ಹಾಟ್‌ ಸೀಸನ್‌ ನಲ್ಲಿ ಕೂ‌ಲ್ ಫಿಟ್‌ ಆಗಿ ಉಳಿಯ ಬಯಸಿದರೆ ಈ ಟಿಪ್ಟ್ಸ್ ನಿಮಗಾಗಿ ಇವೆ…..

ಈ ಸೀಸನ್‌ ಬೋರಿಂಗ್‌, ಸುಸ್ತುಮಯ ಆಗಿದೆ. ಆದರೆ ಇದನ್ನು ಉತ್ತಮಗೊಳಿಸುವ ಹಾಗೂ ನಿಮ್ಮನ್ನು ನೀವು ಬಿಸಿಲಿನ ಝಳದಿಂದ ರಕ್ಷಿಸಿಕೊಳ್ಳಲು ಕೆಲವು ಫಿಟ್‌ ನೆಸ್‌ ಟಿಪ್ಸ್ ಅನುಸರಿಸುವುದು ಲೇಸು. ಆಗ ನೀವು ಕೂಲ್ ‌ಕೂಲ್ ‌ಆಗಿ ಇರಬಲ್ಲಿರಿ. ಮೆಡಿಕಲ್ ಎಕ್ಸ್ ಪರ್ಟ್ಸ್ ಈ ಕುರಿತು ಏನು ಸಲಹೆ ನೀಡುತ್ತಾರೆ?

ಇನ್‌ ಡೋರ್‌ ವರ್ಕ್‌ ಔಟ್ಸ್ ಈ ಸೀಸನ್‌ ನಲ್ಲಿ ಎಲ್ಲಕ್ಕೂ ಹೆಚ್ಚು ಲಾಭಕರ ಎನಿಸುತ್ತದೆ. ಬೆಳಗ್ಗೆ 5 ಗಂಟೆಗೇ ಎದ್ದು, ತಂಪಾದ ವಾತಾವರಣದಲ್ಲಿ 40-45 ನಿಮಿಷ ವರ್ಕ್‌ ಔಟ್‌ ಮಾಡುವುದರಿಂದ ನಮ್ಮ ಆರೋಗ್ಯ ಎಷ್ಟೋ ಚೆನ್ನಾಗಿರುತ್ತದೆ. ಇದರಿಂದ ನಿಮಗೆ ಬಹಳ ಸೆಖೆ ಎನಿಸುವುದಿಲ್ಲ. ಜೊತೆಗೆ ವ್ಯಾಯಾಮದಿಂದ ಟ್ಯಾನ್‌ ಆಗುವ ಭಯ ಇಲ್ಲ.

ಈ ಸೀಸನ್‌ ನಲ್ಲಿ ಗ್ರೂಪ್‌ ಆ್ಯಕ್ಟಿವಿಟೀಸ್‌ ಗೆ ಹೆಚ್ಚಿನ ಗಮನ ಕೊಡಿ. ಇದರಿಂದ ಫಿಟ್‌ ಆಗಿರುವುದರದ ಜೊತೆ ಜೊತೆಗೆ ಒಂದು ಹೆಲ್ದಿ ಕಾಂಪಿಟಿಷನ್‌ ಕೂಡ ಕೂಡಿಕೊಳ್ಳುತ್ತದೆ.

ಈ ಸೀಸನ್‌ ನಲ್ಲಿ ಕಪಲ್ಸ್ ತಮ್ಮ ಮಕ್ಕಳ ಜೊತೆ ಹೆಚ್ಚಿನ ಕಾಲ ಕಳೆಯಬೇಕು. ಇದರಿಂದ ಮಕ್ಕಳನ್ನು ಸಂಭಾಳಿಸುವುದರಲ್ಲಿ ಕ್ಯಾಲೋರಿ ಬರ್ನ್‌ ಆಗುವುದಲ್ಲದೆ, ಹೆಚ್ಚಿನ ಮಜಾ ಸಿಗುತ್ತದೆ.

ಈ ಸೀಸನ್‌ ನಲ್ಲಿ ಗರಿಷ್ಠ ಪ್ರಮಾಣದಲ್ಲಿ ನೀರು ಕುಡಿಯಿರಿ. ಪಚನದ ಯಾವುದೇ ಸಮಸ್ಯೆಗೆ ಹೆಚ್ಚು ನೀರು ಕುಡಿಯುವುದೊಂದೇ ಪರಿಹಾರ. ಕೋಲ್ಡ್ ಪೇಯಗಳು, ನೀರು ಮಜ್ಜಿಗೆ, ಪಾನಕ, ಜೂಸ್‌, ಮಿಲ್ಕ್ ಶೇಕ್‌ ಇತ್ಯಾದಿ ಈ ಸೀಸನ್‌ ಗೆ ಹೆಚ್ಚು ಪೂರಕ. ಆಗಾಗ ಎಳನೀರನ್ನೂ ಸೇವಿಸಿ.

ಈ ಸೀಸನ್‌ ನಲ್ಲಿ ಹೆಚ್ಚು ಹೆಚ್ಚು ತಾಜಾ ಹಸಿ ತರಕಾರಿಯ ಸಲಾಡ್‌, ಕೋಸಂಬರಿ ಸೇವಿಸಿ. ಹಸಿರು ಸೊಪ್ಪು, ಟೊಮೇಟೊ, ಮೂಲಂಗಿ, ಸೌತೆಕಾಯಿ, ಕ್ಯಾಪ್ಸಿಕಂ, ಈರುಳ್ಳಿ ಇತ್ಯಾದಿ.

ಹಾಗೆಯೇ ಹೆಚ್ಚು ನೀರಿನಂಶವುಳ್ಳ ಮೂಸಂಬಿ, ಕಿತ್ತಳೆ ಹಣ್ಣು, ಕರ್ಬೂಜಾ, ಚಕ್ಕೋತಾ, ಸಿದ್ದೋಟಿ ಹಣ್ಣು ಇತ್ಯಾದಿ ಸೇವಿಸಿ.

ಈ ಬೇಸಿಗೆಲ್ಲಿ ಹೊರಗಿನ ಬಯಲಾಟಕ್ಕಿಂತ ಒಳಾಂಗಣ ಕ್ರೀಡೆಗಳಾದ ಬ್ಯಾಡ್‌ ಮಿಂಟನ್‌, ಟೆನಿಸ್‌, ಸ್ಕ್ವಾಶ್‌ ಇತ್ಯಾದಿ ಆಡಿಕೊಳ್ಳಿ. ಇದು ಆಟ ಮಾತ್ರವಲ್ಲದೆ, ವ್ಯಾಯಾಮ ಹೌದು.

ಈ ಸೀಸನ್‌ ನಲ್ಲಿ ನೀರಿನಲ್ಲಿ ಈಜಾಟ ಹೆಚ್ಚಿನ ಖುಷಿ ಕೊಡುತ್ತದೆ. ಇದು ತಂಪು ಮಾತ್ರವಲ್ಲದೆ ಉತ್ತಮ ವ್ಯಾಯಾಮ ಕೂಡ. ಈಜು ದೇಹದ ಅಂಗಾಂಗಗಳಿಗೆ ಹೆಚ್ಚಿನ ಚೈತನ್ಯ ತುಂಬುತ್ತದೆ.

ಈಜು ನಮ್ಮ ಸ್ಟ್ರೆಸ್‌ ಕಡಿಮೆ ಮಾಡುವುದಕ್ಕೂ ಸಹಕಾರಿ. ನೀವು ಕುಟುಂಬದವರ ಜೊತೆಗೂಡಿ ಈಜಾಡಿದರೆ ಹೆಚ್ಚಿನ ಮಜಾ ಉಂಟು. ಮರೆಯದೆ ದೇಹಕ್ಕೆ `ಸನ್‌ ಟ್ಯಾನ್‌ ಲೋಶನ್‌’ ಹಚ್ಚಿಕೊಳ್ಳಿ.

ನಿಮ್ಮ ಊಟತಿಂಡಿ ಕಡೆ ವಿಶೇಷ ಗಮನ ಕೊಡಿ. ಆದಷ್ಟೂ ಹುರಿದಕರಿದ, ಮಸಾಲೆಯುಕ್ತ ಆಹಾರ ಬೇಡ. ಹಸಿರು ತರಕಾರಿ, ಮೊಸರನ್ನ, ಸಾತ್ವಿಕ ಆಹಾರಕ್ಕೆ ಹೆಚ್ಚು ಮಹತ್ವ ಕೊಡಿ.

ಲೈಟ್‌ವೈಟ್‌ ಹಾಗೂ ಲೈಟ್‌ ಕಾಟನ್‌ ಡ್ರೆಸೆಸ್‌ ಈ ಕಾಲಕ್ಕೆ ಸರಿ. ಆಗ ಹೆಚ್ಚು ಕೂಲ್ ‌ಎನಿಸುತ್ತದೆ.

ಬಿಸಿಲಲ್ಲಿ ಹೋಗಬೇಕಾದಾಗ ಕೂಲಿಂಗ್‌ ಗ್ಲಾಸ್‌, ಹ್ಯಾಟ್‌, ಛತ್ರಿ ಮರೆಯಬೇಡಿ. ಉತ್ತಮ ಬ್ರಾಂಡ್‌ ನ 30 SPF ಸನ್‌ ಸ್ಕ್ರೀನ್ ಲೋಶನ್‌ ಹಚ್ಚದೆ ಹೊರಗೆ ಹೊರಡಬೇಡಿ.

ಹೊರಗೆ ಬಿಸಿಲಿನಿಂದ ಬಂದ ತಕ್ಷಣ AC ಅಥವಾ ಕೂಲರ್‌ ಮುಂದೆ ನಿಲ್ಲಬೇಡಿ. ಸ್ವಲ್ಪ ಹೊತ್ತು ಮಾಮೂಲಿ ತಾಪಮಾನದಲ್ಲಿಯೇ ಕೂರಬೇಕು.

ಊಟ ಆದ ತಕ್ಷಣ ಬಿಸಿಲಿನಲ್ಲಿ ಹೊರಡಬೇಡಿ.

ಹೊರಗೆ ದೊರಕು ಜೂಸ್‌ ಕುಡಿಯದಿರಿ, ಸೋಂಕು ತಗುಲೀತು.

– ಸುಮತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ