ಹಬ್ಬದ ಸಮಯದಲ್ಲಿ ನಿಮ್ಮ ಕೇಶ ವಿನ್ಯಾಸದಲ್ಲಿ ಹೊಸದನ್ನು ಪ್ರಯತ್ನಿಸಿದರೆ, ನಿಮ್ಮ ಲುಕ್‌ ಇನ್ನಷ್ಟು ಸ್ಟೈಲಿಶ್ ಆಗಿರುತ್ತದೆ……

ಫ್ಯಾಷನ್‌ ಕಲರ್‌ ಗಳು ಸಹ ಬಹಳ ವಿಶಿಷ್ಟವಾಗಿರುತ್ತವೆ. ನಿನ್ನೆಯವರೆಗೆ ದಟ್ಟವಾಗಿ, ಸೊಂಪಾಗಿ, ನಳನಳಿಸುವ ಕಪ್ಪು ಕೂದಲು ಫ್ಯಾಷನ್‌ ಆಗಿತ್ತು.

ಆದರೆ, ಇಂದಿನ ಬದಲಾಗುತ್ತಿರುವ ಕಾಲದಲ್ಲಿ ಕೆಂಪು, ನೀಲಿ, ಕಿತ್ತಳೆ ಮತ್ತು ನವಿಲು ಗರಿ ಮುಂತಾದ ವಿವಿಧ ಬಣ್ಣಗಳಲ್ಲಿ ರೇಷ್ಮೆಯಂತಹ ಕೂದಲು ಕಂಡುಬರುತ್ತವೆ. ಈ ವರ್ಣರಂಜಿತ ಕೂದಲಿನ ಫ್ಯಾಷನ್‌ ಎಷ್ಟು ಪ್ರಬಲವಾಗಿದೆ ಎಂದರೆ, ಇಂದು ಟೀನೇಜ್‌ ಹುಡುಗಿಯರಿಂದ ಹಿಡಿದು ಮಹಿಳೆಯರವರೆಗೆ ಎಲ್ಲರೂ ಅದನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ನೀವು ಸಹ ಈ ಪ್ರವೃತ್ತಿಯನ್ನು ಅನುಸರಿಸುವ ಮೂಲಕ ಜನಸಮೂಹದಲ್ಲಿ ನಿಮ್ಮದೇ ಆದ ವಿಶೇಷ ಗುರುತನ್ನು ಏಕೆ ಮೂಡಿಸಬಾರದು?

ಫಂಕಿ ಹೇರ್‌ ಕಲರ್‌

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಫ್ಯಾಷನೆಬಲ್ ಮತ್ತು ಟ್ರೆಂಡಿಯಾಗಿ ಕಾಣಲು ಬಯಸುತ್ತಾರೆ. ಈಗ ಕಂದು, ಗೋಲ್ಡನ್‌ ಮತ್ತು ಬರ್ಗಂಡಿ ಕಲರ್‌ ಕೂದಲು ಹೊರಟುಹೋಗಿವೆ. ಇಂದಿನ ಫ್ಯಾಷನೆಬಲ್ ಹುಡುಗಿಯರಿಗೆ ಫಂಕಿ ಕೂದಲಿನ ಬಣ್ಣಗಳು ಮಾರುಕಟ್ಟೆಯಲ್ಲಿ ಬಹಳಷ್ಟು ಲಭ್ಯವಾಗುತ್ತಿವೆ.

ನಿಮ್ಮ ಲುಕ್‌ ಬದಲಾಯಿಸಲು ಮತ್ತು ನಿಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡಬೇಕೆಂದರೆ, ನೀವು ನಿಮ್ಮ ಕೂದಲಿಗೆ ಇಂತಹ ಕಲರ್ ಗಳನ್ನು ಹಚ್ಚಿಕೊಳ್ಳಬಹುದು. ನೀವು ನಿಮ್ಮ ಲುಕ್‌ ಬದಲಾಯಿಸಿಕೊಳ್ಳಲು ಬಯಸಿದರೆ, ನಿಮ್ಮ ಕೂದಲಿನ ಬಣ್ಣ ಬದಲಾಯಿಸಿ. ಇಂದಿನ ಹೊಸ ಟ್ರೆಂಡ್‌ ನಲ್ಲಿ ನೀವು ಹೊಸ, ಹೊಸ ಬಣ್ಣಗಳನ್ನು ಪ್ರಯೋಗಿಸಲು ಬಯಸಿದರೆ, ನೀವು ಫ್ಲರ್ಟಿ ರೆಡ್‌, ಮಿಸ್ಟಿಕ್‌ ಬ್ಲೂ, ಜೆಸ್ಟಿ ಯೆಲ್ಲೋ, ವಂಡರ್‌ ಬ್ಲೂ, ಗ್ಲೋರಿಯಸ್‌ ಗ್ರೀನ್‌, ಕ್ರೇಜಿ ವೈಲೆಟ್‌, ಪರ್ಕಿ ಗ್ರೀನ್‌, ಉಮ್ಪಿ ಆರೆಂಜ್‌, ಗ್ರೂವಿ ಪಿಂಕ್‌ ನಂತಹ ಯಾವುದೇ ಫಂಕಿ ಶೇಡ್‌ ಗಳನ್ನು ಆಯ್ಕೆ ಮಾಡಬಹುದು. ಈ ಫಂಕಿ ಬಣ್ಣಗಳು ಅಮೋನಿಯಾ ಮುಕ್ತವಾಗಿವೆ. ಇದರ ಹೊರತಾಗಿ, ನೀವು ಈ ರೀತಿಯ ಕೂದಲಿನ ಬಣ್ಣನ್ನು ಸಹ ಬಳಸಬಹುದು. ನೀವು ಆರ್ಗನ್‌ ಸೀಕ್ರೆಟ್ಸ್ ಕೂದಲಿನ ಬಣ್ಣವನ್ನು ಸಹ ಪ್ರಯತ್ನಿಸಬಹುದು. ಇದರಲ್ಲಿ ಕ್ರಿಮ್ಸನ್‌ ರೆಡ್‌, ಹನಿ ಬ್ಲಾಂಡ್‌, ಪ್ಲಮ್, ಬೀಜ್‌ ಬ್ಲಾಂಡ್‌, ಸ್ಯಾಂಡರ್‌ ಬ್ಲಾಂಡ್‌, ಆ್ಯಶ್‌ ಬ್ಲಾಂಡ್‌ಸೇರಿವೆ.

ಇತ್ತೀಚಿನ ದಿನಗಳಲ್ಲಿ ಈ ಟ್ರೆಂಡ್‌ ಯಾವಾಗ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸ್ವಲ್ಪ ಸಮಯದ ಹಿಂದೆ, ಕೂದಲಿನ ಒಂದೇ ಎಳೆಯನ್ನು ಬೇರೆ ಬಣ್ಣದಿಂದ ಹೈಲೈಟ್‌ ಮಾಡುವುದು ಟ್ರೆಂಡ್‌ ಆಗಿತ್ತು. ಅದರಲ್ಲಿ ನೀವು ರೆಡ್‌ ವೈನ್‌, ರೆಡ್‌ ಚೆರ್ರಿ, ನೀಲಿ, ಹಸಿರು, ನವಿಲು ಗರಿ ಮುಂತಾದ ನಿಮ್ಮ ಆಯ್ಕೆಯ ಬಣ್ಣ ಪಡೆಯಬಹುದಿತ್ತು.

ಆದರೆ ಈಗ ಕೆಲವು ಹುಡುಗಿಯರು ಫಂಕಿಯಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಿದ್ದಾರೆ. ಇದು ನಿಮ್ಮ ಸಂಪೂರ್ಣ ಲುಕ್‌ ನ್ನೇ ಬದಲಾಯಿಸುತ್ತದೆ.

ನಿರ್ವಹಣೆ ಸುಲಭವಲ್ಲ

ಫ್ಯಾಷನ್‌ ಕೂದಲಿನ ಕಲರ್‌ ಕಾಪಾಡಿಕೊಳ್ಳಲು ನಿಮ್ಮ ಕೂದಲಿನ ಎಕ್ಸ್ ಪರ್ಟ್‌ ಗಳನ್ನು ನೀವು ಭೇಟಿಯಾಗುವುದು ಸೂಕ್ತ. ಇದಕ್ಕಾಗಿ ನಿಮ್ಮ ಸಮಯ ಹಾಗೂ ಹಣವನ್ನು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಫ್ಯಾಷನ್‌ ಬಣ್ಣಗಳು ಶಾಶ್ವತವಾಗಿ ಉಳಿಯುವಂಥವಲ್ಲ. ಅವು ಬಹು ಬೇಗನೆ ಮಸುಕಾಗುತ್ತವೆ. ಆದ್ದರಿಂದ ನಿಮ್ಮ ಕೂದಲಿನ ಎಕ್ಸ್ ಪರ್ಟ್‌ ಗಳೊಂದಿಗೆ ಸಂಪರ್ಕದಲ್ಲಿ ಇರಬೇಕಾಗುತ್ತದೆ. ಕೂದಲಿನ ಬಗ್ಗೆ ಅವರು ನೀಡುವ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಬಣ್ಣದ ರಕ್ಷಣೆಗೆ ಶ್ಯಾಂಪೂ, ಕಂಡೀಶನರ್‌, ಮಾಸ್ಕ್ ಸೀರಮ್ ಬಳಸಬೇಕು.

ಸೆಮಿ ಹಾಗೂ ಶಾಶ್ವತ ಕೂದಲ ಬಣ್ಣ

ನಿಮಗೆ ಇಷ್ಟವಾದಲ್ಲಿ ನಿಮ್ಮ ಕೂದಲಿನ ಬಣ್ಣದ ಪಟ್ಟಿಗಳನ್ನು ನೀವು ಕಲರ್‌ ಮಾಡಬಹುದು ಅಥವಾ ನಿಮ್ಮ ಸಂಪೂರ್ಣ ಕೂದಲನ್ನು 2 ಅಥವಾ 3 ಶೇಡ್‌ ಗಳಲ್ಲಿ ಬಣ್ಣ ಮಾಡಬಹುದು. ಮಾರುಕಟ್ಟೆಯಲ್ಲಿ ಎರಡು ರೀತಿಯ ಕೂದಲಿನ ಬಣ್ಣಗಳು ಲಭ್ಯ. ಇದರಲ್ಲಿ ಶಾಶ್ವತ ಮತ್ತು ಸೆಮಿ ಕಲರ್ಸ್‌ ಸೇರಿವೆ. ನೀವು ಕೆಲವು ವಾರಗಳವರೆಗೆ ನಿಮ್ಮ ಕೂದಲಿಗೆ ಬಣ್ಣ ಹಾಕಲು ಬಯಸಿದರೆ, ಸೆಮಿ ಕಲರ್‌ ಬಣ್ಣ ನಿಮಗೆ ಉತ್ತಮವಾಗಿರುತ್ತದೆ. ಆದರೆ ನಿಮ್ಮ ಕೂದಲನ್ನು ದೀರ್ಘಕಾಲದವರೆಗೆ ಬಣ್ಣದಲ್ಲಿಡಲು ಬಯಸಿದರೆ, ನೀವು ಶಾಶ್ವತ ಕೂದಲಿನ ಬಣ್ಣವನ್ನು ಬಳಸಬಹುದು.

– ಪ್ರಭಾ ವೈ. 

ಒಳ್ಳೆಯ ಪಾರ್ಲರ್‌ ಅಥವಾ ಸೆಲೂನ್‌ ನಲ್ಲಿ ಕೇಶ ತಜ್ಞರಿಂದ ಉತ್ತಮ ಬ್ರಾಂಡ್‌ನ ಹೇರ್‌ ಕಲರ್‌ ಮಾಡಿಸಿ.

ನೀವು ಮೊದಲ ಬಾರಿಗೆ ಫಂಕಿ ಕಲರ್‌ ಮಾಡಿಸುತ್ತಿದ್ದರೆ, ನಿಮ್ಮ ಕೂದಲಿನ ಕೆಳಗಿನ ಎಳೆಗಳನ್ನು ಕಲರ್‌ ಮಾಡಿ ಮತ್ತು ಈ ಬಣ್ಣ ನಿಮಗೆ ಸರಿಹೊಂದುತ್ತದೆಯೋ? ಅಥವಾ ಇಲ್ಲವೋ ಎಂದು ನೋಡಿ.

ನಿಮ್ಮ ಕೂದಲಿಗೆ ಬಣ್ಣ ಹಾಕುವಾಗ, ನಿಮ್ಮ ಕಣ್ಣುಗಳ ರಕ್ಷಣೆಯ ಬಗ್ಗೆ ಕಾಳಜಿ ವಹಿಸಿ.

ಪ್ರಖರವಾದ ಸೂರ್ಯನ ಬೆಳಕು ನಿಮ್ಮ ಬಣ್ಣದ ಕೂದಲಿಗೆ ಹಾನಿ ಉಂಟ ಮಾಡಬಹುದು. ಆದ್ದರಿಂದ ಸೂರ್ಯನಿಂದ ಕೂದಲನ್ನು ರಕ್ಷಿಸಿ ಮತ್ತು ತಜ್ಞರ ಸಲಹೆಯಂತೆ ಕಂಡೀಶನರ್‌ ಮಾಸ್ಕ್ ಮತ್ತು ಸೀರಮ್ ಬಳಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ