ಸಹಸಂಸ್ಥಾಪಕರು, ಪೆರೂರ್ ಹಸ್ತಶಿಲ್ಪ
ಬಿಸ್ ನೆಸ್ ಲೀಡರ್ ಶಿಪ್ ಅಚೀವರ್ ಅವಾರ್ಡ್
“ಬಿಸ್‌ನೆಸ್‌ಮೂಲಕ ನಿಮ್ಮ ಜೀವನಕ್ಕೆ ನೀವೇ ಲೀಡರ್‌ಆಗಿರಿ, ಏಕೆಂದರೆ ಒಬ್ಬ ಮಹಿಳೆ ಲೀಡ್‌ಮಾಡುತ್ತಿದ್ದಾಳೆ ಎಂದರೆ, ಅಲ್ಲಿ ವಿಚಾರವೇ ವಿಭಿನ್ನ ಆಗಿರುತ್ತದೆ……”
ನೂಪುರ್ ಹಾಗೂ ಶಾರ್ವರಿ ಪೊಹರ್ಕರ್ ಅಕ್ಕತಂಗಿಯರು. ಉತ್ತರಾಖಂಡ್ ರಾಜ್ಯದ ಪಹಾಡೀಗಾಂವ್ ಗ್ರಾಮಕ್ಕೆ ಸೇರಿದರು. ಅಲ್ಲಿನ ಖೇತಿಖಾನ್ ನಲ್ಲಿ ಪೆರೂರ್ ಹಸ್ತಶಿಲ್ಪದ ಉದ್ಯಮ ಆರಂಭಿಸಿದರು. ಆ ಪ್ರಾಂತ್ಯದ ಮಹಿಳೆಯರೆಲ್ಲರೂ ತಮ್ಮ ಕರಕುಶಲ ಕಲೆಗೆ ಖ್ಯಾತರು. ಸಣ್ಣಸಣ್ಣ ಮಣಿಗಳನ್ನು ಪೋಣಿಸಿ ಗೃಹಾಲಂಕಾರದ ವಸ್ತು ತಯಾರಿಸುತ್ತಾರೆ. (ಚಹಾಕೋಸ್ಟರ್, ಟ್ರೇ, ಮ್ಯಾಟ್, ಪ್ಲಾಂಟರ್ಸ್, ಜುಮಕಿ ಇತ್ಯಾದಿ).
ಈ ಕುರಿತಾಗಿ ನೂಪುರ್ ಆಧುನಿಕ ತರುಣಿಯರಿಗೆ, “ಉತ್ತಮ ಗುರಿ ಹೊಂದಿ ಮುನ್ನಡೆಯಿರಿ, ಸವಾಲುಗಳೇನೇ ಇದ್ದರೂ ದಿಟ್ಟವಾಗಿ ಎದುರಿಸಿ, ನಿಮ್ಮ ಗ್ರೌಂಡ್ ವರ್ಕ್ ಗಟ್ಟಿ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ!” ಎನ್ನುತ್ತಾರೆ.
ಶಾರ್ವರಿ ಹೇಳುತ್ತಾರೆ, “ಹೆಣ್ಣುಮಕ್ಕಳು ಹೆದರಿಕೆ ಬಿಟ್ಟು ಮುನ್ನಡೆಯಬೇಕು. ಬಿಸ್ ನೆಸ್ ನಲ್ಲಿ ಲಾಭನಷ್ಟ ಸಾಮಾನ್ಯ. ಒಬ್ಬ ಮಹಿಳೆ ಉದ್ಯಮ ನಡೆಸಿದರೆ ಅದರ ವಿಚಾರವೇ ವಿಭಿನ್ನ ಆಗಿರುತ್ತದೆ!”
ಒಂದು ನಿರ್ಣಾಯಕ ಅಂತರ್ದೃಷ್ಟಿ : ಪಶು ಚಿಕಿತ್ಸಕಿಯಾದ ನೂಪುರ್, ತಮ್ಮ ರಾಜ್ಯದ ಮಹಿಳೆಯರು ಕಾಡಿನ ಬೆಂಕಿಗೆ ಹೆದರುತ್ತಾರೆಂದು ಗಮನಿಸಿದರು. ಏಕೆಂದರೆ ಅಲ್ಲಿನ ಪೈನ್ ಮರಗಳು ಇದನ್ನು ವ್ಯಾಪಕವಾಗಿ ಹರಡುತ್ತವೆ.
“ಬಿಸ್ ನೆಸ್ ಮೂಲಕ ನಿಮ್ಮ ಜೀವನಕ್ಕೆ ನೀವೇ ಲೀಡರ್ ಆಗಿರಿ, ಏಕೆಂದರೆ ಒಬ್ಬ ಮಹಿಳೆ ಲೀಡ್ ಮಾಡುತ್ತಿದ್ದಾಳೆ ಎಂದರೆ, ಅಲ್ಲಿ ವಿಚಾರವೇ ವಿಭಿನ್ನ ಆಗಿರುತ್ತದೆ……”
“ಬಿಸ್ ನೆಸ್ ಮೂಲಕ ನಿಮ್ಮ ಜೀವನಕ್ಕೆ ನೀವೇ ಲೀಡರ್ ಆಗಿರಿ, ಏಕೆಂದರೆ ಒಬ್ಬ ಮಹಿಳೆ ಲೀಡ್ ಮಾಡುತ್ತಿದ್ದಾಳೆ ಎಂದರೆ, ಅಲ್ಲಿ ವಿಚಾರವೇ ವಿಭಿನ್ನ ಆಗಿರುತ್ತದೆ……”
ವಂಗಿ ಟೆಕ್ಸ್ ಟೈಲ್ ಡಿಸೈನರ್ ಶಾರ್ವರಿಯೊಂದಿಗೆ ಇವರು ಚರ್ಚಿಸಿ ಒಂದು ನಿರ್ಣಾಯಕ ಹಂತಕ್ಕೆ ಬಂದರು.
ಈ ಪೈನ್ ಮರದ ಸಣ್ಣ ಮಣಿಗಳು ಅದ್ಭುತ ಹಸ್ತಕಲೆ
“ಬಿಸ್ ನೆಸ್ ಮೂಲಕ ನಿಮ್ಮ ಜೀವನಕ್ಕೆ ನೀವೇ ಲೀಡರ್ ಆಗಿರಿ, ಏಕೆಂದರೆ ಒಬ್ಬ ಮಹಿಳೆ ಲೀಡ್ ಮಾಡುತ್ತಿದ್ದಾಳೆ ಎಂದರೆ, ಅಲ್ಲಿ ವಿಚಾರವೇ ವಿಭಿನ್ನ ಆಗಿರುತ್ತದೆ……”
ನಾಂದಿ ಎಂಬುದನ್ನು ಆ ಗ್ರಾಮೀಣರಿಂದ ಗುರುತಿಸಿದರು. ಇದರ ಕುರಿತು ವಿಡಿಯೋ ತಯಾರಿಸಿ, ಅಲ್ಲಿನ ಮಹಿಳೆಯರ ಜೀವನೋಪಾಯಕ್ಕೆ ಅದು ಹೇಗೆ ದಾರಿದೀಪ ಎಂಬುದನ್ನು ನಿರೂಪಿಸಿದರು. ಇಂದು ಈ ಕಾಡಿನ ಉತ್ಪನ್ನಗಳಿಂದ ಹಸ್ತನಿರ್ಮಿತ ಕಲೆ, ಪರಿಸರಸ್ನೇಹಿ ವಸ್ತುಗಳಾಗಿ ಮಾರ್ಪಟ್ಟು `ಪೆರೂರ್ ಶಾಹರಿ’ ಸಂಸ್ಥೆ ಮೂಲಕ, ರಾಷ್ಟ್ರೀಯ ಮಾತ್ರವಲ್ಲ, ಅಂತಾರಾಷ್ಟ್ರೀಯ ಗ್ರಾಹಕರಿಗೂ ಅದು ಯಶಸ್ವಿಯಾಗಿ ತಲುಪುತ್ತಿದೆ.
ಪೆರೂರ್ ಹಸ್ತಶಿಲ್ಪ ಉತ್ಪನ್ನಗಳು : ಇದು 2021ರಿಂದ ವ್ಯವಸ್ಥಿತ ರೂಪದಲ್ಲಿ ನಡೆಯುತ್ತಿದೆ. ಸೂಜಿ ಮೊನೆಗೆ ಸಿಲುಕುವಂತಹ ಮಣಿಯಂಥ ಉತ್ಪನ್ನಗಳು ಈ ಪೈನ್ ಮರದಿಂದ ತಯಾರಾಗುತ್ತವೆ. ಅದರಿಂದ ಗೃಹಾಲಂಕಾರದ ವೈವಿಧ್ಯಮಯ ವಸ್ತು ರೆಡಿಯಾಗುತ್ತದೆ. ಹಾಗಾಗಿ ಆ ರಾಜ್ಯದ ನಾನಾ ಗ್ರಾಮಗಳ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಇದನ್ನೇ ಆಶ್ರಯಿಸಿ, ಜೀವನೋಪಾಯ ಕಂಡುಕೊಂಡಿದ್ದಾರೆ. ಈ ಉತ್ಪನ್ನಗಳು ಸೋಶಿಯಲ್ ಮೀಡಿಯಾ ನೆರವಿನಿಂದ ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈ, ದೆಹಲಿಗಳಿಗೆ ಆಫ್ ಲೈನ್ ಆಗಿ ತಲುಪಿ ಭಾರಿ ವ್ಯಾಪಾರ ಮಾಡಿ ಕೋಟ್ಯಂತರ ಗಳಿಸುತ್ತವೆ.
ಸಾಧನೆ : ಆರಂಭದಲ್ಲಿ ಒಂದು ಫಾರ್ಮಾ ಕಂಪನಿಯಿಂದ 5 ಸಾವಿರ ಟೀ ಕೋಸ್ಟರ್ ಗೆ ಆರ್ಡರ್ ಸಿಕ್ಕಿ, ಈ ಸಂಸ್ಥೆ ಭಾರಿ ಬೇಡಿಕೆ ಪೂರೈಸತೊಡಗಿತು. ಕಸದಿಂದ ರಸವಾಗಿ 20 ಸಾವಿರ ಕಿಲೋಗೂ ಹೆಚ್ಚಿನ ತ್ಯಾಜ್ಯ ಮಣಿಗಳಾಗಿವೆ. ಈ ಉದ್ಯಮದ ವಾರ್ಷಿಕ ಟರ್ನ್ ಓವರ್ 15.5 ಲಕ್ಷಕ್ಕೂ ಮಿಗಿಲು! ಸುತ್ತಮುತ್ತಲ 7 ಹಳ್ಳಿಗಳ ನೂರಾರು ಮಹಿಳೆಯರು ಇದರಿಂದ ಜೀವನೋಪಾಯ ಕಂಡುಕೊಂಡಿದ್ದಾರೆ. 2024ರಲ್ಲಿ ಮಾರ್ಕೆಟಿಂಗ್‌ಸ್ಕೇಲಿಂಗ್ ಪ್ರಯಾಸಗಳನ್ನು ಏಳಿಗೆ ಮಾಡಿಸಿ, 9 ಲಕ್ಷಕ್ಕೂ ಹೆಚ್ಚಿನ ಲಾಭ ಗಳಿಸಿದರು.





