ಹೊಟ್ಟೆಯಲ್ಲಿ ಗ್ಯಾಸ್ ಅಥವಾ ಅಸಿಡಿಟಿಯ ತೊಂದರೆ ಇದ್ದರೆ ನಿಮ್ಮ ಇಡೀ ದಿನದ ರೊಟೀನ್ ಅಸ್ತವ್ಯಸ್ತವಾಗುತ್ತದೆ. ಇದನ್ನು ನಿಭಾಯಿಸುವುದು ಹೇಗೆ….?
ನಮ್ಮ ಹೊಟ್ಟೆ ಅತಿ ನಾಜೂಕಾದ ಅಂಗಗಳಿಂದ ರೂಪುಗೊಂಡಿದೆ. ಆಹಾರದಲ್ಲಿ ಸ್ವಲ್ಪ ಗಡಿಬಿಡಿ ಆದರೂ, ಆರೋಗ್ಯ ಹದಗೆಡಲು ಕಾರಣವಾಗುತ್ತದೆ. ಹೊಟ್ಟೆನೋವು, ಉರಿ, ಊತ, ಎದೆಯಲ್ಲಿ ಹಿಂಸೆ, ಹೊಟ್ಟೆ ಉಬ್ಬರ, ತೊಳೆಸುವಿಕೆ….. ಇತ್ಯಾದಿ. ಇದೆಲ್ಲ ಗಂಭೀರ ರೋಗಗಳಲ್ಲದೇ ಇರಬಹುದು, ಆದರೆ ಅಲ್ಸರ್ ನಂಥ ಗಂಭೀರ ರೋಗಕ್ಕೆ ಇವು ಲಕ್ಷಣಗಳಾಗಬಹುದು. ಜೀವನಶೈಲಿ ಹಾಗೂ ಊಟತಿಂಡಿಯಲ್ಲಿ ಬದಲಾವಣೆಯ ಪರಿಣಾಮವಾಗಿ ಇಂದಿನ ಯುವಜನತೆ ಹೆಚ್ಚಾಗಿ ಅಲ್ಸರ್ಕಾಯಿಲೆಗೆ ತುತ್ತಾಗುತ್ತಿದೆ. ಸಾಮಾನ್ಯ ಭಾಷೆಯಲ್ಲಿ ಹೇಳಬೇಕೆಂದರೆ ಹೊಟ್ಟೆಯಲ್ಲಿ ತೀವ್ರ ಹುಣ್ಣುಗಳಾಗಿ, ಗಾಯ ಉಲ್ಬಣಗೊಂಡರೆ ಇದು ಖಂಡಿತಾ ಪೆಪ್ಟಿಕ್ ಅಲ್ಸರ್ ಗೆ ದಾರಿಯಾಗುತ್ತದೆ.
ಪೆಪ್ಟಿಕ್ ಅಲ್ಸರ್ ಗೆ ಕಾರಣ
ಹೊಟ್ಟೆಯಲ್ಲಿ ಮ್ಯೂಕಸ್ ಎಂಬ ಒಂದು ಅಂಟಂಟು ಪದರ ಇರುತ್ತದೆ. ಇದು ಹೊಟ್ಟೆಯ ಒಳಪದರನ್ನು ಪೆಪ್ಸಿನ್ ಮತ್ತು ಹೈಡ್ರೋಕ್ಲೋರಿಕ್ ಆ್ಯಸಿಡ್ ನ ತೀಕ್ಷ್ಣತೆಯಿಂದ ರಕ್ಷಿಸುತ್ತದೆ. ಈ ಆ್ಯಸಿಡ್ ನ ವೈಶಿಷ್ಟ್ಯವೆಂದರೆ, ಇದು ಜೀರ್ಣಕ್ರಿಯೆಗೆ ಎಷ್ಟು ಅವಶ್ಯಕವೇ, ಅದೇ ದೇಹದ ಊತಗಳು ನೇರ ಸಂಪರ್ಕಕ್ಕೆ ಬಂದಾಗ ಅದಕ್ಕೆ ಹಾನಿಯನ್ನೂ ಮಾಡಬಲ್ಲದು. ಈ ಆ್ಯಸಿಡ್ಮ್ಯೂಕಸ್ ಪದರಗಳ ಮಧ್ಯೆ ಹೊಂದಾಣಿಕೆ ಇರುತ್ತದೆ. ಈ ಸಮತೋಲನ ಹಾಳಾದರೆ ಅಲ್ಸರ್ ಉಂಟಾಗುತ್ತದೆ. ವ್ಯಕ್ತಿಗೆ ದೈಹಿಕ ಅಥವಾ ಭಾವನಾತ್ಮಕ ಒತ್ತಡ ಮೊದಲೇ ಇದ್ದುಬಿಟ್ಟರೆ ಇದು ಪೆಪ್ಟಿಕ್ ಅಲ್ಸರ್ ನ್ನು ಇನ್ನಷ್ಟು ಹೆಚ್ಚಿಸುತ್ತದೆ. ಕೆಲವು ಔಷಧಿಗಳ ನಿರಂತರ ಬಳಕೆಯಿಂದಲೂ ಇದು ಹೆಚ್ಚಬಹುದು. ಉದಾ : ನೋವು ನಿವಾರಕ ಔಷಧಿಗಳ ಪರಿಣಾಮ. ಸಾಮಾನ್ಯವಾಗಿ ಈ ಅಲ್ಸರ್ ಅನ್ನನಾಳ, ಜಠರ, ಸಣ್ಣ ಕರುಳಿನ ಒಳ ಪದರವನ್ನು ಆಕ್ರಮಿಸುತ್ತದೆ.
ವೈಜ್ಞಾನಿಕ ಕಾರಣ
ಪೆಪ್ಟಿಕ್ ಅಲ್ಸರ್ ಉಂಟಾಗಲು ಪ್ರಮುಖ ಕಾರಣ ಎಚ್. ಪೈಲೋರಿ ಬ್ಯಾಕ್ಟೀರಿಯಾ. 1980ರಲ್ಲಿ ಆಸ್ಟ್ರೇಲಿಯಾದ ಪ್ರಮುಖ ವೈದ್ಯರಾದ ಡಾ. ಬೆರಿ ಜೆ. ಮಾರ್ಷಲ್ ಈ ಎಚ್. ಪೈಲೋರಿ (ಹೆಲಿಕೋಬೆಕ್ಟರ್ ಪೈಲೋರಿ) ಬ್ಯಾಕ್ಟೀರಿಯಾವನ್ನು ಕಂಡುಹಿಡಿದರು. ಈ ಬ್ಯಾಕ್ಟೀರಿಯಾವನ್ನು ಬಿಸ್ಮಥ್ ಮೂಲಕ ಬೇರುಸಹಿತ ನಾಶಪಡಿಸಲು ಯಶಸ್ವಿಯಾದ ಕಾರಣ, ಅವರ ಪ್ರಕಾರ ಕೇವಲ ಆಹಾರ ಸೇವನೆ ಮತ್ತು ಹೊಟ್ಟೆಯಲ್ಲಿ ಆ್ಯಸಿಡ್ ತಯಾರಿಯಿಂದ ಪೆಪ್ಟಿಕ್ ಅಲ್ಸರ್ ಆಗುವುದಿಲ್ಲ, ಬದಲಿಗೆ ಇದಕ್ಕಾಗಿ ಒಂದು ಬ್ಯಾಕ್ಟೀರಿಯಾ ಮುಖ್ಯ ದೋಷಿಯಾಗಿದೆ. ಅದುವೇ ಪೈಲೋರಿ. ಇದರ ಸೋಂಕು ಮಲಮೂತ್ರ, ಕೊಳಕು ನೀರಿನಿಂದ ಆಗುತ್ತದೆ. ಮುಖ್ಯವಾಗಿ ಮಳೆಗಾಲದಲ್ಲಿ ಕೊಳಕಿನ ಸಮಸ್ಯೆ ಬೇರೆ ಕಾಲಕ್ಕಿಂತಲೂ ಅಧಿಕ. ದೈಹಿಕ ಸಕ್ರಿಯತೆ ಕಡಿಮೆಯಾಗುತ್ತಾ ರೋಗ ನಿರೋಧಕ ಶಕ್ತಿಯಲ್ಲಾಗುವ ಬದಲಾವಣೆ, ಈ ಬ್ಯಾಕ್ಟೀರಿಯಾ ವೃದ್ಧಿಗೊಳ್ಳಲು ಪೂರಕ. ಹೆಚ್ಚು ಹೆಚ್ಚು ಹುರಿದಕರಿದ, ಮಸಾಲೆಯುಕ್ತ ಆಹಾರ, ಕಾಫಿ/ಟೀ ಸೇವನೆಯಿಂದ ಜಠರದಲ್ಲಿ ಆ್ಯಸಿಡ್ ನ ಮಟ್ಟ ಹೆಚ್ಚುತ್ತದೆ. ಇದರಿಂದ ಅಲ್ಸರ್ ನ ಅಪಾಯ ಹೆಚ್ಚುತ್ತದೆ. ಪೈಲೋರಿ ಬ್ಯಾಕ್ಟೀರಿಯಾದ ಸೋಂಕಿನಿಂದ ಪಾರಾಗಲು ಇರುವ ಸುಲಭ ದಾರಿ ಎಂದರೆ ಶುಚಿತ್ವ, ಶುಭ್ರತೆಗಳಿಗೆ ಮೊದಲ ಆದ್ಯತೆ ನೀಡುವುದು.
ಅಲ್ಸರ್ ನ ಲಕ್ಷಣ
ಇದರ ಲಕ್ಷಣಗಳಲ್ಲಿ ಮುಖ್ಯವಾಗಿ ಅಸಿಡಿಟಿ, ಹೊಟ್ಟೆ ಉಬ್ಬರಿಸುವಿಕೆ, ಗ್ಯಾಸ್, ಅಜೀರ್ಣ, ಡಯೇರಿಯಾ, ವಾಂತಿಬೇಧಿ, ಮಲಬದ್ಧತೆ, ಹೊಟ್ಟೆ ತೊಳೆಸುವಿಕೆ ಇತ್ಯಾದಿ ಕಾಟವನ್ನು ಕಾಣಬಹುದು. ಹುರಿದಕರಿದ ಹಾಗೂ ಮಸಾಲೆಯಕ್ತ ಆಹಾರ ಹೊಟ್ಟೆಯಲ್ಲಿ ಎಚ್. ಪೈಲೋರಿ ಬ್ಯಾಕ್ಟೀರಿಯಾ ವೃದ್ಧಿಯಾಗುವ ವಾತಾವರಣ ಕಲ್ಪಿಸುತ್ತದೆ. ಈ ಕಾರಣಗಳಿಂದ ನಿಧಾನವಾಗಿ ಅಲ್ಸರ್ ಹೆಚ್ಚುತ್ತದೆ.
ಪೆಪ್ಟಿಕ್ ಅಲ್ಸರ್ ನಿಂದಾಗಿ ಉಸಿರಾಟದಲ್ಲೂ ಹೆಚ್ಚಿನ ತೊಂದರೆ ಆಗುತ್ತದೆ. ಅಜೀರ್ಣತೆಯ ಕಾರಣ ಆ್ಯಸಿಡ್ ಒಮ್ಮೊಮ್ಮೆ ಮೇಲಿನ ಅನ್ನನಾಳಕ್ಕೆ ನುಗ್ಗಿಬಿಡುತ್ತದೆ. ಇದರಿಂದಾಗಿ ಎದೆಯಲ್ಲಿ ಹೆಚ್ಚು ಉರಿ ಮತ್ತು ನೋವು ಕಾಡುತ್ತದೆ. ಬಹುಶಃ ಎದೆನೋವು, ಹಾರ್ಟ್ ಅಟ್ಯಾಕ್ ಇರುಬಹುದೇನೋ ಎಂಬ ಸಂದೇಹ ಮೂಡಿಸುತ್ತದೆ. ಇದರ ಪರಿಣಾಮ ಕುತ್ತಿಗೆ, ಹಲ್ಲು, ಉಸಿರಾಟದ ಮೇಲೂ ಆಗುತ್ತದೆ. ಧ್ವನಿ ಕರ್ಕಶ ಆಗುತ್ತದೆ ಹಾಗೂ ಬಾಯಲ್ಲಿ ಹುಣ್ಣು ಆಗಬಹುದು. ಈ ಸ್ಥಿತಿಯನ್ನೇ ಆ್ಯಸಿಡ್ ರಿಫ್ಲೆಕ್ಸ್ ಡಿಸೀಸ್ ಎನ್ನುತ್ತಾರೆ. ಈ ಪೆಪ್ಟಿಕ್ ಅಲ್ಸರ್ ಗೆ ಬೇಗ ಚಿಕಿತ್ಸೆ ಶುರು ಮಾಡದಿದ್ದರೆ ಹಾಗೂ ಇದು ದೀರ್ಘ ಕಾಲದವರೆಗೆ ದೇಹವನ್ನು ಕಾಡುತ್ತಿದ್ದರೆ, ಮುಂದೆ ಅದು ಜಠರದ ಕ್ಯಾನ್ಸರ್ ಗೆ ದಾರಿ ಆಗಬಹುದು.
ಗಂಭೀರ ಲಕ್ಷಣಗಳು
ರಕ್ತ ವಾಂತಿ ಅಥವಾ ಎಷ್ಟೋ ಘಂಟೆಗಳ, 1-2 ದಿನಗಳ ನಂತರ ತಿಂದ ಆಹಾರ ವಾಂತಿ ಅಥವಾ ಸದಾ ಹೊಟ್ಟೆ ತೊಳೆಸುತ್ತಿದ್ದರೆ, ಇದು ಅಲ್ಸರ್ ರೋಗದ ಗಂಭೀರ ಲಕ್ಷಣಗಳೇ ಸರಿ. ಅಸಾಧಾರಣ ಸುಸ್ತು, ಸಂಕಟ, ಮಲದಲ್ಲಿ ರಕ್ತ ವಿಸರ್ಜನೆ, ಯಾವ ಔಷಧಿಗೂ ಬಗ್ಗದ ಹೊಟ್ಟೆನೋವು (ಕಿವುಚಿ ಕಿವುಚಿ ಕಾಡುವಿಕೆ), ಬೆನ್ನಿನ ಸೆಳೆತ, ಸತತ ತೂಕ ತಗ್ಗುವುದು, ನಿಶ್ಶಕ್ತಿಯ ಪರಮಾಧಿ…. ಇತ್ಯಾದಿಗಳು ಪೆಪ್ಟಿಕ್ ಅಲ್ಸರ್ ನ ಸಂಕೇತವೇ ಸರಿ.
ಶೀಘ್ರ ಚಿಕಿತ್ಸೆಯೇ ರಾಮಬಾಣ
ಪೆಪ್ಟಿಕ್ ಅಲ್ಸರ್ ಕಾರಣ ಅನೀಮಿಯಾ, ಮಲದಲ್ಲಿ ಅತ್ಯಧಿಕ ರಕ್ತಸ್ರಾವ ಇತ್ಯಾದಿ ಎಷ್ಟು ದಿನಗಳಿಗೂ ನಿವಾರಣೆ ಆಗದಿದ್ದರೆ ಜಠರದ ಕ್ಯಾನ್ಸರ್ ನಿಶ್ಚಿತ. ಆಂತರಿಕ ರಕ್ತಸ್ರಾವದ ಕಾರಣ ದೇಹದಲ್ಲಿ ರಕ್ತದ ಕೊರತೆ ಹೆಚ್ಚಿ ಅನೀಮಿಯಾ ಆಗುತ್ತದೆ. ಜಠರ, ಸಣ್ಣ/ದೊಡ್ಡ ಕರುಳಲ್ಲಿ ತೂತಾಗಿ, ಕರುಳು ಬೇಗ ಸೋಂಕಿಗೆ ಒಳಗಾಗುತ್ತದೆ. ಪೆಪ್ಟಿಕ್ ಅಲ್ಸರ್ ಹೊಟ್ಟೆಯ ಒಳಭಾಗದ ಊತಗಳನ್ನೆಲ್ಲ ಹಾಳು ಮಾಡುತ್ತವೆ. ಇವು ಪಚನ ಮಾರ್ಗದ ಎಲ್ಲಾ ಅಂಗಗಳನ್ನೂ ಕೆಲಸ ಆಗಬಿಡದೆ ಸತಾಯಿಸುತ್ತದೆ. ಈ ಕಾರಣಗಳಿಂದ ಹೊಟ್ಟೆ ಅಲ್ಪಾಹಾರಕ್ಕೇ ಬೇಗ ತುಂಬಿದಂತೆ, ಹೆಚ್ಚು ವಾಂತಿ, ಸತತ ತೂಕ ಕಡಿಮೆ ಆಗುವಿಕೆ ಮುಂತಾದ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ.
ಏನು ಮಾಡಬಾರದು?
ಪೆಪ್ಟಿಕ್ ಅಲ್ಸರ್ ನಿಂದ ಪಾರಾಗಲು ಧೂಮಪಾನ, ಮಧುಪಾನ ಸಂಪೂರ್ಣ ತ್ಯಜಿಸಬೇಕು. ತಂಬಾಕುಯುಕ್ತ ಉತ್ಪನ್ನವನ್ನು ಹತ್ತಿರ ಸೇರಿಸಬೇಡಿ.
ರೋಗ ವಾಸಿ ಆಗುವವರೆಗೂ ಮಾಂಸಾಹಾರ, ಕಾಫಿ/ಟೀ, ಅತಿಯಾದ ಮಸಾಲೆಗಳನ್ನು ಆದಷ್ಟು ದೂರವಿರಿಸಿ.
ಆದಷ್ಟೂ ಸಾತ್ವಿಕ ಆಹಾರವಾದ ಗಂಜಿ, ಹಬೆಯಲ್ಲಿ ಬೆಂದ ಇಡ್ಲಿ, ತಾಜಾ ತರಕಾರಿ ಸಲಾಡ್ ಇತ್ಯಾದಿ ಬಳಸಿರಿ.
ಏನು ಮಾಡಬೇಕು?
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪಾರಾಗಲು ಹಾಗೂ ಜೀರ್ಣಶಕ್ತಿ ಸುಧಾರಿಸಲು ಈ ಸಲಹೆಗಳನ್ನು ಅನುಸರಿಸಿ :
ಪುದೀನಾ ಹೊಟ್ಟೆಯನ್ನು ತಣ್ಣಗಿಡುತ್ತದೆ. ಇದನ್ನು ನೀರಲ್ಲಿ ಕುದಿಸಿ ಅಥವಾ ಮಿಂಟ್ ಟೀ ರೂಪದಲ್ಲಿ ಸೇವಿಸಬಹುದು.
ಓಮದ ಕಾಳು ಹೊಟ್ಟೆಯನ್ನು ಹಗುರವಾಗಿಡುತ್ತದೆ, ನೋವನ್ನೂ ನಿವಾರಿಸುತ್ತದೆ. ಹೊಟ್ಟೆ ಕೆಟ್ಟಾಗ ಮಕ್ಕಳಿಗೆ ಓಮ್ ವಾಟರ್ ಕುಡಿಸುವುದು ಒಳ್ಳೆಯದು.
ಹೊಟ್ಟೆ ನುಲಿಯುವಿಕೆ, ಕಿಚುವಿಕೆಯಿಂದ ಮುಕ್ತರಾಗಲು ಬೆರಾಡೋನಾ ಸೇವಿಸಿ.
ವೈದ್ಯರ ಸಲಹೆಯ ಮೇರೆಗೆ ಹೊಟ್ಟೆ ನೋವಿಗೆಂದೇ ಮಾರುಕಟ್ಟೆಯಲ್ಲಿ ಲಭ್ಯವಿರ ಮಾತ್ರೆ, ಟಾನಿಕ್ ತೆಗೆದುಕೊಳ್ಳಿ. ನೀವು ಮೆಡಿಕಲ್ ಸ್ಟೋರ್ ಗೆ ಹೋಗಿ ಯಾವುದೋ ಒಂದನ್ನು ಕೊಂಡುಕೊಳ್ಳಬೇಡಿ. ಅದರಲ್ಲೂ ಮುಖ್ಯವಾಗಿ ಈ ಔಷಧಿ ಬಿಸ್ಮಥ್ ಘಟಕಳ್ಳದ್ದಾಗಿರಬೇಕು. ಹೊಟ್ಟೆ ನೋವನ್ನು ನಿಯಂತ್ರಿಸುವುದಲ್ಲದೆ, ಪಚನಕ್ರಿಯೆಯನ್ನೂ ರಿಪೇರಿ ಮಾಡುತ್ತದೆ.





