ಹೈಡ್ರೇಶನ್ ನಿಂದ ಸನ್ ಪ್ರೊಟೆಕ್ಷನ್ ವರೆಗೂ ನಮ್ಮ ಚರ್ಮದ ಆರೈಕೆ ಮಾಡಿಕೊಳ್ಳುವುದು ಹೇಗೆ…..?
ಬೇಸಿಗೆಯ ಋತು ತನ್ನೊಡನೆ ತೀವ್ರ ಬಿಸಿಲು, ಬೆವರು, ಚರ್ಮಕ್ಕೆ ಸಂಬಂಧಿಸಿದ ಹಲವು ಸವಾಲುಗಳನ್ನು ಹೊತ್ತು ತರುತ್ತದೆ. ಹೀಗಿದ್ದಾಗ ಹಲವು ಹೆಂಗಸರು ಸುಲಭದ ಮನೆಮದ್ದಿಗೆ ಮೊರೆಹೋದರೆ, ಇತರ ಹೆಚ್ಚಿನವರು ತಮ್ಮ ಚರ್ಮವನ್ನು ಸದಾ ಫ್ರೆಶ್ ಹೆಲ್ದಿ ಆಗಿರಿಸಲು ಸ್ಪೆಷಲ್ ರೊಟೀನ್ ಅನುಸರಿಸುತ್ತಾರೆ.
ಸೂಕ್ತ ಹೈಡ್ರೇಶನ್, ಸನ್ ಪ್ರೊಟೆಕ್ಷನ್ ಹಾಗೂ ನಿಯಮಿತ ಸ್ಕಿನ್ ಕೇರ್ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ, ನಮ್ಮ ಚರ್ಮ ಸುರಕ್ಷಿತವಾಗಿದ್ದು. ಬದಲಿಗೆ ಇಡೀ ದಿನ ತಾಜಾತನ ತುಂಬಿಸಿ, ನಳನಳಿಸುವಂತೆ ಮಾಡುತ್ತದೆ.
ಡೇಲಿ ರೊಟೀನ್ : ನೀವು ಬಹಳ ಹೊತ್ತು ಹೊರಗಿನ ಬಿಸಿಲಿನಲ್ಲೇ ಓಡಾಡಬೇಕಾದಂಥ ಕೆಲಸದಲ್ಲಿದ್ದರೆ, ತೀವ್ರ ಚುರುಕಿನ ಬೆಳಕಲ್ಲಿ (ಶೂಟಿಂಗ್ ಇತ್ಯಾದಿ) ದುಡಿಯುತ್ತಿದ್ದರೆ, ನಿಮ್ಮ ಚರ್ಮವನ್ನು ಸದಾ ಫ್ರೆಶ್‌ನ್ಯಾಚುರಲ್ ಆಗಿರಿಸಿಕೊಳ್ಳಲು, ತುಸು ಹೆಚ್ಚಾಗಿಯೇ ಕಷ್ಟಪಡಬೇಕು. ಇದಕ್ಕಾಗಿ ಈ ಸಲಹೆ ಅನುಸರಿಸಿ :

ಸೂಕ್ತ ಹೈಡ್ರೇಶನ್ ಅರೇಂಜ್ ಮಾಡಿದ ನಂತರವೇ ಮನೆಯಿಂದ ಹೊರಡಿ. ಕೇವಲ ನೀರಿನ ಬಾಟಲಿ ಹಿಡಿದು ಹೊರಡುವುದರಿಂದ ಲಾಭವಿಲ್ಲ, ಏಕೆಂದರೆ ನೀರು ದಾಹವನ್ನು ತಣಿಸಬಲ್ಲದೇ ಹೊರತು ಬೆವರಿನಿಂದಾಗಿ ಹೊರಗೆ ಹೋಗುವ ಮಿನರಲ್ಸ್ ನ ಕೊರತೆ ನೀಗಿಸಲಾರದು. ಹೀಗಾಗಿ ಕನಿಷ್ಠ ಒಂದು ಬಾಟಲಿ ಎಲೆಕ್ಟ್ರೊಲೈಟ್ಸ್ ಮಿಕ್ಸ್ ನ ವಾಟರ್ ನಿಮ್ಮ ಜೊತೆಗಿರಲಿ. ಆಗಾಗ ಇದನ್ನು ಕುಡಿಯುತ್ತಿರಿ, ಇದರಿಂದ ದೇಹ ಕಳೆದುಕೊಂಡ ಮಿನರಲ್ಸ್ ಮರಳುತ್ತದೆ.

ಊಟ ತಿಂಡಿಗೆ ಹೆಚ್ಚು ವಾಟರ್ ಬೇಸ್ಡ್ ವೆಜಿಟೆಬಲ್ಸ್ ಇರಲಿ. ಸೌತೆ, ಟೊಮೇಟೊ, ಸೋರೆ, ಹಾಗಲದಂಥ ತರಕಾರಿ ಸುಲಭವಾಗಿ ಜೀರ್ಣ ಆಗುತ್ತವೆ. ಜೊತೆಗೆ ಇದರಲ್ಲಿ ವಿಟಮಿನ್ ಸಿಯ ಜೊತೆಗೆ ಮೆಗ್ನಿಶಿಯಂ, ಕ್ಯಾಲ್ಶಿಯಂನಂಥ ಅತ್ಯಗತ್ಯ ಮಿನರಲ್ಸ್ ಸಹ ಹೊಂದಿವೆ. ನಿಮ್ಮ ಆಹಾರದಲ್ಲಿ ಮೊಸರು, ಮಜ್ಜಿಗೆ ಇರಲಿ.

ನೀವು ಮಾಡೆಲ್ ಆಗಿದ್ದು, ಪ್ರತಿದಿನ ಹಲವು ಪದರಗಳ ಮೇಕಪ್ ಮಾಡಿಕೊಳ್ಳಬೇಕಿದ್ದರೆ, ಅಗತ್ಯವಾಗಿ ಸನ್ ಸ್ಕ್ರೀನ್ ಬೇಸ್ಡ್ ಫೌಂಡೇಶನ್ ಬಳಸಿರಿ. ನಿಮ್ಮ ಕೆಲಸ ಮುಗಿದ ನಂತರ, ಈ ಮೇಕಪ್ ತೆಗೆದುಬಿಡಿ. ಆಗ ಚರ್ಮ ಸಹಜವಾಗಿ ಉಸಿರಾಡುತ್ತದೆ. ರಾತ್ರಿ ಮಲಗುವ ಮುನ್ನ ಕ್ಲೆನ್ಸಿಂಗ್ ಮಾಡಲು ಮರೆಯದಿರಿ.

ಹೈಡ್ರೇಟಿಂಗ್ ಕಾಸ್ಮೆಟಿಕ್ಸ್ ಗೆ ಹೆಚ್ಚಿನ ಆದ್ಯತೆ ನೀಡಿ. ದೀರ್ಘಾವಧಿ ಕಾಲ ಬಿಸಿಲಲ್ಲಿ ಇರಬೇಕಾದವರು, ಹೈ SPF 50 ತರಹದ ಹೇರ್ ಸನ್ ಸ್ಕ್ರೀನ್ ಸಹ ಇರಿಸಿಕೊಳ್ಳಬೇಕು. ಏಕೆಂದರೆ ಹಗಲಲ್ಲಿ ಕನಿಷ್ಠ 2 ಸಲ ಇದನ್ನು ಕೂದಲಿಗೆ ಹಚ್ಚಿಕೊಳ್ಳಬೇಕು. ಹೀಗೆ ಮಾಡದಿದ್ದರೆ, ಕೂದಲು ತನ್ನ ಹೊಳಪು ಕಳೆದುಕೊಳ್ಳುತ್ತದೆ, ಒರಟಾಗಿ, ಶುಷ್ಕ ಆಗಿಬಿಡುತ್ತದೆ.
ದಿನವಿಡೀ ಕೆಲಸದ ನಂತರ ಫೇಸ್ ಐಸಿಂಗ್ ಸಹ ಮಾಡಿ. ಇದರಿಂದ ಸ್ಕಿನ್ ತಾಜಾ ಆಗಿ ನಳನಳಿಸುತ್ತದೆ.

ಬೇಸಿಗೆಯಲ್ಲಿ ಚರ್ಮಕ್ಕೆ ವಿಟಮಿನ್ ಸಿಯ ಸೀರಮ್ ಬೆಸ್ಟ್. ಇದು ಚರ್ಮವನ್ನು ಹೈಡ್ರೇಟೆಡ್ ಆಗಿರಿಸುವುದಲ್ಲದೆ, ಅದನ್ನು ಶಾಂತಿಯುತ ಆಗಿರಿಸುವುದಕ್ಕೂ ನೆರವಾಗುತ್ತದೆ.
ಹೇರ್ ಡ್ರೈಯರ್, ಸ್ಟ್ರೇನರ್ ಹಾಗೂ ಕರ್ಲಿಂಗ್ ರಾಡ್ ಇತ್ಯಾದಿ ಬಳಸಲೇಬೇಡಿ. ಪಾರ್ಟಿಗೆ ಹೊರಡಲು ಅನಿವಾರ್ಯ ಎನಿಸಿದಾಗ ಎಮರ್ಜೆನ್ಸಿಗೆ ಇದನ್ನು ಬಳಸಿಕೊಳ್ಳಿ. ಇದರಿಂದ ಬೇಸಿಗೆಯಲ್ಲಿ ಕೂದಲಿನ ಟೆಕ್ಸ್ ಚರ್ ಕೆಡುತ್ತದೆ.

ತಿಂಗಳಿಗೆ 2 ಸಲ ಅಗತ್ಯ ಹೇರ್ ಸ್ಪಾ ಮಾಡಿಸಿ. ಇದರಿಂದ ಕೂದಲಿನ ಡೀಪ್ ಕ್ಲೀನಿಂಗ್ ಆಗುತ್ತದೆ, ಅದರ ವಾಲ್ಯೂಂ ಹೆಚ್ಚಿ, ಕೂದಲು ದಟ್ಟ, ನೀಳ, ಸೊಂಪಾಗುತ್ತದೆ.
ಹಗಲಿನಲ್ಲಿ ಯಾವಾಗ ಫೇಸ್ ವಾಶ್ ಬಳಿಸಿದರೂ, ನಂತರ ಲೈಟ್ ವೆಯ್ಟ್ ಮಾಯಿಶ್ಚರೈಸರ್, ಸೀರಮ್ ಯಾ ಸನ್ ಸ್ಕ್ರೀನ್ ಇತ್ಯಾದಿ ಅಗತ್ಯ ಬಳಸಿರಿ.

ವರ್ಕ್ ಔಟ್ ಟಿಪ್ಸ್ : ಫಿಟ್ ನೆಸ್ ಫ್ರೀಕಾಗಿದ್ದು, ನೀವು ದಿನಾ ಜಿಮ್ ರೊಟೀನ್ ಮಾಡಿಕೊಂಡಿದ್ದರೆ, ಈ ಬೇಸಿಗೆಯಲ್ಲಿ ತುಸು ಎಚ್ಚರಿಕೆ ವಹಿಸಬೇಕು. ಹೀಗಾಗಿ ಈ ವರ್ಕ್ ಔಟ್ ಟಿಪ್ಸ್ ಫಾಲೋ ಮಾಡಿ :
ವರ್ಕ್ ಔಟ್ ಗೆ ಮೊದಲು ಹಾಗೂ ನಂತರ ಅಗತ್ಯ ಧಾರಾಳ ನೀರು ಕುಡಿಯಿರಿ. ಆಗ ಬೆವೆತ ನಂತರ ಬಾಡಿ ಹೈಡ್ರೇಟೆಡ್ ಆಗಿರುತ್ತದೆ.

ಉತ್ತಮ ಗುಣಮಟ್ಟದ ಬ್ರೀದೆಬಲ್ ಫ್ಯಾಬ್ರಿಕ್ ನ ಜಿಮ್ ಔಟ್ ಫಿಪ್ಟ್ಸ್ ನ್ನು ಮಾತ್ರ ಧರಿಸಿರಿ.
ಯಾವತ್ತು ತುಸು ಡಲ್ ಎನಿಸುತ್ತದೋ, ಆ ದಿನ ವರ್ಕ್ ಔಟ್ ಮಾಡಬೇಡಿ, ಇಲ್ಲದಿದ್ದರೆ ಎಗ್ಝರ್ಶನ್ ಹೆಚ್ಚೀತು.

ನಿಮ್ಮ ಡಯೆಟ್ ನಲ್ಲಿ ಗ್ರಿಲ್ಡ್ ಪ್ರೋಟೀನ್, ಸಲಾಡ್, ಇಡಿಯಾದ ದವಸಧಾನ್ಯದ ಆಹಾರ ಇರಲಿ. ಹಣ್ಣಿನ ಜೂಸ್ ಬದಲಿಗೆ ಕಿತ್ತಳೆ, ಮೂಸಂಬಿ, ಕಲ್ಲಂಗಡಿ ಹಣ್ಣುಗಳನ್ನು ನೇರವಾಗಿ ಸೇವಿಸಿ.
– ಪ್ರಭಾ ಮಾಧವ್





