ಪರಿಶ್ರಮ ತಂದ ಪ್ರತಿಫಲ : ಭಾರತೀಯ ಮೂಲದ ಮಿನೀ ಬಜಾಜ್, ಆರ್ಕಿಟೆಕ್ಟ್ ಆಗಿ ಖ್ಯಾತಿ ಗಳಿಸಿದಾಕೆ. ಇದೀಗ ಫ್ಯಾಷನ್ ಡಿಸೈನರ್ ಆಗಿ ಹೆಚ್ಚು ಶೈನ್ ಆಗಿದ್ದಾರೆ. ಇತ್ತೀಚೆಗೆ ಕಾನ್ಸ್ ನಲ್ಲಿ ರೆಡ್ ಕಾರ್ಪೆಟ್ ಮೇಲೆ ತರತರಹದ ಡಿಸೈನರ್ ಡ್ರೆಸ್ ಗಳಲ್ಲಿ ಮಿಂಚಿದರು. ಮಲ್ಟಿ ಟ್ಯಾಲೆಂಟಿಂಗ್ ಹುಡುಗಿಯರಲ್ಲಿಯೇ ಹೆಚ್ಚು, ಏಕೆಂದರೆ ಬಾಲ್ಯದಿಂದಲೇ ಇವರು ತಾಯಿ ಅಜ್ಜಿಯರು ಒಂದೇ ಸಲ ಬಗೆಬಗೆಯ ಕೆಲಸ ಮಾಡುವುದನ್ನು ನೋಡಿ ಬೆಳೆದವರು. 2017ರಲ್ಲಿ ಭಾರತದಿಂದ ಅಮೆರಿಕಾಗೆ ಹೊರಟ ಈಕೆ, ವುಮನ್ ಎಂಪವರ್ ಮೆಂಟ್ ಗಾಗಿ ವಿಶೇಷ ಕೆಲಸಗಳನ್ನು ನಿಭಾಯಿಸುತ್ತಾ, ಬಹಳಷ್ಟು ಹೆಣ್ಣುಮಕ್ಕಳಿಗೆ ಇನ್ ಸ್ಪಿರೇಶನ್ ಆಗಿದ್ದಾರೆ, ಇವರು ಇತರ ಸಂಸ್ಕೃತಿಗಳಿಂದ ಅಮೆರಿಕಾಗೆ ಬಂದವರಾಗಿರುತ್ತಾರೆ.


ಬ್ಯೂಟಿ ವಿತ್ ಬ್ರೇನ್ : ಮಿಸ್ ಕಾಂಟೆಸ್ಟ್ ಗಳ ಹೊಸ ಹೊಸ ನಮೂನೆ ಬರುತ್ತಿವೆ. ಇದರಲ್ಲಿ ಒಬ್ಬಾಕೆ ಮಿಸ್ ವಾಲಂಟಿಯರ್, ಇದರಲ್ಲಿ ಯಾರ ಪ್ರೊಫೈಲ್ ನಲ್ಲಿ ವಾಲಂಟಿಯರ್ ವರ್ಕ್ ತುಂಬಿರುತ್ತದೋ ಅಂಥವರು ಮಾತ್ರ ಭಾಗವಹಿಸಬಹುದು. ಅಮಾಂಡಾ ಹಿಗ್ಗಿನ್ ಬಾಥಮ್ ಪೈಲಟ್ ಆಗಿದ್ದು, ಜೊತೆಗೆ ಹೊಸ ಹುಡುಗಿಯರಿಗೆ ಏವಿಯೇಶನ್‌ಏರೋಸ್ಪೇಸ್ ಫೀಲ್ಡ್ ಗಾಗಿ ಫ್ರೀಯಾಗಿ ತರಬೇತಿ ನೀಡುತ್ತಾರೆ. ಬ್ಯೂಟಿ ಜೊತೆ ಸೋಶಿಯಲ್ ಹೆಲ್ಪ್ ನೊಂದಿಗೆ ಹೊಂದಿಕೊಂಡಿರುವ ಇಂಥ ಅಭ್ಯರ್ಥಿಗಳ ಪ್ರತಿಭೆ ಬಲು ಅಮೂಲ್ಯ. ಏಕೆಂದರೆ ಇಂಥವರ ಕೆರಿಯರ್, ಮಿಸ್ ವಿನರ್ಸ್‌ನಿಂದ ಅಳೆಯುವಂಥದ್ದಲ್ಲ. ಈ ಕುರಿತಾಗಿ ಅಮಾಂಡಾ, ಕೇವಲ 52 ಹುಡುಗಿಯರು ಮಾತ್ರ ಪೈಲಟ್ ಆಗಿದ್ದಾರೆ, ಇದಂತೂ ಬಹಳ ಕಡಿಮೆ. ಬ್ಯೂಟಿ ಜೊತೆ ಬ್ರೇನ್‌ನಾಲೆಜ್ ಏನೂ ಅಪರೂಪವಲ್ಲ. ನಮ್ಮಲ್ಲಿ ಹೆಣ್ಣುಮಕ್ಕಳಿಗೆ ಮುಂದೆ ಅಮೆರಿಕಾ ತಲುಪುವಂತಾದರೂ, ಕೇವಲ ತಾಯಿಯಾಗಿ ಗೃಹಿಣಿ ಕರ್ತವ್ಯ ನಿರ್ವಹಿಸುವುದನ್ನಷ್ಟೇ ಕಲಿಸಲಾಗುತ್ತದೆ, ಹೀಗಾಗಬಾರದು, ಎನ್ನುತ್ತಾರೆ. ಅಮಾಂಡಾಳಂಥ ಬ್ಯೂಟಿ ವಿದೇಶದಲ್ಲಿ `ಮಿಸ್ ಸ್ಟೇಟಸ್’ ಪಡೆದು, ಅಲ್ಲಿನ ಇತರ ಎಷ್ಟೋ ಬ್ಯೂಟಿಗಳಿಗೂ ತರಬೇತಿ ನೀಡಿ, ಸಮರ್ಥರನ್ನಾಗಿಸುತ್ತಿದ್ದಾರೆ.

ಯಶಸ್ಸು ಕಟ್ಟಿಟ್ಟ ಬುತ್ತಿ : ಮ್ಯೂಸಿಕ್ ಇಂಡಸ್ಟ್ರಿಯಲ್ಲೂ ಸಹ ಯಶಸ್ಸು ಸುಲಭವಾಗಿ ಸಿಗುವುದಿಲ್ಲ. ಅಲ್ಲೂ ನಾನಾ ಬಾಧೆ ಪಡಬೇಕು. ಆರ್ಸೇನಿಕ್ ಕಿಚೇನ್ ಎಂಬ ಹೆಸರಿನ ಬ್ಯಾಂಡ್ ಒಂದಿಷ್ಟು ಪಾಪ್ಯುಲರ್ ಎಂಬುದು ನಿಜ, ಅಲ್ಲೊಂದು ಇಲ್ಲೊಂದು ಅವಕಾಶ ಸಿಗುತ್ತಿರುತ್ತದೆ. ಅಮೆರಿಕಾದ ಫಿನಿಕ್ಸ್ ನಗರದಿಂದ ಬೇರೆ ನಗರಗಳಿಗೆ ಹೋಗುವುದು, ಮ್ಯೂಸಿಕ್ ಕಂಪನಿಗಳನ್ನು ಒಪ್ಪಿಸುವುದು, ಪರ್ಫಾರ್ಮೆನ್ಸ್ ನೀಡುವುದು, ಆಡಿಯೆನ್ಸ್ ಜಮಾವಣೆ…. ಇವು ಯಾವುದೂ ಸುಲಭವಲ್ಲ. ಈ ಯಂಗ್ ಗ್ರೂಪ್ ಇದನ್ನೇ ತಮ್ಮ ಜೀವನದ ಆಧಾರವಾಗಿಸಿಕೊಂಡಿದ್ದಾರೆ. ಒಂದಲ್ಲ ಒಂದು ದಿನ ಯಶಸ್ವಿಗಳಾಗುತ್ತೇವೆಂಬ ಕನಸು ಕಾಣುತ್ತಿದ್ದಾರೆ.

ಕ್ಯಾರೆಕ್ಟರ್ಸ್ ಜೊತೆ ಆ್ಯಕ್ಷನ್ : ನರೋತೋ ಬುರೋತೋ ಜಪಾನೀ ಗೇಮ್ಸ್ ನ ಕ್ಯಾರೆಕ್ಟರ್ ಸಹ ಹೌದು, ಜಪಾನಿನ ಒಂದು ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ಲೈವ್ ಆಗಿಯೂ ಕಾಣಿಸುತ್ತವೆ! ಗೇಮ್ಸ್ ಕ್ಯಾರೆಕ್ಟರ್ಸ್ ಜೊತೆ ಆ್ಯಕ್ಷನ್ ನಲ್ಲಿ ರೀಲ್ಸ್ ಮಾಡುವುದು, ಪ್ರವಾಸಿಗಳಿಗೆ ಒಂದು ವಿಶೇಷ ಆಕರ್ಷಣೆ ಎನಿಸುತ್ತದೆ ಹಾಗೂ ನಿಂಜಾ ಕ್ಯಾರೆಕ್ಟರ್ಸ್ ಗೆ ಪಾಪ್ಯುಲಾರಿಟಿ ಸಹ ಸಿಗುತ್ತದೆ. ಜಪಾನೀ ಹೆಂತಾಯೀ ಗೇಮ್ಸ್ ನ ಕ್ರಿಯೇಟಿವಿಟಿ ಈ ನಿಟ್ಟಿನಲ್ಲಿ ಎಲ್ಲವನ್ನೂ ಮೀರಿಸುತ್ತವೆ. ಕಳೆದ ಹಲವು ಪೀಳಿಗೆಗಳು ಇದರ ಸಹಾಯದಿಂದಲೇ ತಮ್ಮ ಬಾಲ್ಯ ಕಳೆದಿವೆ ಹಾಗೂ ದೊಡ್ಡವರಾದ ನಂತರ ಇವನ್ನು ಮರೆಯಲಾಗದು. ಜಪಾನೀ ಎಂಟರ್ ಟೇನ್ಮೆಂಟ್ ಬಹಳಷ್ಟು ಇದರ ಸುತ್ತಲೇ ಗಿರಕಿ ಹೊಡೆಯುತ್ತದೆ.

ಮತ್ತೆ ಮರಳುತಿವೆ ಲಿರಿಕ್ಸ್ : ಮ್ಯೂಸಿಕ್ ವಿಡಿಯೋ ಝಮಾನಾ ಇನ್ನೂ ಜೀವಂತವಿದೆ ಎನ್ನಬಹುದು, ಇದೀಗ ಲಿರಿಕ್ಸ್ ಸಹ ಮತ್ತೆ ಮರಳುತಿವೆ. ಕೆಲವು ದಿನಗಳವರೆಗೂ ಫಾಸ್ಟ್ ರಾಪ್ ಉತ್ತುಂಗದಲ್ಲಿತ್ತು, ಆದರೆ ಸದಾ ಮೊಬೈಲ್ ನಲ್ಲಿ ಮುಳುಗಿಹೋಗಿರುವ ಇಂದಿನ ಆಧುನಿಕರು, ಬಹುಶಃ ಡ್ಯಾನ್ಸ್ ಪಾರ್ಟಿಯನ್ನೂ ಬೋರಿಂಗ್ ಎಂದೇ ಭಾವಿಸುತ್ತಾರೆ. ಏಕೆಂದರೆ ಅಷ್ಟು ಹೊತ್ತೂ ಮೊಬೈಲ್ ದೂರ ಇರಿಸಬೇಕಲ್ಲ….? ಅಮೆರಿಕಾದ ಮಿಯಾಮಿಯ ಕೇವಲ 20 ವರ್ಷಗಳ ಕೋಲಾ, ಇಲ್ಲಿ ತನ್ನ ಹೊಸ ವಿಡಿಯೋ ಶೂಟ್ ಮಾಡುತ್ತಿದ್ದಾಳೆ.


ಚೆನ್ನಾಗಿ ವಿಚಾರಿಸಿ ನಂತರ ಸೇವಿಸಿ : ಲೈಫ್ ಅಲೈವ್ ಆರ್ಗ್ಯಾನಿಕ್ ಫುಡ್ ವಿಶ್ವವಿಡೀ ಪ್ರಸಿದ್ಧಿ ಪಡೆದಿದೆ. ಭಾರತೀಯ ಮೂಲದ ಹುಡುಗಿಯರಿಗೆ ಇದು ಸುಲಭ ಹಾಗೂ ಉತ್ತಮ ಅವಕಾಶ ಕಲ್ಪಿಸಿದೆ. ಅಮೆರಿಕಾದ ಮೆಸಾಚುಸೆಟ್ಸ್ ನಲ್ಲಿ ಶುರುವಾದ ಋಷಿ ದೇವಕಿಯಾಳ ರೆಸ್ಟೋರೆಂಟ್ ಚೆನ್ನಾಗಿ ನಡೆಯುತ್ತಿದೆ, ಏಕೆಂದರೆ ಇಲ್ಲಿ ವೆಜ್ ಆರ್ಗ್ಯಾನಿಕ್ ಫುಡ್ ಹ್ಯಾಪಿ ಎನ್ ವಾರ್ಯನ್ ಮೆಂಟ್ ನಲ್ಲಿ ದೊರೆಯುತ್ತದೆ. ಡಿಶೆಸ್ ನಲ್ಲಿ ವೆರೈಟಿ ಕಡಿಮೆ ಎನಿಸಿದರೂ, ಹೆಲ್ದಿ ಆಗಿರುವುದರಿಂದ ಬೇಡಿಕೆ ಇದೆ. ಹೀಗಾಗಿಯೇ ಅಲ್ಲಿನ ಸ್ಥಳೀಯರು ಹಾಗೂ ಬಿಳಿಯರು ಇಬ್ಬರೂ ಇಲ್ಲಿಗೆ ಮುಗಿಬೀಳುತ್ತಿದ್ದಾರೆ. ಭಾರತದಲ್ಲೂ ಪ್ರತಿ ಮೂಲೆಗೊಂದು ಇಂಥ ರೆಸ್ಟೋರೆಂಟ್ಸ್ ತೆರೆಯುತ್ತಿವೆ.





