ಸೋಲನ್ನು ಎಂದಿಗೂ ಮನಸ್ಸಿಗೆ ತೆಗೆದುಕೊಳ್ಳಬೇಡಿ, ಏಕೆಂದರೆ ಸೋಲು ಎಂಬುದು ಸ್ಪರ್ಧೆಯ ಒಂದು ಭಾಗ

ತಮ್ಮ ನೇರ ನುಡಿ, ಖಡಕ್‌ ಮಾತಿನ ಮೂಲಕ ಹೆಸರಾದ ಗೀತಾ ಕಪೂರ್‌ ಬಾಲಿವುಡ್‌ ನ ಹಲವು ಪ್ರಮುಖ ತಾರೆಯರ ನೃತ್ಯಕ್ಕೆ ಕೊರಿಯೋಗ್ರಫಿ ಮಾಡಿದ್ದಾರೆ. ಯಶಸ್ವಿ ಕೊರಿಯೋಗ್ರಾಫರ್‌ ಆಗಿರುವ ಇವರು ತಮ್ಮ ವೃತ್ತಿ ಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಕಾರಣಕ್ಕಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ......

ರಿಯಾಲಿಟಿ ಆಧಾರಿತ ಡ್ಯಾನ್ಸ್ ಶೋಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಗೀತಾ ಕಪೂರ್‌ ಹೆಸರು ಟಿವಿ ಆನ್ ಮಾಡಿದ ತಕ್ಷಣ ಪ್ರತಿ ಮನೆಯಲ್ಲೂ ಕೇಳಿಬರುತ್ತದೆ. ಆದರೆ ಒಂದು ಕಾಲವಿತ್ತು, ಅವರು ಮುಂಬೈನ ಲೋಕಲ್ ಟ್ರೇನ್‌ ಮೂಲಕ ಫರಾಖಾನ್‌ ರ ತಂಡದಲ್ಲಿ ಬ್ಯಾಕ್‌ ಗ್ರೌಂಡ್‌ ಡ್ಯಾನ್ಸರ್‌ ಆಗಿ ಕೆಲಸ ಮಾಡಲು ಹೋಗುತ್ತಿದ್ದರು. 15ನೇ ವಯಸ್ಸಿನಲ್ಲಿ  `ಕುಚ್‌ಕುಚ್‌ಹೋತಾ ಹೈ' ಮತ್ತು `ಕೋಯಿ ಮಿಲ್ ಗಯಾ' ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದಾಗ, ಅವರ ಕಣ್ಣುಗಳಲ್ಲಿ ಒಂದಲ್ಲ ಒಂದು ದಿನ ಇಡೀ ಸ್ಟೇಜ್‌ ನನ್ನದಾಗಲಿದೆ ಎಂಬ ಕನಸಿತ್ತು. ನಂತರ ಸಮಯ ಬದಲಾಯಿತು. ಅವರೂ ಸಹ ಕೊರಿಯೋಗ್ರಾಫರ್‌ ನಿಂದ ಮುಖ್ಯ ಕೊರಿಯೋಗ್ರಾಫರ್‌ ಆದರು. `ಫಿರ, ಅಶೋಕ, ಸಾಥಿಯಾ, ಹೇ ಬೇಬಿ, ತೇರೆ ನಾವಲ್ ಹೋ ಗಯಾ' ಮುಂತಾದ ಚಿತ್ರಗಳ ಹಾಡುಗಳನ್ನು ಹಿಟ್‌ ಮಾಡಿದರು. ಆದರೆ ಅವರಿಗೆ ನಿಜವಾದ ಗುರುತು ಸಿಕ್ಕಿದ್ದು `ಡ್ಯಾನ್ಸ್ ಇಂಡಿಯಾ ಡ್ಯಾನ್ಸ್' ರಿಯಾಲಿಟಿ ಶೋನ ತೀರ್ಪುಗಾರರ ಪೀಠದಿಂದ. ಅಲ್ಲಿ ಕುಳಿತಿದ್ದ ಗೀತಾ ಕಪೂರ್‌ ಯಾವಾಗ ಎಲ್ಲರ `ಗೀತಾ ಮಾ' ಆದರೋ ಯಾರಿಗೂ ತಿಳಿಯಲೇ ಇಲ್ಲ. ಗದರುವಿಕೆಯಲ್ಲೇ ಮಮತೆ, ಪ್ರಶಂಸೆಯಲ್ಲಿ ಚಪ್ಪಾಳೆ ಮತ್ತು ಕಣ್ಣೀರಿನ ಸಾಂತ್ವನ ನೀಡುತ್ತಾ, ಅವರು ನೃತ್ಯವನ್ನು ಕೇವಲ ರಿಯಾಲಿಟಿ ಶೋನಿಂದ ಹೊರತಂದು ಪ್ರತಿ ಮನೆಯ ಲಿವಿಂಗ್‌ ರೂಮ್ ನ ಭಾವನೆಯನ್ನಾಗಿ ಮಾಡಿದರು.

ಇಂದು ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿರುವ ಗೀತಾ ಮಾರವರಿಗೆ ನೃತ್ಯ ಎನ್ನುವುದು ಕೇವಲ ಸ್ಟೆಪ್ಸ್ ಗಳಲ್ಲ, ಅದು ಬದುಕುವ ದಾರಿ. ಕ್ಯಾಮೆರಾ ಮುಂದೆ ಕಟ್ಟುನಿಟ್ಟಾದ ಜಜ್‌ ಹಾಗೂ ತೆರೆಯ ಹಿಂದೆ ಹೊಸಬರಿಗೆ ಅತ್ಯಂತ ದೊಡ್ಡ ಬೆಂಬಲ.

`ಪ್ರತಿಭೆ ವಯಸ್ಸು, ರೂಪ ಅಥವಾ ಹಿನ್ನೆಲೆಯನ್ನು ಅವಲಂಬಿಸಿರಬಾರದು. ಸ್ಟೇಜ್‌ ಎಲ್ಲರಿಗೂ ಸೇರಿದ್ದು,' ಎಂದು ಹೇಳುವ ಇವರ ಎರಡು ದಶಕಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ ನೂರಾರು ಕೊರಿಯೋಗ್ರಾಫರ್‌ ಗಳು, ಸಾವಿರಾರು ಡ್ಯಾನ್ಸರ್‌ ಗಳು ಇವರ ತರಬೇತಿಯಿಂದ ರೂಪುಗೊಂಡಿದ್ದಾರೆ. ಆದರೆ ಇಂದಿಗೂ ಅವರು ರಿಹರ್ಸಲ್ ಹಾಲ್ ‌ಗೆ ಎಲ್ಲರಿಗಿಂತ ಮೊದಲು ಬರುತ್ತಾರೆ ಮತ್ತು ಎಲ್ಲರಿಗಿಂತ ಕೊನೆಯಲ್ಲಿ ಹೊರಡುತ್ತಾರೆ.

ಒಬ್ಬಂಟಿ ಮಹಿಳೆಯಾಗಿ, ಸ್ವಂತ ಪರಿಶ್ರಮದಿಂದ ಮೇಲೆ ಬಂದು, ಲಕ್ಷಾಂತರ ಹುಡುಗಿಯರಿಗೆ ಮಾದರಿಯಾಗಿರುವ ಗೀತಾ ಕಪೂರ್‌, ಹಿಂದಿನ ಸಾಲಿನಿಂದ ಹೊರಬಂದು ಮುಖ್ಯ ವೇದಿಕೆಯಲ್ಲಿ ತಮಗಾಗಿ ಸ್ವಂತ ಕುರ್ಚಿಯನ್ನು ನಿರ್ಮಿಸಿಕೊಂಡು ತಮ್ಮದೇ ಆದ ಸ್ಥಾನ ಪಡೆದಿದ್ದಾರೆ.

ಗೀತಾ ಕಪೂರ್‌ ಮುಂಬೈನಲ್ಲಿ ಜನಿಸಿ, ಕೊಲಾಬಾದಲ್ಲಿ ವಾಸಿಸುತ್ತಿದ್ದರು. ಬಾಲ್ಯವೆಲ್ಲಾ ಅಲ್ಲಿಯೇ ಕಳೆಯಿತು. ತಮಗೆ ಜೀವನದಲ್ಲಿ ಇದಕ್ಕಿಂತ ಹೆಚ್ಚಿನದ್ದು ಏನೋ ಬೇಕು ಎಂಬುದು ಅವರ 14ನೇ ವಯಸ್ಸಿನಲ್ಲೇ ಅರ್ಥವಾಯಿತು. ನಂತರ ತಮ್ಮ 15ನೇ ವಯಸ್ಸಿನಲ್ಲಿ ಕೆಲಸ ಹುಡುಕಲು ಪ್ರಾರಂಭಿಸಿದರು. ಅವರಿಗೆ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇದು ಅವರ ಒಂದು ಅಪೂರ್ಣ ಆಸೆಯಾಗಿಯೇ ಉಳಿದುಹೋಯಿತು. ಇಂದಿಗೂ ಸಹ ಅವರು ಸಾಕಷ್ಟು  ಪುಸ್ತಕಗಳನ್ನು ಓದುತ್ತಿರುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ