು. ನೆಲವನ್ನು ಬದಲಾಯಿಸಲು ನಿಮಗೆ ಸಾಧ್ಯವಾಗದಿದ್ದರೆ, ನೆಲ ಜಾರದಂತೆ ತಡೆಯುವಂತಹ ಮ್ಯಾಟ್‌ ಗಳನ್ನು ಇಟ್ಟುಕೊಂಡು ನೆಲದ ಮೇಲೆ ಅಂಟಿಸಬಹುದು ಅಥವಾ ವುಡನ್‌ ಫ್ಲೋರಿಂಗ್‌ಮಾಡಿಸಿ.

ವಿಶೇಷವಾಗಿ ಅಡುಗೆಮನೆಯಲ್ಲಿ ನೆಲ ಒದ್ದೆಯಾಗಿ ಉಳಿಯುತ್ತದೆ. ಅಲ್ಲಿ ನಿಂತು ಕೆಲಸ ಮಾಡುವಾಗ, ಆಹಾರ ಬೇಯಿಸುವ ಸ್ಥಳಗಳಲ್ಲಿ ಅವುಗಳನ್ನು ಇಡಬಹುದು. ರೆಫ್ರಿಜರೇಟರ್‌, ಮಿಕ್ಸರ್‌ ಮತ್ತು ವಿದ್ಯುತ್‌ ಉಪಕರಣಗಳನ್ನು ನೀರಿನಿಂದ ದೂರವಿಡಿ. ಕುಡಿಯುವ ನೀರಿನ ಫಿಲ್ಟರ್‌ ಅಥವಾ ಸಿಂಕ್‌ ಇರುವಲ್ಲಿ ವಿದ್ಯುತ್‌ ಉಪಕರಣಗಳನ್ನು ಇಡಬೇಡಿ. ಇದು ಶಾರ್ಟ್‌ ಸರ್ಕ್ಯೂಟ್‌ ಗೆ ಕಾರಣವಾಗಬಹುದು. ಅದೇ ರೀತಿ ಒದ್ದೆ ಕೈಗಳಿಂದ ಯಾವುದೇ ವಿದ್ಯುತ್‌ ಉಪಕರಣಗಳನ್ನು ಎಂದಿಗೂ ಬಳಸಬೇಡಿ ಅಥವಾ ಪ್ಲಗ್‌ ಮುಟ್ಟಬೇಡಿ. ಇದು ವಿದ್ಯುತ್‌ ಅಪಘಾತಕ್ಕೆ ಕಾರಣವಾಗುತ್ತದೆ. ಚಾಕು, ಫೋರ್ಕ್‌ ಅಥವಾ ಮೊನಚಾದ ಚಮಚಗಳಂಥ ಚೂಪಾದ ವಸ್ತುಗಳನ್ನು ದೂರವಿಡಿ. ಮಕ್ಕಳು ಹಾಗೂ ವೃದ್ಧರು ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಾಗದಂತಹ, ಕೈಗೆಟುಕದಂಥ ಸ್ಥಳದಲ್ಲಿಡಿ. ಅವುಗಳನ್ನು ಕಪಾಟು ಅಥವಾ ಮುಚ್ಚಿದ ರಾಕ್‌ ಗಳಲ್ಲಿ ಇರಿಸಿ. ಇದರಿಂದ ಮಕ್ಕಳಿಗೆ ಮಾತ್ರವಲ್ಲ, ವೃದ್ಧರಿಗೂ ಹಾನಿ ಉಂಟಾಗುತ್ತದೆ. ಇದಲ್ಲದೆ ಅಡುಗೆಮನೆಯಲ್ಲಿ ಇರಿಸಲಾಗಿರುವ ಕಪಾಟು ಮತ್ತು ಮೇಜಿನ ಅಂಚುಗಳು ವೇದಿಕೆಯ ಮೇಲಿದ್ದರೆ, ಅವುಗಳು ಸರ್ಕಲ್ ಶೇಪ್‌ ನಲ್ಲಿರಲಿ ಅಥವಾ ಅವುಗಳ ಮೇಲೆ ಪ್ರೊಟೆಕ್ಟರ್‌ ಇರಿಸಿ.

ಓಡಾಡುವ ಸ್ಥಳದಲ್ಲಿ ಅಡ್ಡಿ ಬೇಡ

ಅಡುಗೆಮನೆಯ ಪ್ರವೇಶ ದ್ವಾರದಲ್ಲಿ ಅಥವಾ ಅಂಚಿನಲ್ಲಿ ಯಾವುದೇ ವಸ್ತುಗಳನ್ನು ಇಡಬೇಡಿ. ಯಾರೂ ಡಿಕ್ಕಿ ಹೊಡೆಯದಂತೆ ಅಡುಗೆಮನೆಗೆ ಹೋಗುವ ಮಾರ್ಗ ಸ್ಪಷ್ಟವಾಗಿರಬೇಕು. ಬಾಗಿಲಲ್ಲಿ ಇಟ್ಟಿರುವ ವಸ್ತುಗಳಿಗೆ ಯಾರಾದರೂ ಡಿಕ್ಕಿ ಹೊಡೆದು ಕೆಳಗೆ ಬೀಳಬಹುದು. ಇದು ಗಾಯಕ್ಕೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಇವು ನೆನಪಿನಲ್ಲಿರಲಿ. ಅಗ್ನಿಶಾಮಕ ಸಾಧನವನ್ನು ಇಟ್ಟುಕೊಂಡಿರಿ.

ಅಡುಗೆಮನೆಯ ಪ್ರವೇಶದ್ವಾರದ ಗೋಡೆಯ ಮೇಲೆ ನೀವು ಸಣ್ಣ ಅಗ್ನಿಶಾಮಕ ಯಂತ್ರವನ್ನು ಸಹ ಇಡಬಹುದು. ಬೆಂಕಿ ಅಥವಾ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸುವ ಸಾಧ್ಯತೆ ಇದ್ದರೆ, ಅದು ಸುರಕ್ಷತೆಗಾಗಿ ಉಪಯುಕ್ತವಾಗಿ ಇರುತ್ತದೆ. ಅಡುಗೆಮನೆಯಲ್ಲಿ ಯಾವಾಗಲೂ ಕನಿಷ್ಠವೆಂದರೂ ಮೂರು ಒಣಗಿದ, ಶುಭ್ರವಾದ ಟವೆಲ್ ಗಳು ಇರಬೇಕು.

ಅಡುಗೆಮನೆಯಲ್ಲಿ ಕಿಟಕಿಯ ಸುತ್ತಲೂ ಸುರಕ್ಷತೆಯನ್ನು ಮೇಂಟೇನ್‌ ಮಾಡುವುದು ಬಹಳ ಮುಖ್ಯ. ಆಹಾರದ ವಾಸನೆಯಿಂದ ಕೀಟ ಮತ್ತು ಇಲಿಗಳು ಪ್ರವೇಶಿಸಬಹುದು. ಅಡುಗೆಮನೆಯಲ್ಲಿ ಸಾಸುವೆ, ಎಣ್ಣೆ, ಹಾಲು ಅಥವಾ ಸಿಂಕ್‌ ನಿಂದ ಬರುವ ಕೆಟ್ಟ ವಾಸನೆಯನ್ನು ತಪ್ಪಿಸಲು ಕೆಲವೊಮ್ಮೆ ದಾಲ್ಚಿನ್ನಿಯನ್ನು ಕುದಿಸಿ ಸಿಂಪಡಿಸಿ. ಈ ರೀತಿಯಾಗಿ ನಿಮ್ಮ ಉಪಯುಕ್ತ ಅಡುಗೆಮನೆಯ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದರಿಂದ ಅನೇಕ ಪ್ರಯೋಜನಗಳಿವೆ.

– ಪೂರ್ಣಿಮಾ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ