Sj*

‘ಕಿಂಗ್’ ಸಿನಿಮಾದ ಪವರ್‌ಫುಲ್ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶಾರುಖ್ ಖಾನ್ ನಿರೀಕ್ಷೆಯ ಕಾವು ಹೆಚ್ಚಿಸಿದ್ದಾರೆ. ತುಟಿಗಳ ನಡುವೆ ಗುಲಾಬಿ ಹಾಗೂ ಕಣ್ಣುಗಳಲ್ಲಿ ರೋಷದ ಬೆಂಕಿ ಹೊತ್ತಿಸಿಕೊಂಡಿರುವ ಶಾರುಖ್ ಅವರ ಈ ವಿಭಿನ್ನ ಲುಕ್, ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೈನರ್ ‘ಕಿಂಗ್’ ಚಿತ್ರದಲ್ಲಿನ ಅವರ ರಗಡ್ ಅವತಾರವನ್ನು ಅನಾವರಣಗೊಳಿಸಿದೆ.

ಈ ಹೊಸ ಪೋಸ್ಟರ್ ‘ಕಿಂಗ್’ ಚಿತ್ರದ ಲಾರ್ಜರ್-ದ್ಯಾನ್-ಲೈಫ್ ವೈಭವವನ್ನು ಕಟ್ಟಿಕೊಟ್ಟಿದ್ದು, ಬೆಳ್ಳಿತೆರೆಯ ಮೇಲೆ ಸೂಪರ್‌ಸ್ಟಾರ್ ಶಾರುಖ್ ಅವರನ್ನು ಈ ರೋಚಕ ಅವತಾರದಲ್ಲಿ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಮತ್ತೊಂದು ಬಲವಾದ ಕಾರಣ ನೀಡಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ನಿರ್ಮಾಣದ ‘ಕಿಂಗ್’ ಚಿತ್ರವು 2026ರ ಡಿಸೆಂಬರ್ 24 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ