ಮಳೆಗಾಲದ ದಿನಗಳಲ್ಲಿ ನಿಮ್ಮ ಚರ್ಮದ ಉತ್ಕೃಷ್ಟ ಆರೈಕೆಗಾಗಿ ಈ ಟಿಪ್ಸ್ ಬಲು ಉಪಕಾರಿ………
ನಮ್ಮ ಚರ್ಮ ಬಲು ಸೂಕ್ಷ್ಮ ಹಾಗೂ ಸಂವೇದನಾಶೀಲವಾದುದು. ಬೇಸಿಗೆಯ ಸೀಸನ್ ನಲ್ಲಿ UV ಕಿರಣಗಳು ಚರ್ಮಕ್ಕೆ ಬಹಳ ಹಾನಿ ಮಾಡುತ್ತವೆ. ಆಗ ಟ್ಯಾನಿಂಗ್ಸನ್ ಬರ್ನ್ ನಿಂದ ಚರ್ಮ ತನ್ನ ಹೊಳಪು, ಬಣ್ಣ ಕಳೆದುಕೊಂಡು ಕಳಾಹೀನವಾಗುತ್ತದೆ. ಆಗ ನೀವು ಇವುಗಳಿಂದ ಬಚಾವಾಗಲು 4S ನಿಯಮ ಅನುಸರಿಸುತ್ತಿದ್ದೀರಿ ಅಲ್ಲವೇ? ಇದು ಮಳೆಗಾಲಕ್ಕೂ ಅನ್ವಯಿಸುತ್ತದೆ. ಈ ನಿಯಮವೇನು? ಬನ್ನಿ, ವಿವರವಾಗಿ ತಿಳಿಯೋಣ :
4S ನಿಯಮ ಎಂದರೆ ಸನ್ ಸ್ಕ್ರೀನ್ + ಸ್ಟೇ ಹೈಡ್ರೇಟೆಡ್ + ಸ್ಕ್ರಬ್ + ಸ್ಕಿನ್ ನರಿಶ್ ಮೆಂಟ್
ಸನ್ ಸ್ಕ್ರೀನ್ನ ಬಳಕೆ : ಹಾಗೆ ನೋಡಿದರೆ, ಎಲ್ಲಾ ಸೀಸನ್ ನಲ್ಲೂ ಸನ್ ಸ್ಕ್ರೀನ್ ಬಳಕೆ ಅನಿವಾರ್ಯ. ಆದರೆ ಬೇಸಿಗೆಯಲ್ಲಿ ಹೆಂಗಸರು ಯಾರು ಹೆಚ್ಚಾಗಿ ಹೊರಗಿನ ಬಿಸಿಲಲ್ಲೇ ಕಳೆಯುತ್ತಾರೋ, ಅಂಥವರು 40-50 SPFನ ಸನ್ ಸ್ಕ್ರೀನ್ ನ್ನು ಮುಖ, ಕೈ, ಕುತ್ತಿಗೆ ಇತರ ತೆರೆದ ಭಾಗಗಳಿಗೂ ಹಚ್ಚಿಕೊಳ್ಳಬೇಕು. ಆಗ ಮಾತ್ರ ಮೇಲಿನ ಸಮಸ್ಯೆಗಳಿಂದ ಪಾರಾಗಲು ಸಾಧ್ಯ. ಅದೇ ತರಹ ಮಳೆಗಾಲದಲ್ಲೂ ಸನ್ ಸ್ಕ್ರೀನಿನ ಬಳಕೆ, ಚರ್ಮಕ್ಕೆ ಸುರಕ್ಷಾ ಕವಚದ ಕೆಲಸ ಮಾಡುತ್ತದೆ. ಇದಕ್ಕಾಗಿ ನೀವು ಮಳೆಗಾಲದಲ್ಲೂ ಸಹ ಹೊರಗೆ ಹೋಗುವ 15 ನಿಮಿಷಗಳ ಮುನ್ನ, ನಿಮ್ಮ ದೇಹದ ತೆರೆದ ಭಾಗಗಳಿಗೆ ಇದನ್ನು ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ಸನ್ ಸ್ಕ್ರೀನ್ ಸುಲಭವಾಗಿ ನಿಮ್ಮ ಚರ್ಮದಲ್ಲಿ ವಿಲೀನವಾಗುತ್ತದೆ, ನಿಮ್ಮನ್ನು ಕಿರಣಗಳಿಂದ ಖಚಿತವಾಗಿ ರಕ್ಷಿಸುತ್ತದೆ.
ಸನ್ ಸ್ಕ್ರೀನ್ ಲೋಶನ್ನಿನ ಲಾಭಗಳು : ಇದು ನಿಮ್ಮ ಚರ್ಮಕ್ಕೆ ಆರ್ದ್ರತೆ ಒದಗಿಸಿ, ಅದನ್ನು ಸದಾ ತಾಜಾ ಆಗಿರುವಂತೆ ಕಾಪಾಡುತ್ತದೆ, ಶುಷ್ಕತನದಿಂದ ಮುಕ್ತಿ ನೀಡುತ್ತದೆ. ಚರ್ಮವನ್ನು ಏಜಿಂಗ್ ಲಕ್ಷಣದಿಂದ ಕಾಪಾಡುತ್ತಾ, ಅದನ್ನು ಸದಾ ಸ್ವಸ್ಥ, ಯಂಗ್ ಆಗಿಡುವಲ್ಲಿ ನೆರವಾಗುತ್ತದೆ. UV ರೇಡಿಯೇಶನ್ ನ್ನು ತಡೆಗಟ್ಟಿ, ಚರ್ಮಕ್ಕೆ ಸುರಕ್ಷತೆ ಒದಗಿಸುತ್ತದೆ.
ಸ್ಟೇ ಹೈಡ್ರೈಟೆಡ್ ಇನ್ ಮಾನ್ ಸೂನ್ : ಬೇಸಿಗೆಯಲ್ಲಿ ತಾಪಮಾನ ಹೆಚ್ಚುವುದರಿಂದ ಮುಂದಿನ ದಿನಗಳಲ್ಲಿ ಮಳೆ ಗ್ಯಾರಂಟಿ. ಇದರಿಂದಾಗಿ ದೇಹದಲ್ಲಿ ಹೆಚ್ಚಿನ ಬೆವರು ಸಹಜ. ಹೀಗಾಗಿ ದೇಹ ಬೇಗ ಡೀಹೈಡ್ರೇಟೆಡ್ ಆಗಿಬಿಡುತ್ತದೆ. ಈ ಸೀಸನ್ನಿನಲ್ಲಿ ಡೀಹೈಡ್ರೇಶನ್ನಿನ ಸಮಸ್ಯೆಯಿಂದ ಬಚಾವಾಗಲು, ಅಗತ್ಯವಾಗಿ ನೀವು ನಿಮ್ಮ ದೇಹವನ್ನು ಹೈಡ್ರೇಟ್ ಗೊಳಿಸಬೇಕು. ಹೀಗಾಗಿ ನಿಮ್ಮ ಡಯೆಟ್ ನಲ್ಲಿ ನೀರಿನಂಶ ಹೆಚ್ಚಿರುವ ಆಹಾರವನ್ನೇ ಹೆಚ್ಚಾಗಿ ಸೇವಿಸಿ.
ಆಯಾ ಋತುವಿನಲ್ಲಿ ಲಭ್ಯವಿರುವ ತಾಜಾ ಹಸಿ ತರಕಾರಿ, ಹಣ್ಣುಗಳನ್ನು ಸೇವಿಸಿ. ಕಲ್ಲಂಗಡಿಹಣ್ಣು, ಕರ್ಬೂಜಾ, ಸೌತೇಕಾಯಿ, ದ್ರಾಕ್ಷಿ, ಕಿತ್ತಳೆ, ಮೂಸಂಬಿ ಇತ್ಯಾದಿ ಹೆಚ್ಚಾಗಿರಲಿ. ಇದು ನಿಮ್ಮ ದೇಹವನ್ನು ಹೈಡ್ರೇಟೆಡ್ ಆಗಿಸಿ, ಚರ್ಮವನ್ನು ಸದಾ ತಾಜಾ ಆಗಿಡುತ್ತದೆ.
ದೇಹ ಸಕ್ರಿಯವಾಗಿ ಎಲ್ಲಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಲು ಸದಾಸರ್ವದಾ ನಾವು ಹೈಡ್ರೇಟೆಡ್ ಆಗಿರಬೇಕಾದುದು ಅತ್ಯಗತ್ಯ. ಇದರಿಂದ ಪಚನಕ್ರಿಯೆ ಸಹ ಚುರುಕಾಗಿ, ದೇಹದಲ್ಲಿ ರಕ್ತ ಸಂಚಾರ ತೀವ್ರವಾಗುತ್ತದೆ, ದೇಹದ ತಾಪಮಾನದ ನಿಯಂತ್ರಣ ನಡೆಯುತ್ತದೆ. ಇದಕ್ಕಾಗಿ ನಿಮ್ಮ ಆಹಾರದಲ್ಲಿ ನೀರಿನಂಶ ಹೆಚ್ಚಾಗಿರುವ ಪದಾರ್ಥ ಸೇವಿಸುತ್ತಿರಬೇಕು. ಆಗಾಗ ಫೈರ್ ಲೆಸ್ ರೆಸಿಪೀಸ್ ಟ್ರೈ ಮಾಡಿ. ಸಲಾಡ್, ಕೋಸಂಬರಿ ಜೊತೆಗೆ ಹೆಚ್ಚು ತರಕಾರಿಯ ಸೂಪ್ ಸಹ ಇರಲಿ. ಇವು ನಿಮ್ಮನ್ನು ಹೈಡ್ರೇಟೆಡ್ ಆಗಿರಿಸುವುದರ ಜೊತೆಗೆ ಅತ್ಯಗತ್ಯ ಪೋಷಕಾಂಶಗಳಾದ ವಿಟಮಿನ್, ಆ್ಯಂಟಿ ಆಕ್ಸಿಡೆಂಟ್ಸ್, ಖನಿಜಗಳನ್ನೂ ಒದಗಿಸುತ್ತದೆ.
ಮಳೆಗಾಲದ ದಿನಗಳಲ್ಲಿ ಬೆವರುವುದರಿಂದ ದೇಹದ ಎಲೆಕ್ಟ್ರೊಲೈಟ್ಸ್ ನ ಬ್ಯಾಲೆನ್ಸ್ ತಪ್ಪುತ್ತದೆ. ಹೀಗಾಗಿ ನಿಮ್ಮ ಆಹಾರದಲ್ಲಿ ಎಲೆಕ್ಟ್ರೊಲೈಟ್ಸ್ ತುಂಬಿದಂಥ ಆಹಾರ ಪದಾರ್ಥ ಸೇವಿಸಲು ಆದ್ಯತೆ ನೀಡಿ, ಬೆವರಿನಿಂದ ಕಳೆದುಕೊಂಡ್ಡದ್ದನ್ನು ಮರಳಿ ಪಡೆಯಿರಿ. ಇದಕ್ಕಾಗಿ ಆಗಾಗ ತಾಜಾ ಎಳನೀರು, ಬಾರ್ಲಿ ನೀರು, ತಾಟಿನಿಂಗು, ಬಾಳೆಹಣ್ಣು, ಟೊಮೇಟೊ ಇತ್ಯಾದಿಗಳನ್ನು ಯಾವುದೇ ರೂಪದಲ್ಲಿ ಸೇವಿಸುತ್ತಿರಿ. ಒಟ್ಟಾರಿ ಪೊಟ್ಯಾಶಿಯಂಯುಕ್ತ ಪದಾರ್ಥಗಳಿರಬೇಕು. ಎಲೆಕ್ಟ್ರೊಲೈಟ್ಸ್, ಹೈಡ್ರೇಶನ್ಮಾಂಸಖಂಡಗಳ ಕೆಲಸ ನಿಯಂತ್ರಿಸುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ.
ಮಳೆಗಾಲದಲ್ಲಿ ಡೀಹೈಡ್ರೇಶನ್ ನಿಂದ ಬಚಾವಾಗಲು ಧಾರಾಳವಾಗಿ ಕಾದಾರಿದ ನೀರು, ಜೊತೆಗೆ ಇನ್ ಫ್ಯೂಸ್ಡ್ ನೀರನ್ನೂ ಕುಡಿಯಬೇಕು. ಇದಕ್ಕಾಗಿ ನೀವು ನಿಂಬೆ, ಪುದೀನಾ, ಸೌತೇಕಾಯಿ, ಸ್ಟ್ರಾಬೆರಿಗಳಂಥ ಹಸಿ ಬಿಲ್ಲೆಗಳನ್ನು ತುಸು ಜಜ್ಜಿ, ನೀರಿನ ಬಾಟಲಿಗೆ ಬೆರೆಸಿ, 5-6 ಗಂಟೆ ಕಾಲ ಹಾಗೇ ಬಿಡಿ. ನಂತರ ಇವನ್ನು ಸೋಸಿಕೊಂಡು ಹೊರತೆಗೆದುಬಿಡಿ. ಇದುವೇ ಇನ್ ಫ್ಯೂಸ್ಡ್ ವಾಟರ್, ಇದನ್ನು ಕುಡಿಯುವುದರಿಂದ ದೇಹಕ್ಕೆ ಬೇಕಾದ ಅತ್ಯಗತ್ಯ ಪೋಷಕಾಂಶಗಳ ಕೊರತೆ ನೀಗುತ್ತದೆ.
ಮಾನ್ ಸೂನ್ ಗಾಗಿ ಸ್ಕ್ರಬ್ : ಮಳೆಗಾಲದಲ್ಲಿ ಚರ್ಮದ ಮೇಲೆ ಅಧಿಕ ಬೆವರು, ಕೊಳೆ ಜಮೆಗೊಳ್ಳುತ್ತದೆ. ಇದು ಓಪನ್ ಪೋರ್ಸ್ ನ್ನು ಕ್ಲೋಸ್ ಮಾಡಿಬಿಡುತ್ತದೆ, ಸ್ಕ್ರಬಿಂಗ್ ನಿಂದ ಚರ್ಮದ ಕೊಳೆ ಹಾಗೂ ಡೆಡ್ ಸ್ಕಿನ್ ಸೆಲ್ಸ್ ನಿಂದ ಮುಕ್ತಿ ಸಿಗುತ್ತದೆ. ಇದರಿಂದ ಚರ್ಮದಲ್ಲಿ ರಕ್ತ ಸಂಚಾರ ಬೆಟರ್ ಆಗುತ್ತದೆ. ಸ್ಕ್ರಬಿಂಗ್ ಚರ್ಮವನ್ನು ಶುಭ್ರ, ಸ್ವಚ್ಛ, ಮೃದು ಹಾಗೂ ಹೊಳೆ ಹೊಳೆಯುವಂತೆ ಮಾಡಬಲ್ಲದು. ಇದರಿಂದ ಆ್ಯಕ್ನೆ ಪಿಂಪಲ್ಸ್ ರಗಳೆ ತಪ್ಪುತ್ತದೆ. ಮಳೆಗಾಲದಲ್ಲಿ ಚರ್ಮ ಬೇಗ ಒಣಗುತ್ತದೆ. ಜೇನುತುಪ್ಪ, ಕೊಬ್ಬರಿ ಎಣ್ಣೆಯಂಥ ಸ್ಕ್ರಬ್ ನಿಂದ ಚರ್ಮ ಹೈಡ್ರೇಟ್ ಗೊಳ್ಳಲು ಅನುಕೂಲ. ಸೌತೇರಸ, ಮೊಸರಿನಂಥ ಸ್ಕ್ರಬ್ ಚರ್ಮಕ್ಕೆ ತಂಪು ಒದಗಿಸುತ್ತವೆ.
ಒಂದಿಷ್ಟು ಕಿವಿಮಾತು : ಅತಿ ಹೆಚ್ಚಾಗಿ ಸ್ಕ್ರಬಿಂಗ್ ಮಾಡಬೇಡಿ. ಇದರಿಂದಲೂ ಚರ್ಮಕ್ಕೆ ಹಾನಿ ತಪ್ಪಿದ್ದಲ್ಲ. ಹೀಗಾಗಿ ತಿಂಗಳಲ್ಲಿ 2-3 ಸಲ ಮಾತ್ರ ಸ್ಕ್ರಬಿಂಗ್ ಮಾಡಿ. ಸ್ಕ್ರಬ್ ಮಾಡುವಾಗ, ಚರ್ಮವನ್ನು ಒರಟಾಗಿ ಉಜ್ಜಬಾರದು, ಹೀಗಾಗಿ ಬಲು ಮೃದುವಾಗಿ ಕೈಗಳಿಂದಲೇ ಸ್ಕ್ರಬ್ ಮಾಡಬೇಕು.
ಸ್ಕ್ರಬ್ ಮಾಡಿದ ನಂತರ ಮಾಯಿಶ್ಚರೈಸರ್ ಹಚ್ಚಿಕೊಳ್ಳಲು ಮರೆಯದಿರಿ. ಎಷ್ಟೋ ಸಲ ಸ್ಕ್ರಬಿಂಗ್ ನಂತರ ಸ್ಕಿನ್ ಡ್ರೈ ಆದೀತು. ಹೀಗಾಗಿ ಮಾಯಿಶ್ಟರೈಸರ್ ಬಳಸಿ ಶುಚಿಗೊಳಿಸಿ. ಇದು ಚರ್ಮಕ್ಕೆ ತಂಪನ್ನು ಒದಗಿಸುತ್ತದೆ. ನಿಮ್ಮ ಸ್ಕಿನ್ ಸೆನ್ಸಿಟಿವ್ ಆಗಿದ್ದರೆ, ನೀವು ಮನೆಯಲ್ಲೇ ತಯಾರಿಸಿದ ಸ್ಕ್ರಬ್ ಬಳಸುವುದೇ ಲೇಸು, ಕೆಮಿಕಲ್ಸ್ ಯುಕ್ತ ಸ್ಕ್ರಬ್ ಬೇಡ. ಇದಕ್ಕಾಗಿ ಓಟ್ಸ್, ಕಡಲೆಹಿಟ್ಟು, ಮೊಸರು, ಚಂದನದ ಅಂಶಗಳು ಸೆನ್ಸಿಟಿವ್ ಸ್ಕಿನ್ ಗೆ ಸುರಕ್ಷಿತ ಎನಿಸಿವೆ.
ಮೊಸರಿನ ಸ್ಕ್ರಬ್ : ಮಾನ್ ಸೂನ್ ನಲ್ಲಿ ಟ್ಯಾನಿಂಗ್ ದೂರಗೊಳಿಸಲು ಇದನ್ನು ಬಳಸಿಕೊಳ್ಳಬಹುದು. ಇದಕ್ಕಾಗಿ 2 ಚಮಚ ಮೊಸರಿಗೆ, 1 ಚಮಚ ಕಿತ್ತಳೆ ರಸ, 2 ಚಮಚ ಸಕ್ಕರೆ ಬೆರೆಸಿ ಮಿಶ್ರಣ ಕದಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ, 1 ಗಂಟೆ ಕಾಲ ಹಾಗೇ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ.
ಸ್ಕಿನ್ ನರಿಶ್ ಮೆಂಟ್ : ಮಳೆಗಾಲದಲ್ಲಿ ಚರ್ಮದ ಆರೈಕೆ ಬಗ್ಗೆ ಚರ್ಚಿಸುವಾಗ, ಅದಕ್ಕಾಗಿ ನೈಸರ್ಗಿಕ ಪದಾರ್ಥ ಬಳಸಿಕೊಳ್ಳುವುದೇ ಲೇಸು. ಏಕೆಂದರೆ ಕೆಮಿಕಲ್ಸ್ ತರಹ ಇವು ಚರ್ಮಕ್ಕೆ ಎಂದೂ ಹಾನಿ ಮಾಡುವುದಿಲ್ಲ. ಜೊತೆಗೆ ಚರ್ಮಕ್ಕೆ ಆರ್ದ್ರತೆ ಒದಗಿಸಿ. ಉತ್ತಮ ಪೋಷಣೆ ನೀಡುತ್ತದೆ. ಇಂಥ ನೈಸರ್ಗಿಕ ಪದಾರ್ಥ ಅಂದ್ರೆ ಆ್ಯಲೋವೇರಾ, ಬೇವು, ಅರಿಶಿನ ಇತ್ಯಾದಿ ಬಳಸಿಕೊಂಡು ಚರ್ಮವನ್ನು ಸ್ವಸ್ಥವಾಗಿಡಬಹುದು.
ಆ್ಯಲೋವೆರಾ : ಇದೊಂದು ನೈಸರ್ಗಿಕ ಘಟಕವಾಗಿದ್ದು, ಚರ್ಮಕ್ಕೆ ಆರಾಮ ನೀಡಲು ಹಾಗೂ ತನ್ನ ಡೀಹೈಡ್ರೇಟಿಂಗ್ ಗುಣಕ್ಕಾಗಿ ಪ್ರಸಿದ್ಧವಾಗಿದೆ. ಈ ಜೆಲ್ ನಲ್ಲಿ ಚರ್ಮದ ಎಲಾಸ್ಟಿಸಿಟಿ ಹೆಚ್ಚಿಸಲು, ಆ್ಯಂಟಿ ಏಜಿಂಗ್ ಗುಣಗಳು ಅಡಗಿದ್ದು, ಜೊತೆಗೆ ಎನ್ ಝೈಮ್ಸ್ ಆ್ಯಂಟಿಆಕ್ಸಿಡೆಂಟ್ಸ್ ಸಹ ಹೊಂದಿವೆ. ಇದು ಚರ್ಮದ ಕೆಂಪು ಗಂಧೆ, ಊತ ಇತ್ಯಾದಿ ನಿವಾರಿಸಲು ಪೂರಕ.
ಬೇವು ಅರಿಶಿನ : ಮಳೆಗಾಲದಲ್ಲಿ ಚರ್ಮದ ಆರೈಕೆಗೆ ಬೇವು ಅರಿಶಿನ ಬಲು ಲಾಭಕಾರಿ. ಬೇವಿನ ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಇನ್ ಫ್ಲಮೇಟರಿ ಆ್ಯಂಟಿ ಫಂಗಲ್ ಗುಣಗಳಿಂದ ಆ್ಯಕ್ನೆ, ಮೊಡವೆ, ತುರಿಕೆ, ಕಡಿತ, ಸೋಂಕು ಇತ್ಯಾದಿಗಳ ನಿವಾರಣೆಗೆ ಬಲು ಸಹಕಾರಿ. ಅರಿಶಿನದ ಆ್ಯಂಟಿ ಆಕ್ಸಿಡೆಂಟ್ಸ್ ಆ್ಯಂಟಿಬ್ಯಾಕ್ಟೀರಿಯಲ್ ಗುಣಗಳು, ಚರ್ಮವನ್ನು ಆರೋಗ್ಯಕರ ಹಾಗೂ ಹೊಳೆ ಹೊಳೆಯುವಂತೆ ಮಾಡಬಲ್ಲದು.
ಬೇವಿನಿಂದ ಲಾಭಗಳು : ಬೇವು ಅರಿಶಿನ ಒಟ್ಟಿಗೆ ಬೆರೆಸಿ ಬಳಸುವುದರಿಂದ ಆ್ಯಕ್ನೆ, ಮೊಡಿ, ಚರ್ಮದ ಸೋಂಕು ಇತ್ಯಾದಿ ಸಮಸ್ಯೆಗಳು ದೂರವಾಗುತ್ತವೆ.
ಅರಿಶಿನದ ಲಾಭಗಳು : ಅರಿಶಿನ ಚರ್ಮದ ಬಣ್ಣ ತೇಲಿಸಲು, ಕಲೆಗುರುತು ತಗ್ಗಿಸಲು, ಚರ್ಮ ಹೊಳೆ ಹೊಳೆಯುವಂತೆ ಮಾಡಲು ಸಹಾಯಕ. ಅರಿಶಿನದಲ್ಲಿ ಆ್ಯಂಟಿಆಕ್ಸಿಡೆಂಟ್ಆ್ಯಂಟಿಇನ್ ಫ್ಲಮೇಟರಿ ಗುಣಗಳಿದ್ದು, ಚರ್ಮದ ಮೇಲಿನ ಊತ, ದದ್ದು ಇತ್ಯಾದಿ ದೂರಗೊಳಿಸುತ್ತದೆ. ಚರ್ಮಕ್ಕೆ ತಗುಲು ರೋಗಗಳ ವಿರುದ್ಧ ಇಮ್ಯುನಿಟಿ ಗಳಿಸುವಲ್ಲಿ ಸಹಕಾರಿ. ಬೇವಿನ ಎಲೆಯ ಪೇಸ್ಟ್ ಮಾಡಿಕೊಂಡು, ತಾಜಾ ಹಸಿ ಅರಿಶಿನದ ಕೊಂಬಿನೊಂದಿಗೆ (ಶುಂಠಿ ತರಹದ್ದು) ಅರೆದು ಮುಖಕ್ಕೆ ಹಚ್ಚಿಕೊಂಡರೆ ಹೆಚ್ಚಿನ ಲಾಭವಿದೆ.
ಬೇವು ಅರಿಶಿನದ ಫೇಸ್ ಪ್ಯಾಕ್ ತಯಾರಿಸು ವಿಧಾನ : ಒಂದು ಚಿಕ್ಕ ಬಟ್ಟಲಿಗೆ ಬೇವಿನ ಎಲೆಗಳನ್ನು ಅರೆದು ಹಾಕಿಡಿ. ಇದಕ್ಕೆ ಹಸಿ ಅರಿಶಿನದ ಪೇಸ್ಟ್, ಕಡಲೆಹಿಟ್ಟು ಸೇರಿಸಿ ಗಟ್ಟಿ ಪೇಸ್ಟ್ ಸಿದ್ಧಪಡಿಸಿ. ತೀರಾ ಅಗತ್ಯವೆನಿಸಿದರೆ ಗುಲಾಬಿ ಜಲ ಬೆರೆಸಿಕೊಳ್ಳಿ. ಇದನ್ನು ಮುಖವಿಡೀ ಸವರಿಕೊಂಡು, 1 ಗಂಟೆ ಕಾಲ ಒಣಗಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ.
ಸ್ಕಿನ್ ನರಿಶ್ ಮೆಂಟ್ ಗಾಗಿ ಏನನ್ನು ಸೇವಿಸಬೇಕು? : ಮಳೆಗಾಲದಲ್ಲಿ ಕೇವಲ ಹೊರಗಿನಿಂದ ಚರ್ಮದ ಆರೈಕೆ ಮಾಡಿದರೆ ಸಾಲದು, ಆಂತರಿಕವಾಗಿಯೂ ಅದನ್ನು ಅಷ್ಟೇ ಹೆಲ್ದಿ ಆಗಿರಿಸಬೇಕು. ಇದಕ್ಕಾಗಿ ನೀವು ಉತ್ತಮ ಪೌಷ್ಟಿಕ ಆಹಾರವನ್ನೇ ಸೇವಿಸಬೇಕು, ಇದರ ನೇರ ಪರಿಣಾಮ ಚರ್ಮದ ಮೇಲಾಗುತ್ತದೆ. ಈ ಕಾಲದಲ್ಲಿ ಕೆಲವು ಆಹಾರ ಪದಾರ್ಥಗಳ ಸೇವನೆ ಆ್ಯಕ್ನೆ, ಮೊಡವೆ, ಇನ್ನಿತರ ಚರ್ಮದ ಸಮಸ್ಯೆಗಳನ್ನು ಓಡಿಸುವುದರಲ್ಲಿ ಪೂರಕ. ಕೆಲವು ಪದಾರ್ಥ ನಿಮ್ಮ ಚರ್ಮವನ್ನು ಹೈಡ್ರೇಟ್ ಹಾಗೂ ಕೋಮಲ ಆಗಿಸುವಲ್ಲಿ ನೆರವಾಗುತ್ತವೆ. ಇವು ಎಂಥ ಪದಾರ್ಥ ಎಂದು ತಿಳಿಯೋಣವೇ? ಇದರಿಂದ ಚರ್ಮ ಗ್ಲೋಯಿಂಗ್ ಹೈಡ್ರೇಟೆಡ್ ಆಗುತ್ತವೆ. ಅವುಗಳಲ್ಲಿ ಹೈಡ್ರೇಟಿಂಗ್ ಫುಡ್ಸ್ ಈ ರೀತಿ ಇವೆ :
ಕಲ್ಲಂಗಡಿ ಹಣ್ಣು : ಇದು ನೀರಿನ ಭಂಡಾರವೇ ಹೌದು, ಹೀಗಾಗಿ ಚರ್ಮ ಸದಾ ಹೈಡ್ರೇಟೆಡ್ ಆಗಿರಲು ಬಲು ಸಹಕಾರಿ.
ಸೌತೇಕಾಯಿ : ಇದೂ ಸಹ ಒಂದು ಬೆಟರ್ ಹೈಡ್ರೇಟಿಂಗ್ ಫುಡ್ ಆಗಿದ್ದು, ಚರ್ಮಕ್ಕೆ ತಾಜಾತನ, ತಂಪು ನೀಡುವಲ್ಲಿ ಸದಾ ಮುಂದು.
ಎಳನೀರು : ಈ ದಿನಗಳಲ್ಲಿ ಎಳನೀರಿನ ಸೇವನೆ ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಎಲೆಕ್ಟ್ರೊಲೈಟ್ಸ್ ನ ಆಗರವಾಗಿದ್ದು, ಚರ್ಮವನ್ನು ಆಂತರಿಕವಾಗಿ ಹೈಡ್ರೇಟೆಡ್ ಆಗಿರಿಸುತ್ತದೆ. ಅದೇ ತರಹ ಎಳನೀರಿನ ದಪ್ಪ ತಿರುಳು ಸಹ ವಿಟಮಿನ್ನಿಂದ ಸಮೃದ್ಧ, ಇದರ ಸೇವನೆಯಿಂದ ಚರ್ಮಕ್ಕೆ ಉತ್ತಮ ಪೋಷಣೆ ಸಿಗುತ್ತದೆ. ಎಳನೀರಿನ ಆ್ಯಂಟಿಬ್ಯಾಕ್ಟೀರಿಯಲ್ ಗುಣಗಳು, ಚರ್ಮವನ್ನು ಸೋಂಕಿನಿಂದ ರಕ್ಷಿಸುತ್ತವೆ.
ಆ್ಯಂಟಿ ಆಕ್ಸಿಡೆಂಟ್ ರಿಚ್ ಫುಡ್ : ಈ ಫುಡ್ ಚರ್ಮವನ್ನು ಫ್ರೀ ರಾಡಿಕಲ್ಸ್, UV ಕಿರಣಗಳು, ಪರಿಸರ ಮಾಲಿನ್ಯದ ಅಲರ್ಜಿಗಳು ಇತ್ಯಾದಿ ಎಲ್ಲಾ ಸಮಸ್ಯೆಗಳಿಂದ ರಕ್ಷಿಸುತ್ತವೆ. ಇವು ಕೋಲೋಜೆನ್ ಬೂಸ್ಟ್ ಮಾಡಿಸಿ, ಸ್ಕಿನ್ ರಿಪೇರಿಗೆ ನೆರವಾಗುತ್ತವೆ. ಹೀಗಾಗಿ ನಿಮ್ಮ ಆಹಾರದಲ್ಲಿ ಅಗತ್ಯವಾಗಿ ಬಣ್ಣ ಬಣ್ಣದ ಹಣ್ಣುಗಳು, ತರಕಾರಿ ಇರಬೇಕು. ನೇರಳೆಹಣ್ಣು, ಸ್ಟ್ರಾಬೆರಿ, ಪರಂಗಿಹಣ್ಣು, ಸಪೋಟ, ಕಿತ್ತಲೆಹಣ್ಣು, ಹಲಸಿನಹಣ್ಣು, ಟೊಮೇಟೊ, ತಾಜಾ ಸೊಪ್ಪು ಇತ್ಯಾದಿ ಸೇವಿಸಬೇಕು.
ವಿಟಮಿನ್ ಸಿ ಯುಕ್ತ ಹಣ್ಣು ತರಕಾರಿ : ಕಿತ್ತಳೆಹಣ್ಣು, ನಿಂಬೆ, ಟೊಮೇಟೊ, ಪಾಲಕ್ ಸೊಪ್ಪು ಇತ್ಯಾದಿ ವಿಟಮಿನ್ಸ್ ಸಿ ಅಂಶದಿಂದ ಸಮೃದ್ಧವಾಗಿದೆ. ಇದು ಚರ್ಮವನ್ನು ಸದಾ ಯಂಗ್ ಆಗಿರಿಸಲು ಹಾಗೂ ಕೊಲೋಜೆನ್ ಉತ್ಪಾದನೆ ಹೆಚ್ಚಿಸುವಲ್ಲಿ ಬಲು ಸಹಕಾರಿ. ಇದು ಚರ್ಮವನ್ನು ಸುಕ್ಕು, ನಿರಿಗೆ, ಕಪ್ಪು ಉಂಗುರ ಇತ್ಯಾದಿಗಳಿಂದ ರಕ್ಷಿಸುತ್ತದೆ.
ಬೆರೀಸ್ : ಬಗೆಬಗೆಯ ಬೆರೀಸ್ ಸೇವನೆ ಬಲು ಹಿತಕಾರಿ. ಸ್ಟ್ರಾಬೆರಿ, ಬ್ಲೂಬೆರಿ, ರಾಸ್ಪ್ ಬೆರಿ, ಮಲ್ಬೆರಿ, ಬ್ಲ್ಯಾಕ್ ಬೆರಿ, ಕ್ರಾನ್ ಬೆರಿ, ಎಲ್ಡರ್ನ್ ಬೆರಿ, ಗಾಜಿಬೆರಿ ಇತ್ಯಾದಿ ಲಭ್ಯವಿರುವಂಥ ಎಲ್ಲಾ ಬೆರಿಗಳನ್ನೂ ಸೇವಿಸಿ. ಇವು ಆ್ಯಂಟಿಆಕ್ಸಿಡೆಂಟ್ಸ್ ನಿಂದ ಬಲು ಸಮೃದ್ಧ, ಚರ್ಮಕ್ಕೆ ಆಗುವ ಹಾನಿ ತಪ್ಪಿಸುತ್ತದೆ.
ಒಮೇಗಾ 3 ಫ್ಯಾಟಿ ಆ್ಯಸಿಡ್ಸ್ : ಇದು ಚರ್ಮವನ್ನು ಹೈಡ್ರೇಟೆಡ್ ಆಗಿರಿಸುವಲ್ಲಿ ಪೂರಕ. ಚರ್ಮದ ಗುಳ್ಳೆ, ಗಂಧೆ, ಊತಗಳನ್ನು ನಿವಾರಿಸುತ್ತದೆ. ಚರ್ಮ ಉತ್ತಮ ರೀತಿಯಲ್ಲಿ ಸಕ್ರಿಯವಾಗಿರಲು ಬಲು ಸಹಾಯಕ. ಇದು ಚರ್ಮವನ್ನು ಹೆಚ್ಚು ಗ್ಲೋಯಿಂಗ್, ಸ್ಮೂಥ್ ಹಾಗೂ ಈವೆನ್ ಆಗಿರಿಸಲು ಸಹಕಾರಿ. ನಿಮ್ಮ ಡಯೆಟ್ ನಲ್ಲಿ ಒಮೇಗಾ 3 ಅಂಶವಿರುವಂಥ ಫ್ಲಾಕ್ ಸೀಡ್ಸ್, ಚಿಯಾ ಸೀಡ್ಸ್, ಅಖರೋಟ್ ಇತ್ಯಾದಿ ಹೆಚ್ಚಾಗಿ ಬೆರೆಸಿಕೊಳ್ಳಿ.
– ಕೆ. ಶೋಭಾ





