ಪರಿಸರವಾದಿ
ಸೋಶಿಯಲ್ ಇಂಪ್ಯಾಕ್ಟ್ ಅಚೀವರ್ ಅವಾರ್ಡ್
“ಜಮುನಾ ತಮ್ಮ ಮಹಿಳಾ ಬ್ರಿಗೇಡ್ಸಮೇತ ಜಂಗಲ್ ಮಾಫಿಯಾ ವಿರುದ್ಧ ಸಮರ ಸಾರಿದ್ದಾರೆ….”
ಝಾರ್ಖಂಡ್ ಒಡಿಶ್ಶಾ ಸೀಮೆಗೆ ಬರುವ ಮುಟುರ್ ಖಾಮ್ ಎಂಬ ಹಳ್ಳಿಯಲ್ಲಿ ಜಮುನಾ ವಿಖ್ಯಾತರು! ಇವರ ಬಳಿ ದೊಡ್ಡ ಡಿಗ್ರಿಗಳಿಲ್ಲ, ಸರ್ಕಾರಿ ಪದವಿ ಇಲ್ಲ….. ದೊಡ್ಡ ದೊಡ್ಡ ಸರ್ಕಾರಿ ವಿಭಾಗ ಮಾಡದ ಕೆಲಸವನ್ನು ಜಮುನಾ ನಿಭಾಯಿಸುತ್ತಿದ್ದಾರೆ, ಅದುವೇ ಜಂಗಲ್ ಮಾಫಿಯಾ ವಿರುದ್ಧ ಕಾಡಿನ ರಕ್ಷಣೆ!
ಸಣ್ಣ ಹಳ್ಳಿಯ ಹುಡುಗಿ 1988ರಲ್ಲಿ ಮದುವೆಯಾಗಿ ಚಾಕೂಲಿಯಾ ಗ್ರಾಮಕ್ಕೆ ಬಂದು ನೋಡಿದಾಗ ಕಾಡಿನ ಸೌದೆಯೇ ಮೂಲ ಉರುಲು, ಆದರೆ ಮರಗಳ್ಳರಿಗೆ ಅಡೆತಡೆ ಇಲ್ಲ. ಕಾಡಿನ ಮರ ಉಳಿದರೆ ನಾಡು ಎಂದು ಇವರು ಗುರುತಿಸಿದರು.
ಭಯವೇ ಧೈರ್ಯವಾಗಿ ಬದಲಾದಾಗ : ಆರಂಭದಲ್ಲಿ ಒಬ್ಬರೇ ಕೈಯಲ್ಲಿ ಟಾರ್ಚ್, ಲಾಠಿ ಹಿಡಿದು ಕಾಡೆಲ್ಲ ಗಸ್ತು ಸುತ್ತಿದರು. ಮಾಫಿಯಾ ಮಂದಿ ಹೆದರಿಸಿ, ಜೀವಭಯ ಒಡ್ಡಿದರೂ ಅಳುಕಲಿಲ್ಲ. ಕ್ರಮೇಣ ಹಳ್ಳಿಯ ಇತರ ಹೆಂಗಸರನ್ನೂ ತಮ್ಮ ಜೊತೆ ಸೇರಿಸಿಕೊಂಡು ದೊಡ್ಡ ಗುಂಪು ಕಟ್ಟಿಕೊಂಡರು. ಗಂಡಸರು ಸಹಕಾರ ನೀಡದಿದ್ದರೂ, ಹೆಂಗಸರ ಸಹಾಯದಿಂದ ಮುಂದುವರಿದರು. ಇಂದು ಇವರ ಬಳಿ 100 ಗ್ರಾಮಗಳ 10 ಸಾವಿರ ಮಂದಿ ಹೆಂಗಸರ ದಂಡಿದೆ! ಮುಕ್ಕಾಲು ಭಾಗ ಎಲ್ಲರೂ ಸಕ್ರಿಯರು.
ಮಹಿಳಾ ಕಾಲುಪಡೆ : ಇದೀಗ ಮರಕಡಿಯುವ ಮಾಫಿಯಾ ಮಂದಿ ಇವರನ್ನು ಕಂಡು ಅಂಜುತ್ತಾರೆ, ಏಕೆಂದರೆ ಒಮ್ಮೆಲೇ 20-30 ಮಂದಿ ಹೆಂಗಸರು, ಭಾರಿ ಲಾಠಿ ಹಿಡಿದು ಸಾಯಹೊಡೆಯುತ್ತಾರೆ.
ಬದಲಾದ ವಿಚಾರ : ಉರುಲು ತರಲು ಹೋಗುತ್ತಿದ್ದ ಹೆಂಗಸರು ಇದೀಗ ವನರಕ್ಷಕಿಯರಾಗಿದ್ದಾರೆ.
ಹೊಸ ಪರಂಪರೆ : ಆ ಹಳ್ಳಿಯಲ್ಲಿ ಮಗಳು ಹುಟ್ಟಿದಾಗೆಲ್ಲ, ಹೊಸ ಹೊಸ ಗಿಡ ನೆಟ್ಟು ಮರ ಬೆಳೆಸಲಾಗುತ್ತದೆ. ಮಗಳ ಮದುವೆಯಾದಾಗ 10 ವರ್ಷದ ಮರನ್ನು ಉಡುಗೊರೆಯಾಗಿ ಆ ಭೂಭಾಗದ ಸಮೇತ ನೀಡಲಾಗುತ್ತದೆ.
ವಿಕಾಸ : ಇದರಿಂದ ಅರಣ್ಯ ಇಲಾಖೆ ಈ ಹಳ್ಳಿಯವರಿಗಾಗಿ ಶಾಲೆ, ಆಸ್ಪತ್ರೆ ತೆರೆದು, ಉತ್ತಮ ರಸ್ತೆ ಒದಗಿಸಿತು.
ಪ್ರಮುಖ ಪ್ರಶಸ್ತಿ ಪುರಸ್ಕಾರಗಳು : 2019ರಲ್ಲಿ `ಪದ್ಮಶ್ರೀ’ ಪ್ರಶಸ್ತಿ, ರಾಷ್ಟ್ರಪತಿ ರಾಮನಾಥ್ ಕೋವಿದ್ ರಿಂದ ಈ ಪರಿಸರವಾದಿಗೆ ಹಿರಿಯ ಸನ್ಮಾನ. 2013ರಲ್ಲಿ `ಗಾಡ್ ಫ್ರೇ ಫಿಲಿಮ್ಸ್ ಬ್ರೇರಿ ಅವಾರ್ಡ್, 2014ರಲ್ಲಿ `ಸ್ತ್ರೀ ಶಕ್ತಿ ಪ್ರಶಸ್ತಿಯನ್ನು ಕಲರ್ಸ್ ಟಿವಿ ವೇದಿಕೆಯಲ್ಲಿ ಪಡೆದರು. 2017ರಲ್ಲಿ `ವುಮನ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ ಅವಾರ್ಡ್’ ದೊರಕಿತು. 2016ರಲ್ಲಿ ಭಾರತದ ಪ್ರಥಮ 100 ಧೀಮಂತ ಮಹಿಳೆಯರಲ್ಲಿ ಒಂದು ಸುಭದ್ರ ಸ್ಥಾನ. 2019ರ ಫೆಬ್ರವರಿಯ ಪ್ರಧಾನಿಯವರ `ಮನ್ ಕೀ ಬಾತ್’ ಸಂಚಿಕೆಯಲ್ಲಿ ಇವರದ್ದೇ ದೊಡ್ಡ ಚರ್ಚೆ. 2024ರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಇವರನ್ನು ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಿ ವಿಶೇಷ ಡಿನ್ನರ್ ನೀಡಿ, ಸನ್ಮಾನಿಸಿದರು. ದೆಹಲಿ ತಂಡ ಇವರಿಗಾಗಿ ಡಾಕ್ಯುಮೆಂಟರಿ ತಯಾರಿಸಿದೆ.
ಇಂಥ ತೆರೆಮರೆಯ ವನಸುಮಗಳನ್ನು ಗುರುತಿಸಿ, ಅವರನ್ನು ಸನ್ಮಾನಿಸುವುದೇ ಗೃಹಶೋಭಾ ಇನ್ ಸ್ಪೈರ್ ಅವಾರ್ಡ್ಸ್ ನ ಗುರಿ.





