ರೇಷ್ಮೆ ಸೊಗಡಿನ ಧನ್ಯಾ
ಸ್ಯಾಂಡಲ್ ವುಡ್ ನಟಿ ಹಾಗೂ ಮಾಡೆಲ್ ಧನ್ಯಾ ರಾಮ್ ಕುಮಾರ್, ಡಾ. ರಾಜ್ ಕುಮಾರ್ ರ ಮೊಮ್ಮಗಳು ಹಾಗೂ ನಟ ರಾಮ್ ಕುಮಾರ್ ಪೂರ್ಣಿಮಾ ದಂಪತಿಯರ ಪುತ್ರಿ. `ನಿನ್ನ ಸನಿಹಕೆ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ಅವರು, ಅಭಿನಯದ ಮೂಲಕ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು. `ಕಾಲಾಪತ್ತರ್, ಪೌಡರ್, ದಿ ಜಡ್ಜ್ ಮೆಂಟ್, ಹೈಡ್ & ಸೀಕ್, ಚೌಕಿದಾರ್,' ಮುಂತಾದ ಯಶಸ್ವಿ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. `ಚೌಕಿದಾರ್' ಚಿತ್ರದಲ್ಲಿ ರೇಷ್ಮೆ ಕೃಷಿ ಮಾಡುವ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಕ್ರಿಯೇಟಿವ್ ಆಗಿರುವ ಧನ್ಯಾರನ್ನು ಲಕ್ಷಾಂತರ ಮಂದಿ ಫಾಲೋ ಮಾಡುತ್ತಾರೆ.

`ಸಿನಿಮಾ ಆಯ್ಕೆಯಲ್ಲಿ ಗೊಂದಲವಿಲ್ಲ!'
ಕಾವ್ಯಾ ಶೈವ ಸೀರಿಯಲ್ ನಲ್ಲಿ ನಟಿಸುವಾಗಲೇ ಸಿನಿಮಾ ಅವಕಾಶ, ಚಿತ್ರ ಬಿಡುಗಡೆಗೆ ಮೊದಲೇ ಡ್ಯಾನ್ಸಿಂಗ್ ರಿಯಾಲಿಟಿ ಶೋ, ಮೊದಲ ಸಿನಿಮಾ ರಿಲೀಸ್ ಆದ ತಕ್ಷಣ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ದೊಡ್ಡ ಹೆಸರು ಮಾಡಿರುವ ಟ್ರೆಂಡಿಂಗ್ ನಟಿ ಕಾವ್ಯಾ ಶೈವ. ಕನ್ನಡ ಕಿರುತೆರೆಯ `ಕೆಂಡ ಸಂಪಿಗೆ' ಧಾರಾವಾಹಿ ಮೂಲಕ ಮನೆಮಾತಾಗಿರುವ ಕಾವ್ಯಾ ಶೈ, ಅದರ ಬೋಲ್ಡ್ ಹುಡುಗಿ ಪಾತ್ರದಿಂದ ಗಮನ ಸೆಳೆಯುವ ಮೂಲಕ `ಕೊತ್ತಲಾಡಿ' ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಅವಕಾಶಗಳ ಆಯ್ಕೆಯಲ್ಲಿ ನಾನು ಯಾವುದೇ ಗೊಂದಲ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಎಚ್ಚರಿಕೆಯಿಂದ ಪಾತ್ರ ಹಾಗೂ ಪ್ರಾಜೆಕ್ಟ್ ಗಳನ್ನು ಆಯ್ಕೆ ಮಾಡಬೇಕಿದೆ. ಅದು ನನ್ನ ನಟನಾ ವೃತ್ತಿಗೆ ಎಷ್ಟು ಪೂರಕ ಎನ್ನುವುದನ್ನು ಆಲೋಚಿಸಿಯೇ ಒಪ್ಪುತ್ತೇನೆ ಎನ್ನುತ್ತಾರೆ ಕಾವ್ಯಾ ಶೈವ.

ನಿಶ್ವಿಕಾ ಮಸ್ತ್ ಹ್ಯಾಟ್ರಿಕ್
`ಮಾರ್ಕ್' ಸಿನಿಮಾದಲ್ಲಿ ಸುದೀಪ್ ಜೊತೆ `ಮಸ್ತ್ ಮಲೈಕಾ' ಹಾಡಿನಲ್ಲಿ ಕನ್ನಡ ಕಲಾ ರಸಿಕರಿಗೆ ಮೋಡಿ ಮಾಡಿದ ನಟಿ ನಿಶ್ವಿಕಾ ನಾಯ್ಡು. `ಅಮ್ಮ ಐ ಲವ್ ಯೂ' ಸಿನಿಮಾ ಮೂಲಕ ಚಂದನನ ಪ್ರವೇಶಿಸಿದರು. ಇದಕ್ಕೂ ಮುನ್ನ `ವಾಸು ನಾನ್ ಪಕ್ಕಾ ಕರ್ಮಷಿಯಲ್' ಚಿತ್ರದಲ್ಲೂ ನಟಿಸಿದರು. `ಪಡ್ಡೆಹುಲಿ, ಜೆಂಟಲ್ ಮೆನ್, ಕಾಳಿದಾಸ ಕನ್ನಡ ಮೇಷ್ಟ್ರು, ಸಖತ್, ರಾಮಾರ್ಜುನ. ಗಾಳಿಪಟ-2, ಪಸಂದ್, ಗುರುಶಿಷ್ಯರು' ಸಿನಿಮಾ ಮೂಲಕ ಗಮನ ಸೆಳೆದಿರುವ ಈ ಪ್ರತಿಭಾನ್ವಿತ ನಟಿ, ತನಗೊಪ್ಪುವ ಹೆಚ್ಚಿನ ಅವಕಾಶ ಇರುವಂಥ ತಿರುವು ನೀಡುವ ಪಾತ್ರಕ್ಕಾಗಿ ಕಾಯುತ್ತಿದ್ದಾರೆ.

ಕಿರುತೆರೆಯಿಂದ ಬೆಳ್ಳಿತೆರೆಗೆ ಭವ್ಯಾ ಗೌಡ
`ಕರ್ಣ' ಧಾರಾವಾಹಿಯ ನಟಿ ಭವ್ಯಾ ಗೌಡ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ. `ಗೀತಾ' ಧಾರಾವಾಹಿಯ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಭವ್ಯಾ ಗೌಡ, ನಂತರ `ಬಿಗ್ ಬಾಸ್ ಕನ್ನಡ ಸೀಸನ್' ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಜನಪ್ರಿಯತೆ ಗಳಿಸಿದ್ದರು. ಈ ಶೋ ನೀಡಿದ್ದ ದೊಡ್ಡ ಮೈಲೇಜ್ ನಿಂದಾಗಿ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಅವಕಾಶ ಹುಡುಕಿಕೊಂಡು ಬಂದಿದೆ. ಅವರು ನಾಯಕಿಯಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ `ದೇವಿ.' ಭವ್ಯಾ ಗೌಡ ನಾಯಕಿಯಾಗಿ, ಯುವ ರೈತ ಚೇತನ್ ಗೌಡ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ `ಕರ್ಣ' ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರು ಬೆನ್ನಲ್ಲೇ ಈ ಸಿನಿಮಾ ಆಫರ್ ಭವ್ಯಾ ಮುಡಿಗೇರಿದೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಭವ್ಯಾ ಗೌಡ, ಆಗಾಗ ಹೊಸ ಫೋಟೋ ಶೂಟ್, ರೀಲ್ಸ್ ಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.





