– ರಾಘವೇಂದ್ರ ಅಡಿಗ ಎಚ್ಚೆನ್.

ಹ್ಯಾಸಲ್‌ಬ್ಲಾಡ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಉದ್ಯಮದಲ್ಲೇ ಪ್ರಪ್ರಥಮ ಟ್ರಿಪಲ್ 200MP ಕ್ಯಾಮೆರಾ ಸಿಸ್ಟಮ್, ಈ ವಿಭಾಗದಲ್ಲೇ ಅತಿ ದೊಡ್ಡದಾದ 8000mAh ಬ್ಯಾಟರಿ ಹಾಗೂ ಹೊಚ್ಚಹೊಸ ಕಲರ್‌ಒಎಸ್‌ 17 ನೊಂದಿಗೆ ಫ್ಲ್ಯಾಗ್‌ಶಿಪ್ ಇಮೇಜಿಂಗ್‌ಗೆ ಮರುರೂಪ
ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್ ಮೂಲಕ ಭಾರತದಲ್ಲೇ ಮೊದಲ ಬಾರಿಗೆ 2nm ಮೀಡಿಯಾಟೆಕ್ ಡೈಮೆನ್ಸಿಟಿ 9600 ಪ್ರೊ ಪ್ರೊಸೆಸರ್ ಪರಿಚಯ; ಫ್ಲ್ಯಾಗ್‌ಶಿಪ್ ಕಾರ್ಯಕ್ಷಮತೆಗೆ ಹೊಸ ಭಾಷ್ಯ
ಡೈನಾಡಿಯೋ ಬೆಂಬಲಿತ ಒಪ್ಪೋ ಎನ್ಕೋ X4 ಮತ್ತು ಹೊಸ ವಿಭಾಗವನ್ನೇ ಸೃಷ್ಟಿಸುವ ಪ್ಯಾಡ್ ಮಿನಿ ಬಿಡುಗಡೆಯೊಂದಿಗೆ ಪ್ರೀಮಿಯಂ ಕನೆಕ್ಟೆಡ್ ಇಕೋಸಿಸ್ಟಮ್ ವಿಸ್ತರಣೆ; ಭಾರತೀಯ ಬಳಕೆದಾರರಿಗೆ ಕ್ಷಣಗಳನ್ನು ಸೆರೆಹಿಡಿಯಲು, ರಚಿಸಲು ಮತ್ತು ಹಂಚಿಕೊಳ್ಳಲು ತಡೆರಹಿತ ಅನುಭವ
ಒಪ್ಪೋ ಫೈಂಡ್ X10 ಸರಣಿಯು ಭಾರತದಲ್ಲಿ ₹1,39,999 ಆರಂಭಿಕ ಬೆಲೆಯಲ್ಲಿ ಲಭ್ಯ
ನವದೆಹಲಿ, 23 ಅಕ್ಟೋಬರ್ 2026: ಒಪ್ಪೋ ಇಂಡಿಯಾ ತನ್ನ ಜನಪ್ರಿಯ ಹಾಗೂ ನವೀನ ಪ್ರೀಮಿಯಂ ಫ್ಲ್ಯಾಗ್‌ಶಿಪ್ ‘ಒಪ್ಪೋ ಫೈಂಡ್ X ಸರಣಿ’ಯ 10ನೇ ತಲೆಮಾರಿನ ಭಾಗವಾಗಿ, ಹೊಚ್ಚಹೊಸ ‘ಒಪ್ಪೋ ಫೈಂಡ್ X10’ ಮತ್ತು ‘ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್’ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡ ‘ಒಪ್ಪೋ ಫೈಂಡ್ X10 ಸರಣಿ’ಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್ ಅನುಭವಕ್ಕೆ ಹೊಸ ಮೈಲಿಗಲ್ಲು ಸ್ಥಾಪಿಸುವ ಉದ್ದೇಶದಿಂದ ರೂಪುಗೊಂಡಿರುವ ಈ ಫೈಂಡ್ X10 ಸರಣಿಯು, ನೈಜ ಜಗತ್ತಿನಂತೆಯೇ ಮೂಡಿಬರುವ ಅದ್ಭುತ ಛಾಯಾಗ್ರಹಣ, ಸಾಟಿಯಿಲ್ಲದ ಕಾರ್ಯಕ್ಷಮತೆ, ಅತ್ಯುತ್ತಮ ಬ್ಯಾಟರಿ ಬಾಳಿಕೆ ಮತ್ತು ಅತ್ಯಾಕರ್ಷಕ ವಿನ್ಯಾಸವನ್ನು ಒಟ್ಟುಗೂಡಿಸಿದೆ. ಇದರ ಜೊತೆಗೆ ನೀಡಲಾಗಿರುವ ನೂತನ ColorOS 17, ಬಳಕೆದಾರರಿಗೆ ಅತ್ಯಂತ ಸುಲಲಿತ ಸಾಫ್ಟ್‌ವೇರ್ ಅನುಭವವನ್ನು ಖಾತ್ರಿಪಡಿಸುತ್ತದೆ. ಅಷ್ಟೇ ಅಲ್ಲದೆ, ಬಳಕೆದಾರರು ಯಾವುದೇ ಅಡೆತಡೆಯಿಲ್ಲದೆ ಕ್ಷಣಗಳನ್ನು ಸೆರೆಹಿಡಿಯಲು, ರಚಿಸಲು ಮತ್ತು ಹಂಚಿಕೊಳ್ಳಲು ಅನುಕೂಲವಾಗುವಂತೆ ‘ಒಪ್ಪೋ ಎನ್ಕೋ X4’ ಮತ್ತು ‘ಒಪ್ಪೋ ಪ್ಯಾಡ್ ಮಿನಿ’ ಪರಿಚಯಿಸುವ ಮೂಲಕ ಕಂಪನಿಯು ತನ್ನ ಫ್ಲ್ಯಾಗ್‌ಶಿಪ್ ಕನೆಕ್ಟೆಡ್ ಇಕೋಸಿಸ್ಟಮ್ ಅನ್ನು ಇನ್ನಷ್ಟು ವಿಸ್ತರಿಸಿದೆ. ಒಟ್ಟಾರೆಯಾಗಿ, ಈ ಸಂಪೂರ್ಣ ಫ್ಲ್ಯಾಗ್‌ಶಿಪ್ ಪೋರ್ಟ್‌ಫೋಲಿಯೋ ದೈನಂದಿನ ಅನುಭವವನ್ನು ಇನ್ನಷ್ಟು ಉನ್ನತೀಕರಿಸಲಿದ್ದು, ಪ್ರತಿ ಫೋಟೋ, ಎಡಿಟಿಂಗ್ ಮತ್ತು ಹಂಚಿಕೊಳ್ಳುವ ಕ್ಷಣವೂ ನೈಜವಾಗಿ ಮೂಡಿಬರಲಿದೆ.
ಕಣ್ಣಿಗೆ ಕಾಣುವ ದೃಶ್ಯವನ್ನು ಅದೇ ಜೀವಂತಿಕೆಯೊಂದಿಗೆ ಸೆರೆಹಿಡಿಯುವಂತೆ ವಿನ್ಯಾಸಗೊಳಿಸಲಾದ ಕ್ಯಾಮೆರಾ ವ್ಯವಸ್ಥೆಯೇ ಒಪ್ಪೋ ಫೈಂಡ್ X10 ಸರಣಿಯ ಪ್ರಮುಖ ಆಕರ್ಷಣೆಯಾಗಿದೆ. ಒಪ್ಪೋ ಫೈಂಡ್ X10 ಸ್ಮಾರ್ಟ್‌ಫೋನ್ ‘ಡ್ಯುಯಲ್ 200MP ಕ್ಯಾಮೆರಾ ಸಿಸ್ಟಮ್’ ಹೊಂದಿದ್ದರೆ, ಒಪ್ಪೋ ಫೈಂಡ್ X10 ಪ್ರೊ ಮ್ಯಾಕ್ಸ್ ಕ್ರಾಂತಿಕಾರಿ ‘ಟ್ರಿಪಲ್ 200MP ಕ್ಯಾಮೆರಾ ಸಿಸ್ಟಮ್’ ಒಳಗೊಂಡಿದ್ದು, ಹಿಂಬದಿಯ ಮೂರೂ ಕ್ಯಾಮೆರಾಗಳಲ್ಲೂ 200MP ರೆಸಲ್ಯೂಶನ್ ನೀಡುತ್ತದೆ. ಹ್ಯಾಸಲ್‌ಬ್ಲಾಡ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಈ ಕ್ಯಾಮೆರಾ, ನೈಸರ್ಗಿಕ ಬಣ್ಣಗಳು, ಟೋನ್ ಮತ್ತು ಸೂಕ್ಷ್ಮ ವಿವರಗಳನ್ನು ಸೆರೆಹಿಡಿಯಲು ಹೊಚ್ಚಹೊಸ ಲುಮೋ ಟ್ರೂ ಇಮೇಜ್ ಇಂಜಿನ್ ಮತ್ತು ಸೆಕೆಂಡ್-ಜನರೇಶನ್ ಟ್ರೂ ಕಲರ್ ಕ್ಯಾಮೆರಾದೊಂದಿಗೆ ಜೋಡಿಯಾಗಿದೆ. ಜೊತೆಗೆ, ‘ಲುಮೋ ಕಲರ್ ಪ್ಯಾಲೆಟ್’  ಬಳಕೆದಾರರಿಗೆ ಆ ನೈಸರ್ಗಿಕತೆಯ ಮೇಲೆಯೇ ತಮ್ಮದೇ ಆದ ವೈಯಕ್ತಿಕ ಶೈಲಿಯನ್ನು ರೂಪಿಸಿಕೊಳ್ಳಲು ನೆರವಾಗುತ್ತದೆ. ವಿಡಿಯೋಗ್ರಫಿಗಾಗಿ 4K ಸಿನೆ-ಗ್ರೇಡ್ HDR ವಿಡಿಯೋ, ಡಾಲ್ಬಿ ವಿಷನ್ ಮತ್ತು ಓಪನ್ ಗೇಟ್ ಕ್ಯಾಪ್ಚರ್ ಸೇರಿದಂತೆ ಸಿನೆಮಾ ದರ್ಜೆಯ ಅತ್ಯಾಧುನಿಕ ಪರಿಕರಗಳನ್ನು ನೀಡಲಾಗಿದೆ.
ಹೊಚ್ಚಹೊಸ ColorOS 17 ‘ಏಜೆಂಟ್ ಮೋಡ್’ ಹೊಂದಿರುವ ‘ಎಐ ಮೈಂಡ್ ಪೈಲಟ್’ ವೈಶಿಷ್ಟ್ಯವನ್ನು ಹೊತ್ತುತಂದಿದ್ದು, ಇದು ಡಿವೈಸ್‌ನಲ್ಲಿರುವ ಫೋಟೋಗಳು ಮತ್ತು ಫೈಲ್‌ಗಳನ್ನು ಬಳಸಿಕೊಂಡು ಹಂತ-ಹಂತದ ಬಹುಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸುತ್ತದೆ. ಈ ಸರಣಿಯು ಗರಿಷ್ಠ 8000mAh ವರೆಗಿನ ದೈತ್ಯ ಬ್ಯಾಟರಿ, ಫೈಂಡ್ X10 ಪ್ರೊ ಮ್ಯಾಕ್ಸ್‌ನಲ್ಲಿರುವ 2nm ಮೀಡಿಯಾಟೆಕ್ ಡೈಮೆನ್ಸಿಟಿ 9600 ಪ್ರೊ ಪ್ರೊಸೆಸರ್ ಹಾಗೂ ಹೊಚ್ಚಹೊಸ ಬಾರ್ಡರ್‌ಲೆಸ್ ವಿನ್ಯಾಸದ ಬೆಂಬಲವನ್ನು ಹೊಂದಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ