– ರಾಘವೇಂದ್ರ ಅಡಿಗ ಎಚ್ಚೆನ್.

ಹೌಸ್ ಆಫ್ ಟೈಟನ್‌ನ ಬಿಯಾನ್ (beYon), ಬೆಂಗಳೂರಿನ ಉತ್ಸಾಹಭರಿತ ಬಡಾವಣೆಯಾದ ವೈಟ್‌ಫೀಲ್ಡ್‌ನಲ್ಲಿ ತನ್ನ ಮೊದಲ ಎಕ್ಸ್‌ಕ್ಲೂಸಿವ್ ಮಳಿಗೆಯನ್ನು ಆರಂಭಿಸಿದೆ. ದೇಶದಾದ್ಯಂತ ಬ್ರ್ಯಾಂಡ್‌ನ ಏಳನೇ ಮಳಿಗೆಯಾಗಿರುವ ಈ ಆರಂಭವು ಒಂದು ವಿಶೇಷ ‘ತವರಿಗೆ ಮರಳುವಿಕೆ’ಯೂ ಹೌದು. ಪ್ರಯೋಗಾಲಯದಲ್ಲಿ ಬೆಳೆಸಿದ ವಜ್ರಗಳ ಕುರಿತ ಬಿಯಾನ್‌ನ ಸಮಕಾಲೀನ ದೃಷ್ಟಿಕೋನವನ್ನು ಇದು ನೇರವಾಗಿ ಟೈಟನ್‌ನ ತವರು ನಗರಕ್ಕೆ ತಂದಿದೆ.

ಗ್ರಾಹಕರು ಪ್ರಯೋಗಾಲಯದಲ್ಲಿ ಬೆಳೆಸಿದ ವಜ್ರಗಳನ್ನು ಹೆಚ್ಚೆಚ್ಚು ಅಪ್ಪಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ, ಉತ್ಸಾಹಭರಿತ ಕಾಸ್ಮೋಪಾಲಿಟನ್ ಕೇಂದ್ರವಾಗಿ ರೂಪುಗೊಂಡಿರುವ ಈ ಪ್ರದೇಶವು ಬಿಯಾನ್‌ಗೆ ಸಹಜವಾಗಿಯೇ ಹೊಂದಿಕೆಯಾಗುವ ತಾಣವಾಗಿದೆ. ಆಧುನಿಕ ಕಚೇರಿಗಳಿಂದ ಸಂಜೆಯ ಸಂಭ್ರಮಾಚರಣೆಗಳವರೆಗೆ ಸುಲಭವಾಗಿ ಹೊಂದಿಕೊಳ್ಳುವ, ವಿನ್ಯಾಸ ಪ್ರಧಾನ ಹಾಗೂ ಬಹುಮುಖಿ ಆಭರಣಗಳನ್ನು ಬ್ರ್ಯಾಂಡ್ ಇಲ್ಲಿ ಒದಗಿಸುತ್ತದೆ.

ಆಭರಣ ತೊಡುವ ಬಯಕೆ ಸಹಜವಾಗಿಯೇ ಹೆಚ್ಚುವ ಹಬ್ಬದ ಋತುವಿನೊಂದಿಗೆ ಈ ಆರಂಭ ಸೊಗಸಾಗಿ ಹೊಂದಿಕೆಯಾಗಿದೆ. ಸಂದರ್ಭಗಳಿಗಷ್ಟೇ ಆಭರಣ ಖರೀದಿಸುವ ಸಾಂಪ್ರದಾಯಿಕ ಪದ್ಧತಿಯಿಂದ ದೂರ ಸರಿದು, ಫೈನ್ ಜ್ಯುವೆಲ್ಲರಿಯನ್ನು ಲಾಕರ್‌ನಲ್ಲಿಡುವ ಹೂಡಿಕೆಯಾಗಿ ನೋಡುವ ಬದಲು, ಮನಸ್ಸಿಗೆ ಬಂದಾಗ ಮಾಡುವ ವೈಯಕ್ತಿಕ ಆಯ್ಕೆಯಾಗಿ ಕಾಣುವಂತೆ ಬಿಯಾನ್ ಗ್ರಾಹಕರನ್ನು ಉತ್ತೇಜಿಸುತ್ತಿದೆ. ತನ್ನ ಇತ್ತೀಚಿನ ‘ಯೇ ತೋ ಹೋನಾ ಹೀ ಥಾ’ (Ye Toh Hona Hi Tha) ಅಭಿಯಾನದ ಆಶಯದಿಂದ ಪ್ರೇರಿತವಾಗಿರುವ ಬ್ರ್ಯಾಂಡ್, ಮನದ ಬಯಕೆ ಸರಳವಾಗಿ ಮೇಲುಗೈ ಸಾಧಿಸುವ ಆ ಅನಿವಾರ್ಯ ಕ್ಷಣವನ್ನು ಸೆರೆಹಿಡಿಯುತ್ತದೆ. ಆಭರಣ ತೊಡುವ ಸರಳ ಸಂತೋಷಕ್ಕೆ ಮನಸೋಲುವಂತೆ ಅದು ಖರೀದಿದಾರರನ್ನು ಆಹ್ವಾನಿಸುತ್ತದೆ.

_1794204933906_stacked

ಬಿಐಎಸ್ ಹಾಲ್‌ಮಾರ್ಕ್ ಹೊಂದಿರುವ ಚಿನ್ನದಲ್ಲಿ ರೂಪಿಸಲಾದ 1,250ಕ್ಕೂ ಹೆಚ್ಚು ಆಯ್ದ ವಿನ್ಯಾಸಗಳ ಬಿಯಾನ್‌ನ ವ್ಯಾಪಕ ಸಂಗ್ರಹವನ್ನು ಈ ಮಳಿಗೆ ಪ್ರದರ್ಶಿಸುತ್ತದೆ. ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಧರಿಸಬಹುದಾದ ಮಾಡ್ಯುಲರ್ ಆಭರಣಗಳು, ದಿಟ್ಟ ಆಕೃತಿಗಳು ಹಾಗೂ ಕೈಟ್, ಎಮರಾಲ್ಡ್, ಪಿಯರ್, ಮಾರ್ಕ್ವೀಸ್, ಹೆಕ್ಸಾಗನ್ ಸೇರಿದಂತೆ ಹಲವು ವಿಶಿಷ್ಟ ಕಟ್‌ಗಳು ಇದರಲ್ಲಿವೆ. ಉಂಗುರಗಳು, ಕಿವಿಯೋಲೆಗಳು, ಪೆಂಡೆಂಟ್‌ಗಳು, ನೆಕ್ಲೇಸ್‌ಗಳು ಮತ್ತು ಬ್ರೇಸ್‌ಲೆಟ್‌ಗಳನ್ನು ಒಳಗೊಂಡ ಈ ಮನಸೆಳೆಯುವ ವಿನ್ಯಾಸಗಳನ್ನು ಒಂದರ ಜೊತೆ ಮತ್ತೊಂದನ್ನು ಸುಲಭವಾಗಿ ಜೋಡಿಸಿ ಧರಿಸಲು (ಸ್ಟ್ಯಾಕಿಂಗ್) ಹಾಗೂ ಹಬ್ಬದ ಸಂದರ್ಭಗಳಲ್ಲಿ ಎದ್ದು ಕಾಣುವ ಸ್ಟೈಲಿಂಗ್‌ಗಾಗಿ ರೂಪಿಸಲಾಗಿದೆ. ಬಹುತೇಕ ಆಭರಣಗಳ ಬೆಲೆ ₹1,00,000ಕ್ಕಿಂತ ಕಡಿಮೆ ಶ್ರೇಣಿಯಲ್ಲಿದ್ದು, ಬಿಯಾನ್ ಆಧುನಿಕ ಖರೀದಿ ಅಭ್ಯಾಸಗಳನ್ನು ಉತ್ತೇಜಿಸುವುದನ್ನು ಮುಂದುವರಿಸಿದೆ: ಹೆಚ್ಚು ಧರಿಸಿ, ಕಡಿಮೆ ಚಿಂತಿಸಿ, ನಿಮ್ಮ ಸಂಗ್ರಹವನ್ನು ವಿಸ್ತರಿಸಿ ಮತ್ತು ಜಾಣ್ಮೆಯಿಂದ ಖರ್ಚು ಮಾಡಿ.

ಬಿಯಾನ್‌ನ ಬಿಸಿನೆಸ್ ಹೆಡ್ ಶ್ಯಾಮಲಾ ರಮಣನ್ ಅವರು ಮಾತನಾಡಿ, “ನಮ್ಮ ಪಯಣದಲ್ಲಿ ಬೆಂಗಳೂರು ಅತ್ಯಂತ ಆಪ್ತವಾದ ಮೈಲಿಗಲ್ಲು. ನಮ್ಮದೇ ತವರು ನೆಲಕ್ಕೆ ಬಿಯಾನ್ ಅನ್ನು ತರುತ್ತಿರುವುದು ಈ ಸಂದರ್ಭವನ್ನು ಇನ್ನಷ್ಟು ವಿಶೇಷವಾಗಿಸಿದೆ. ನಮ್ಮ ಪಾಲಿಗೆ, ಫೈನ್ ಜ್ಯುವೆಲ್ಲರಿ ಎಂಬುದು

ಒಂದು ಆಪ್ತ ಅಭಿವ್ಯಕ್ತಿ; ಅದನ್ನು ಸಂಪ್ರದಾಯ ಹೇಳಿದಂತೆ ಅಲ್ಲ, ಮನದ ಬಯಕೆ ಪ್ರೇರೇಪಿಸಿದಂತೆ ಧರಿಸಲಾಗುತ್ತದೆ. ಪ್ರಯೋಗಾಲಯದಲ್ಲಿ ಬೆಳೆಸಿದ ವಜ್ರಗಳು ಮಾನವನ ಜಾಣ್ಮೆಯ ಅದ್ಭುತ ಪ್ರದರ್ಶನವಾಗಿದ್ದು, ನಾವೀನ್ಯಪೂರ್ಣ ಮನಸ್ಸು ಏನನ್ನೆಲ್ಲ ಸಾಧಿಸಬಲ್ಲದು ಎಂಬುದರ ಅಪೂರ್ವ ಸಾಧ್ಯತೆಗಳನ್ನು ಪ್ರತಿನಿಧಿಸುತ್ತವೆ ಎಂಬುದು ನಮ್ಮ ನಂಬಿಕೆ. ತನ್ನ ಉತ್ಸಾಹಭರಿತ ಹಾಗೂ ವೈವಿಧ್ಯಮಯ ಚೈತನ್ಯದಿಂದಾಗಿ, ಈ ದೃಷ್ಟಿಕೋನವನ್ನು ಹಂಚಿಕೊಳ್ಳಲು ಮತ್ತು ಹೌಸ್ ಆಫ್ ಟೈಟನ್‌ನ ದೀರ್ಘಕಾಲದ ವಿಶ್ವಾಸದ ಬೆಂಬಲದೊಂದಿಗೆ ಸಮಕಾಲೀನ ಆಭರಣಗಳನ್ನು ಅನ್ವೇಷಿಸಲು ಗ್ರಾಹಕರಿಗೆ ಆತ್ಮೀಯ ತಾಣವನ್ನು ಒದಗಿಸಲು ವೈಟ್‌ಫೀಲ್ಡ್ ಅತ್ಯಂತ ಸೂಕ್ತ ಸಮುದಾಯವಾಗಿದೆ” ಎಂದು ಹೇಳಿದರು.

ಬೆಂಗಳೂರಿನ ಪಾಲಿಗೆ, ಈ ಹೊಸ ರಿಟೇಲ್ ತಾಣವು ಆಧುನಿಕ ಪ್ರಯೋಗಶೀಲತೆ ಮತ್ತು ಸ್ಥಾಪಿತ ವಿಶ್ವಾಸದ ಪರಿಪೂರ್ಣ ಸಂಗಮವಾಗಿದೆ. ಬಿಯಾನ್ ಭಾರತದಾದ್ಯಂತ ತನ್ನ ಅಸ್ತಿತ್ವವನ್ನು ವೇಗವಾಗಿ ವಿಸ್ತರಿಸುತ್ತಿದ್ದರೂ, ಟೈಟನ್‌ನ ಹೆಸರಾಂತ ಕರಕುಶಲತೆಯಲ್ಲೇ ಬ್ರ್ಯಾಂಡ್ ತನ್ನ ಬೇರುಗಳನ್ನು ಗಟ್ಟಿಯಾಗಿ ಉಳಿಸಿಕೊಂಡಿದೆ. ಗ್ರಾಹಕರು ಸಾಂಪ್ರದಾಯಿಕ ನಿಯಮಗಳನ್ನು ಮೀರಿ, ದಿನನಿತ್ಯ ಆಭರಣ ತೊಡುವ ಮನಸೆಳೆಯುವ ಸಂತೋಷವನ್ನು ಸರಳವಾಗಿ ಅಪ್ಪಿಕೊಳ್ಳಬಹುದಾದ ಆತ್ಮೀಯ ತಾಣವನ್ನು ಒದಗಿಸುವ ಮೂಲಕ, ಬಿಯಾನ್‌ನ ತತ್ವಕ್ಕೆ ಜೀವ ತುಂಬುವುದು ವೈಟ್‌ಫೀಲ್ಡ್ ಮಳಿಗೆಯ ಗುರಿಯಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ