– ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಸಿನಿಮಾ ಪತ್ರಕರ್ತ ಹಾಗೂ ಪ್ರಚಾರಕರ್ತ ಪ್ರವೀಣ್ ಏಕಾಂತರ ಸಾರಥ್ಯದ ‘ಕ ಪಿಚ್ಚರ್’ ಸಂಸ್ಥೆಯ ನೂತನ ವಿಭಾಗ ‘ಕ ಮ್ಯೂಸಿಕ್’ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿತು.

ನಾದಬ್ರಹ್ಮ ಹಂಸಲೇಖ ಅವರ ಅಮೃತವಾಣಿಯೊಂದಿಗೆ ಸಾಹಿತಿ ಕವಿರಾಜ್ ಅವರು ಆಡಿಯೋ ಲೇಬಲ್ ಉದ್ಘಾಟಿಸಿದರು. ನಿರ್ದೇಶಕ ಚೇತನ್ ಕುಮಾರ್ ಹಾಗೂ ಸಾಹಿತಿ ನಾಗಾರ್ಜುನ್ ಶರ್ಮಾ ಉಪಸ್ಥಿತರಿದ್ದರು.

1001961389

ಈ ಸಂದರ್ಭದಲ್ಲಿ ‘ಕ ಮ್ಯೂಸಿಕ್’ನ ಮೊದಲ ಪ್ರಯತ್ನವಾಗಿ ‘1st ಲವ್ ಗುರು’ ಚಿತ್ರದ ಮೊದಲ ಹಾಡು ಬಿಡುಗಡೆಯಾಯಿತು. ನಿರ್ದೇಶಕ ಗುರುಪ್ರಸಾದ್ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರದಲ್ಲಿ ಯುದೀತ್ ಶೆಟ್ಟಿ ಹಾಗೂ ರಾಧ್ಯಾ ರಾಜ್ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ.

1st ಲವ್ ಗುರು ನಿರ್ದೇಶಕ ಗುರುಪ್ರಸಾದ್ ಗುರುಗಳಾದ ಜಾದುಗಾರ ರಮೇಶ್ ರವರ ಮ್ಯಾಜಿಕ್ ನೊಂದಿಗೆ ಕ ಮ್ಯೂಸಿಕ್ ಲೋಗೋ ಹಾಗೂ 1st ಲವ್ ಗುರು ಚಿತ್ರದ ನಾಯಕ ನಾಯಕಿ ವೇದಿಕೆ ಮೇಲೆ ಪರಿಚಯವಾಗಿದ್ದು ವಿಶೇಷವಾಗಿತ್ತ 1st ಲವ್ ಗುರು ಚಿತ್ರದ ಟೈಟಲ್ ಹಾಡು, ಶುರು 1st ಲವ್ ಗುರು ಕ ಮ್ಯೂಸಿಕ್ ನ ಮೊದಲ ಹಾಡಾಗಿ ಬಿಡುಗಡೆಯಾಗಿದೆ.

1001961395

ಮನೋಜವಂ ಆತ್ರೇಯ ಚೊಚ್ಚ ಸಂಗೀತ ಸಂಯೋಜನೆ 1st ಲವ್ ಗುರು ಚಿತ್ರದ ಈ ಹಾಎಇಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು,ವರುಣ್ ರಾಮಚಂದ್ರ ಮತ್ತು ಸುರಭಿ ಹಾಡಿದ್ದಾರೆ.

1st ಲವ್ ಗುರು ಚಿತ್ರದ ಮೂಲಕ ನಿರ್ದೇಶಕ ಗುರುಪ್ರಸಾದ್ ಉದ್ಯಮಕ್ಕೆ ಕಾಲಿಡ್ತಿದ್ದಾರೆ. ರಂಗಭೂಮಿ ಹಿನ್ನೆಲೆಯ ಗುರು ಚೊಚ್ಚಲ ಚಿತ್ರದಲ್ಲಿ ಭರವಸೆ ಹುಟ್ಟಿಸ್ತಿದ್ದಾರೆ. ಅದಕ್ಕೆ ಸಾಕ್ಷಿಯೇ ಚಿತ್ರದ ಪೋಸ್ಟರ್ ಮತ್ತು ಹಾಡು.  1st ಲವ್ ಗುರು ಚಿತ್ರದಲ್ಲಿ ಪ್ರತಿಭಾನ್ವಿತ ಹಿರಿಯ ಕಿರಿಯ ತಾರಬಳಗವೇ‌ ಇದೆ. ಹಿರಿಯ ನಟ  ಶೋಭರಾಜ್, ಚಂದ್ರಕಲಾ ಮೋಹನ್, ಭಾಗ್ಯಶ್ರೀ, ಮ್ಯಾಜಿಕ್ ರಮೇಶ್, ಶ್ರೀಧರ್, ಡ್ರಾಮಾ ಜೂ. ಮಹೇಂದ್ರ, ಪ್ರವೀಣ್ ಜೈನ್, ಗಜೇಂದ್ರ, ಯುವ ಶೆಟ್ಟಿ ಪ್ರಮುಖರಾಗಿ ಅಭಿನಯಿಸಿದ್ದಾರೆ. 1st ಲವ್ ಗುರು ಚಿತ್ರಕ್ಕೆ ಛಾಯಾಗ್ರಹಣ ಸತೀಶ್ ಜಿ , ಹಿರಿಯ ಸಂಕಲನಕಾರ ಸುರೇಶ್ ಅರಸ್ ಕೈಚಳಕವಿದೆ. 1st ಲವ್ ಗುರು ಚಿತ್ರವನ್ನ ಕೆ.ಎಂ.ಜಿ ಪ್ರೊಡಕ್ಷನ್ಸ್ ನಿರ್ಮಿಸಿದ್ದು, ನವೆಂಬರ್ 27ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ