Sj*

ಬೆಂಗಳೂರು/ನೋಯ್ಡಾ: ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ರಾಜಧಾನಿ ಬೆಂಗಳೂರಿನ ಕೀರ್ತಿಗೆ ಮತ್ತೊಂದು ಹೆಮ್ಮೆಯ ಗರಿ ಸೇರ್ಪಡೆಯಾಗಿದೆ. ಇಂಡಿಯನ್ ರೇಸಿಂಗ್ ಲೀಗ್ (ಐಆರ್‌ಎಲ್) ಸ್ಪರ್ಧೆಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡವು ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಈ ಮಹತ್ವದ ಗೆಲುವಿನ ಸಂಭ್ರಮಾಚರಣೆಯು ಕೇವಲ ಕ್ರೀಡಾ ಸಾಧನೆಗೆ ಸೀಮಿತವಾಗದೆ, ಕನ್ನಡ ನಾಡು ಮತ್ತು ಅಸ್ಮಿತೆಯ ಗರ್ವದ ಕ್ಷಣವಾಗಿ ಪರಿವರ್ತನೆಗೊಂಡಿತು.

ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಗೌತಮ್ ಬುದ್ಧ ನಗರದ ಪೊಲೀಸ್ ಕಮಿಷನರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಜೇತರಿಗೆ ಅಧಿಕೃತ ಟ್ರೋಫಿ ಪ್ರದಾನ ಮಾಡಿದರು. ಇದಕ್ಕೂ ಮುನ್ನ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನ ಪಡೆದ ಸ್ಪರ್ಧಿಗಳಿಗೆ ಪ್ರಶಸ್ತಿ ನೀಡಿದ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡದ ಮಾಲಕಿ ಪ್ರಿಯಾ ಸುದೀಪ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ವೇಳೆ ಅವರು ತೋರಿದ ಕನ್ನಡಾಭಿಮಾನ ಎಲ್ಲರ ಗಮನ ಸೆಳೆಯಿತು.

priya.

ಗೆಲುವಿನ ಸಂಭ್ರಮದ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಪ್ರಿಯಾ ಸುದೀಪ್ ಅವರು ಕನ್ನಡದ ಬಾವುಟದ ಕೆಂಪು ಮತ್ತು ಹಳದಿ ಬಣ್ಣದ ಶಾಲನ್ನು ಪೊಲೀಸ್ ಕಮಿಷನರ್ ಅವರಿಗೆ ನೀಡಿ, ಅದನ್ನು ವಿಜೇತರಿಗೆ ಗೌರವಪೂರ್ವಕವಾಗಿ ಹೊದಿಸುವಂತೆ ಕೋರಿದರು. ಜೊತೆಗೆ, ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿ ಮತ್ತು ನಾಡಿನ ಅಸ್ಮಿತೆಯನ್ನು ಅತ್ಯಂತ ಹೆಮ್ಮೆಯಿಂದ ಆಚರಿಸುವ 'ಕರ್ನಾಟಕ ರಾಜ್ಯೋತ್ಸವ'ದ ಮಹತ್ವ ಹಾಗೂ ಹಿನ್ನೆಲೆಯನ್ನು ವೇದಿಕೆಯಲ್ಲಿ ಪ್ರಸ್ತಾಪಿಸಿ ಮೆಚ್ಚುಗೆಗೆ ಪಾತ್ರರಾದರು.

ಪ್ರಶಸ್ತಿ ಪ್ರದಾನ ಪೀಠದ ಮೇಲೆ ನಿಂತ ಐಆರ್‌ಎಲ್ ವಿಜೇತ ರುಹಾನ್ ಆಳ್ವಾ ಅವರು ತಮ್ಮ ಹೆಗಲ ಮೇಲೆ ಕನ್ನಡ ಧ್ವಜದ ಬಣ್ಣದ ಶಾಲನ್ನು ಹೊದ್ದು ನಿಂತ ದೃಶ್ಯವು, ಕನ್ನಡಿಗರು ಎಲ್ಲೇ ಹೋದರೂ ತಮ್ಮ ತಾಯ್ನಾಡಿನ ಹೆಮ್ಮೆಯನ್ನು ಸದಾ ಜೀವಂತವಾಗಿರಿಸಿಕೊಳ್ಳುತ್ತಾರೆ ಎಂಬುದನ್ನು ಸಾಬೀತುಪಡಿಸಿತು. ಕನ್ನಡದ ಶಾಲು ಮತ್ತು ಪ್ರೇರಣಾದಾಯಕ ಮಾತುಗಳ ಮೂಲಕ ಪ್ರಿಯಾ ಸುದೀಪ್ ಅವರು ಕ್ರೀಡಾ ವಿಜಯವನ್ನು ಗಡಿಗಳನ್ನು ಮೀರಿ ಕನ್ನಡದ ಸಾರ್ವಭೌಮತೆಯ ಸಂಭ್ರಮವನ್ನಾಗಿ ರೂಪಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ