ರೇಷ್ಮೆ ಸೊಗಡಿನ ಧನ್ಯಾ
ಸ್ಯಾಂಡಲ್ ವುಡ್ ನಟಿ ಹಾಗೂ ಮಾಡೆಲ್ ಧನ್ಯಾ ರಾಮ್ ಕುಮಾರ್, ಡಾ. ರಾಜ್ ಕುಮಾರ್ ರ ಮೊಮ್ಮಗಳು ಹಾಗೂ ನಟ ರಾಮ್ ಕುಮಾರ್ ಪೂರ್ಣಿಮಾ ದಂಪತಿಯರ ಪುತ್ರಿ. `ನಿನ್ನ ಸನಿಹಕೆ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ಅವರು, ಅಭಿನಯದ ಮೂಲಕ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು. `ಕಾಲಾಪತ್ತರ್, ಪೌಡರ್, ದಿ ಜಡ್ಜ್ ಮೆಂಟ್, ಹೈಡ್ & ಸೀಕ್, ಚೌಕಿದಾರ್,’ ಮುಂತಾದ ಯಶಸ್ವಿ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. `ಚೌಕಿದಾರ್’ ಚಿತ್ರದಲ್ಲಿ ರೇಷ್ಮೆ ಕೃಷಿ ಮಾಡುವ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಕ್ರಿಯೇಟಿವ್ ಆಗಿರುವ ಧನ್ಯಾರನ್ನು ಲಕ್ಷಾಂತರ ಮಂದಿ ಫಾಲೋ ಮಾಡುತ್ತಾರೆ.

`ಸಿನಿಮಾ ಆಯ್ಕೆಯಲ್ಲಿ ಗೊಂದಲವಿಲ್ಲ!’
ಕಾವ್ಯಾ ಶೈವ ಸೀರಿಯಲ್ ನಲ್ಲಿ ನಟಿಸುವಾಗಲೇ ಸಿನಿಮಾ ಅವಕಾಶ, ಚಿತ್ರ ಬಿಡುಗಡೆಗೆ ಮೊದಲೇ ಡ್ಯಾನ್ಸಿಂಗ್ ರಿಯಾಲಿಟಿ ಶೋ, ಮೊದಲ ಸಿನಿಮಾ ರಿಲೀಸ್ ಆದ ತಕ್ಷಣ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ದೊಡ್ಡ ಹೆಸರು ಮಾಡಿರುವ ಟ್ರೆಂಡಿಂಗ್ ನಟಿ ಕಾವ್ಯಾ ಶೈವ. ಕನ್ನಡ ಕಿರುತೆರೆಯ `ಕೆಂಡ ಸಂಪಿಗೆ’ ಧಾರಾವಾಹಿ ಮೂಲಕ ಮನೆಮಾತಾಗಿರುವ ಕಾವ್ಯಾ ಶೈ, ಅದರ ಬೋಲ್ಡ್ ಹುಡುಗಿ ಪಾತ್ರದಿಂದ ಗಮನ ಸೆಳೆಯುವ ಮೂಲಕ `ಕೊತ್ತಲಾಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಅವಕಾಶಗಳ ಆಯ್ಕೆಯಲ್ಲಿ ನಾನು ಯಾವುದೇ ಗೊಂದಲ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಎಚ್ಚರಿಕೆಯಿಂದ ಪಾತ್ರ ಹಾಗೂ ಪ್ರಾಜೆಕ್ಟ್ ಗಳನ್ನು ಆಯ್ಕೆ ಮಾಡಬೇಕಿದೆ. ಅದು ನನ್ನ ನಟನಾ ವೃತ್ತಿಗೆ ಎಷ್ಟು ಪೂರಕ ಎನ್ನುವುದನ್ನು ಆಲೋಚಿಸಿಯೇ ಒಪ್ಪುತ್ತೇನೆ ಎನ್ನುತ್ತಾರೆ ಕಾವ್ಯಾ ಶೈವ.

ನಿಶ್ವಿಕಾ ಮಸ್ತ್ ಹ್ಯಾಟ್ರಿಕ್
`ಮಾರ್ಕ್’ ಸಿನಿಮಾದಲ್ಲಿ ಸುದೀಪ್ ಜೊತೆ `ಮಸ್ತ್ ಮಲೈಕಾ’ ಹಾಡಿನಲ್ಲಿ ಕನ್ನಡ ಕಲಾ ರಸಿಕರಿಗೆ ಮೋಡಿ ಮಾಡಿದ ನಟಿ ನಿಶ್ವಿಕಾ ನಾಯ್ಡು. `ಅಮ್ಮ ಐ ಲವ್ ಯೂ’ ಸಿನಿಮಾ ಮೂಲಕ ಚಂದನನ ಪ್ರವೇಶಿಸಿದರು. ಇದಕ್ಕೂ ಮುನ್ನ `ವಾಸು ನಾನ್ ಪಕ್ಕಾ ಕರ್ಮಷಿಯಲ್’ ಚಿತ್ರದಲ್ಲೂ ನಟಿಸಿದರು. `ಪಡ್ಡೆಹುಲಿ, ಜೆಂಟಲ್ ಮೆನ್, ಕಾಳಿದಾಸ ಕನ್ನಡ ಮೇಷ್ಟ್ರು, ಸಖತ್, ರಾಮಾರ್ಜುನ. ಗಾಳಿಪಟ-2, ಪಸಂದ್, ಗುರುಶಿಷ್ಯರು’ ಸಿನಿಮಾ ಮೂಲಕ ಗಮನ ಸೆಳೆದಿರುವ ಈ ಪ್ರತಿಭಾನ್ವಿತ ನಟಿ, ತನಗೊಪ್ಪುವ ಹೆಚ್ಚಿನ ಅವಕಾಶ ಇರುವಂಥ ತಿರುವು ನೀಡುವ ಪಾತ್ರಕ್ಕಾಗಿ ಕಾಯುತ್ತಿದ್ದಾರೆ.

ಕಿರುತೆರೆಯಿಂದ ಬೆಳ್ಳಿತೆರೆಗೆ ಭವ್ಯಾ ಗೌಡ
`ಕರ್ಣ’ ಧಾರಾವಾಹಿಯ ನಟಿ ಭವ್ಯಾ ಗೌಡ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ. `ಗೀತಾ’ ಧಾರಾವಾಹಿಯ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಭವ್ಯಾ ಗೌಡ, ನಂತರ `ಬಿಗ್ ಬಾಸ್ ಕನ್ನಡ ಸೀಸನ್’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಜನಪ್ರಿಯತೆ ಗಳಿಸಿದ್ದರು. ಈ ಶೋ ನೀಡಿದ್ದ ದೊಡ್ಡ ಮೈಲೇಜ್ ನಿಂದಾಗಿ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಅವಕಾಶ ಹುಡುಕಿಕೊಂಡು ಬಂದಿದೆ. ಅವರು ನಾಯಕಿಯಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ `ದೇವಿ.’ ಭವ್ಯಾ ಗೌಡ ನಾಯಕಿಯಾಗಿ, ಯುವ ರೈತ ಚೇತನ್ ಗೌಡ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ `ಕರ್ಣ’ ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರು ಬೆನ್ನಲ್ಲೇ ಈ ಸಿನಿಮಾ ಆಫರ್ ಭವ್ಯಾ ಮುಡಿಗೇರಿದೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಭವ್ಯಾ ಗೌಡ, ಆಗಾಗ ಹೊಸ ಫೋಟೋ ಶೂಟ್, ರೀಲ್ಸ್ ಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಸ್ಯಾಂಡಲ್ ವುಡ್ ನ `ಪ್ಯಾರಡಾಕ್ಸ್‘ಗೆ ಎಂಟ್ರಿ ಪಡೆದ ಹನ್ಸಿಕಾ
ಪುನೀತ್ ರಾಜ್ ಕುಮಾರ್ ಗೆ ಜೋಡಿಯಾಗಿ `ಬಿಂದಾಸ್’ ಚಿತ್ರದಲ್ಲಿ ನಟಿಸಿದ್ದ ಹನ್ಸಿಕಾ ಮೋಟ್ವಾನಿ, ಸುಮಾರು 18 ವರ್ಷಗಳ ಬಳಿಕ ಈಗ ಸ್ಯಾಂಡಲ್ ವುಡ್ ನ `ಪ್ಯಾರಡಾಕ್ಸ್’ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. `ಹಾ’ ಚಿತ್ರದ ಮೂಲಕ ಬಾಲನಟಿಯಾಗಿ ತಮ್ಮ ಕೆರಿಯರ್ ಶುರು ಮಾಡಿದ್ದ ಹನ್ಸಿಕಾ, ಅಲ್ಲು ಅರ್ಜುನ್ ನಟನೆಯ ಸೂಪರ್ ಹಿಟ್ `ದೇವಸಮುದುರು’ ಮೂಲಕ ನಾಯಕ ನಟಿಯಾದರು. ನಂತರ `ಆಪ್ ಸುರೂರ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. `ಮಾಪಿಳ್ಳೈ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಾಣೆ ಮಾಡಿ, ರವಿ ಮೋಹನ್ `ಎಂಗೆಯುಂ ಕಾದಲ್’ ಮತ್ತು ಉದಯನಿಧಿ ಸ್ಟಾಲಿನ್ ರ `ಒರು ಕಲ್ ಒರು ಕನ್ನಾಡಿ,’ ವಿಜಯ್ ಅಭಿನಯದ `ವೇಲಾಯುಧಂ’ ಚಿತ್ರದಲ್ಲಿ ನಟಿಸಿದ್ದರು. ತೆಲುಗಿನಲ್ಲಿ ಎನ್‌ಟಿಆರ್ ಜೊತೆ `ಕಂತ್ರಿ,’ ಪ್ರಭಾಸ್ ಜೊತೆ `ಬಿಲ್ಲಾ’ ಇತ್ಯಾದಿ ಸೂಪರ್ ಹಿಟ್ ಚಿತ್ರಗಳಲ್ಲೂ ನಟಿಸಿದ್ದಾರೆ. ಸದ್ಯಕ್ಕೆ ಸಿನಿಮಾಗಳ ಜೊತೆ ವೆಬ್ ಸರಣಿಗಳಲ್ಲಿ ಬಿಝಿ ಆಗಿದ್ದಾರೆ.

ವೃತ್ತಿಗೆ ಪ್ರಾಮುಖ್ಯತೆ ಎಂದ ನಿಮಿಕಾ
`ಶೇಕ್ ಇಟ್ ಪುಷ್ಟವತಿ’ ಖ್ಯಾತಿಯ ನಟಿ ನಿಮಿಕಾ ರತ್ನಾಕರ್ ಮಾಡೆಲ್ ಆಗಿ ಮಿಂಚುತ್ತಲೇ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿಯೂ ನೆಲೆ ಕಂಡುಕೊಂಡರು. ಮದುವೆಯಾಗಿ 15 ದಿನಕ್ಕೆ ಕೆಲಸಕ್ಕೆ ಮರಳಿದ ನಟಿ ನಿಮಿತಾ ರತ್ನಾಕರ್, ತಮ್ಮ ವೃತ್ತಿಯಲ್ಲಿ ಬಿಝಿಯಾಗಿದ್ದು, ಕೆರಿಯರ್ ಗೆ ಮೊದಲ ಆದ್ಯತೆ ನೀಡಲು ನಿರ್ಧರಿಸಿದ್ದಾರೆ. ಜಾಹೀರಾತು ಹಾಗೂ ಫೋಟೋ ಶೂಟ್ ನಲ್ಲಿ ತೊಡಗಿದ್ದು, ತಮ್ಮ ನಟನೆಯ `ವೈಲ್ಡ್ ಟೈಗರ್ ಸಫಾರಿ’ ಸಿನಿಮಾದ ಡಬ್ಬಿಂಗ್ ಆರಂಭಿಸಿದ್ದಾರೆ. ನನಗೆ ಕನ್ನಡದಲ್ಲಿ ಸಿಗುವ ಪ್ರೀತಿ ಮತ್ತೆಲ್ಲೂ ಸಿಕ್ಕಿಲ್ಲ. ಇಲ್ಲಿಂದಲೇ ನನ್ನ ಸಿನಿಮಾ ಎಲ್ಲಾ ಭಾಷೆಗಳಿಗೂ ಹೋಗಲಿ ಎನ್ನುವುದು ನನ್ನ ಬಯಕೆ ಎಂದಿರುವ ನಿಮಿಕಾ, ನಟಿಯರು ಮದುವೆಯಾದ ನಂತರ ನಟನೆ ನಿಲ್ಲಿಸುತ್ತಾರೆ ಎಂದು ಜನ ಅಂದುಕೊಳ್ಳುತ್ತಾರೆ. ಇದೇ ಕಾರಣಕ್ಕೆ ನಾನು ಮದುವೆಯಾದ ತಕ್ಷಣ ಸಿನಿಮಾ ಕೆಲಸಗಳಿಗೆ ಮರಳಿದ್ದೇನೆ, ವೃತ್ತಿಯೇ ನನಗೆ ಮುಖ್ಯ ಎಂದಿದ್ದಾರೆ.

ಟಾಲಿವುಡ್ ನಲ್ಲಿ ಏಳುಮಲೆಯ ದುಂಡುಮಲ್ಲಿಗೆ
ಚೊಚ್ಚಲ ಸಿನಿಮಾದಲ್ಲೇ ಕನ್ನಡಿಗರ ಮನಗೆದ್ದಿರುವ ರಿಯಾಲಿಟಿ ಶೋ ಖ್ಯಾತಿಯ ಪ್ರಿಯಾಂಕಾ ಆಚಾರ್, ಈಗ ತೆಲುಗು ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ತೆಲುಗಿನಿಂದ ಸುಮಾರು 20ಕ್ಕೂ ಹೆಚ್ಚು ಕಥೆಗಳನ್ನು ಕೇಳಿದ್ದೇನೆ. ಕನ್ನಡದಲ್ಲಿ ಏಳುಮಲೆ ಸಿನಿಮಾದಂತಹ ಒಳ್ಳೆಯ ಪ್ರಾಜೆಕ್ಟ್ ನಿಂದ ವೃತ್ತಿ ಆರಂಭವಾಗಿದೆ. ನನಗೆ ಬಂದಿದ್ದ ಅನೇಕ ಸಿನಿಮಾಗಳಲ್ಲಿ ಹೆಚ್ಚು ಪಾತ್ರಗಳು ಬರೀ ಗ್ಲಾಮರ್ ಗಷ್ಟೇ ಸೀಮಿತವಾಗಿರುತ್ತಿದ್ದವು. ಕೆಲವು ಹಸಿಬಿಸಿ ದೃಶ್ಯಗಳಿದ್ದ ಕಾರಣ ಅವುಗಳನ್ನು ಒಪ್ಪಿಕೊಳ್ಳಲಿಲ್ಲ. ತೆಲುಗು ಜೊತೆಗೆ ಮಲೆಯಾಳಂ, ತಮಿಳು ಸಿನಿಮಾಗಳ ಸಾಕಷ್ಟು ಅವಕಾಶಗಳು ಬಂದಿವೆ. ತೆಲುಗಿನ `ಸೆಲೆಬ್ರಿಟಿ’ ಸಿನಿಮಾದಲ್ಲಿ ಬಿಝಿ ಇರುವ ಕಾರಣ ಬೇರೆ ಕನ್ನಡ ಸಿನಿಮಾಗಳನ್ನು ಒಪ್ಪಿಲ್ಲ. ಬರುವ ಅವಕಾಶಗಳಲ್ಲೇ ಬೆಸ್ಟ್ ಆಯ್ಕೆ ಮಾಡುವ ಯೋಚನೆಯಲ್ಲಿದ್ದೇನೆ ಎನ್ನುತ್ತಾರೆ ಪ್ರಿಯಾಂಕಾ ಆಚಾರ್.

ಹೋಮ್ಲಿ ಬೆಡಗಿ ಅಮೃತಾ ಸುದು
ಸ್ಯಾಂಡಲ್ ವುಡ್ ಹಾಗೂ ಕಿರುತೆರೆಯ ಪ್ರತಿಭಾವಂತ ನಟಿ ಅಮೃತಾ ಸುದು, ಸ್ವಂತ ಉದ್ದಿಮೆಯ ಕನಸು ಹೊತ್ತವರು. ಜನಪ್ರಿಯ ಧಾರಾವಾಹಿ `ಅಮೃತಧಾರೆ’ಯಲ್ಲಿ ಭೂಮಿಕಾಳ ತಂಗಿ `ಅಪ್ಪಿ’ ಪಾತ್ರದ ಮೂಲಕ ಮನೆಮಾತಾದವರು. ಇತ್ತೀಚೆಗೆ ಅವರು ಸಂದೀಪ್ ಬೆದ್ರ ನಿರ್ದೇಶನದ `ಪಿಕ್ಚರ್’ ಚಿತ್ರದ ಮೂಲಕ ನಾಯಕಿಯಾಗಿಯೂ ಬಣ್ಣ ಹಚ್ಚಿದ್ದಾರೆ. ಸಿನಿಮಾಗಳಲ್ಲೂ ಬಿಝಿ ಆಗಿರುವ ಅಮೃತಾ ಸುದು, `ಒಂದು ಮೊಟ್ಟೆಯ ಕಥೆ, ಕಥಾಸಂಗಮ, ಪಿಕ್ಚರ್’ ಸೇರಿದಂತೆ ಇನ್ನೂ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. `ಯಶೋದೆ, ರಾಜಿ, ಮಾಂಗಲ್ಯ,’ ಸೀರಿಯಲ್ ಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಬಣ್ಣದ ಲೋಕದ ಬಗ್ಗೆ ಮಾತನಾಡಿರು ಇವರು, ನಮ್ಮಲ್ಲಿ ತಾರತಮ್ಯ ಹೆಚ್ಚು. ಲೀಡ್ ನಟ, ನಟಿಯರಿಗೆ ಸಿಗುವ ಟ್ರೀಟ್ ಮೆಂಟ್ ಉಳಿದ ಕಲಾವಿದರಿಗೆ ಸಿಗುವುದಿಲ್ಲ ಇದನ್ನು ನಾನು ದ್ವೇಷಿಸುತ್ತೇನೆ ಎಂದಿದ್ದಾರೆ.





