ನೀವು ಮಳೆಗಾಲದ ದಿನಗಳಲ್ಲೂ ಬಲು ಬ್ಯೂಟಫುಲ್ ಆಗಿ ಕಾಣಿಸಲು ಬಯಸುವಿರಾ? ಹಾಗಾದರೆ ಈ ಸಲಹೆಗಳನ್ನು ತಪ್ಪದೆ ಅನುಸರಿಸಿ….!
ಮಳೆಗಾಲದ ಸೀಸನ್ ಎಷ್ಟು ಸುಖಕರವೋ, ಅಷ್ಟೇ ತೊಂದರೆಗಳನ್ನೂ ಒಡ್ಡುತ್ತದೆ. ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಬೇಕೆಂಬ ಆಸೆಗೆಬಿದ್ದು ಒದ್ದೆಮುದ್ದೆ ಡ್ರೆಸ್, ಜಾರುವ ರಸ್ತೆ, ಛತ್ರಿ ಸಂಭಾಳಿಸುವ ತರಾತುರಿಯಲ್ಲಿ ಫ್ಯಾಷನೆಬಲ್ ಗ್ಲಾಮರಸ್ ಆಗಿ ಕಂಡು ಬರುವುದು ಒಂದು ಸವಾಲೇ ಸರಿ. ಆದರೆ ಕೆಲವು ವಾಟರ್ ಪ್ರೂಫ್ ಫ್ಯಾಷನ್ ಆ್ಯಕ್ಸೆಸರೀಸ್ ನ್ನು ನಿಮ್ಮದಾಗಿಸಿಕೊಳ್ಳುವುದರಿಂದ, ಅವು ನಿಮ್ಮನ್ನು ಮಳೆಯಿಂದ ಕಾಪಾಡುವುದು ಮಾತ್ರವಲ್ಲದೆ, ನಿಮಗೆ ಸ್ಟೈಲಿಶ್ಗ್ಲಾಮರಸ್ ಲುಕ್ಸ್ ನ್ನೂ ಸಹ ತಂದುಕೊಡುತ್ತವೆ.
ಹಾಗಾದರೆ ಅವು ಯಾವ, ಹೇಗೆ ಬಳಸಬೇಕು ಎಂದು ವಿವರವಾಗಿ ತಿಳಿಯೋಣವೇ….?
ವಾಟರ್ ಪ್ರೂಫ್ ಜ್ಯಾಕೆಸ್ ರೇನ್ ಕೋಟ್ಸ್ ಈಗೆಲ್ಲ ರೇನ್ ಕೋಟ್ ಅಂದ್ರೆ, ನಮ್ಮ ಡ್ರೆಸ್ ಮೇಲೆ ಹೊದ್ದುಕೊಳ್ಳುವ ಪ್ಲಾಸ್ಟಿಕ್ ಪದರಗಳ ಮೇಲುಡುಗೆ ಅಲ್ಲ. ಇತ್ತೀಚೆಗೆ ಮಾರ್ಕೆರ್ಟ್ ನಲ್ಲಿ ಟ್ರೆಂಡಿ, ಲೈಟ್ ಹಾಗೂ ಬಣ್ಣ ಬಣ್ಣದ ವಾಟರ್ ಪ್ರೂಫ್ ಜ್ಯಾಕೆಟ್ಸ್ ಸಹ ಬಂದಿವೆ. ಅವು ನಿಮ್ಮನ್ನು ಮಳೆಯಿಂದ ರಕ್ಷಿಸುವುದು ಮಾತ್ರವಲ್ಲ, ಫ್ಯಾಷನ್ ಸ್ಟೇಟ್ ಮೆಂಟ್ ಆಗಿಯೂ ಗೆಲ್ಲುತ್ತವೆ.
ಟ್ರಾನ್ಸ್ ಪರೆಂಟ್ ಯಾ ಪ್ರಿಂಟೆಡ್ ಅಂಬ್ರೆಲಾ ಛತ್ರಿ ಅಂದ್ರೆ ಈಗ ಸ್ಟೈಲಿಶ್ ಎಕ್ಸ್ ಪ್ರೆಶನ್ನಿನ ಭಾಗವಾಗಿದೆ. ಬಣ್ಣಬಣ್ಣದ ಹೂಗಳ ಪ್ರಿಂಟ್, ಪೋಲ್ಕಾ ಡಾಟ್ಸಾ ಯಾ ಟ್ರಾನ್ಸ್ ಪರೆಂಟ್ ಅಂಬ್ರೆಲಾ ನಿಮ್ಮ ಲುಕ್ಸ್ ಗೆ ಇನ್ನಷ್ಟು ಹೆಚ್ಚಿನ ಮೆರುಗು ನೀಡಲಿವೆ. ಇದನ್ನು ನಿಮ್ಮ ಲೇಟೆಸ್ಟ್ ಔಟ್ ಫಿಟ್ಸ್ ಜೊತೆ ಮ್ಯಾಚ್ ಮಾಡಿ ಆರಿಸಿಕೊಳ್ಳಿ, ಇವು ಇದೀಗ ಹೊಸ ಟ್ರೆಂಡ್ ಆಗಿದೆ.
ವಾಟರ್ ಪ್ರೂಫ್ ಬ್ಯಾಗ್ಸ್
ಬ್ಯಾಗ್ ಪ್ಯಾಕ್ಸ್ ನೀವು ಆಫೀಸ್ ಯಾ ಕಾಲೇಜಿಗೇ ಹೊರಡಿ, ನಿಮ್ಮ ಬ್ಯಾಗ್ ವಾಟರ್ ಪ್ರೂಫ್ ಆಗಿರದಿದ್ದರೆ, ಮಳೆಯಲ್ಲಿ ನಿಮ್ಮ ಎಲ್ಲಾ ವಸ್ತುಗಳೂ ಹಾಳಾಗುತ್ತವೆ. ಹೀಗಾಗಿ ಈ ಮಾನ್ ಸೂನ್ ಗೆ ಸೂಟ್ ಆಗುವಂತೆ, ಬ್ಯಾಗ್ ವಾಟರ್ ಪ್ರೂಫ್ಡಿಸೈನರ್ ಸಹ ಆಗಿರುವಂಥದ್ದನ್ನೇ ಆರಿಸಿ. ಇದರ ಮೇಲೆ ಕಲರ್ ಫುಲ್ ಝಿಪ್, ಲೆದರ್ ಫಿನಿಶ್ ಹಾಗೂ ಕ್ವರ್ಕೇ ಪ್ರಿಂಟ್ಸ್ ಇದ್ದು, ಇನ್ನು ವಿಶಿಷ್ಟ ಆಗಿಸುತ್ತವೆ.
ರಬ್ಬರ್ ಗಮ್ ಬೂಟ್ಸ್
ವಾಟರ್ ಪ್ರೂಫ್ ಫುಟ್ ವೇರ್ ಮಳೆಗಾಲದಲ್ಲಿ ಚಪ್ಪಲಿ ಧರಿಸಿ ಓಡಾಡುವುದು, ತೊಂದರೆಗಳನ್ನು ಬಗಲಿಗೆ ಕಟ್ಟಿಕೊಂಡಂತೆಯೇ ಸರಿ. ಹೀಗಾಗಿ ಈ ಕಾಲದಲ್ಲಿ ರಬ್ಬರ್ ಗಮ್ ಬೂಟ್ಸ್ ಯಾ ವಾಟರ್ ಪ್ರೂಫ್ ಸ್ಯಾಂಡಲ್ಸ್ ಬಲು ಉಪಕಾರಿ. ಇತ್ತೀಚೆಗೆ ಪ್ಲೇರ್ಪ್ರಿಂಟೆಡ್, ಟ್ರಾನ್ಸ್ ಪರೆಂಟ್, ನಿಯಾನ್ಬ್ರೈಟ್ ಕಲರ್ಡ್ ಬೂಟ್ಸ್ ದೊರಕಲಿದ್ದು, ಇವು ಬಲು ಆಕರ್ಷಕ ಎನಿಸುತ್ತವೆ.
ವಾಟರ್ ಪ್ರೂಫ್ ಸ್ಮಾರ್ಟ್ ವಾಚ್ಆ್ಯಕ್ಸೆಸರೀಸ್
ಟೆಕ್ ಸೇವಿ ಮಂದಿಗೆ ವಾಟರ್ ಪ್ರೂಫ್ ಸ್ಮಾರ್ಟ್ ಡಿಜಿಟಲ್ ವಾಚ್ ಒಂದು ಬೆಸ್ಟ್ ಚಾಯ್ಸ್ ಆಗಿದೆ. ಇದರ ಹೊರತಾಗಿ ರಬ್ಬರ್ ಯಾ ಸಿಲಿಕಾನ್ ಬ್ರೇಸ್ಲೆಟ್, ವಾಟರ್ ಪ್ರೂಫ್ ಹೇರ್ ಬ್ಯಾಂಡ್ಸ್ ಕ್ಲಿಪ್ಸ್ ಸಹ ಮಳೆಗಾಲದಲ್ಲಿ ಸ್ಟೈಲಿಶ್ಗ್ಲಾಮರಸ್ ಆಗಿಸುತ್ತವೆ.
ವಾಟರ್ ರೆಸಿಸ್ಟೆಂಟ್ ಮೇಕಪ್
ನೀವು ಮಳೆಗಾಲದಲ್ಲಿಯೂ ಸ್ಮಾರ್ಟ್ಕ್ಯೂಟ್, ಬ್ಯೂಟಿಫುಲ್ ಆಗಿರಲು ಬಯಸಿದರೆ, ವಾಟರ್ ಪ್ರೂಫ್ ಮೇಕಪ್ ಪ್ರಾಡಕ್ಟ್ಸ್ ಅಂದ್ರೆ ಮಸ್ಕರಾ, ಕಾಡಿಗೆ, ಲಿಪ್ ಸ್ಟಿಕ್ ಇತ್ಯಾದಿ ಬಳಸಿಕೊಳ್ಳಿ. ಇವು ಮಳೆಗೆ ಕರಗಿ ಹೋಗುವುದಿಲ್ಲ ಹಾಗೂ ದೀರ್ಘಕಾಲ ಉಳಿಯುತ್ತವೆ, ಮತ್ತೆ ಮತ್ತೆ ಮೇಕಪ್ ಮಾಡಿಕೊಳ್ಳಬೇಕಾದ ಗೋಜಿಲ್ಲ.
– ಪೂಜಾ ಭಾಸ್ಕರ್





