ನಿವೃತ್ತ ಅಧಿಕಾರಿ
ನೇಶನ್ ಬಿಲ್ಡರ್ ಐಕಾನ್ ಅವಾರ್ಡ್
“ಪಂಜಾಬ್ನ ಮೊದಲ ಮಹಿಳಾ ಮುಖ್ಯ ಸಚಿವೆಯಾಗಿ, ನಮ್ಮ ಉದ್ದೇಶ ಸಶಕ್ತವಾಗಿದ್ದರೆ, ಗುರಿ ಸಾಧನೆ ಕಷ್ಟಕರಲ್ಲ ಎಂದು ನಿರೂಪಿಸಿದರು…..”
ಜೂನ್ 2020, ಪಂಜಾಬ್ ನ ಇತಿಹಾಸದಲ್ಲಿ ಮರೆಯಲಾಗದ ದಿನ. ಮೊದಲ ಸಲ ಒಬ್ಬ ಮಹಿಳೆಯ ಕೈಗೆ ರಾಜ್ಯದ ಅತ್ಯುನ್ನತ ಆಡಳಿತದ ಕಮಾನು ದೊರಕಿತು. ಅವರೇ ವಿನೀ ಮಹಾಜನ್! 1987ರ ಅಧಿಕಾರಿ, ಸತತ 37 ವರ್ಷಗಳ ಉನ್ನತ ಸೇವೆ ಸಲ್ಲಿಸಿ ಗೌರವಯುತವಾಗಿ ನಿವೃತ್ತರಾದರು. ಇವರ ಕಥೆ ಕೇವಲ ಒಬ್ಬ ಮಹಿಳಾ ಅಧಿಕಾರಿಯ ಪ್ರಗತಿಯ ಕುರಿತದ್ದಲ್ಲ, ಕ್ಲಾಸ್ ನಲ್ಲಿ ಅತಿ ಚಟುವಟಿಕೆಯ ವಿದ್ಯಾರ್ಥಿ ಮುಂದೆ ಔನ್ನತ್ಯಕ್ಕೇರಿದ ಕಥೆಯಾಗಿದೆ.
ಪುಸ್ತಕಗಳಿಂದ ಅಧಿಕಾರದ ಹುದ್ದೆಯವರೆಗೆ : ಈಕೆ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದು, ಕೋಲ್ಕತಾದಲ್ಲಿ ಪದವಿ ಪಡೆದರು. ಅಮೆರಿಕಾದಿಂದ ಫೆಲೋಶಿಪ್ ಸಹ ಗಳಿಸಿದ್ದಾರೆ! ಇಷ್ಟೆಲ್ಲ ಉನ್ನತ ವ್ಯಾಸಂಗ ಮಾಡಿ ಕಾರ್ಪೊರೇಟ್ ನತ್ತ ಹೊರಳಲಿಲ್ಲ. 1987ರಲ್ಲಿ ಅಧಿಕಾರಿಯಾಗಿ ಪಂಜಾಬ್ ನ್ನೇ ಮನೆಯಾಗಿಸಿಕೊಂಡು ಸೇವೆ ಮಾಡಿದರು. ಮುಂದೆ 1995ರಲ್ಲಿ ರೋಪಡ್ ನ ಆದರು. ಮುಂದೆ ಜವಾಬ್ದಾರಿ ಹೆಚ್ಚಿ ಪ್ರಧಾನಿಯ ಸಂಯುಕ್ತ ಸಚಿವೆ, ಆರ್ಥಿಕ ಸಚಿವಾಲಯದ ನಿರ್ದೇಶಕಿ, ಪಂಜಾಬ್ ನ ಬಹುತೇಕ ಎಲ್ಲಾ ಕ್ಷೇತ್ರಗಳ ಪ್ರಧಾನ ಹುದ್ದೆ ಅಲಂಕರಿಸಿದರು. ಇವರ ನೇತೃತ್ವದಲ್ಲಿ ಪಂಜಾಬ್ ಉನ್ನತ ಮಟ್ಟಕ್ಕೇರಿತು. ತೀವ್ರ ಬರಗಾಲದ ಸ್ಥಿತಿಯಲ್ಲಿ ಹಳ್ಳಿಯ ಮನೆ ಮನೆಗೂ ನೀರು ತಲುಪಿಸಿದರು.
ಸಮಾಜದಲ್ಲಿ ಮಹಿಳೆಯರ ಸ್ಥಿತಿ : ಸರ್ಕಾರಿ ಕೆಲಸವೆಂದರೆ ಬುದ್ಧಿವಂತಿಕೆ ಜೊತೆ ಹೃದಯವಂತಿಕೆಯೂ ಬೇಕು, ಎಂದು ಪ್ರಜೆಗಳ ಪಾಲಿಗೆ ಹಿರಿಯಕ್ಕನಾಗಿ ದುಡಿದರು. ಪತಿ ಜೊತೆ ಮನೆ, ಮಕ್ಕಳನ್ನು ಸಂಭಾಳಿಸುತ್ತಾ ರಾಜ್ಯದ ಆಡಳಿತದಲ್ಲೂ ಎತ್ತಿದ ಕೈ ಎನಿಸಿದರು. ಹಿಂದಿನ ದಿನಗಳಿಗೆ ಹೋಲಿಸಿದರೆ ಸಮಾಜ ಈಗ ಬಹಳಷ್ಟು ಬದಲಾಗಿದೆ. ಅದು ಗ್ರಾಮೀಣ ಮಹಿಳೆಯಿಂದ, ಉನ್ನತ ಹುದ್ದೆ ಏರುವ ಉದ್ಯೋಗಸ್ಥೆಯೂ ಆಗಿರಬಹುದು, ಹೆಣ್ಣು ಅಬಲೆಯಲ್ಲ ಸಬಲೆ ಎಂದು ಸಾಧಿಸಿದ್ದಾಳೆ. ಆದರೂ ಇಂದಿನ ಆಧುನಿಕ ಹೆಣ್ಣು ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ಹೆಣ್ಣು ತನ್ನ ಆತ್ಮವಿಶ್ವಾಸದಿಂದ ಮೇಲೇರುತ್ತಾ, ಇಂಟಿಕ್ಚುಯೆಲ್, ಎಮೋಶನ್, ಮೆಂಟಲ್ ಫಿಝಿಕಲ್ ಕೇಪೆಬಿಲಿಟೀಸ್ ನಿಂದಾಗಿ ಉನ್ನತಿ ಕಾಣಬೇಕಿದೆ. ಒಬ್ಬ ಸಾಂಪ್ರದಾಯಿಕ ಹೆಣ್ಣಾಗಿ, ಸದಾ ಸೀರೆಯುಟ್ಟು, ಅತಿ ಸರಳ ಸಜ್ಜನಿಕೆಯಿಂದ ಈಕೆ ರಾಜ್ಯವಿಡೀ ಯಶಸ್ವೀ ಎನಿಸಿದ್ದಾರೆ. ಹೆಣ್ಣು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂದು ನಿರೂಪಿಸಿದ್ದಾರೆ.





