ಒಮ್ಮೆ ಬಿಸಿಲು, ಒಮ್ಮೆ ಮಳೆ, ಮೋಡ ಕವಿದ ವಾತಾವರಣ…. ಹೀಗೆ ಈ ಸೀಸನ್ ಕಣ್ಣಾಮುಚ್ಚಾಲೆ ಆಡುತ್ತಾ ಇರುತ್ತದೆ. ಆದರೆ ಇಂಥ ಸೀಸನ್ ನಲ್ಲೂ ನೀವು ನಿಮ್ಮ ಶಾರ್ಟ್ ಡ್ರೆಸೆಸ್ ನಲ್ಲಿ ನಿಮ್ಮ ಫ್ಲಾಲೆಸ್ ಸ್ಕಿನ್ ನ ರಿಚ್ ಲುಕ್ಸ್ ನ್ನು ಫ್ಲಾಂಟ್ ಮಾಡಬಹುದು. ಇದಕ್ಕಾಗಿ ನೀವು ಗ್ಲೋಯಿಂಗ್ ಸ್ಕಿನ್ ಬಗ್ಗೆ ಹೇಳಬೇಕೆಂದರೆ, ಸೂಕ್ತ ಹೇರ್ ರಿಮೂವಲ್ ಕ್ರೀಂ ಬಳಸಲೇಬೇಕು. ಇದಕ್ಕಾಗಿ ಅತಿ ಸೂಕ್ತವಾದುದನ್ನೇ ಆರಿಸಿ. ಸಾಮಾನ್ಯವಾಗಿ ಯುವತಿಯರು ಆ ಕ್ರೀಮಿನ ಮೇಲೆ ನಮೂದಿಸಿರುವ ವಿವರ ಗಮನಿಸದೆ, ಯಾವುದೋ ಒಂದನ್ನು ಆರಿಸಿಬಿಡುತ್ತಾರೆ. ಇದರಿಂದ ಅವರು ಬಯಸಿದ ಪರಿಣಾಮ ಸಿಗುವುದಿಲ್ಲ.
ಹೇರ್ ರಿಮೂವಲ್ ಕ್ರೀಂ ಖರೀದಿಸುವಾಗ, ಅಗತ್ಯವಾಗಿ ಗಮನಿಸಬೇಕಾದುದು ಎಂದರೆ, ಅದರಲ್ಲಿ ನ್ಯಾಚುರಲ್ ಪ್ರಾಪರ್ಟೀಸ್ ಇವೆಯೇ, ನೋಡಿಕೊಳ್ಳಿ. ಅದು ನಿಮ್ಮ ಸ್ಕಿನ್ ಟೈಪ್ ಗೆ ಸೂಟ್ ಆಗುವಂತಿರಬೇಕು, ಅದೂ ಸ್ಕಿನ್ ಗೆ ಒಂದಿಷ್ಟೂ ಡ್ಯಾಮೇಜ್ ಮಾಡುವಂತೆ ಇರಬಾರದು. ಹೌದು, ಹೇರ್ ರಿಮೂವಲ್ ಕ್ರೀಂ ಕೊಳ್ಳುವ ಮುನ್ನಾ, ಅದು ನಿಮ್ಮ ಸ್ಕಿನ್ ಟೈಪ್ ಗೆ ಸರಿಹೊಂದುತ್ತದೋ ಇಲ್ಲವೋ ಪರೀಕ್ಷಿಸಬೇಕು, ಹಾನಿ ಮಾಡುವಂತಿರಬಾರದು.
ಮಾರುಕಟ್ಟೆಯಲ್ಲಿ ಇಂದು ಗುಣಾಂಶಗಳಿರುವ ಅನೇಕ ಬಗೆಯ ಲಭ್ಯ. 3 ನಿಮಿಷಗಳಲ್ಲೇ ಇದು ನಿಮಗೆ ಅನಗತ್ಯ ಕೂದಲಿನಿಂದ ಮುಕ್ತಿ ಕೊಡಿಸುತ್ತದೆ. ಹಾಗಾಗಿ ಅತಿ ಸ್ಮೂತ್ ಸ್ಕಿನ್ ನಿಮ್ಮದಾಗುತ್ತದೆ. ಆದರೆ ಅದನ್ನು ಆರಿಸಿಕೊಳ್ಳುವ ಮುನ್ನಾ ಈ ವಿಷಯಗಳನ್ನು ಮರೆಯದೆ ನೆನಪಿಡಿ :
ನಿಮ್ಮ ಸ್ಕಿನ್ ಟೈಪ್ ಪ್ರಕಾರ, ಇಂಥ ಕ್ರೀಂ ಆರಿಸಿ. ನಿಮ್ಮ ಚರ್ಮಕ್ಕೆ ಇದು ಸುರಕ್ಷಿತವೇ ಎಂದು ತಿಳಿಯಲು, ಅದನ್ನು ನಿಮ್ಮ ಮೊಣಕೈಗೆ ತುಸು ಸವರಿಕೊಂಡು, 2 ನಿಮಿಷ ಬಿಟ್ಟು ಗಮನಿಸಿ. ನಿಮಗೆ ಯಾವುದೇ ಉರಿ, ಬಾಧೆ ಇಲ್ಲದಿದ್ದರೆ ಅದು ನಿಮಗೆ ಸೇಫ್ ಎಂದರ್ಥ.
ನಿಮ್ಮದು ಸೆನ್ಸಿಟಿವ್ ಸ್ಕಿನ್ ಆಗಿದ್ದರೆ, ನ್ಯಾಚುರಲ್ ಪ್ರಾಪರ್ಟೀಸ್ ಅಂದ್ರೆ ಪರಂಗಿ ಆ್ಯಲೋವೇರಾ ಅಂಶಗಳಿರುವಂಥ ಕ್ರೀಮನ್ನೇ ಆರಿಸಿ. ಪರಂಗಿಹಣ್ಣು ಆ್ಯಂಟಿ ಆಕ್ಸಿಡೆಂಟ್ಸ್ ನಿಂದ ಸಮೃದ್ಧವಾಗಿದ್ದು, ಇದು ಸ್ಕಿನ್ ಡ್ರೈ ಆಗದಂತೆ ರಕ್ಷಿಸುತ್ತದೆ, ಅದರ ಆರ್ದ್ರತೆ ಕಾಪಾಡುವಲ್ಲಿಯೂ ಮುಂದು! ಅದೇ ತರಹ ಆ್ಯಲೋವೇರಾ ಚರ್ಮವನ್ನು ಅತಿ ಸ್ಮೂತ್ಸಾಫ್ಟ್ ಆಗಿಡುತ್ತದೆ.
ನಿಮ್ಮದು ನಾರ್ಮಲ್ ಸ್ಕಿನ್ ಆಗಿದ್ದು, ನಿಮಗೆ ಬ್ರೈಟ್ ಶೈನ್ ಲುಕ್ಸ್ ಬೇಕಿದ್ದರೆ, ಸ್ಟ್ರಾಬೆರಿ ಅಂಶವುಳ್ಳ ಕ್ರೀಮನ್ನೇ ಆರಿಸಿ. ಶೈನಿ ಸ್ಕಿನ್ ಶಾರ್ಟ್ ಡ್ರೆಸೆಸ್ ನಲ್ಲಿ ನಿಮ್ಮ ಲುಕ್ಸ್ ಗೆ ಹೆಚ್ಚು ರಿಚ್ ನೆಸ್ ನೀಡುತ್ತದೆ.
ನಿಮ್ಮದು ಡ್ರೈ ಸ್ಕಿನ್ ಆಗಿದ್ದರೆ. ಡೈಮಂಡ್ ಹೇರ್ ರಿಮೂವಲ್ ಕ್ರೀಮನ್ನೇ ಆರಿಸಿ. ಡ್ರೈ ಸ್ಕಿನ್ ನವರು, ಇಂಥ ಕ್ರೀಂ ಬಳಸಿದ ನಂತರ, ಚರ್ಮದ ಆರ್ದ್ರತೆ ಕಾಪಾಡುವಲ್ಲಿ ಅದು ನೆರವಾಗುತ್ತದೆ ತಾನೇ ಎಂದು ಖಾತ್ರಿ ಪಡಿಸಿಕೊಳ್ಳಬೇಕು.
ಹೇರ್ ರಿಮೂವಲ್ ನಂತರ, ಚರ್ಮದ ಮಾಯಿಶ್ಚರ್ ಕಾಪಾಡಿಕೊಳ್ಳಲು, ನಡುನಡುವೆ ಮಾಯಿಶ್ಚರೈಸರ್ ಹಚ್ಚುತ್ತಿರಬೇಕು.
ಮಾರುಕಟ್ಟೆಯಲ್ಲಿ ಈಗ ಸಿಗುವ ಹೊಸ ಹೇರ್ ರಿಮೂವಲ್ ಕ್ರೀಂ ಬಳಸುವುದೂ ಬಲು ಸುಲಭ. ಆಯಾ ಪ್ಯಾಕ್ ಮೇಲೆ ಇರುವಂಥ 3 ಸ್ಟೆಪ್ಸ್ ನ ಸೂಚನೆಗಳನ್ನು ಫಾಲೋ ಮಾಡಿ. ಇದರಿಂದ ಕೇವಲ 3 ನಿಮಿಷಗಳಲ್ಲೇ, ಹೊಳೆಹೊಳೆಯುವ ಫ್ಲಾಲೆಸ್ ಸ್ಕಿನ್ ಪಡೆಯುವಿರಿ. ಹಾಗಿರುವಾಗ ಇನ್ನೇಕೆ ತಡ? ನೀವು ಸಹ ನಿಮ್ಮ ಸ್ಟೈಲ್ಲುಕ್ಸ್ ನ್ನು ಯಾವುದೇ ಹಿಂಜರಿಕೆ ಇಲ್ಲದೇ ಫ್ಲಾಂಟ್ ಮಾಡಿ!
– ಪ್ರತಿನಿಧಿ





